ಆತ್ಮೀಯ ರೈತ ಬಾಂಧವರೇ, ನೀವು ಈಗಾಗಲೇ ಕೆಲವರು ಹಲವಾರು ಕೃಷಿ ಮೇಳವನ್ನು ಭೇಟಿ ಕೊಟ್ಟಿರಬಹುದು. ಅಲ್ಲಿ ಸಿಗುವ ಕೃಷಿ ಮತ್ತು ತೋಟಗಾರಿಕೆಯ ತಂತ್ರಜ್ಞಾನ ಮತ್ತು ಹೊಸ ಇನ್ವೆಂಷನ್ಗಳ ಬಗ್ಗೆ ಹಲವಾರು ಮಾಹಿತಿಗಳನ್ನು ತಿಳಿಯುವ ಅವಕಾಶವನ್ನು ನೀವು ಹೊಂದಿದ್ದೀರಿ. ಇಂತಿ ಶಿವಮೊಗ್ಗದಲ್ಲಿ ಇನ್ನೊಂದು ಕೃಷಿ ಮೇಳ ನಡೆಯಲಿದೆ. ಈ ಕೃಷಿ ಮೇಳಕ್ಕೆ ಭೇಟಿ ಕೊಡುವ ರೈತರು ತುಂಬಾ ಅಗತ್ಯಕರವಾದ ವಿಷಯಗಳನ್ನು ತಿಳಿಯಬಹುದು. ಈ ಕೃಷಿ ಮೇಳವು ಮಾರ್ಚ್ 17ನೇ ತಾರೀಖಿನಿಂದ ಸತತ ನಾಲ್ಕು ದಿನಗಳ ಕಾಲ ನಡೆಯಲಿದೆ. ಆದಕಾರಣ ತುಂಬಾ ಜನ ರೈತರು ಸೇರುವ ಸಂಭವವಿದೆ. ನೀವು ಕೂಡ ಈ ಕೃಷಿ ಮೇಳದಲ್ಲಿ ಭಾಗವಹಿಸಿ ತುಂಬಾ ಪ್ರಗತಿಕರವಾದ ಖುಷಿ ಮಾಹಿತಿ ಮತ್ತು ತೋಟಗಾರಿಕಾ ತಂತ್ರಜ್ಞಾನದ ಬಗ್ಗೆ ಮಾಹಿತಿಯನ್ನು ಪಡೆದು ನಿಮ್ಮ ಹೊಲದಲ್ಲಿ ಈ ಹೊಸ ತಂತ್ರಜ್ಞಾನಗಳು ಮತ್ತು ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ಕೃಷಿಯಲ್ಲಿ ಅಧಿಕ ಲಾಭವನ್ನು ಪಡೆಯಲು ಈ ಕೃಷಿ ಮೇಳ ಉಪಕಾರಿಯಾಗಿದೆ.ಈ ಕೃಷಿ ಮೇಳಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ‘ಸುಸ್ಥಿರ ಆದಾಯಕ್ಕಾಗಿ-ಸೆಕೆಂಡರಿ ಕೃಷಿ ತಾಂತ್ರಿಕತೆಗಳು ಮತ್ತು ಮೌಲ್ಯವರ್ಧನೆ’ ಎಂಬ ವಾಕ್ಯದಿಂದ ಆಯೋಜಿಸಲಾಗಿದೆ. ಈ ಕೃಷಿ ಮತ್ತು ತೋಟಗಾರಿಕಾ ಮೇಲದಲ್ಲಿ ತುಂಬಾ ಘಟಕಗಳಿವೆ.
ಇದನ್ನೂ ಓದಿ :- ಈ ಕೆಲಸ ಮಾಡಿದರೆ 7 ದಿನಗಳಲ್ಲಿ ಆಸ್ತಿ ನಿಮ್ಮ ಹೆಸರಿಗೆ ಆಗುತ್ತೆ
ಕೃಷಿ ಮೇಳದಲ್ಲಿ ಯಾವ ಯಾವ ಘಟಕಗಳಿವೆ?
