ಮೀನುಗಾರಿಕೆ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಫಲಾನುಭವಿ ಆಧಾರಿತ ಪ್ರಧಾನ ಮಂತ್ರಿ ಮತ್ತ್ವಸಂಪದಯೋಜನೆಯ ವಿವಿಧ ಘಟಕಗಳಿಗೆ ಸಹಾ ಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯಿಂದ ಯಾವ ಯಾವ ಲಾಭಗಳು ಸಿಗುತ್ತವೆ?
ಈ ಯೋಜನೆಯಡಿ ಹೊಸ ಪಾಲನೆ ಕೊಳಗಳ ನಿರ್ಮಾಣ (ನರ್ಸರಿ, ಮೀನುಮರಿ ಪಾಲನೆ ಕೊಳಗಳು), ಲವಣ, ಕ್ಷಾರಿಯ ಪ್ರದೇಶಗಳಿಗೆ ಹೊಸ ಕೊಳಗಳ ನಿರ್ಮಾಣ ಮತ್ತು ಹೂಡಿಕೆ ವೆಚ್ಚ, ಹೊಸ ಮೀನುಕೃಷಿ ಕೊಳಗಳ ನಿರ್ಮಾಣ ಮತ್ತು ಸಮಗ್ರ ಮೀನುಕೃಷಿ ಸ್ಕ್ಯಾಂಪಿ, ಪಂಗಾಸಿಯನ್, ತಿಲಾಪಿಯ, ಸಿಹಿ ನೀರಿನ ಜಲಕೃಷಿಗೆ ಹೂಡಿಕೆ ವೆಚ್ಚಗಳು, ಐಸ್ ಬಾಸ್ಯದೊಂದಿಗೆ ಮೋಟಾರ್ ಸೈಕಲ್, ಮೀನು ಮಾರಾಟಕ್ಕಾಗಿ ಐಸ್ ಬಾಕ್ಸ್ ಹೊಂದಿರುವ ತ್ರಿಚಕ್ರ ವಾಹನ, ಅಲಂಕಾರಿಕ ಮೀನುಗಳ ಕಿಯೋಸ್ಕ್ ಸೇರಿದಂತೆ ಮೀನು ಕಿಯೋಸ್ಕ್ ನಿರ್ಮಾಣ, ಸಾಂಪ್ರಾದಾಯಕ ಮೀನುಗಾರರಿಗೆ ಎಫ್.ಆರ್.ಪಿ ಬೋಟ್ ಮತ್ತು ಬಲೆಗಳನ್ನು ಖರೀದಿಸಲು ಬ್ಯಾಕ್ಯಾರ್ಡ ಮಿನಿ ಆರ್.ಎ.ಎಸ್ ಹಾಗೂ ವಿವಿಧ ಘಟಕಗಳಿಗೆ ಸಹಾಯಧನ ನೀಡಲಾಗುತ್ತಿದೆ.
ಯೋಜನೆಯಿಂದ ಯಾವ ಯಾವ ಲಾಭಗಳು ಸಿಗುತ್ತವೆ?
ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಮಹಿಳಾ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇ. 60ರಷ್ಟು ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇ. 40ರಂತೆ ಸಹಾಯಧನವನ್ನು ನೀಡಲಾಗುವುದು. ಅರ್ಜಿ ಸಲ್ಲಿಸಲು ಡಿ.16 ಕೊನೆಯದಿನವಾಗಿದ್ದು, ಅರ್ಜಿಯನ್ನು ಸಂಬಂಧಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ
ಮೀನುಗಾರಿಕೆ ಉಪ ನಿರ್ದೇಶಕರು, ಬಳ್ಳಾರಿ, ವಿಜಯನಗರಜಿಲ್ಲೆ ಮೊ.ಸಂ: 9449593156, ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಹೊಸಪೇಟೆ 9620177588, ಹಗರಿಬೊಮ್ಮನಹಳ್ಳಿ ಹಾಗೂ ಕೊಟ್ಟೂರು ಮೊ.ಸಂ: 8217725319, 8951531330, ಇವರನ್ನು ಸಂಪರ್ಕಿಸಬಹುದಾಗಿದೆಎಂದು ಬಳ್ಳಾರಿ ಮೀನುಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಸಿರು ಮೇವಿನ ಬೆಳೆ ಕ್ಷೇತ್ರೋತ್ಸವ
ಪಶುವೈದ್ಯಕೀಯ ಮಹಾವಿದ್ಯಾಲಯ, ಗದಗ, ಪಶುವೈದ್ಯಕೀಯ ಸೇವಾ ಇಲಾಖೆ, ಗದಗ ಮತ್ತು ಆತ್ಮಾ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ : 08- 12-2023 ರಂದು ಗದಗ ತಾಲೂಕಿನ ಸಂಭಾಪೂರ ಗ್ರಾಮದ ಶ್ರೀ ರಾಯಣ್ಣ ನಾಗನೂರ ಇವರ ತೋಟದಲ್ಲಿ ಹಸಿರು ಮೇವು ಬೆಳೆ (ಕೊ. ಎಫ್. ಎಸ್. 31) ಕ್ಷೇತ್ರೋತ್ಸವವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್‌ರವರಾದ ಡಾ. ಎಂ.ಎಂ. ಅಪ್ಪಣ್ಣವರ ಇವರು ಉದ್ಘಾಟಿಸಿದರು. ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಶಿವಕುಮಾರ ಕ. ರಡ್ಡರ, ಸಹಾಯಕ ಪ್ರಾಧ್ಯಾಪಕರಾದ ಡಾ. ಮಂಜು ಜಿ. ಯು. ಇವರು ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು.
ಎಸ್. ಎಸ್. ಹೊಸಮಠ, ಸಹಾಯಕ ನಿರ್ದೇಶಕರು, ಪಶುವೈದ್ಯ ಇಲಾಖೆ. ಗದಗ, ಡಾ. ಪ್ರಸನ್ನ ಎಸ್ ಪಟೇದ, ಸಹಾಯಕ ವ್ಯವಸ್ಥಾಪಕರು, ಧಾರವಾಡ ಹಾಲು ಒಕ್ಕೂಟ ನಿ.. ಡಾ. ಎಮ್. ವಿ. ಮಡಿವಾಳರ, ನಿವೃತ್ತ ಪಶು ವೈಧ್ಯಾಧಿಕಾರಿಗಳು, ಕೆ.ಎಂ. ಎಫ್., ಶ್ರೀ ವೀರೇಂದ್ರ ಗಡಾದ, ಕೃಷಿ ಅಧಿಕಾರಿಗಳು, ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಗಂಗಾನಾಯ್ ಮತ್ತು ಡಾ. ಎಮ್.ಡಿ. ಗೌರಿ ಅತಿಥಿ ಗಳಾಗಿ ಉಪಸ್ಥಿತರಿದ್ದರು. ಈ ಕ್ಷೇ- ತ್ರೋತ್ಸವದಲ್ಲಿ ಸಂಭಾಪೂರ ಹಾಗೂ ಸುತ್ತಲಿನ ಪ್ರದೇಶದ 30ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡೀನ್‌ರವರಾದ ಎಂ.ಎಂ. ಅಪ್ಪಣ್ಣವರ ಇವರು ಹಸಿರು ಮೇವು ಬೆಳೆಯುವುದರಲ್ಲಿ ರೈತರ ಪರಿಶ್ರಮ ಮತ್ತು ಆಸಕ್ತಿಯನ್ನು ಶ್ಲಾಘಿಸಿದರು. ಪಶುಪಾಲನೆಯಲ್ಲಿ ವಿವಿಧ ವಿಷಯಗಳ ಅವಶ್ಯಕವಿರುತ್ತದೆ. ಒಂದು ಹಸುವಿಗೆ ದಿನಕ್ಕೆ ಸರಾಸರಿ 30 ರಿಂದ 40 ಕೆ.ಜಿ. ಯಷ್ಟು ಹಸಿರು ಮೇವು ಅವಶ್ಯಕವಿರುತ್ತ- ದೆ. ಹಸಿರು ಮೇವಿನ ಹಲವಾರು ಬೆಳೆಗಳಿವೆ. ಇವುಗಳಲ್ಲಿ ಕೊ.ಎಫ್.ಎಸ್. 31 ಎಂಬ ಬಹುವಾರ್ಷಿಕ ಮೇವಿನ ಬೆಳೆ ಈ ಭಾಗಕ್ಕೆ ಸೂಕ್ತವಾದುದಾಗಿ ದೆ ಹಾಗೂ ಜಾನುವಾರುಗಳಿಗೆ ಉತ್ತಮ ಪೌಷ್ಟಿಕಾಂಶಗಳ ಮೂಲವಾಗಿದೆ.
