Breaking
Tue. Dec 17th, 2024
Spread the love

ರುಡ್‌ಸೆಟ್ ಸಂಸ್ಥೆ, ವಿಜಯಪುರ

ರಾಘವೇಂದ್ರ ಕಾಲೋನಿ, ಬಾಗಲಕೋಟ- ಜಮಖಂಡಿ ಬೈಪಾಸ್ ರಸ್ತೆ, : 9739511914, 9731065632, 7483987824, 9480078829, 9845490323

ಗ್ರಾಮೀಣ ಪ್ರದೇಶದ ಬಿಪಿಎಲ್ ಅಭ್ಯರ್ಥಿಗಳಿಗೆ ಹಮ್ಮಿಕೊಂಡಿರುವ ಸ್ವ ಉದ್ಯೋಗ ತರಬೇತಿಗಳ ವಿವರಗಳು.

ತರಬೇತಿಯ ಹೆಸರು ಮತ್ತು ಅವಧಿ

ಕುರಿ ಮತ್ತು ಮೇಕೆ ಸಾಕಾಣಿಕೆ (10 ದಿನ)

ಬ್ಯೂಟಿ ಪಾರ್ಲರ ತರಬೇತಿ (30 ದಿನ)

ಕಂಪ್ಯೂಟರ ಅಕೌಂಟಿಂಗ (30 ದಿನ)

ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ (10 )

ಒಳನಾಡು ಮೀನು ಸಾಕಾಣಿಕೆ ತರಬೇತಿ (10 ದಿನ)

ಮೋಟಾರ್ ರಿವೈಂಡಿಂಗ್ ಮತ್ತು ಪಂಪಸೆಟ್ ನಿರ್ವಹಣೆ ( 30 ದಿನ)

ಮಹಿಳೆಯರಿಗಾಗಿ ಟೇಲರಿಂಗ ತರಬೇತಿ (30 ದಿನ)

ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ (10 2)

ಕಂಪ್ಯೂಟರ ಅಕೌಂಟಿಂಗ ( 30 ದಿನ)

ದ್ವಿ ಚಕ್ರ ವಾಹನ ರಿಪೇರಿ ( 30 ದಿನ)

ಮಹಿಳೆಯರಿಗಾಗಿ ಟೇಲರಿಂಗ ತರಬೇತಿ (30 ದಿನ)

ಸಿಸಿಟಿವಿಇನ್‌ಸ್ಟಾಲೇಷನ್ ಮತ್ತು ರಿಪೇರಿ (13 ದಿನ)

ಗೊಂಬೆ ತಯಾರಿಕೆ ( 13 ದಿನ)

ಕೈ ಕಸೂತಿ (ಹ್ಯಾಂಡ ಎಂಬ್ರಾಯಡರಿ) ಮತ್ತು ಫ್ಯಾಬ್ರಿಕ್ ಪೆಂಟಿಂಗ್ ( 30 ದಿನ)

ಮೊಬೈಲ್ ಫೋನ ರಿಪೇರಿ ( 30 ದಿನ)

ಸಂಸ್ಥೆಯಲ್ಲಿ ದೊರೆಯುವ ಸೌಲಭ್ಯಗಳು

ಉಚಿತ ಊಟ ವಸತಿ ಸಹಿತ ತರಬೇತಿ, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ, ಕೌಶಲ್ಯ ತರಬೇತಿಯ ಜೊತೆಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ, ಸಮಯ ನಿರ್ವಹಣೆ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ, ಮಾರುಕಟ್ಟೆ ನಿರ್ವಹಣೆ, ಬ್ಯಾಂಕ ವ್ಯವಹಾರ ಹಾಗೂ ವಿವಿಧ ಸಾಲ ಸೌಲಭ್ಯಗಳ ಮಾಹಿತಿ, ರುಡ್‌ಸೆಟ್ ಸಂಸ್ಥೆ ಹಾಗೂ ಕೇಂದ್ರ ಸರಕಾರದ ಪ್ರಮಾಣ ಪತ್ರ.

