Breaking
Tue. Dec 17th, 2024

ಗೃಹಜ್ಯೋತಿಗೆ ನಿನ್ನೆ ಯಿಂದಲೇ ಅರ್ಜಿ ಸಲ್ಲಿಕೆ ಪ್ರಾರಂಭ ಹೇಗೆ ಅರ್ಜಿ ಸಲ್ಲಿಸುವುದು ಇಲ್ಲಿ ನೋಡಿ

By mveeresh277 Jun19,2023 ##freecurrent
Spread the love

ಎಲ್ಲರಿಗೂ ನಮಸ್ಕಾರ, ಭೂಮಿಸಿದ್ದಿ ಡಿಜಿಟಲ್ ಮಾಧ್ಯಮವು ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿ ಹಾಗೂ ರೈತರಿಗೆ ಅನುಕೂಲ ಆಗುವ ಮಾಹಿತಿಗಳನ್ನು ತಿಳಿಸಿಕೊಡುತ್ತದೆ. ಕರ್ನಾಟಕ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಮತ್ತೂಂದು ಮಹತ್ವದ ಯೋಜನೆ “ಗೃಹಜ್ಯೋತಿ”ಗೆ ಅರ್ಜಿ ಸ್ವೀಕಾರ ಪ್ರಕ್ರಿಯೆಗೆ ರವಿವಾರ ಚಾಲನೆ ದೊರೆಯಲಿದೆ. ದಿನಕ್ಕೆ ಗರಿಷ್ಠ ಹತ್ತು ಲಕ್ಷ ಜನ ಅರ್ಜಿ ಸಲ್ಲಿಸುವ ಸಾಮರ್ಥ್ಯದೊಂದಿಗೆ ಸೇವಾ ಸಿಂಧು ಪೋರ್ಟಲ್‌ ಮುಕ್ತಗೊಳಿಸಲಾಗು ತ್ತಿದೆ. ನೋಂದಣಿಯನ್ನು ಅತ್ಯಂತ ಸರಳಗೊಳಿಸಲಾಗಿದ್ದು, ಸದ್ಯಕ್ಕೆ ಕರಾರುಪತ್ರ ಸೇರಿದಂತೆ ಯಾವುದೇ ದಾಖಲೆಗಳನ್ನು ಕೇಳಿಲ್ಲ.

ಈಗಾಗಲೇ ಶಕ್ತಿ ಯೋಜನೆಗೆ ಚಾಲನೆ ದೊರಕಿದ್ದರೂ ಶಕ್ತಿ ಸ್ಮಾರ್ಟ್‌ ಕಾರ್ಡ್‌ಗಾಗಿ ನೋಂದಣಿಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಅದೇ ರೀತಿ ಗೃಹಲಕ್ಷ್ಮೀ ಯೋಜನೆಯ ನೋಂದಣಿಗೂ ತಾಂತ್ರಿಕ ಕಾರಣ ಗಳಿಂದ ಚಾಲನೆ ಸಿಕ್ಕಿಲ್ಲ.

ಯೋಜನೆಯಡಿ ಪ್ರತೀ ಗೃಹ ಬಳಕೆದಾರರಿಗೆ ಮಾಸಿಕ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಪೂರೈಸಲಾಗುತ್ತದೆ. ಸದ್ಯಕ್ಕೆ ಬಾಡಿಗೆದಾರರು ಕರಾರುಪತ್ರ ಮತ್ತಿತರ ದಾಖಲೆಗಳನ್ನು ಒದಗಿಸಬೇಕಾ ಗಿಲ್ಲ. ಆಧಾರ್‌ ಸಂಖ್ಯೆ, ಬಿಲ್‌ನಲ್ಲಿ ನೀಡಲಾದ ವಿದ್ಯುತ್‌ ಖಾತೆ ಸಂಖ್ಯೆ ಹಾಗೂ ಮೊಬೈಲ್‌ ಸಂಖ್ಯೆ ನಮೂದಿಸಬೇಕು. ಇದರೊಂದಿಗೆ ಬಾಡಿಗೆ ದಾರರಲ್ಲಿದ್ದ ಆತಂಕ ಆರಂಭಿಕ ಹಂತ ದಲ್ಲಿ ನಿವಾರಣೆಯಾದಂತಾಗಿದೆ. ನೋಂದಣಿಗೆ ಕ್ಯುಆರ್‌ ಕೋಡ್‌ ಕೂಡ ನೀಡಲಾಗಿದ್ದು, ಅದನ್ನು ಸ್ಕ್ಯಾನ್‌ ಮಾಡಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸೇವಾ ಸಿಂಧುವಿನಲ್ಲಿ ಸುಮಾರು 200ಕ್ಕೂ ಅಧಿಕ ಸೇವೆಗಳನ್ನು ನೀಡಲು ಸಾಧ್ಯವಿದೆ. ಸರಕಾರದ ಬಹುತೇಕ ಯೋಜನೆಗಳನ್ನು ಇದರ ಮೂಲಕ ಒದಗಿಸಲಾಗುತ್ತಿದೆ. ಈಗ ಪ್ರಮುಖ ಗ್ಯಾರಂಟಿಗಳ ಫ‌ಲಾನುಭವಿಗಳಿಗೂ ಸೇವಾ ಸಿಂಧು ವೇದಿಕೆಯಾಗುತ್ತಿದೆ.

ಇದನ್ನೂ ಓದಿ :- ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಮನೆ ಬಾಡಿಗೆದಾರರು 200 ಯೂನಿಟ್ ವಿದ್ಯುತ್ ಉಚಿತ  ಪಡೆಯಲು ಇಲ್ಲಿದೆ ಮಾರ್ಗ

ಇದನ್ನೂ ಓದಿ :- ವಿದ್ಯುತ್ ಬಿಲ್ ನೋಡಿ ಕಂಗಾಲಾದ ಜನರುವಿದ್ಯುತ್ ಗ್ರಾಹಕರಿಗೆ ಶಾಕ್

Related Post

Leave a Reply

Your email address will not be published. Required fields are marked *