ಪಶುವೈದ್ಯಕೀಯ ಮಹಾವಿದ್ಯಾಲಯದಿಂದ ಪ್ರೇರಿತ ಹಲವಾರು ರೈತರು ಹಸಿರು ಮೇವು ಬೆಳೆಯುತ್ತಿದ್ದಾರೆ. ಸದರಿ ಪ್ರಾತ್ಯಕ್ಷಿ- ತೆಯು ಯಶಸ್ವಿಯಾಗಿದ್ದು ಇದರ ಫಲಿತಾಂಶವನ್ನು ಬೇರೆ ರೈತರಿಗೆ ತೋರಿಸಿ ಅವರಿಗೆ ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮಾಡುವ ದಿಶೆಯಿಂದ ತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು.
ಗ್ಯಾರಂಟಿಗಳ ಬಗ್ಗೆ ಸಿಎಂ ಮಾತು
ನಮ್ಮ ಗ್ಯಾರಂಟಿ ಯೋಜನೆಗಳು ವಿಫಲವಾಗಿಲ್ಲ. ಗ್ಯಾರಂಟಿ ಯೋಜನೆಯನ್ನು ತೆಲಂಗಾಣದಲ್ಲಿಯೂ ಹೆಚ್ಚು ಪ್ರಚಾರ ಮಾಡಿದ್ದರಿಂದ ಅಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಆದರೆ, ಉಳಿದ 3 ರಾಜ್ಯಗಳಲ್ಲಿ ಸೋತಿದ್ದೇವೆ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.
ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲ ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂದಿನಿಂದ ಅಧಿವೇಶನ ಪ್ರಾರಂಭವಾಗಲಿದ್ದು, ವಿರೋಧ ಪಕ್ಷದವರು ಕೇಳುವ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಲು ಸರ್ಕಾರ ಸಿದ್ದವಿದೆ. ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳತ್ತಲೂ ಗಮನಹರಿಸಲಾಗುವುದು ಎಂದು ಹೇಳಿದರು.
ಬಳಿಕ ಪಂಚ ರಾಜ್ಯಗಳ ಚುನಾವಣೆ ಕುರಿತು ಮಾತನಾಡಿ, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ತೆಲಂಗಾಣದಲ್ಲಿಯೂ ಹೆಚ್ಚು ಪ್ರಚಾರ ಮಾಡಿದ್ದರಿಂದ ಅಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಮಧ್ಯಪ್ರದೇಶ ರಾಜ್ಯದಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯವರೂ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಎಂದಿಗೂ ಚುನಾವಣೆಯಲ್ಲಿ ಗೆಲುವು ಸಾಧಿಸಲೆಂದು ಗ್ಯಾರಂಟಿ ಯೋಜನೆಗಳನ್ನು ಘೋಷಿಸುವುದಿಲ್ಲ. ಬಡಜನರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಪ್ರಾಮಾಣಿಕತೆಯಿಂದ ಇವುಗಳನ್ನು ಜಾರಿಗೊಳಿಸಲಾಗಿದೆ. ಗ್ಯಾರಂಟಿ ಯೋಜನೆಗಳೆಲ್ಲ ಬಡವರ ಕಾರ್ಯಕ್ರಮಗಳು ಎಂದರು.
ನಮ್ಮ ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದರೂ ಬಿಜೆಪಿಯವರಿಗೆ ವಿಪಕ್ಷ ನಾಯಕರನ್ನು ಆಯ್ಕೆ ಮಾಡಿರಲಿಲ್ಲ. ವಿರೋಧ ಪಕ್ಷದವರಿಗೆ ಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕತೆಯೂ ಇಲ್ಲ. ಅವರು ಜಂಟಿಯಾಗಿ ಹೋರಾಟ ನಡೆಸಿದರೂ, ಅವರ ಎಲ್ಲ ಹೋರಾಟಗಳಿಗೆ ಉತ್ತರಿಸಲು ಸರ್ಕಾರ ಸಿದ್ದವಿದೆ ಎಂದು ತಿಳಿಸಿದರು.