ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನ
2024-25ನೇ ಸಾಲಿನ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ತೋಟಗಾರಿಕೆ ಉಪ ನಿರ್ದೇಶಕರು (ಜಿಲ್ಲಾ ಪಂಚಾಯತ್) ಅವರು ತಿಳಿಸಿದ್ದಾರೆ. ದಾಖಲಾತಿಗಳು ಅರ್ಜಿ ನಮೂನೆ, ಆಧಾರ ಕಾರ್ಡ ಝರಾಕ್ಷ ಪ್ರತಿ. ಪಾಸಪೋರ್ಟ ಅಳತೆಯ ಭಾವಚಿತ್ರ, ಜಾತಿ ಪ್ರಮಾಣ ಪತ್ರದ ಝರಾಕ್ಸ್ ಪ್ರತಿ. ಪಹಣಿ. ಅನುಬಂಧ ಘಟಕಗಳು ಪ್ರದೇಶ ವಿಸ್ತರಣೆ ಬಾಳೆ, ದಾಳಿಂಬೆ, ಮಾವು, ಸೀಬೆ, ಡ್ರಾಯಗನ್ ಪೂಟ್, ದ್ರಾಕ್ಷಿ ಮತ್ತು ಹೂವು ಹಾಗೂ ಹೈಬ್ರಿಡ್ ತರಕಾರಿ, ಮಾನದಂಡಗಳು ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಆಸಕ್ತಿ ಹೊಂದಿರಬೇಕು.
ಘಟಕಗಳು ಜೇನು ಸಾಕಾಣಿಕೆ ಮಾನದಂಡಗಳು ಕನಿಷ್ಠ 1 ಎಕರೆ ತೋಟಗಾರಿಕೆ ಬೆಳೆ ಬೆಳೆದಿರಬೇಕು. ಘಟಕಗಳು ಲಿಂಬೆ ಪುನಶ್ವೇತನ ಮಾನದಂಡಗಳು 10 ವರ್ಷ ಮೇಲ್ಪಟ್ಟ ಬಂಜೆಯಾಗಿರುವ ಲಿಂಬೆ ಗಿಡಗಳು ಹೊಂದಿರಬೇಕು. ಘಟಕಗಳು ವೈಯಕ್ತಿಕ
ಕೃಷಿ ಹೊಂಡ ಮಾನದಂಡಗಳು ಕನಿಷ್ಠ 1 ಹೆಕ್ಟೇರ್ ತೋಟಗಾರಿಕೆ ಬೆಳೆ ಬೆಳೆದರಿಬೇಕು. ಘಟಕಗಳು ಸಮುದಾಯ ಕೆರೆ (6000 ಮತ್ತು 8000 ಚ.ಮೀ) ಮಾನದಂಡಗಳು 05 ಜನ ಸದಸ್ಯರೊಳಗೊಂಡ ಸಂಘ ರಚನೆ, ಕನಿಷ್ಠ 4 ಹೆಕ್ಟೇರ್ ಬಹುವಾರ್ಷಿಕ ಬೆಳೆ ಬೆಳೆದಿರಬೇಕು. ಘಟಕಗಳು ನೆರಳು ಪರದೆ ಮತ್ತು ಹಸಿರು ಮನೆ ಮಾನದಂಡಗಳು ರೈತರು ನೆರಳು ಪರದೆ ಮತ್ತು ಹಸಿರು ಮನೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಆಸಕ್ತಿ ಹೊಂದಿರಬೇಕು. ಘಟಕಗಳು ಪಕ್ಷಿ ನಿರೋದಕ ಬಲೆ ಮಾನದಂಡಗಳು ರೈತರು ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ದ್ರಾಕ್ಷಿ, ಅಂಜೂರ, ಸೀಬೆ ಹಾಗೂ ಇತರೆ ಬಹುವಾರ್ಷಿಕ ಬೆಳೆ ಬೆಳೆದಿರಬೇಕು.