ಈ ಕೃಷಿ ಮತ್ತು ತೋಟಗಾರಿಕಾ ವಸ್ತು ಪ್ರದರ್ಶನ, ವಿವಿಧ ಕೃಷಿ ಬೆಲೆಗಳು ಮತ್ತು ಅವುಗಳ ಹೊಸ ತಳಿಗಳ ಬಿಡುಗಡೆ. ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಹೊಸ ಹೊಸ ಯಂತ್ರ ಮತ್ತು ತಾಂತ್ರಿಕತೆಯ ಬೆಳವಣಿಗೆಗಳು ಮತ್ತು ಉಪಕರಣಗಳು ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಬಹುದು. ಕೃಷಿಯಲ್ಲಿ ಜೈವಿಕ ಪರಿಕರಗಳ ಪ್ರದರ್ಶನ, ರೈತರು ಮತ್ತು ವಿಜ್ಞಾನಿಗಳಿಗೆ ಪರಸ್ಪರ ಸಂವಾದ ಮಾಡಲು ಕಾರ್ಯಕ್ರಮಗಳು. ಕೃಷಿಗೆ ಸಂಬಂಧಪಟ್ಟ ವಿಚಾರಗೋಷ್ಠಿ ಮತ್ತು ತಾಂತ್ರಿಕ ಸಮಾವೇಶಗಳನ್ನು ನಡೆಸಬೇಕೆಂದು ಈ ಕೃಷಿ ಮೇಳವನ್ನು ಹಮ್ಮಿಕೊಂಡಿದ್ದಾರೆ.
ಇದನ್ನೂ ಓದಿ :- ನಿಮ್ಮ ಖಾತೆಗೆ ಪಿಎಂ ಕಿಸಾನ್ ಹಣ ಜಮಾ ಆಗಿದೆ. ಆಗಿಲ್ಲ ಎಂದರೆ ಈ ಕೆಲಸ ಮಾಡಿ ಪಕ್ಕಾ ಜಮಾ ಆಗುತ್ತೆ
ಈ ವರ್ಷದ ಕೃಷಿ ಮೇಳದ ವಿಶೇಷತೆಗಳೇನು?
ಈ ಕೃಷಿ ಮೇವು ತೋಟಗಾರಿಕಾ ವಿಧಾನವನ್ನು ಕೂಡ ಹೊಂದಿದ ಕಾರಣ ಇಲ್ಲಿ ಹೈಟೆಕ್ ತೋಟಗಾರಿಕೆ, ಲಂಬ ತೋಟಗಾರಿಕೆ, ತಾರಸಿ ತೋಟ, ಜೇನು ಸಾಕಾಣಿಕೆ, ಕೀಟ ಪ್ರಪಂಚ, ಸಾವಯುವ ಕೃಷಿ, ಪಶುಗಳ ಪಾಲನೆ ಮತ್ತು ಮೀನುಗಾರಿಕೆ ತಂತ್ರಜ್ಞಾನಗಳು, ಕೃಷಿ ಉತ್ಪನ್ನಗಳ ಸಂರಕ್ಷಣೆ ಮತ್ತು ಅದರ ಮಾರಾಟ, ಅಣಬೆ ಬೇಸಾಯ, ಸಿರಿಧಾನ್ಯಗಳ ಬೇಸಾಯ ಮತ್ತು ಅದರ ಮಹತ್ವಗಳು, ವಿಗುನ ಬೆಲೆಯ ಧಾನ್ಯಗಳು, ಮುಖ್ಯವಾಗಿ ಪುಷ್ಪ ಕೃಷಿ, ಮತ್ತು ಹೊಸ ಕಯತಳಿಗಳ ಬಿಡುಗಡೆ ಮಾಡಲಾಗುವುದು. ಈ ಕೃಷಿ ಮೇಳಕ್ಕೆ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ ವ್ಯಾಪ್ತಿಯಲ್ಲಿ ಬರುವ ಹಲವಾರು ಜಿಲ್ಲೆಗಳಿಂದ ಯಶಸ್ವಿ ಪ್ರಗತಿಪರ ಕೃಷಿಕರನ್ನು ಆಯ್ಕೆ ಮಾಡಿ ಶ್ರೇಷ್ಠ ಕೃಷಿಕ ಮತ್ತು ಶ್ರೇಷ್ಠ ಕೃಷಿಕ ಮಹಿಳೆ ಎಂಬ ಪ್ರಶಸ್ತಿಯನ್ನು ನೀಡಲು ವಿಶ್ವವಿದ್ಯಾಲಯ ನಿರ್ಧಾರ ಮಾಡಿದೆ. ಆದಕಾರಣ ರೈತರು ಈ ಕೃಷಿ ಮೇಳಕ್ಕೆ ಭೇಟಿಕೊಟ್ಟು ಹಲವಾರು ವಿಧದ ಮಾಹಿತಿಯನ್ನು ಪಡೆದು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕಾಗಿ ವಿನಂತಿ
ನೀವು ಕೃಷಿಯಲ್ಲಿ ಯಾವುದಾದರೂ ಸಾಧನೆಯನ್ನು ಮಾಡಿದ್ದರೆ ವಿಶ್ವವಿದ್ಯಾಲಯಕ್ಕೆ ಭೇಟಿಕೊಟ್ಟು ಮೇಘದಲ್ಲಿ ಪ್ರಶಸ್ತಿ ಪಡೆಯಲು ಅವಕಾಶವನ್ನು ಕೂಡ ಕಲ್ಪಿಸಲಾಗಿದೆ.
ಈ ಕೃಷಿ ಮೇಳದಲ್ಲಿ ಮಳಿಗೆಯನ್ನು ಹೇಗೆ ಪಡೆಯುವುದು?
ಈ ಮೇಳದಲ್ಲಿ ವಸ್ತು ಪ್ರದರ್ಶನ ಅಥವಾ ಮಾರಾಟಕ್ಕೆ ನಿಮಗೆ ಮಳಿಗೆ ಬೇಕಾಗಿದ್ದರೆ ವಿಶ್ವವಿದ್ಯಾಲಯದ ಜಾಲತಾಣವಾದ ಈ www.https://uahs.edu.in ತಂತ್ರಾಂಶಕ್ಕೆ ಭೇಟಿ ಕೊಟ್ಟು ಅರ್ಜಿಯನ್ನು ಸಲ್ಲಿಸಬಹುದು. ಇದೇ ಮಾರ್ಚ್ ತಿಂಗಳು 17ರಿಂದ 4 ದಿನ ಸತತವಾಗಿ ನೆಲೆ ವೈ ಕೃಷಿ ಮೇಳಕ್ಕೆ ಭೇಟಿಕೊಟ್ಟು ಹತ್ತಾರು ವಿಷಯಗಳನ್ನು ತಿಳಿದು ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಮಳಿಗೆ ಹಂಚಿಕೆ ಸಮಿತಿಯ ಸಹ ವಿಸ್ತರಣಾ ನಿರ್ದೇಶಕರು ಮತ್ತು ಅಧ್ಯಕ್ಷರಾದ ಡಾ.ಎಸ್.ಯು.
ಪಾಟೀಲ್-9448154542 ಇವರನ್ನು ಸಂಪರ್ಕಿಸುವ ಮೂಲಕ ನೀವು ಮಳಿಗೆಯನ್ನು ಪಡೆಯಬಹುದು. ಇವರು ನಿಮ್ಮ ಸಂಪರ್ಕಕ್ಕೆ ಸಿಗದಿದ್ದರೆ ನೀವು ಈ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಬಿ.ಸಿ. ಹನುಮಂತಸ್ವಾಮಿ 9480838976 , ಇವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮತ್ತು ಈಗಲೇ ಈ ಎಲ್ಲ ಕೃಷಿ ಮೇಳ ಮತ್ತು ಮಳಿಗೆ ಬಗ್ಗೆ ಮಾಹಿತಿಯನ್ನು ಪಡೆಯಿರಿ.