ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ ಸಾಲ ನೀಡಲು ಅರ್ಜಿ. ವೀರಶೈವ ಲಿಂಗಾಯತ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವು 2024-25ನೇ ಸಾಲಿಗೆ ಅರ್ಹ ಫಲಾನುಭವಿಗಳಿಂದ ವಿವಿಧ ಯೋಜನೆಯಡಿ ಶೈಕ್ಷಣಿಕ ಸಾಲ ನೀಡಲು ಅರ್ಜಿ ಆಹ್ವಾನಿಸಿದೆ. ವಿವಿಧ ಯೋಜನೆಗಳಡಿ ಸಾಲ ಪಡೆಯಲಿಚ್ಚಿಸುವವ ಫಲಾನುಭವಿಗಳು ಇದೇ ತಿಂಗಳು ಅಂದರೆ ಆಗಸ್ಟ್ 31ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀ ವಿಜಯಾನಂದ ಕಾಶಪ್ಪನವರ್ ತಿಳಿಸಿದ್ದಾರೆ.
ಬಸವ ಬೆಳಗು ಯೋಜನೆ ಅರ್ಹತಾ ಮಾನದಂಡಗಳು:
ಈ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸುವವರು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿರಬೇಕು. ಕುಟುಂಬದ ವಾರ್ಷಿಕ ಆದಾಯ 3.5 ಲಕ್ಷ ರೂ.ಗಿಂತ ಹೆಚ್ಚಿರತಕ್ಕದ್ದಲ್ಲ. ವೃತ್ತಿಪರ ಕೋರ್ಸ್‌ಗಳಾದ ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ 28 ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದರೆ ವಾರ್ಷಿಕ 1 ಲಕ್ಷದಿಂದ ಗರಿಷ್ಟ 4 ಲಕ್ಷದಿಂದ 5 ಲಕ್ಷದವರೆಗೆ ಶೇ.2 ರ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲವನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ಸಿಇಟಿ/ನೀಟ್ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶ ಪಡೆದಿರತಕ್ಕದ್ದು.
2022-2023ನೇ ಸಾಲಿನಲ್ಲಿ ಸಾಲ ಪಡೆದ ವಿದ್ಯಾರ್ಥಿಗಳಿಗೆ 3ನೇ ಕಂತಿನ ನವೀಕರಣ ಸಾಲ ಹಾಗೂ 2023-24 ನೇ ಸಾಲಿನಲ್ಲಿ ಸಾಲ ಪಡೆದ ವಿದ್ಯಾರ್ಥಿಗಳಿಗೆ 2ನೇ ಕಂತಿನ ನವೀಕರಣ ಸಾಲ ಮಂಜೂರು ಮಾಡಲು ವ್ಯಾಸಂಗ ದೃಢೀಕರಣ ಮತ್ತು ಹಿಂದಿನ ವರ್ಷದ ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸಬೇಕು.
ವಿದೇಶ ವಿದ್ಯಾವಿಕಾಸ ಯೋಜನೆ ಅರ್ಹತಾ ಮಾನದಂಡಗಳು:
ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಅವರ ಕುಟುಂಬ ವಾರ್ಷಿಕದ ಆದಾಯ ರೂ.8.00 ಲಕ್ಷಗಳ ಮಿತಿಯಲ್ಲಿರಬೇಕು. ವಿದ್ಯಾರ್ಥಿಗಳು ಕಿಖ ಘಾಡಿಟಜ ಖಚಿಟಿಟಿರಿ-ನ 500 ರೊಳಗೆ ಬರುವ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪೋಸ್ಟ್ ಡಾಕ್ಟೋರಲ್, ಪಿಹೆಚ್‌ಡಿ, ಸ್ನಾತಕೋತ್ತರ ಪದವಿ ಪ್ರವೇಶ ಹೊಂದಿರಬೇಕು. ಪದವಿ ಕೋರ್ಸ್‌ಗಳಲ್ಲಿ ಉನ್ನತ ವ್ಯಾಸಂಗ ಪಡೆಯಲು ವಾರ್ಷಿಕ ಗರಿಷ್ಠ ರೂ.10.00 ಲಕ್ಷಗಳಂತೆ 3ವರ್ಷದವರೆಗೆ ಒಟ್ಟು ರೂ.20.00 ಲಕ್ಷಗಳನ್ನು ಶೂನ್ಯಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲಾಗುತ್ತದೆ.