ಘಟಕಗಳು ಪ್ಲಾಸ್ಟಿಕ್ ಹೊದಿಕೆ ಮಾನದಂಡಗಳು ರೈತರು ತೋಟಗಾರಿಕೆ ಬೆಳೆ ಬೆಳೆದಿರಬೇಕು. ಘಟಕಗಳು ಟ್ರಾಯಕ್ಟರ್ (20 ಹೆಚ್.ಪಿ ಗಿಂತ ಕಡಿಮೆ) ಮಾನದಂಡಗಳು ರೈತರು ಕನಿಷ್ಠ 2 ಹೆಕ್ಟೇರ್ ಪ್ರದೇಶದಲ್ಲಿ ಬಹುವಾರ್ಷಿಕ 1 ಹೆಕ್ಟೇರ್ ಮತ್ತು ವಾರ್ಷಿಕ 1 ಹೆಕ್ಟೇರ್ ತೋಟಗಾರಿಕೆ ಬೆಳೆ ಬೆಳೆದಿರಬೇಕು. ಘಟಕಗಳು ಪ್ಯಾಕ್ ಹೌಸ್ ಮಾನದಂಡಗಳು ರೈತರು ಕನಿಷ್ಠ 2 ಹೆಕ್ಟೇರ್ ಪ್ರದೇಶದಲ್ಲಿ ಬಹುವಾರ್ಷಿಕ 1.00 ಹೆಕ್ಟೇರ್ ಮತ್ತು ವಾರ್ಷಿಕ 1.00 ಹೆಕ್ಟೇರ್ ತೋಟಗಾರಿಕೆ ಬೆಳೆ ಬೆಳೆದಿರಬೇಕು.
ಘಟಕಗಳು ಈರುಳ್ಳಿ ಶೇಖರಣೆ ಘಟಕ ಮಾನದಂಡಗಳು ರೈತರು ಕನಿಷ್ಠ 0.40 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ಬೆಳೆದಿರಬೇಕು. ಘಟಕಗಳು ಪ್ರಾಥಮಿಕ ಸಂಸ್ಕರಣಾ ಘಟಕ ಮಾನದಂಡಗಳು ರೈತರು ಕನಿಷ್ಠ 1.00 ಹೆಕ್ಟೇರ್ ಪ್ರದೇಶದಲ್ಲಿ ಬಹುವಾರ್ಷಿಕ ಬೆಳೆ ಬೆಳೆದಿರಬೇಕು, ರೈತರು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಸಾಲ ಪಡೆದಿರಬೇಕು. ಘಟಕಗಳು ಸಮಗ್ರ ಕೀಟ, ಪೋಷಕಾಂಶ ನಿರ್ವಹಣೆ ಮಾನದಂಡಗಳು ರೈತರು ಕನಿಷ್ಠ 0.40 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆದಿರಬೇಕು. ಘಟಕಗಳು ತಳ್ಳುವ ಗಾಡಿ ಮಾನದಂಡಗಳು ಹಣ್ಣು, ತರಕಾರಿ ಮತ್ತು ಹೂವುಗಳನ್ನು ಬೀದಿ ವ್ಯಾಪವರಿಗಳು ಗ್ರಾಮ ಪಂಚಾಯಿತಿಯಿಂದ ಪರವಾನಿಗೆಪಡೆದಿರಬೇಕು.
ಯಾದಗಿರಿ ಜಿಲ್ಲೆಯಿಂದ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ರೈತರಿಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಬೇಕಾಗಿರುತ್ತದೆ. ಆದ್ದರಿಂದ ರೈತರು ತಮಗೆ ಬೇಕಾಗುವ ಘಟಕಗಳಿಗೆ ಸಹಾಯಧನ ಪಡೆಯಲು ಸಂಬಂಧಪಟ್ಟ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಯಾದಗಿರಿ, ಶಹಾಪುರ, ಸುರಪುರ ಕಛೇರಿಗಳಿಗೆ 2024ರ ಸೆಪ್ಟೆಂಬರ್ 22 ಒಳಗೆ ಅರ್ಜಿಸಲ್ಲಿಸಬೇಕು. ಮೊದಲು ಸಲ್ಲಿಸಿದವರಿಗೆ ಮೊದಲ ಆದ್ಯತೆ ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಯಾದಗಿರಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು 9164570011, ಶಹಾಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಮೊ.ನಂ.8217490621, ಸುರಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು 8217748605 ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತನಿಗೆ 2 ಪಟ್ಟು ಆದಾಯ ನೀಡಿದ ತರಕಾರಿ ಯಾವುದು ನೋಡಿ
ಒಂದು ಎಕರೆ ಜಮೀನನ್ನು ತರಕಾರಿ ಬೆಳೆಗೆ ಮೀಸಲಿಟ್ಟು ಸಾವಯವ ಪದ್ಧತಿ ಮೂಲಕ ಬೆಂಡೆಕಾಯಿ ಹಾಗೂ ಚೌಳಿಕಾಯಿ ಬೆಳೆಯುತ್ತಿರುವ ತಾಲ್ಲೂಕಿನ ಕಮದೋಡ ಗ್ರಾಮದ ರೈತ ಕೃಷ್ಣಾಜಿ ಹನುಮಂತಪ್ಪ ದಾಸರ ಅವರು ಅಧಿಕ ಇಳುವರಿ ಹಾಗೂ ದುಪ್ಪಟ್ಟು ಆದಾಯ ಪಡೆಯುತ್ತಿದ್ದಾರೆ. 15 ಗುಂಟೆ ಬೆಂಡಿಕಾಯಿ, ಅರ್ಧ ಎಕರೆ ಟೊಮೆಟೋ ಮತ್ತು 10 ಗುಂಟೆ ಚೌಳಿಕಾಯಿ ಬೆಳೆದಿದ್ದಾರೆ. ಬೆಂಡಿಕಾಯಿ ದಿನಾಲು 35 ರಿಂದ 40 ಕೆಜಿ ಉತ್ಪನ್ನ ಬರುತ್ತದೆ. 90 ತೆಂಗಿನಮರ, 4 ಎಕರೆ ಕಬ್ಬು ಹಾಕಿದ್ದಾರೆ. ಮೊದಲು ರೇಷ್ಮೆ ಬೆಳೆಯನ್ನು ಬೆಳೆಯುತ್ತಿದ್ದರು ಕೂಲಿ ಆಳಿನ ತೊಂದರೆ, ಕೊಳವೆಬಾವಿ ನೀರು ಕಡಿಮೆಯಾಗಿದ್ದಕ್ಕೆ ರೇಷ್ಮೆ ಬೆಳೆಯನ್ನು ಸ್ಥಗಿತಗೊಳಿಸಿದ್ದಾರೆ. ಕಡಿಮೆ ಸಮಯದಲ್ಲಿ ತರಕಾರಿ ಬೆಳೆದು ಉತ್ತಮ ಇಳುವರಿ ಪಡೆದು ಹೆಚ್ಚಿನ ಆದಾಯ ಗಳಿಸುವ ಮನಸ್ಸಿನಿಂದ ಈ ಬಾರಿ ಸಾವಯವ ಪದ್ಧತಿಯಲ್ಲಿ ಬೆಂಡೆಕಾಯಿ ಕೃಷಿ ಮಾಡಿದ್ದೇನೆ. ಈ ವರ್ಷ ಕಡಿಮೆ ವೆಚ್ಚದಲ್ಲಿ ಉತ್ತಮ ಲಾಭ ಸಿಗುತ್ತಿದೆ’ ಎಂದುಜಿಲ್ಲೆಯಿಂದ ರೈತ ಕೃಷ್ಣಾಜಿ ತಿಳಿಸಿದರು.
ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಇದರ ಆಧೀನದಲ್ಲಿ ಬರುವ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗಳಿಂದ 2024-25ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಉದ್ಯಮ ಅಭಿವೃದ್ಧಿ ಯೋಜನೆ, ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆ (ಮಹಿಳಾ ಸ್ವ-ಸಹಾಯ ಗುಂಪುಗಳಿಗೆ), ಸ್ವಾವಲಂಬಿ ಸಾರಥಿ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಭೂ ಒಡೆತನ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸೇವಾ ಸಿಂಧು, ಗ್ರಾಮ ಒನ್, ಕರ್ನಾಟಕ ಒನ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 10 ಕೊನೆಯ ದಿನವಾಗಿದ್ದು, ವೆಬ್‌ಸೈಟ್ ಪೋರ್ಟಲ್ ವಿಳಾಸ https://sevasindhu.karnataka.gov.in/Gramaone/Karnatakaone ಎಂದು ನಿಗಮದ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಬಳ್ಳಾರಿ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿ
ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಎಕರೆಗೆ 3 ಕ್ವಿಂಟಲ್‌ನಂತೆ ಪ್ರತಿ ರೈತರಿಂದ ಗರಿಷ್ಟ ಪ್ರಮಾಣ 15 ಕ್ವಿಂಟಲ್ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕ್ರಾಂತಿ ಖರೀದಿ ಮಾಡ ಲಾಗುತ್ತಿದ್ದು, ಜಿಲ್ಲೆಯಲ್ಲಿ ಸ್ಥಾಪಿಸಲಾದ ಖರೀದಿ ಕೇಂದ್ರಗಳಲ್ಲಿ ನೋಂದಣಿ ಕಾರ್ಯ ಪ್ರಾರಂಭಿಸಲಾಗಿದೆ ಎಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶರು ಆಗಿರುವ ಜಿಲ್ಲಾ ಟಾಸ್ಕಪೋರ್ಸ ಸಮಿತಿ ಸದಸ್ಯ ಕಾರ್ಯದರ್ಶಿ ಡಿ.ಎಸ್.ರೆಡ್ಡಿ ತಿಳಿಸಿದ್ದಾರೆ.
