Breaking
Wed. Dec 18th, 2024

ಕೃಷಿ ಯಾಂತ್ರಿಕರಣ ಯೋಜನೆಯಡಿ ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆಗೆ ಅರ್ಜಿ

Spread the love

ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಬಾಡಿಗೆ ಆಧಾರದಲ್ಲಿ ಒದಗಿಸುವಂತೆ ತನ ಸ್ಥಾಪಿಸಲಾಗಿರುವ ಕೃಷಿ ಯಂತ್ರಧಾರೆ ಬಿಸಿ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಲು, ಊರ 2023-24 ನೇ ಸಾಲಿನಲ್ಲಿ ರಾಜ್ಯ ವಲಯ -ರ ಯಾಂತ್ರಿಕರಣ ಯೋಜನೆಯಡಿ “ಹೈಟೆಕ್ ಯ ಹಾರ್ವೆಸ್ಟರ್ ಹಬ್” ಸ್ಥಾಪನೆಗೆ ಸರ್ಕಾರ ಅಲ್ಲಿ ಅನುಮೋದನೆ ನೀಡಿದೆ ಎಂದು ಯಾದಗಿರಿ ಜಂಟಿ ಕೃಷಿ ನಿರ್ದೇಶಕರು ಶ್ರೀಮತಿ ಮಂಜುಳಾ ಬಸವರೆಡ್ಡಿ ತಿಳಿಸಿದ್ದಾರೆ.

ಜಿಲ್ಲೆಗೆ ಸಾಮಾನ್ಯ ವರ್ಗದಡಿ 01, – ಗಿರಿಜನ ಅರಿ ಒಟ್ಟು ಉಪಯೋಜನೆಯಡಿ 02, 03 ಕಂಬೈನ್ಸ್ ಹಾರ್ವೆಸ್ಟರ್ ರು ಹಬ್‌ಗಳನ್ನು ಸ್ಥಾಪನೆ ಮಾಡಲು ಆಸಕ್ತ ಅಲ್ಲಿ ವ್ಯಕ್ತಿಕ ಫಲಾನುಭವಿಗಳಿಂದ ಅರ್ಜಿಗಳನ್ನು ಜದ ಆಹ್ವಾನಿಸಿದೆ. ಸಾಮಾನ್ಯ ವರ್ಗದ ರೈತರಿಗೆ ಗರಿಷ್ಠ ಶೇ.50 ರಂತೆ, ಪರಿಶಿಷ್ಟ ಪಂಗಡ =ದ ವರ್ಗದ ರೈತರಿಗೆ ಗರಿಷ್ಠ ಶೇ. 70 ರಂತೆ ಈದ ಸಹಾಯಧನವನ್ನು ನೀಡಲಾಗುವುದು. ತಥ ಸದರಿ ಸಹಾಯಧನವನ್ನು ಕ್ರೆಡಿಟ್ ಲಿಂಕ್ 2 (Credit Linked Back Ended Subsidy) ನೀಡಲಾಗುವುದು.

ಆಯ್ಕೆಯಾದ ಫಲಾನುಭವಿಗಳು ಕೃಷಿ ಮೂಲಭೂತ ಸೌಕರ್ಯನಿಧಿ ಸಾಲದ ನೆರವನ್ನು ಪಡೆಯಲು ಸಹ ಅವಕಾಶವಿರುತ್ತದೆ. ಆಸಕ್ತರು ಅರ್ಜಿಯೊಂದಿಗೆ ಪಹಣಿ, ಎಫ್.ಐ.ಡಿ., ಜಾತಿ ಪ್ರಮಾಣ ಪತ್ರ, ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್, 20 ರೂ.ಗಳ ಛಾಪಾ ಕಾಗದ ಮೇಲೆ ಹಬ್‌ ಅನ್ನು ಪರಬಾರೆ ಮಾಡುವುದಿಲ್ಲವೆಂದು ಮುಚ್ಚಳಿಕೆ ಪತ್ರ. ಈ ಮೇಲಿನ ಎಲ್ಲಾ ದಾಖಲಾತಿಗಳನ್ನು ನಿಮ್ಮ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ 2024ರ ಫೆಬ್ರವರಿ 5ರ ಒಳಗೆ ಅರ್ಜಿಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಂಪರ್ಕಿಸಲು ಸಹಾಯಕ ನಿರ್ದೇಶಕರು, ಶಹಾಪೂರ ಸುರಪುರ ನಿರ್ದೇಶಕರು ಸಂಪರ್ಕಿಸಬಹುದು 8277933419, ಸಹಾಯಕ ಕೃಷಿ 9953260621, ಸಹಾಯಕ ಕೃಷಿ 8277935664 ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೊಗರಿ ಖರೀದಿ ಕೇಂದ್ರಗಳು ಆರಂಭ