ತರಬೇತಿ ಪಡೆಯಬೇಕಾದರೆ ಇರಬೇಕಾದ ಅರ್ಹತೆಗಳು

19 ರಿಂದ 45 ವರ್ಷ ವಯೋಮಾನದವರಾಗಿರಬೇಕು. ಕನ್ನಡ ಓದು ಬರಹ ಬಲ್ಲವರಾಗಿರಬೇಕು. ಗ್ರಾಮೀಣ ಭಾಗದ ಬಿಪಿಎಲ್ ಅಥವಾ ಅಂತ್ಯೋದಯ ರೇಷನ್ ಕಾರ್ಡ ಅಥವಾ ನರೇಗಾ ಜಾಬ್ ಕಾರ್ಡ ಹೊಂದಿ ದವರಿಗೆ ಆದ್ಯತೆ, ಸ್ವ ಉದ್ಯೋಗ ಪ್ರಾರಂಭಿಸಲು ಆಸಕ್ತರಿರಬೇಕು.

02.09.2024ರ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣದೊಂದಿಗೆ ಅಲ್ಲಲ್ಲಿ ಬಿಟ್ಟು ಬಿಟ್ಟು ಸಾಧಾರಣ ಮಳೆಯ ಮುನ್ಸೂಚೆನೆ ಇದೆ. ಉತ್ತರ ಕನ್ನಡ ಸ್ವಲ್ಪ ಜಾಸ್ತಿ ಇರಬಹುದು. ಕೊಡಗು, ಹಾಸನ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣದ ಜೊತೆಗೆ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.

ಬಳ್ಳಾರಿ, ವಿಜಯಪುರ, ಕಲಬುರ್ಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರಿ ಮಳೆಯ ಮುನ್ಸೂಚೆನೆ ಇದೆ. ಚಿತ್ರದುರ್ಗ ಉತ್ತರ, ದಾವಣಗೆರೆ, ಕೊಪ್ಪಳ, ರಾಯಚೂರು, ಗದಗ, ಬಾಗಲಕೋಟೆ ಜಿಲ್ಲೆಗಳ ಅಲ್ಲಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ಸ್ವಲ್ಪ ಬಿಸಿಲಿನ ವಾತಾವರಣದ ಮುನ್ಸೂಚೆನೆ ಇದೆ.

ಅರಬ್ಬಿ ಸಮುದ್ರದ ಆಸ್ನಾ ಚಂಡಮಾರುತವು ದುರ್ಬಲಗೊಳ್ಳುತ್ತಿದ್ದು, ಇಂದು ರಾತ್ರಿ ಮಸ್ಕತ್ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಈಗಾಗಲೇ ಆಂದ್ರಾ ಪ್ರವೇಶಿಸಿದ್ದು, ಆಂದ್ರಾ, ತೆಲಂಗಾಣ ಹಾಗೂ ಕರ್ನಾಟಕದ ಉತ್ತರ ಒಳನಾಡು ಭಾಗಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ.

ಈಗಿನಂತೆ ಸೆಪ್ಟೆಂಬರ್ 2ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ. ಆದರೆ ರಾಜ್ಯದ ಕರಾವಳಿ ಭಾಗಗಳಲ್ಲಿ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿವೆ.

