2023-24ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಮತ್ತು ಜೋಳ ಆಹಾರಧಾನ್ಯಗಳಿಗೆ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿದೆ.
ಯಾವ ಬೆಳೆಗೆ ಎಷ್ಟು ಬೆಂಬಲ ಬೆಲೆ?
ಭತ್ತ(ಸಾಮಾನ್ಯ) ಪ್ರತಿ ಕ್ವಿಂಟಾಲ್‌ಗೆ ದರ ರೂ. 2183/- , ಭತ್ತ(ಗ್ರೇಡ್-ಎ) ಪ್ರತಿ ಕ್ವಿಂಟಾಲ್‌ಗೆ ದರ ರೂ.2203/-, ಬಿಳಿಜೋಳ(ಹೈಬ್ರಿಡ್) ಪ್ರತಿ ಕ್ವಿಂಟಾಲ್‌ಗೆ ದರ ರೂ.3180/-, ಬಿಳಿಜೋಳ ಮಾಲ್ದಂಡಿ ಪ್ರತಿ ಕ್ವಿಂಟಾಲ್‌ಗೆ ದರ ರೂ.3225/- , ರಾಗಿ ಪ್ರತಿ ಕ್ವಿಂಟಾಲ್ ಗೆ ದರ ರೂ.3846/- ರಂತೆ ಸರ್ಕಾರ ಬೆಂಬಲ ಬೆಲೆಯನ್ನು ನಿಗದಿಪಡಿಸಿದೆ.
ಮುಂಗಾರು ಭತ್ತ ಖರೀದಿಗೆ ಸಂಬಂಧಿಸಿದಂತೆ, ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ಇವರನ್ನು ಕೊಪ್ಪಳ ಜಿಲ್ಲೆಗೆ ಖರೀದಿ ಏಜೆನ್ಸಿಯನ್ನಾಗಿ ನೇಮಕ ಮಾಡಲಾಗಿದೆ. ಭತ್ತ ಖರೀದಿಗೆ ರೈತರಿಂದ ನೋಂದಣಿ ಕಾರ್ಯವನ್ನು ನವೆಂಬರ್ 15 ರಿಂದ ಆರಂಭಿಸಲಾಗಿದ್ದು, ಡಿಸೆಂಬರ್ 31 ರವರೆಗೆ ನೋಂದಣಿಗೆ ಅವಕಾಶ ನೀಡಲಾಗಿದೆ.
ನೋಂದಣಿ
ಎಪಿಎಂಸಿ ಪ್ರಾಂಗಣ ಗಂಗಾವತಿ (ಮೊ.ನಂ:6361289585). ಕಾರಟಗಿ (ಮೊ.ನಂ:8123453419), ಕೊಪ್ಪಳ (ಮೊ. ನಂ:9739228720)ರಲ್ಲಿ ರೈತರ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ರೈತರು ನಿಗದಿತ ದಿನಾಂಕದೊಳಗೆ ನೋಂದಣಿ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಕೇಂದ್ರ ಸರ್ಕಾರವು ನಿಗದಿಪಡಿಸಿದ ಎಫ್‌ಎಕ್ಯೂ ಗುಣಮಟ್ಟದ ಭತ್ತವನ್ನು ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್‌ನಂತೆ ಗರಿಷ್ಠ 40 ಕ್ವಿಂಟಾಲ್ ಮೀರದಂತೆ ಖರೀದಿಸಲಾಗುವುದು ಹಾಗೂ ಭತ್ತವನ್ನು ಸರಬರಾಜು ಮಾಡಿದ ರೈತರಿಗೆ 15 ದಿನಗಳೊಳಗೆ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ನೇರನಗದು ವರ್ಗಾವಣೆ (ಡಿಬಿಟಿ) ಮುಖಾಂತರ ಮಾಡಲಾಗುವ್ಯದು ಎಚಿದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಹಾಗೂ ಜಿಲ್ಲಾ ಟಾಸ್ಕೋರ್ಸ್ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2023-24 ಸಾಲಿಗೆ ಬೆಳಗಾವಿ ಜಿಲ್ಲೆಯ ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ಬೆಳಗಾವಿ ಮತ್ತು ಖಾನಾಪೂರ ತಾಲೂಕಿನ ನಂದಗಡ ಇಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಭತ್ತ ಬೆಳೆಯುವ ಪ್ರದೇಶದ ರೈತರಿಗೆ ನವೆಂಬರ್ 15 ರಿಂದ ಡಿಸೆಂಬರ್ 31, 2023ರವರೆಗೆ ಕೃಷಿ ಇಲಾಖೆಯ ಪೂಟ್ಸ್ ದತ್ತಾಂಶದಿಂದ ನೋಂದಣಿಯನ್ನು ಪ್ರಾರಂಭಿಸಲಾಗುತ್ತಿದೆ ಹಾಗೂ ಖರೀದಿ ಕೇಂದ್ರಗಳಲ್ಲಿ ಖರೀದಿ ಕಾಲಾವಧಿಯು – ಡಿಸೆಂಬರ್ 01 2023 ರಿಂದ ಮಾರ್ಚ್ 31, 2024ರವರೆಗೆ ನಿಗದಿಪಡಿಸಿರುತ್ತದೆ.
ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ಇವರಿಗೆ ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ಗುರುತಿಸಲಾಗಿದೆ. ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಪ್ರಧಾನ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ಬೆಳಗಾವಿಯ ವಿಭಾಗೀಯ ಕಾರ್ಯಾಲಯ ಇವರು ಖರೀದಿ ಪ್ರಕ್ರಿಯೆಯನ್ನು ಕೈಗೊಳ್ಳುವರು.
ಪ್ರತಿ ರೈತರಿಂದ ಭತ್ತವನ್ನು ಪ್ರತಿ ಎಕರೆಗೆ 25 ಕ್ವಿಂಟಲ್ ರಂತೆ ಗರಿಷ್ಠ ಪ್ರಮಾಣ 40 ಕ್ವಿಂಟಲ್ ಮೀರದಂತೆ ಖರೀದಿ ಪ್ರಮಾಣ ನಿಗದಿಪಡಿಸಿದೆ. ಭತ್ತ ಸಾಮಾನ್ಯ ಪ್ರತಿ ಕ್ವಿಂಟಲ್ ಗೆ ರೂ.2183 ರಂತೆ ಹಾಗೂ ಭತ್ತ ಗ್ರೇಡ್ -ಎ ರೂ.2203 ಪ್ರತಿ ಕ್ವಿಂಟಲ್‌ದಂತೆ ನಿಗದಿಪಡಿಸಿರುತ್ತದೆ. ಅದರ ಲಾಭವನ್ನು ರೈತರು ಪಡೆದುಕೊಳ್ಳಬಹುದು.
ಖರೀದಿ ಕೇಂದ್ರಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ
ಖರೀದಿ ಕೇಂದ್ರಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ವಿಭಾಗೀಯ ಕಾರ್ಯಾಲಯದ ಪ್ರಧಾನ ವ್ಯವಸ್ಥಾಪಕರಾದ ಭಾಗ್ಯಲಕ್ಷ್ಮೀ 8217777186, ಸಿ.ಎಂ. ಉಪಾಧ್ಯೆ 7975322595 ಇವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಕೃಷಿ ಮಾರಾಟ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.