2023-24ನೇ ಸಾಲಿನ ಬೆಲೆ ಸ್ಥಿರೀಕರಣ ಯೋಜನೆಯಡಿಯಲ್ಲಿ ತೊಗರಿ ಖರೀದಿಗೆ ಪ್ರಾರಂಭಿಸಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಶ್ರೀಮತಿ ಡಾ.ಸುಶೀಲ.ಬಿ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇತ್ತೀಚಿಗೆ 00 25-01-20248 ಅಪರಾಹ್ನ 5 ಗಂಟೆಗೆ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ (Price stabiliza- tion scheme) ಖರೀದಿಮಾಡಲು ಸರ್ಕಾರಿ ಆದೇಶದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ, ಶಹಾಪೂರ ನೋಡಲ್ ಏಜೇನ್ಸಿಯನ್ನಾಗಿ ನೇಮಿಸಿದೆ ಎಂದು ಅವರು ಸೂಚಿಸಿದರು.ಯಾದಗಿರಿ ಜಿಲ್ಲೆಯಲ್ಲಿ 17 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ರೈತ ಉತ್ಪಾದಕ ಸಂಘಗಳನ್ನು ಗುರುತಿಸಿದ್ದು ತಕ್ಷಣದಿಂದ ಜಾರಿಗೆ ಬರುವಂತೆ ರೈತರ ನೊಂದಣಿ ಕಾರ್ಯವನ್ನು ದಿನಾಂಕ 25-01-2024 ರಿಂದ ಕೇಂದ್ರಗಳಲ್ಲಿ ತೊಗರಿ ಖರೀದಿ ಪ್ರಕ್ರಿಯೆ ಪ್ರಾರಂಭ ಮಾಡಲಾಗಿದೆ ಎಂದು ಹೇಳಿದರು.

ಖರೀದಿ ಕೇಂದ್ರಗಳ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ ಶಹಾಪುರ ಶಾಖೆ (ಖರೀದಿ ಕೇಂದ್ರಗಳ ಹೆಸರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ) ಯಾದಗಿರಿ ತಾಲ್ಲೂಕಿನಲ್ಲಿ (1) ಹತ್ತಿಕುಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ. ಶಹಾಪೂರ ತಾಲ್ಲೂಕಿನಲ್ಲಿ (5) ಶಹಾಪೂರ ಕರ್ನಾಟಕ ರಾಜ್ಯ ಸಹಕಾರಿ ಮಹಾ ಮಂಡಳ ನಿಯಮಿತ, ಚಾಮನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಹೊಸಕೇರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ.

ಗಂಗನಾಳ ಎಫ್.ಪಿ.ಓ, ನಗನೂರು, ಸುರಪುರ ತಾಲ್ಲೂಕಿನಲ್ಲಿ (4) ಸುರಪುರ 3 ಕೆಂಭಾವಿ-1 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಕೆಂಭಾವಿ-2 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಮಾಲಗತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ. ಹುಣಸಗಿ ತಾಲ್ಲೂಕಿನಲ್ಲಿ (2) ಹುಣಸಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಕೊಡೇಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ. ವಡಗೇರಾ ತಾಲ್ಲೂಕಿನಲ್ಲಿ (2) ಬೆಂಡೆಗಂಬಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಹೈಯಾಳ.ಬಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ. ಗುರುಮಿಠಕಲ್ ತಾಲ್ಲೂಕಿನಲ್ಲಿ (3) ಚಪೇಟ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಗುರುಮಿಠಕಲ್, ಸೈದಾಪೂರ ಎಫ್.ಪಿ.ಓ ಯಾದಗಿರಿ ಜಿಲ್ಲೆಯಾದ್ಯಂತ ಒಟ್ಟು ಕೇಂದ್ರಗಳು 17 ಇದೆ ಎಂದು ಸೂಚಿಸಿದರು.

ಗುಣಮಟ್ಟ ತೊಗರಿಯನ್ನು ಬೆಲೆ ಸ್ಥಿರೀಕರಣ ಯೋಜನೆಯಡಿ ಮಾರುಕಟ್ಟೆಯಲ್ಲಿ ದರ- odd Minimum Achieved Procurement Price (Mapp) And Dynamic Buffer Procure- ment Price (DBPP) & ದರಗಳನ್ನು ಪಡೆದುಕೊಂಡು ಎರಡರಲ್ಲಿ ಯಾವ ಬೆಲೆ ಹೆಚ್ಚು ಇದೆಯೋ ಅದನ್ನು ರೈತರಿಗೆ ಪಾವತಿಸಲಾಗುವುದು ಎಂದು ಸೂಚಿಸಿದೆ. ರೈತ ಭಾಂದವರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಥವಾ ರೈತ ಉತ್ಪಾದಕ ಸಂಘಗಳಿಗೆ ಭೇಟಿ ನೀಡಿ ತಾವು ಬೆಳೆದ ತೊಗರಿ ಮಾರಾಟಕ್ಕೆ ನೊಂದಾಯಿಸಿಕೊಂಡು ತೊಗರಿ ಉತ್ಪನ್ನವನ್ನು ಮಾರಾಟ ಮಾಡಲು ತಿಳಿಸಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *