ಆತ್ಮೀಯ ರೈತ ಬಾಂಧವರೇ, ನೀವು ಕಾರ್ಮಿಕ ಕಾರ್ಡನ್ನು ಹೊಂದಿದ್ದರೆ ಇಲ್ಲಿದೆ ನಿಮಗೆ ಸಿಹಿಯಾದ ಸುದ್ದಿ. ಕಾರ್ಮಿಕ ಇಲಾಖೆ ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮೊದಲ ಎರಡು ಮಕ್ಕಳಿಗೆ ನೀಡುತ್ತಿರುವ ಶೈಕ್ಷಣಿಕ ಸೌಲಭ್ಯಕ್ಕಾಗಿ ಅರ್ಜಿ. ನಿಮ್ಮ ಮಕ್ಕಳು ಯಾವುದೇ ತರಗತಿಯಲ್ಲಿ ಓದುತ್ತಿದ್ದರು ಅವರಿಗೆ ಸಿಗಲಿದೆ ಸಹಾಯಧನ. ಅವರ ಉನ್ನತ ಶಿಕ್ಷಣಕ್ಕಾಗಿ ಸರ್ಕಾರವು ಉಪಯುಕ್ತವಾಗುವ ಕೆಲಸವನ್ನು ಮಾಡಿದೆ. ಇದನ್ನು ಈ ಕಾಡು ಹೊಂದಿರುವ ಪ್ರತಿಯೊಬ್ಬ ನಾಗರಿಕರು ಬಳಸಿಕೊಳ್ಳಬೇಕೆಂಬುದೇ ನಮ್ಮ ವಿನಂತಿ.
ಬೇಕಾಗಿರುವ ದಾಖಲೆಗಳು
*ಆಧಾರ ಕಾರ್ಡ (ತಂದೆ/ತಾಯಿ/ವಿದ್ಯಾರ್ಥಿ)
*ಪಾಲಕರ ಲೇಬರ ಕಾರ್ಡ
*ರೇಷಣ ಕಾರ್ಡ
*ಉದ್ಯೋಗ ಪ್ರಮಾಣ ಪತ್ರ
*ಎಸ್.ಎಸ್.ಎಲ್.ಸಿ ಮಾರ್ಕ್ಸ್ ಕಾರ್ಡ
*ಹಿಂದಿನ ತರಗತಿಯ ಮಾರ್ಕ್ಸ್ ಕಾರ್ಡ
*ಎಸ್.ಟಿ.ಎಸ್ ನಂಬರ್
*ಬ್ಯಾಂಕ ಪಾಸಬುಕ್ ವಿದ್ಯಾರ್ಥಿಗಳ ಫೋಟೊ
*ಮೊಬೈಲ ಸಂಖ್ಯೆ (ಆಧಾರ ಕಾರ್ಡಗೆ ಅಂಕ್ ಇರಬೇಕು)
ನಿಮ್ಮ ಮಕ್ಕಳ ಯಾವ ಯಾವ ತರಬೇತಿಗೆ ಎಷ್ಟು ಸಹಾಯಧನವನ್ನು ನೀಡುತ್ತಾರೆ ಎಂದು ತಿಳಿದುಕೊಳ್ಳಿ?
ನೊಂದಾವಣಿ ಮಾಡಿಕೊಂಡಿರುವ ಕಟ್ಟಡ ಕಾರ್ಮಿಕನ ಮಗ ಅಥವಾ ಮಗಳ ಶಿಕ್ಷಣದ ನೆರವು. ನೋಂದಾಯಿತ ಕಟ್ಟಡ ಕಾರ್ಮಿಕರ ಅರ್ಹ ಇಬ್ಬರು ಮಕ್ಕಳಿಗೆ ಸಹಾಯಧನ ನೀಡುತ್ತದೆ.ಶೈಕ್ಷಣಿಕ ಸಹಾಯಧನವನ್ನು ಪಡೆಯಲು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕು. 1 ನೇ ತರಗತಿಯಿಂದ ಉನ್ನತ ಪದವಿಯವರೆಗೆ ಶೈಕ್ಷಣಿಕ ಸಹಾಯಧನವನ್ನು ಕೊಡಲಾಗುವುದು. ಕರ್ನಾಟಕ ರಾಜ್ಯದಲ್ಲಿ ಭೌತಿಕವಾಗಿ ಆರಂಭವಾಗಿರುವ ಹಾಗೂ ಸರ್ಕಾರದಿಂದ ನೋಂದಾಯಿತ ಶಾಲಾ ಕಾಲೇಜುಗಳಲ್ಲಿ ಪ್ರಸ್ತುತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಫಲಾನುಭವಿಗಳ 02 ಮಕ್ಕಳಿಗೆ ಮಾತ್ರ ಶೈಕ್ಷಣಿಕ ಸಹಾಯಧನವನ್ನು ನೀಡಲಾಗುವುದು. ದೂರ ಶಿಕ್ಷಣ, ಆನ್ ಲೈನ್ ಶಿಕ್ಷಣ, ಹೋಂ ಸ್ಟಡಿ, ಇತ್ಯಾದಿ ವ್ಯಾಸಂಗದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಪಡೆಯಲು ಅವಕಾಶವಿರುವುದಿಲ್ಲ.