2023-24 ನೇ ಸಾಲಿನಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆಯಡಿ (ನಲ್ಫ್) ಪೀರನವಾಡಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುವ ಬಡತನ ರೇಖೆಗಿಂತ ಕೆಳಗೆ ಇರುವ ನಿರೋದ್ಯೋಗ ಅಭ್ಯರ್ಥಿಗಳಿಗೆ ವಿವಿಧ ಯೋಜನೆಗಳಡಿ ಸಹಾಯಧನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಗರ ಸ್ವಯಂ ಉದ್ಯೋಗ ಕಾರ್ಯಕ್ರಮಯಡಿ ಕಿರು ಉದ್ಯಮ ಕೈಗೊಳ್ಳಲು ರಾಷ್ಟ್ರೀಕೃತ ಬ್ಯಾಂಕಿನಿಂದ 2 ರೂ ಲಕ್ಷ ವರೆಗೆ ಸಾಲ ಪಡೆದು ಉದ್ಯೋಗ ಕೈಗೊಳ್ಳುವುದು, ಹಾಗೂ ಯೊಜನೆಯಡಿ ಶೇ. 5 ರಷ್ಟು ಬಡ್ಡಿ ಸಹಾಯದನ ನೀಡಲಾಗುವುದು. ನಿಗದಿ ಪಡಿಸಿದ ಗುರಿ 15 ಆಗಿದು 18 ರಿಂದ 50 ವರ್ಷದೊಳಗೆ ಇರಬೇಕು.
ಸ್ವಸಹಾಯ ಗುಂಪಗಳ ರಚನೆ:
ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಬಡತನ ರೇಖೆಗಿಂತ ಕೆಳಗಿರುವ 10 ರಿಂದ 20 ಮಹಿಳೆಯರ ಗುಂಪು ರಚನೆ ಮಾಡುವುದು ಮತ್ತು ಗುಂಪು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಪಡೆದು ಉದ್ಯೋಗ ಕೈಗೊಳ್ಳುಬಹುದಾಗಿದೆ. ಸಾಲದ ಮೊತ್ತ 2 ಲಕ್ಷ ರೂ ದಿಂದ ರೂ. 10 ಲಕ್ಷಗಳ ವರೆಗೆ ಯೋಜನೆಯಡಿ ಶೇ. 5 ರಷ್ಟು ಬಡ್ಡಿ ಸಹಾಯದನ ನೀಡಲಾಗುವುದು. ನಿಗದಿ ಪಡಿಸಿದ ಗುರಿ 10 ಆಗಿದು 18 ರಿಂದ 50 ವರ್ಷದೊಳಗೆ ಇರಬೇಕು.
ಸ್ವಸಹಾಯ ಗಂಪುಗಳ ಲಿಂಕೇಜ ಯೋಜನೆ:
ಸ್ವ ಸಹಾಯ ಗಂಪುಗಳ ಉಳಿತಾಯ ಮಾಡಿದ ಬ್ಯಾಂಕಿನಿಂದ ಸಾಲ ಪಡೆಯುವುದು ಹಾಗೂ ನಿಗದಿ ಪಡಿಸಿದ ಗುರಿ 5 ಆಗಿದು, 18 ರಿಂದ 50 ವರ್ಷದೊಳಗೆ ಇರಬೇಕು.
ಬೀದಿ ಬದಿ ವ್ಯಾಪಾರಸ್ಥರ ಯೋಜನೆ:
ಪಟ್ಟಣ ಪಂಚಯತಿ ಪೀರನವಾಡಿ ವ್ಯಾಪ್ತಿಯಡಿ ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ನೀಡುವುದು ಕನಿಷ್ಟ 18 ರಿಂದ 50 ವರ್ಷದೊಳಗೆ ಇರಬೇಕು. ನ.27 2023 ರೊಳಗಾಗಿ ನಗರಸಭೆಯ ಡೇ-ನಲ್ಕ ವಿಭಾಗಕ್ಕೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ
ಪಟ್ಟಣ ಪಂಚಾಯಿತಿ ಪೀರನವಾಡಿ ಬೆಟ್ಟಿ ಎಂದು ಕಾರ್ಯಾಲಯಕ್ಕೆ ನೀಡಬಹುದಾಗಿದೆ ಪೀಠಣವಾಡಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.