ವಿದೇಶ ವಿದ್ಯಾವಿಕಾಸ ಯೋಜನೆ ಅರ್ಹತಾ ಮಾನದಂಡಗಳು:
2022-23 ಮತ್ತು 2023-24 ನೇ ಸಾಲಿನಲ್ಲಿ ಸಾಲ ಪಡೆದ ವಿದ್ಯಾರ್ಥಿಗಳಿಗೆ 2ನೇ ಕಂತಿನ ನವೀಕರಣ ಸಾಲ ಮಂಜೂರು ಮಾಡಲು ವ್ಯಾಸಂಗ ದೃಢೀಕರಣ ಮತು ಹಿಂದಿನ ವರ್ಷದ ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು.
ಜೀವಜಲ ಯೋಜನೆ: ಅರ್ಹತಾ ಮಾನದಂಡಗಳು:
ವಿದ್ಯಾರ್ಥಿಗಳು ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98,000/- ಹಾಗೂ ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳ ಮಿತಿಯೊಳಗಿರಬೇಕು. ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಿಗೆ ಕೊಳವೆ ಬಾವಿ ಕೊರೆಸುವ ಮುಖೇನ ನೀರಾವರಿ ಸೌಲಭ್ಯ ಒದಗಿಸಲಾಗುವುದು.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಿಗೆ ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಘಟಕ ವೆಚ್ಚ ರೂ. 4.75 ಲಕ್ಷಗಳಲ್ಲಿ ರೂ. 4.25 ಲಕ್ಷಗಳು ಸಹಾಯಧನ, ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ರೂ.50,000/- ಗಳ ಸಾಲವನ್ನು ಶೇ. 4 ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು. ಉಳಿದ ಜಿಲ್ಲೆಗಳಿಗೆ ಘಟಕ ವೆಚ್ಚರೂ. 3.75 ಲಕ್ಷಗಳಲ್ಲಿ ರೂ.3.25 ಲಕ್ಷ ಸಹಾಯಧನ, ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ರೂ.50,000/- ಗಳ ಸಾಲವನ್ನು ಶೇ. 4 ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುತ್ತದೆ. ದಕ್ಷಿಣಕನ್ನಡ, ಉಡುಪಿ, ಕೊಡಗು, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಇತರೆ ಜಿಲ್ಲೆಗಳಲ್ಲಿ ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಒಳಗೆ ಜಮೀನು ಹೊಂದಿರಬೇಕು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಮತ್ತು ಸಣ್ಣ ಹಿಡುವಳಿದಾರರ ಪ್ರಮಾಣಪತ್ರವನ್ನು ಹೊಂದಿರತಕ್ಕದ್ದು.
ಕಾಯಕ ಕಿರಣ ಯೋಜನೆ ಅರ್ಹತಾ ಮಾನದಂಡಗಳು:
ವೀರಶೈವ-ಲಿಂಗಾಯತ ಸಮುದಾಯದ ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗಳಿಗನುಸಾರ ಈ ಕೆಳಕಂಡಂತೆ ಸಾಲ ಮತ್ತು ಸಹಾಯಧನ ಸೌಲಭ್ಯ ಒದಗಿಸಲಾಗುವುದು. ಘಟಕ ವೆಚ್ಚ ರೂ.1,00,000/- ಗಳಿಗೆ ಶೇ.20ರಷ್ಟು ಗರಿಷ್ಠ ರೂ.20,000/-ಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ.80ರಷ್ಟು ಗರಿಷ್ಠ ರೂ.80,000/- ಗಳನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು. ಘಟಕವೆಚ್ಚ ರೂ.2,00.000/- ಗಳಿಗೆ ಶೇ.15ರಷ್ಟು ಗ- ರಿಷ್ಠ ರೂ.30,000/-ಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ.85ರಷ್ಟು ಗರಿಷ್ಠ ರೂ.1,70,000/-ಗಳನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು.
