ಆತ್ಮೀಯ ರೈತ ಬಾಂಧವರೇ ಕರ್ನಾಟಕ ಬಜೆಟ್ 2023- 24 ಘೋಷಣೆಯಾಗಿದೆ. ಈ ಬಾರಿ ನಮ್ಮ ಮಾನ್ಯ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ಪಶು ಸಂಗೋಪನ ಕ್ಷೇತ್ರಕ್ಕೆ ಅತಿ ಪ್ರಾಮುಖ್ಯತೆ ನೀಡಿದ್ದು ಇದರ ಅಭಿವೃದ್ಧಿಗಾಗಿ ಹಲವಾರು ರೀತಿಯ ಒತ್ತನ್ನು ನೀಡಿದ್ದಾರೆ. ಹಿಂದಿನ ಬಾರಿ ಸಿದ್ದರಾಮಯ್ಯ ಅವರ ಸರಕಾರವಿದ್ದಾಗ ಅನುಗ್ರಹ ಯೋಜನೆಯು ಚಾಲ್ತಿಯಲ್ಲಿತ್ತು. ಆದರೆ ಬಿಜೆಪಿ ಸರ್ಕಾರವು ಬಂದಮೇಲೆ ಈ ಅನುಗ್ರಹ ಯೋಜನೆಯನ್ನು ರದ್ದುಗೊಳಿಸಲಾಗಿತ್ತು. ಈಗ ಮತ್ತೆ ಸಿದ್ದರಾಮಯ್ಯ ಅವರು ಬಂದ ಕಾರಣ ರೈತರಿಗೂ ಉಪಯುಕ್ತವಾಗಲೆಂದು ಈ ಪಶು ಸಂಗೋಪನೆ ಕಾರ್ಯವನ್ನು ಅದರ ಜೊತೆ ನಂದಿನಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಕೆಳಗಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಏನಿದು ಅನುಗ್ರಹ ಯೋಜನೆ?
ಪಶು ಸಂಗೋಪನೆಯಡಿಯಲ್ಲಿ ಸಾಕುವಂತಹ ಪ್ರಾಣಿಗಳು ಮಾಲೀಕರಿಗೆ ಅವುಗಳ ಅಸುನಿಗಿದಾಗ ಪರಿಹಾರವನ್ನು ನೀಡಲು ಈ ಅನುಗ್ರಹ ಯೋಜನೆ ಬಂದಿತ್ತು. ಈ ಯೋಜನೆಯಿಂದ ಗೋಗಳು ಕುರಿಗಳು ಮೇಕೆಗಳು, ಹಸು ಹೆಮ್ಮೆ ಎತ್ತು ಮರಣ ಹೊಂದಿದರೆ ಅವುಗಳ ಮಾಲೀಕರಿಗೆ ಸಿಗಲಿದೆ ಸರ್ಕಾರದಿಂದ ಪರಿಹಾರ ಧನ. ಇಷ್ಟೇ ಅಲ್ಲದೆ ಚರ್ಮರೋಗದಿಂದ ಸಾವನ್ನು ಒಪ್ಪಿದ ಹಸುಗಳಿಗೂ ಕೂಡ ಪರಿಹಾರ ಧನವನ್ನು ನೀಡಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಒಟ್ಟು 32000 ಜಾನುವಾರುಗಳು ಈ ಚರ್ಮರೋಗದಿಂದ ತುತ್ತಾಗಿದ್ದವು ಅದರಲ್ಲಿ 25000 ಗೋ ಗಳಿಗೆ 53 ಕೋಟಿ ರೂಪಾಯಿಗಳನ್ನು ಪರಿಹಾರ ನೀಡಿದೆ. ಉಳಿದ ಪ್ರಾಣಿಗಳು ಕೂಡ 12 ಕೋಟಿ ಪರಿಹಾರವನ್ನು ಮೀಸಲಿಟ್ಟಿದೆ.
ಸರ್ಕಾರದಿಂದ ಈ ಯೋಜನೆ ಅಡಿ ಎಷ್ಟು ಪರಿಹಾರ ಧನ ಸಿಗುತ್ತದೆ?
ಮೇಕೆ, ಕುರಿ ಅಸುನೀಗಿದರೆ ತಲಾ ಮೇಕೆ – ಕುರಿಗೆ 5 ಸಾವಿರ ರೂ. ಪರಿಹಾರ. ಗೋವುಗಳು (ಹಸು-ಎಮ್ಮೆ-ಎತ್ತು) ಮರಣ ಹೊಂದಿದರೆ ತಲಾ 10,000 ರೂ. ಪರಿಹಾರ ನೀಡುತ್ತೇವೆ ಎಂದು ನಮ್ಮ ಮಾನ್ಯ ಮುಖ್ಯಮಂತ್ರಿಗಳು ಈ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. ಆದಕಾರಣ ರೈತರು ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ತಮ್ಮ ಪ್ರಾಣಿಗಳು ಸಾವನ್ನಪ್ಪಿದರೆ ಈ ಕೆಳಗಿನ ರೀತಿ ಅರ್ಜಿಯನ್ನು ಸಲ್ಲಿಸಿ ಈ ಪರಿಹಾರ ಧನವನ್ನು ಪಡೆದುಕೊಳ್ಳಬಹುದು.
ಈ ಯೋಜನೆ ಅರ್ಜಿ ಸಲ್ಲಿಸುವುದು ಹೇಗೆ?
ನಿಮ್ಮ ಬಳಿ ಇರುವ ಕುರಿ ಮೇಕೆ ಮೃತಪಟ್ಟರೇ ನೀವು ಮೊದಲು ನಿಮ್ಮ ಹತ್ತಿರದ ಪಶು ಸಂಗೋಪನೆ ಇಲಾಖೆಯಲ್ಲಿ ಪಶು ವೈದ್ಯರನ್ನು ಭೇಟಿ ಮಾಡಿ ಮರಣೋತ್ತರ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಆ ಪ್ರಾಣಿಗಳ ಮಾಲೀಕರು ಬೇಕಾಗುವ ಎಲ್ಲ ದಾಖಲಾತಿಗಳನ್ನು ಅಂದರೆ ನಿಮ್ಮ ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಮತ್ತು ನಿಮ್ಮ ಮೊಬೈಲ್ ಸಂಖ್ಯೆ ಎಲ್ಲವನ್ನು ತೆಗೆದುಕೊಂಡು ಅಧಿಕಾರಿಗಳಿಗೆ ತಲುಪಿಸಬೇಕು.
*ಕೃಷಿ ಯಂತ್ರಗಳನ್ನು ಸಬ್ಸಿಡಿಯಲ್ಲಿ ಪಡೆಯಲು ಮೊಬೈಲ್ ನಿಂದ ಅರ್ಜಿ, K KISAN PORTAL ನಲ್ಲಿ ಅರ್ಜಿ ಸಲ್ಲಿಸಿ*
*ಕರ್ನಾಟಕ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿದ್ದು ಕೊಡುಗೆ, ರೈತರಿಗೆ ಸಿಹಿ ಸುದ್ದಿ ಕೊಟ್ಟ ಸಿದ್ದು*
*ಬಿಪಿಎಲ್ ಕಾರ್ಡ್ ಇರುವ ಜನರಿಗೆ 170 ರೂಪಾಯಿ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ*