ಆತ್ಮೀಯ ರೈತ ಬಾಂಧವರೇ, ಸರ್ಕಾರವು ತೋಟಗಾರಿಕಾ ಬೆಳೆಗಳಿಗೆ ಬೆಳೆ ವಿಮೆಯನ್ನು ತುಂಬಲು ಅರ್ಜಿ ಹಾಕಲು ಅನುವು ಮಾಡಿಕೊಟ್ಟಿದೆ. ಆದಕಾರಣ ರೈತರು ತಾವು ಬೆಳೆದ ತೋಟಗಾರಿಕಾ ಬೆಳೆಗಳಿಗೆ ವಿಮೆಯನ್ನು ಕಂತುಗಳ ಮೂಲಕ ತುಂಬಿ ಒಂದು ವೇಳೆ ನಿಮಗೆ ಅದರಿಂದ ನಷ್ಟವಾದರೆ ಸರಕಾರವು ನಿಮಗೆ ನಿರ್ದಿಷ್ಟವಾದ ಬೆಳೆ ಪರಿಹಾರವನ್ನು ಕೊಡುತ್ತದೆ. ಯಾವ ಯಾವ ಬೆಳೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಯಾವ ಯಾವ ಬೆಳೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದಾರೆ?
ಸರ್ಕಾರವು ಅಡಿಕೆ, ದಾಳಿಂಬೆ, ಮಾವು, ಕಾಳುಮೆಣಸು ಈ ನಾಲ್ಕು ತೋಟಗಾರಿಕಾ ಬೆಳಗಾವಿ ಬೆಳೆ ವಿಮೆಯನ್ನು ತುಂಬಲು ಅರ್ಜಿ ಕರೆದಿದೆ. ಆದಕಾರಣ ರೈತರು ಈ ಮುಂಗಾರು ಹಂಗಾಮಿಗೆ ಕ್ರಾಪ್ ಇನ್ಸೂರೆನ್ಸ್ ಅನ್ನು ತುಂಬಿ.
ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಮತ್ತು ಹೇಗೆ ಸಲ್ಲಿಸಬೇಕು?
ರೈತರು ನಿಮ್ಮ ಹತ್ತಿರದ ಗ್ರಾಮ್ ಒನ್ ಸೇವಾ ಭೇಟಿ ಕೊಡಬೇಕು ಮತ್ತು ನಿಮ್ಮ ಪಹಣಿ ಅಂದರೆ ಉತಾರೆನಿಂದ ನಿಮ್ಮ ಬೆಳೆಗಳ ಸಮೀಕ್ಷೆಯನ್ನು ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ನೀವು ಕ್ರಾಪ್ ಸರ್ವೆ ಯಾಪ್ ಅನ್ನು ಬಳಸಿಕೊಂಡು ನಿಮ್ಮ ಹೊಲದ ಸರ್ವೆ ಮಾಡಬೇಕು. ಅಲ್ಲಿ ನೀವು ಕಾಳು ಮೆಣಸು, ದಾಳಿಂಬೆ, ಅಡಿಕೆ ಮತ್ತು ಉಳಿದ ತೋಟಗಾರಿಕಾ ಬೆಳೆಗಳ ಸರ್ವೆ ಮಾಡಬೇಕು.
ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?
ದಾಳಿಂಬೆ, ಪಪ್ಪಾಯ, ಅಡಿಕೆ ಬೆಳೆಗಳಿಗೆ ಜುಲೈ 15 – 2023 ಕೊನೆ ದಿನಾಂಕ. ಮಾವು ಬೆಳೆಗೆ ಜುಲೈ 31 – 2023 ಕೊನೆಯ ದಿನಾಂಕವಾಗಿದೆ.