ಭೋಜನಾಲಯ ಕೇಂದ್ರ; ಅರ್ಹತಾ ಮಾನದಂಡಗಳು:
ವೀರಶೈವ-ಲಿಂಗಾಯತ ಸಮುದಾಯದ ಜನರು ಹೋಟೆಲ್ (ಖಾನಾವಳಿ) ಉದ್ಯಮ ಕೈಗೊಳ್ಳಲು ಈ ಯೋಜನೆಯಲ್ಲಿ ಸಾಲ ಮತ್ತು ಸಹಾಯಧನ ನೀಡಲಾಗುವುದು. ಹೋಟೆಲ್ ಉದ್ದಿಮೆ ಕೈಗೊಳ್ಳಲು ಘಟಕ ವೆಚ್ಚ ರೂ. 5.00 ಲಕ್ಷ ಇದರಲ್ಲಿ ರೂ.4.60,000/- ಬ್ಯಾಂಕ್ ಸಾಲ ಪಡೆದಿದ್ದಲ್ಲಿ ರೂ. 40,000/- ಸಹಾಯಧನ ನೆರವು ನೀಡಲಾಗುವುದು. ಲಾನುಭವಿಗಳು ತಮ ಸ್ವಂತ ಹೆಸರಿನಲ್ಲಿ ಕನಿಷ್ಠ 20ಥ30 ಅಳತೆಯುಳ್ಳ ನಿವೇಶನ ಹೊಂದಿರಬೇಕು.
ವಿಭೂತಿ ನಿರ್ಮಾಣ ಘಟಕ ಅರ್ಹತಾ ಮಾನದಂಡಗಳು:
ವೀರಶೈವ-ಲಿಂಗಾಯತ ಸಮುದಾಯದವರು ವಿಭೂತಿಯನ್ನು ತಯಾರಿಸುವವರಿಗೆ ಸಾಲ ಮತ್ತು ಸಹಾಯಧನ ನೀಡುವ ಯೋಜನೆ ಇದಾಗಿದೆ. ಕುಟುಂಬದ ವಾರ್ಷಿಕ ವರಮಾನ ರೂ.3.50 ಲಕ್ಷಗಳು ಮತ್ತು 18 ರಿಂದ 55 ವರ್ಷಗಳ ವಯೋಮಿತಿಯಲ್ಲಿರುವವರು ಅರ್ಜಿಸಲ್ಲಿಸಬಹುದು. ವಿಭೂತಿ ನಿರ್ಮಾಣ ಘಟಕ ನಿರ್ಮಿಸಲು ಘಟಕ ವೆಚ್ಚರೂ. 4.00 ಲಕ್ಷ ಇದರಲ್ಲಿ ರೂ.3,60,000/- ನಿಗಮದಿಂದ ಸಾಲ ಮತ್ತುರೂ. 40,000/- ಸಹಾಯಧನ ವಾರ್ಷಿಕ ಶೇ.3 ರ ಬಡ್ಡಿದರದಲ್ಲಿ ನೆರವು ನೀಡಲಾಗುವುದು.
ಸ್ವಾವಲಂಬಿ ಸಾರಥಿ ಯೋಜನೆ (ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದೊಂದಿಗೆ) ಅರ್ಹತಾ ಮಾನದಂಡಗಳು
ನಿರುದ್ಯೋಗಿ ಚಾಲಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ?ಸ್ವಾವಲಂಬಿ ಸಾರಥಿ? ಯೋಜನೆಯಡಿ ನಾಲ್ಕು ಚಕ್ರವಾಹನ (ಹಳದಿಬೊರ್ಡ್) ಖರೀದಿಗೆ ಪಡೆಯುವ ಸಾಲಕ್ಕೆ ಶೇ.50ರಷ್ಟು ಅಥವಾ ಗರಿಷ್ಠ 3.00 ಲಕ್ಷಗಳ ಸಹಾಯಧನವನ್ನು ನಿಗಮದಿಂದ ಮಂಜೂರುಮಾಡಲಾಗುತ್ತದೆ.
ಉಳಿದ ಮೊತ್ತವನ್ನು ಬ್ಯಾಂಕ್ / ಹಣಕಾಸು ಸಂಸ್ಥೆಗಳ ಮೂಲಕ ಅವರು ವಿತರಿಸುವ ಚಾಲ್ತಿ ಬಡ್ಡಿ ದರದಲ್ಲಿ ಸಾಲ ಪಡೆಯುವುದು. ವಯೋಮಿತಿ 21 ರಿಂದ 45 ವರ್ಷಗಳ ವಯೋಮಿತಿಯಲ್ಲಿರುವವರು ಅರ್ಜಿ ಸಲ್ಲಿಸಬಹುದು.
ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದೊಂದಿಗೆ) :
ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಅವರು ಕೈಗೊಳ್ಳುವ ಕೃಷಿ/ ಕೃಷಿ ಅವಲಂಬಿತ ಚಟುವಟಿಕೆಗಳು, ವ್ಯಾಪಾರ, ಸಾರಿಗೆ ಮತ್ತು ಯಂತ್ರೋಪಕರಣಗಳನ್ನು ಕೊಳ್ಳುವ ಆರ್ಥಿಕ ಚಟುವಟಿಕೆಗಳು/ಉದ್ಯಮಗಳಿಗೆ ವಾಣಿಜ್ಯ ಬ್ಯಾಂಕ್‌ಗಳ ಮೂಲಕ ಸಾಲ ಪಡೆದಿದ್ದಲ್ಲಿ ನಿಗಮದಿಂದ ಶೇ.20 ರಷ್ಟು ಅಥವಾ ಗರಿಷ್ಠ ರೂ. 1.00 ಲಕ್ಷಗಳ ಸಹಾಯಧನ ಮಂಜೂರು ಮಾಡಲಾಗುತ್ತದೆ.
ವಿಶೇಷ ಸೂಚನೆ :
ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಫೀಡ್ ಮಾಡಿರಬೇಕು. ಹೆಚ್ಚಿನ ಮಾಹಿತಿಗಾಗಿ ನಿಗಮದ ಜಾಲತಾಣ. https://kvidcl.karnataka.gov.in. ನಿಗಮದ ದೂರವಾಣಿ ಸಂಖ್ಯೆ: 080 22865522/ 9900012351 ಅನ್ನು ಸಂಪರ್ಕಿಸುವುದು ಅಥ- ‘ವಾ ಜಿಲ್ಲಾ ವ್ಯವಸ್ಥಾಪಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಜಿಲ್ಲಾ ಕಛೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀ ವಿಜಯಾನಂದ ಕಾಶಪ್ಪನವರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೀನುಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನ
ಹೊಸಪೇಟೆ : ಮೀನುಗಾರಿಕೆ ಇಲಾಖೆಯಿಂದ 2024- 25ನೇ ಸಾಲಿನ ಜಿಲ್ಲಾ ಪಂಚಾಯತಿ ಯೋಜನೆಗಳಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 29 ರಿಂದ ಆಗಸ್ಟ್ 12 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶವಿರುತ್ತದೆ.
ಜಿಲ್ಲಾ ಪಂಚಾಯತ್ ಯೋಜನೆಗಳು
ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀನು ಕೃಷಿಕರಿಗೆ 10,000 ರೂ.ಗಳ ವೆಚ್ಚದಲ್ಲಿ ಉಚಿತ ಮೀನುಗಾರಿಕೆ ಕಿಟ್‌ಗಳನ್ನು ವಿತರಿಸುವುದು. ಮೀನು ಮಾರುಕಟ್ಟೆಗಳ ನಿರ್ಮಾಣ ಮತ್ತು ಮೀನು ಮಾರಾಟಕ್ಕೆ ಸಹಾಯ ಮತ್ಸ ವಾಹಿನಿ ಯೋಜನೆಯಡಿ ಐಸ್ ಬಾಕ್ಕೊಂದಿಗೆ ಮೊಪೆಡ್ ಖರೀದಿಸಲು ಸಹಾಯಧನ ನೀಡಲಾಗುತ್ತದೆ.
ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳೊಡನೆ ವೆಬ್ https://vijayangara.nic.in/ ಮುಖಾಂತರ ಅಥವಾ ಆಯಾ ತಾಲೂಕಿನ ಮೀನುಗಾರಿಕೆ ಇಲಾಖೆಯ ಕಚೇರಿಯ ಮುಖಾಂತರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಹೊಸಪೇಟೆ, ಕೂಡ್ಲಿಗಿ, ಹಡಗಲಿ, ಹರಪನಹಳ್ಳಿ ಕಚೇರಿ ಮತ್ತು ಮೀನುಗಾರಿಕೆ ಉಪ ನಿರ್ದೇಶಕರು, ಬಳ್ಳಾರಿ ಕಚೇರಿಗೆ ಸಂಪರ್ಕಿಸಬಹುದೆಂದು ಮೀನುಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
04.08.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ
ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕರಾವಳಿ ತೀರ ಭಾಗಗಳಲ್ಲಿ ಸ್ವಲ್ಪ ಜಾಸ್ತಿ ಇರಬಹುದು. ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಹಾಸನ ಜಿಲ್ಲೆಯ ಪೂರ್ವ ಭಾಗಗಳಲ್ಲಿ ಮಳೆಯ ಮುನ್ಸೂಚೆನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದೆ.