ಬಾಗಲಕೋಟೆ ತಾಲೂಕಿನಲ್ಲಿ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ, ಖಜ್ಜಿಡೋಣಿ ಬಾದಾಮಿ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ, ಕಗಲಗೊಂಬ (9611859963), (9480410494), (7624951919), (9916270586), ಮುಧೋಳ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಜುನ್ನೂರ (8296637794), ಬೀಳಗಿ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಸೊನ್ನ (9632289239), ಹುನಗುಂದ ತಾಲೂಕಿನ ಟಿ.ಎ.ಪಿ.ಸಿಎಂಎಸ್ (9480262655) 2 ಹುನಗುಂದ . ಜಿಲ್ಲೆಯ ರೈತರು ಖರೀದಿ ಕೇಂದ್ರಗಳಲ್ಲಿ ರೈತರು ಆಧಾರ ಕಾರ್ಡ, ಪಹಣಿ ಪತ್ರಿಕೆ. ಆಧಾರ ಲಿಂಕ ಆಗಿರುವ ರಾಷ್ಟ್ರೀಕೃತ ಬ್ಯಾಂಕಿನ ಪಾಸಬುಕ್ಕ ಪ್ರತಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಾಖಾ ವ್ಯವಸ್ಥಾಪಕರು, ಕೆ.ಓ.ಎಫ್ ಬಾಗಲಕೋಟೆ ಇವರನ್ನು ಸಂಪರ್ಕಿಸುವಂತೆ ಡಿ.ಎಸ್.ರೆಡ್ಡಿ ತಿಳಿಸಿದ್ದಾರೆ.
ಯುಆಡಬ್ಲ್ಯೂ ಹುದ್ದೆಗೆ ಅರ್ಜಿ ಆಹ್ವಾನ
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2024-25ನೇ ಸಾಲಿನ ಕೂಡ್ಲಿಗಿ ತಾಲೂಕು ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲಿ ಮತ್ತು ಕೂಡ್ಲಿಗಿ ಪಟ್ಟಣ ಪಂಚಾಯತಿಯಲ್ಲಿ ಖಾಲಿ ಇರುವ ತಲಾ ಒಂದು ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳಿಗೆ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿಕಲಚೇತನರು ಅವಶ್ಯಕ ದಾಖಲೆಗಳೊಂದಿಗೆ ನಿಗದಿತ ಅರ್ಜಿಯ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರಬೇಕು. 18 ರಿಂದ 45 ವರ್ಷ ವಯೋಮಿತಿ ಹೊಂದಿದವರಾಗಿರಬೇಕು. ವಿಕಲಚೇತನ ಪ್ರತಿಶತ 40% ಮೇಲ್ಪಟ್ಟ ಯು.ಡಿ.ಐ.ಡಿ ಪ್ರಮಾಣ ಪತ್ರ ಹೊಂದಿರಬೇಕು. ತಹಶೀಲ್ದಾರಿಂದ ಪಡೆದ 10 ವರ್ಷದ ವಾಸಸ್ಥಳ ಪ್ರಮಾಣ ಪತ್ರವನ್ನು ಹೊಂದಿರಬೇಕು ಹಾಗೂ ಸ್ಥಳೀಯ ವಿಕಲಚೇತನರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಗರ ಪುನರ್ವಸತಿ ಕಾರ್ಯಕರ್ತರನ್ನು ಹಗರಿಬೊಮ್ಮನಹಳ್ಳಿ ಪುರಸಭೆಯ ಮುಖ್ಯಾಧಿಕಾರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿ ಮುಖಾಂತರ ಹಾಗೂ ಕೂಡ್ಲಿಗಿ ತಾಲ್ಲೂಕಿನ ನಗರ ಪುನರ್ವಸತಿ ಕಾರ್ಯಕರ್ತರನ್ನು ಕೂಡ್ಲಿಗಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿ ಮುಖಾಂತರ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 10 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಎಮ್‌ಆರ್‌ಡಬ್ಲ್ಯೂ ಲಕ್ಷಣ ಮೊ: 9741185924, ಕೂಡ್ಲಿಗಿ ತಾಲ್ಲೂಕಿನ ಎಮ್‌ಆರ್‌ಡಬ್ಲ್ಯೂ ಚೌಡೇಶ ಬಿ.ಹೆಚ್. ಮೊ: 8217626361 ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಾರ್ಯಾಲಯ, ತಾಲ್ಲೂಕು ಪಂಚಾಯತಿ ಆವರಣ, ಸಂಡೂರು ರಸ್ತೆ, ಹೊಸಪೇಟೆ, ಇವರನ್ನು ಕಛೇರಿಯ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯ್ಕೆ ಪ್ರಕ್ರಿಯೆ