ರೈತರು ಬೆಳೆ ವಿಮೆ ಅರ್ಜಿ ಸಲ್ಲಿಸಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://samrakshane.karnataka.gov.in
ಬೆಳೆ ಸಮೀಕ್ಷೆ ಆ್ಯಪ್ (Farmers app) ಮತ್ತು PR ಆ್ಯಪ್ ಬಿಡುಗಡೆ ಅಗಿದೆ. ಪ್ಲೇಸ್ಟೋರ್ (Google play store) ದಿಂದ ಡೌನ್ ಲೋಡ್ ಮಾಡಿಕೊಳ್ಳಲು ಕೋರಿದೆ. ಇವತ್ತಿನಿಂದಲೆ ಬೆಳೆ ಸಮೀಕ್ಷೆಯನ್ನು ಆರಂಭಿಸಲು ವಿನಂತಿಸಿದೆ. ಮಾಹಿತಿಗಾಗಿ ಸಮೀಪದ ಕೃಷಿ,/ತೋಟಗಾರಿಕೆ ಇಲಾಖೆ ಹಾಗೂ ಗ್ರಾಮದ ಖಾಸಗಿ ನಿವಾಸಿಗಳನ್ನು ಸಂಪರ್ಕಿಸಲು ಕೋರಿದೆ.
2023 ರ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ನೋಂದಾಣಿಗಾಗಿ ರೈತರು FRUITS ತಂತ್ರಾಂಶದಲ್ಲಿ ಈಗಾಗಲೇ ನೋಂದಾಣೀ ಮಾಡಿಕೊಂಡಿರಬೇಕು ಹಾಗೂ FRUIT ID ಪಡೆದುಕೊಂಡಿರಬೇಕು. FRUITS ತಂತ್ರಾಂಶದಲ್ಲಿ ದಾಖಲಾದ ಸರ್ವೆ ಬೆಳೆ ವಿಮೆಯಡಿ ನೋಂದಣಿ ಮಾಡಲು ಅವಕಾಶವಿರುತ್ತದೆ. ಬೆಳೆ ವಿಮೆಗೆ ನೋಂದಾಯಿಸುವ ಮೊದಲು FRUIT ID ಇಲ್ಲದಿದ್ದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಗಳಿಗೆ ಭೇಟಿ ನೀಡಿ, FRUITS ತಂತ್ರಾಂಶದಲ್ಲಿ ನೋಂದಣಿ ಮಾಡುವ ಮೂಲಕ ಪಡೆಯಬಹುದಾಗಿದೆ. ಜಂಟಿ ಖಾತೆದಾರರು FRUITS ತಂತ್ರಾಂಶದಲ್ಲಿ ದಾಖಲಾದ ವಿಸ್ತೀರ್ಣಕ್ಕನುಗುಣವಾಗಿ ಬೆಳೆ ವಿಮೆ ನೋಂದಾವಣಿ ಮಾಡಲು ಅವಕಾಶವಿರುತ್ತದೆ.
*ಕೃಷಿಯಲ್ಲಿ ಸ್ವಯಂ ಉದ್ಯೋಗ ಪ್ರಾರಂಭ ಮಾಡಲು ಕೇಂದ್ರ ಸರ್ಕಾರದಿಂದ ಸಾಲ ಸೌಲಭ್ಯ*
*ಮುಂಗಾರಿನ ಯಾವ ಬೆಳೆಗೆ ಎಷ್ಟು ಬೆಳೆವಿಮೆ ತುಂಬಬೇಕು ಮತ್ತು ಕೊನೆ ದಿನಾಂಕ ಯಾವುದು?, FID ಹೊಂದುವುದು ಏಕೆ ಅವಶ್ಯಕ?*
*ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸ್ಥಿತಿ ಪರಿಶೀಲನೆ ಮಾಡುವುದು ಹೇಗೆ?*
*ಅನುಗ್ರಹ ಯೋಜನೆ ಮರುಜಾರಿ, ಮೃತಪಟ್ಟ ಕುರಿ, ಮೇಕೆಗೆ 5000 ಮತ್ತು ಹಸು, ಎಮ್ಮೆ, ಎತ್ತಿಗೆ 10000 ಪರಿಹಾರ ಧನ*