ರಾಮನಗರ, ಬೆಂಗಳೂರು ಉತ್ತಮ ಮಳೆಯ ಮುನ್ಸೂಚೆನೆ ಇದ್ದರೆ, ಮೈಸೂರು, ಮಂಡ್ಯ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ದಕ್ಷಿಣ, ದಾವಣಗೆರೆ, ಹಾವೇರಿ, ವಿಜಾಪುರ, ಕಲಬುರ್ಗಿ, ಯಾದಗಿರಿ, ಬೀದರ್ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡದ ವಾತಾವರಣದ ಮುನ್ಸೂಚೆನೆ ಇದೆ.
ಬಿಹಾರದಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಆರಂಭವಾಗಿದ್ದರ ಪರಿಣಾಮವಾಗಿ ಆಗಸ್ಟ್ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಈಗಿನಂತೆ ಆಗಸ್ಟ್ 6ರಿಂದ ಮತ್ತಷ್ಟು ಕಡಿಮೆಯಾಗುವ ಲಕ್ಷಣಗಳಿವೆ. ಆದರೆ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆ ಮುಂದುವರಿಯುವ ಲಕ್ಷಣಗಳಿವೆ.
03. 08.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಅವಧಿಯ ಅಥವಾ ನಿರಂತರವಾಗಿ ಸಾಮಾನ್ಯ ಮಳೆ ಮುಂದುವರಿಯುವ ಮುನ್ಸೂಚೆನೆ ಇದೆ. ಈಗಿನಂತೆ ಈ ಸಾಮಾನ್ಯ ಮಳೆಯು ಆಗಸ್ಟ್ 6ರ ವರೆಗೆ ಮುಂದುವರಿಯುವ ಮುನ್ಸೂಚೆನೆ ಇದೆ. ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಹ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸ್ವಲ್ಪ ಜಾಸ್ತಿ ಇರಬಹುದು. ಮಲೆನಾಡು ಭಾಗಗಳಲ್ಲಿಯೂ ಆಗಸ್ಟ್ 6ರ ತನಕ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿವೆ.
ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ವಿಜಯಪುರ, ಕಲಬುರ್ಗಿ, ಬೀದರ್ ಜಿಲ್ಲೆಗಳ ಅಲ್ಲಲ್ಲಿ ತುಂತುರು ಹಾಗೂ ಕೆಲವು ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಆಗಸ್ಟ್ 7ರಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದಂತಯೇ ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ.
02.08.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಮುಂದುವರಿಯುವ ಮುನ್ಸೂಚೆನೆ ಇದೆ. ಕರಾವಳಿ ತೀರ ಭಾಗಗಳಲ್ಲಿ ಮತ್ತು ಧರ್ಮಸ್ಥಳ, ಚಾರ್ಮಾಡಿ ಸುತ್ತಮುತ್ತ ಭಾಗಗಳಲ್ಲಿ ಮಳೆ ಸ್ವಲ್ಪ ಜಾಸ್ತಿ ಇರಬಹುದು. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಕೊಡಗು, ಹಾಸನ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಉತ್ತಮ ಹಾಗೂ ಉಳಿದ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಬಳ್ಳಾರಿ, ರಾಯಚೂರು, ಯಾದಗಿರಿ, ವಿಜಯಪುರ, ಕಲಬುರ್ಗಿ, ಬೀದರ್ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಮೈಸೂರು, ಚಾಮರಾಜನಗರ, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಹೆಚ್ಚಿನ ಮೋಡ ಹಾಗೂ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ಆಗಷ್ಟ್ 3ರಿಂದ ಕರಾವಳಿ, ಮಲೆನಾಡು ಸೇರಿದಂತೆ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿದ್ದು, ಆಗಷ್ಟ್ 6 ಅಥವಾ 7ರಿಂದ ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ (ಗುಡುಗು ಸಾಧ್ಯತೆ ಇದೆ). ಹಿಂದೂಮಹಾಸಾಗರ ಹಾಗೂ ದಕ್ಷಿಣ ಅರಬ್ಬಿ ಸಮುದ್ರದಲ್ಲಿ ಮುಂಗಾರು ಮಾರುತಗಳ ಚಲನೆ ಮಂದವಾಗಿದೆ. ಪರಿಣಾಮ ಕಾದು ನೋಡಬೇಕು.