ಪ್ರಸ್ತಕ ಸಾಲಿನ ಬೆಳಗಾವಿ ಜಿಲ್ಲೆಯ 14 ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯ್ಕೆ ಪ್ರಕ್ರಿಯೆಯನ್ನು ಸೆ.22 ರ ಒಳಗಾಗಿ ನಡೆಸಲು ಉದ್ದೇಶಿಸಲಾಗಿರುತ್ತದೆ. ದಸರಾ ಕ್ರೀಡಾಕೂಟ ಆಯ್ಕೆ ಪ್ರಕ್ರಿಯೆಗಾಗಿ ಚಿಕ್ಕೋಡಿ, ರಾಯಬಾಗ, ನಿಪ್ಪಾಣಿ ಅನುಷ್ಠಾನಾಧಿಕಾರಿಗಳಾದ ಸಂಜೀವಕುಮಾರ ನಾಯಿಕ ದೂ:7892156167, ಬೈಲಹೊಂಗಲ, ಕಿತ್ತೂರು, ಗೋಕಾಕ ಬಸವರಾಜ ಹೊಸಮಠ ದೂ:7019699077, ಅಥಣಿ, ಕಾಗವಾಡ ಎನ್.ಎ. ಮೀರಜಕರ ದೂ:89566677999, ಖಾನಾಪೂರ, ಸವದತ್ತಿ ಹಣಮಂತ ಪಾಟೀಲ ದೂ:8050485113, ರಾಮದುರ್ಗ ವಿ.ಎಸ್.ಪಾಟೀಲ್ ದೂ:8317456301, ಹುಕ್ಕೇರಿ ಕುತುಜಾ ಮುಲ್ತಾನಿ ದೂ:7259080818, ಮೂಡಲಗಿ ರೋಹಿಣಿ ಪಾಟೀಲ ದೂ:8618169003, ಬೆಳಗಾವಿ ಸಮ್ಮೇದ ಚೌಗಲೆ ದೂ:9632487391 ಸಂಖ್ಯೆಗೆ ಸಂಪರ್ಕಿಸಬಹುದು. ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಕಡ್ಡಾಯವಾಗಿ ಪಾಸ್‌ಬುಕ್ ಪ್ರತಿಯೊಂದಿಗೆ ಭಾಗವಹಿಸಬೇಕಾಗಿರುತದೆ ಎಂದು ಬೆಳಗಾವಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.16 ರಂದು ಪುಣೆ-ಎಸ್.ಎಸ್.ಎಸ್ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ
ನೈಋತ್ಯ ರೈಲ್ವೆ ವತಿಯಿಂದ ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ಸೆ.16 ರಂದು ರಾತ್ರಿ 8 ಗಂಟೆಗೆ ಪುಣೆ-ಎಸ್. ಎಸ್.ಎಸ್.ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ವಿಡಿಯೋ ಲಿಂಕ್ ಮೂಲಕ ಪುಣೆ-ಎಸ್.ಎಸ್.ಎಸ್ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಲಿದ್ದಾರೆ. ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್, ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ಹಾಗೂ ರೈಲ್ವೆ ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿರಾದ ರವನೀತ್ ಸಿಂಗ್ ಅವರು
ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸುವರು. ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ, ಸಂಸದುರಗಳಾದ ಜಗದೀಶ್ ಶೆಟ್ಟರ್, ಪ್ರಿಯಾಂಕಾ ಜಾರಕಿಹೊಳಿ, ವಿಶ್ವೇಶ್ವರಹೆಗಡೆ ಕಾಗೇರಿ,ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ, ವಿಧಾನಸಭಾ ಸದಸ್ಯರಾದ ಆಸಿಫ್ (ರಾಜು)ಸೇರ್, ಅಭಯ್ ಪಾಟೀಲ್ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಹನಮಂತ ನಿರಾಣಿ, ಡಾ.ತಳವಾರ ಸಾಬಣ್ಣ, ಲಖನ್ ಜಾರಕಿಹೊಳಿ, ಚನ್ನರಾಜ್ ಬಸವರಾಜ್ ಹಟ್ಟಿಹೊಳಿ, ಎಂ.ನಾಗರಾಜು ಹಾಗೂ ಮಹಾನಗರ ಪಾಲಿಕೆಯ ಮೇಯರ್‌ರಾದ ಸವಿತಾ ಕಾಂಬ್ಳೆ ಅವರು ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.