01.08.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಮಧ್ಯಾಹ್ನ ನಂತರ, ಸಂಜೆ ಹಾಗೂ ರಾತ್ರಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಮಲೆನಾಡು ಭಾಗಗಳಲ್ಲಿಯೂ ಸಂಜೆ ಅಥವಾ ರಾತ್ರಿ ಮಳೆಯ ಮುನ್ಸೂಚೆನೆ ಇದೆ. ಕೊಡಗು ಹಾಗೂ ಹಾಸನ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಚಿಕ್ಕಮಗಳೂರಿನ ಶಿೃಂಗೇರಿ, ಕುದುರೆಮುಖ, ಮೂಡಿಗೆರೆ ಭಾಗಗಳಲ್ಲಿ ಮಳೆ ಸ್ವಲ್ಪ ಜಾಸ್ತಿ ಇರಬಹುದು ಉಳಿದ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಶಿವಮೊಗ್ಗದ ಆಗುಂಬೆ, ತೀರ್ಥಹಳ್ಳಿ ಭಾಗಗಳಲ್ಲಿಯೂ ಮಳೆ ಸ್ವಲ್ಪ ಜಾಸ್ತಿ ಇದ್ದು, ಉಳಿದ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ತುಮಕೂರು, ದಾವಣಗೆರೆ, ಹಾವೇರಿ, ವಿಜಯಪುರ, ಕಲಬುರ್ಗಿ, ಬೀದರ್, ರಾಯಚೂರು, ಯಾದಗಿರಿ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಇವತ್ತಿನಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಬೆಳೆಗಳಿಗೆ ಔಷಧಿ ಸಿಂಪಡಿಸಲು ಅವಕಾಶ ಸಿಗಬಹುದು. ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ನಿನ್ನೆಯ ಮಳೆಯ ಅನಿರೀಕ್ಷಿತವಾಗಿತ್ತು. ಆಗಾಧ ಪ್ರಮಾಣದ ಮೋಡ ಹಾಗೂ ಅತಿ ಭಾರಿ ಮಳೆಗೆ ಬೇರೆಯದೇ ವೈಜ್ಞಾನಿಕ ಕಾರಣಗಳಿರಬಹುದು. ಸಾಮಾನ್ಯ ಮುಂಗಾರು ಆಗಿರಲಾರದು. ಈಗಿನಂತೆ ಆಗಷ್ಟ್ 2ರಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ. ಆಗಷ್ಟ್ 6ರಿಂದ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ (ಗುಡುಗು ಸಹಿತ ಇರಬಹುದು).
ಮುಂಗಾರು ದುರ್ಬಲಗೊಳ್ಳತ್ತಿದೆಯೇ?
ಹಿಂದೂಮಹಾಸಾಗರ ಹಾಗೂ ದಕ್ಷಿಣ ಅರಬ್ಬಿ ಸಮುದ್ರ ಗಮನಿಸುವಾಗ ಈ ಪ್ರಶ್ನೆ ಉದ್ಭವಿಸುತ್ತಿದೆ. ಮಾರುತಗಳು ಮಂದವಾಗಿ ದುರ್ಬಲಗೊಂಡತೆ ಗೋಚರಿಸುತ್ತಿದೆ.
ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ 2023-24ನೇ ಸಾಲಿನಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದ ಒಳಗಿನ ಮಕ್ಕಳಿಂದ “ಬಾಲಗೌರವ ಪ್ರಶಸ್ತಿ”ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮಕ್ಕಳು ಕ್ರೀಡೆ, ಸಂಗೀತ, ನೃತ್ಯ, ಬಹುಮುಖ ಪ್ರತಿಭೆ, ನಟನೆ, ಚಿತ್ರಕಲೆ, ಹಾಗೂ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಹೀಗೆ 07 ಕ್ಷೇತ್ರಗಳಲ್ಲಿ ಪ್ರಶಸ್ತಿಗಾಗಿ ತಮ್ಮ ಸ್ವಯಂ ದೃಢೀಕೃತ ನಕಲು ದಾಖಲೆಗಳೊಂದಿಗೆ ಹಾಗೂ ಸ್ವವಿವರಗಳನ್ನೊಳಗೊಂಡ ಮನವಿಯೊಂದಿಗೆ ಅರ್ಜಿಯನ್ನು ಅಗಸ್ಥ 26 ರೊಳಗೆ ಆಕಾಡೆಮಿಯ ಕೇಂದ್ರ ಕಚೇರಿ ವಿಳಾಸಕ್ಕೆ ಪೋಸ್ಟ್ ಮುಖಾಂತರ ತಲುಪುವಂತೆ ಕಳುಹಿಸಬೇಕು.
ನಂತರ ಬಂದ ಅರ್ಜಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ. ಹಾಗೆಯೇ ಈಗಾಗಲೇ ಬಾಲಗೌರವ ಪ್ರಶಸ್ತಿ ಪಡೆದವರ ಅರ್ಜಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ. ಸದರಿ ಪ್ರಶಸ್ತಿಯ ಅರ್ಜಿ ನಮೂನೆ / ಮಾನದಂಡಗಳನ್ನು ಕಚೇರಿಯ ವೆಬ್‌ಸೈಟ್ ಲಿಂಕ್ https://balavikasaacademy.karnataka.gov.in/ ವೀಕ್ಷಿಸಬಹುದಾಗಿದೆ.
ಕೇಂದ್ರ ಕಚೇರಿ ವಿಳಾಸ: ಮಾನ್ಯ ಯೋಜನಾಧಿಕಾರಿಗಳು, ಚಂದ್ರಿಕಾ ಲೇ ಔಟ್ ಹಿಂಭಾಗ ಕೆ.ಎಚ್.ಬಿ ಕಾಲೋನಿ, ಲಕಮನಹಳ್ಳಿ 0836-2465490.
ಒಳಮೀಸಲಾತಿ ಸುಪ್ರೀಂ ತೀರ್ಪಿಗೆ ಮಾದಿಗರ ಸಂಭ್ರಮಾಚರಣೆ
ಬಹು ವರ್ಷದ ಮಾದಿಗರ ಹೋರಾಟವಾಗಿದ್ದ ಒಳಮೀಸಲಾತಿ ವರ್ಗಿಕರಣ ಪ್ರಕರಣಕ್ಕೆ ಸುಪ್ರಿಂಕೋರ್ಟ ನೀಡಿರುವ ತೀರ್ಪು ಐತಿಹಾಸಿಕ ಹಾಗೂ ಸ್ವಾಗತಾರ್ಹ ಆಗಿದೆ. ಎಂದು ಹೋರಾಟ ಸಮೀತಿಯ ಪ್ರಮುಖ ಕೃಷ್ಣಾ ಪೂಜಾರಿ, ಸುನೀಲ ಕಂಬೋಗಿ ಹೇಳಿದ್ದಾರೆ. ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಒಳಮೀಸಲಾತಿ ಕುರಿತು ಕೋರ್ಟನ ತೀರ್ಪು ಸ್ವಾಗತಿಸಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಳೆದ 30. ವರ್ಷಗಳಿಂದ ಮಾದಿಗರ ಹೋರಾಟಕ್ಕೆ ಸಂದ ಜಯವಾಗಿದೆ. ಈ ವಿಷಯದಲ್ಲಿ ಸಮುದಾಯ ಪರ ಸತತ ಹೋರಾಟ ಮಾಡಿದ್ದ ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ, ಮಾಜಿ ಸಂಸದ ನಾರಾಯಣಸ್ವಾಮಿ ಮತ್ತು ಇತರೆ ಹಿರಿಯ, ಕಿರಿಯ ಹೋರಾಟಗಾರರನ್ನು ಅವರು ಸ್ಮರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಕೃಷ್ಣಾ ಸಣ್ಣಪ್ಪಗೋಳ, ಮಹಾದೆವ ಮಡ್ಡಿ, ರಮೇಶ ನಾಗೋಗೋಳ, ಅರುಣ ಮುಧೋಳ, ಸುಂದರ ದೊಡಮನಿ, ಹಣಮಂತ ಮಾದರ, ರಾಜು ಕಳ್ಳಿಮನಿ, ಪರುಶರಾಮ ಮೇತ್ರಿ ಇತರರಿದ್ದರು.