ಆಹಾರ ಉತ್ಪಾದಕರು : ತಯಾರಕರಿಗೆ ಪರವಾನಿಗೆ ಲೈಸನ್ಸ್ ಅಭಿಯಾನ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ವತಿಯಿಂದ ಜಿಲ್ಲೆಯ ಆಹಾರ ಉತ್ಪಾದಕರು, ತಯಾರಕರು, ವಿತರಕರಿಗೆ ಪರವಾನಿಗೆ ಅಥವಾ ನೊಂದಣಿ (ರಜಿಸ್ಟ್ರೇಶನ್) ಅಭಿಯಾನ 31 ರಂದು ಹಮ್ಮಿಕೊಳ್ಳಲಾಗಿದೆ. ಆಹಾರ ಉತ್ಪಾದಕರು, ವಿತರಕರು ಹಾಗೂ ಮಾರಾಟಗಾರರು ನಿರಂತರವಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಪರವಾನಿಗೆ ಅಥವಾ ನೊಂದಣಿ ಪಡೆಯುವುದು ಕಡ್ಡಾಯವಾಗಿದ್ದು, ಜಿಲ್ಲೆಯಾದ್ಯಂತ ಬೃಹತ್ ಸಂಖ್ಯೆ ಆಹಾರ ಉತ್ಪಾದಕರಿಗೆ ಪರವಾನಿ-ನೊಂದಣಿ ಮಾಡುವ ಉದ್ದೇಶದಿಂದ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಪರವಾನಿಗೆಗಾಗಿ ಆಧಾರ ಕಾರ್ಡ, ಫೋಟೋ, ವಿದ್ಯುತ್ ಬಿಲ್ಲ, ಜಿ.ಎಸ್.ಟಿ., ನಗರಸಭೆ ಪರವಾನಿಗೆ, ಪ್ಯಾನ ಕಾರ್ಡ, ಲ್ಯಾಬ ರಿಪೋರ್ಟ್ ಸೀಲು, ಹಾಗೂ ನೊಂದಣಿಗೆ ಆಧಾರ ಕಾರ್ಡ, ಫೋಟೋ, ವಿದ್ಯುತ್ ಬಿಲ್ಲ ಅಥವಾ ಬಾಡಿಗೆ ಒಪ್ಪಂದ ಪತ್ರ- ಉತಾರಿ ದಾಖಲೆಗಳೊಂದಿಗೆ ನೊಂದಣಿ ಮಾಡಿಸಿಕೊಳ್ಳಬಹುದಾಗಿದೆ.

ಜಿಲ್ಲೆಯ ಆಹಾರ ಉತ್ಪಾದಕರು, ವಿತರಕರು ಹಾಗೂ ಮಾರಾಟಗಾರರು ಆನ್‌ಲೈನ್ ಮೂಲಕ ಅಥವಾ ಕಚೇರಿಗೆ ಭೇಟಿ ನೀಡುವ ಮೂಲಕ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು. ಕಲಬೆರಕೆ ಆಹಾರ ಪದಾರ್ಥ ಮಾರಾಟ ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಆಹಾರ ಸುರಕ್ಷತಾ ಅಧಿಕಾರಿಗಳಾದ ವಿಜಯಪುರ ಮೊ: 9845276810, 9448644782, 9448209798, 9663315665, ಸಿಂದಗಿ ಮೊ: 8951332818 ಅಥವಾ ಜಿಲ್ಲಾ ಅಂಕಿತ ಅಧಿಕಾರಿಗಳ ಕಾರ್ಯಾಲಯ, ಅಥಣಿ ರಸ್ತೆ, ಜಿಲ್ಲಾ ಆಸ್ಪತ್ರೆ ಆವರಣ, ಟಿ.ಬಿ.ಆಫೀಸ್ ಪಕ್ಕದಲ್ಲಿ ವಿಜಯಪುರ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಕಲಚೇತನರಿಂದ ಅರ್ಜಿ ಆಹ್ವಾನ

ಬೆಳಗಾವಿ : 2023-24 ಸಾಲಿನಲ್ಲಿ ಯಂತ್ರಚಾಲಿತ ದ್ವಿಚಕ್ರ ವಾಹನವನ್ನು ಚಾಲನೆ ಮಾಡಲು ಸಾಮರ್ಥ್ಯ ಹೊಂದಿದ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವೀಲ್‌ಚೇರ್ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆ

ದೈಹಿಕ ವಿಕಲಚೇತನರು ಶೇ. 75 ಮತ್ತು ಅದಕ್ಕಿಂತ ಹೆಚ್ಚಿಗೆ ಅಂಗವಿಕಲತೆ ಪ್ರಮಾಣ ಹೊಂದಿರುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಮತ್ತು ಯು.ಡಿ.ಐ.ಡಿ. ಗುರುತಿನ ಚೀಟಿ. ಕರ್ನಾಟಕದಲ್ಲಿ ಕನಿಷ್ಟ 10 ವರ್ಷ ವಾಸವಾಗಿರುವ ಬಗ್ಗೆ ತಹಸೀಲ್ದಾರ ರವರಿಂದ ಪಡೆದ ರಹವಾಸಿ ಪ್ರಮಾಣ ಪತ್ರ, ಕನಿಷ್ಠ 18 ವರ್ಷ ಮತ್ತು ಗರಿಷ್ಠ 60 ವರ್ಷ ವಯೋಮಿತಿವಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ. 2 ಲಕ್ಷಗಳಿಗಿಂತ ಕಡಿಮೆ ಇರಬೇಕು. ಯಾವುದೇ ಮೂಲದಿಂದ ಇಲ್ಲಿಯವರೆಗೆ ಬ್ಯಾಟರಿ ಚಾಲಿತ ವೀಲ್‌ ಚೇ‌ರ್ ಪಡೆದಿರುವುದಿಲ್ಲವೆಂದು ಮತ್ತು ಮಂಜೂರಾಗುವ ಬ್ಯಾಟರಿ ಚಾಲಿತ ವೀಲ್‌ಚೇರ್‌ನ್ನು ಬೇರೆಯವರಿಗೆ ಪರಭಾರೆ ಮಾಡುವುದಿಲ್ಲವೆಂದು ಹಾಗೂ ಯಂತ್ರ ಚಾಲಿತ ದ್ವಿಚಕ್ರ ವಾಹನ ಪಡೆದಿರುವುದಿಲ್ಲವೆಂದು ರೂ.20/-ಗಳ ಬಾಂಡ್‌ನಲ್ಲಿ ಸ್ವಯಂ ದೃಢೀಕರಣ ಪತ್ರ ಸಲ್ಲಿಸಬೇಕು. ಬ್ಯಾಟರಿ ಚಾಲಿತ ವೀಲ್‌ಚೇ‌ರ್ ಅಗತ್ಯವಿರುವ ದೈಹಿಕ ವಿಕಲಚೇತನರು ಆ.30 ರೂಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ತಾಲೂಕಿನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು (ಎಂ.ಆ‌ರ್. ಡಬ್ಲ್ಯೂ) ಅಥವಾ ಕಛೇರಿ ದೂರವಾಣಿ ಸಂಖ್ಯೆ: 0831- 2476096/7 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಯೋಗದ ಪರವಾನಿಗೆ ನೊಂದಣಿಗೆ ಕಾಲಾವಕಾಶ

ಬೆಳಗಾವಿ : ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (ಎಫ್. ಎಸ್.ಎಸ್.ಎ) ವತಿಯಿಂದ ಆಹಾರ ಉತ್ಪಾದಕರು, ವಿತರಕರು, ಮಾರಟಗಾರರಿಗೆ ಉದ್ಯೋಗದ ಪರವಾನಿಗೆ (ಲೈಸೆನ್ನ) ಅಥವಾ ರೆಜಿಸ್ಟ್ರೇಷನ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲಾದ್ಯಂತ ಆ.30 ರಿಂದ 31 ರವರೆಗೆ ಆನ್‌ಲೈನ್ ಮೂಲಕ ಪರವಾನಿಗೆ (ಲೈಸೆನ್ಸ್) ಅಥವಾ ನೊಂದಣಿ (ರೆಜಿಸ್ಟ್ರೇಷನ್) ಮಾಡಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ 9986444708 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಜಿಲ್ಲಾ ಅಂಕಿತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಸರು ಖರೀದಿ ಕೇಂದ್ರ ಪ್ರಾರಂಭಿಸಲು ಮನವಿ

ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿ ಸನ್ 2024-25ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ ಹೆಸರು ಹುಟ್ಟುವಳಿ ಖರೀದಿಸುವ ಕೇಂದ್ರವನ್ನು ಪಟ್ಟಣದಲ್ಲಿ ಶೀಘ್ರವೇ ಪ್ರಾರಂಭಿಸಿ ತಾಲೂಕಿನ ಎಲ್ಲಾ ರೈತರಿಗೆ ಅನುಕೂಲವಾಗುವಂತೆ ಸರಕಾರದ ಮಾನದಂಡಗಳನ್ವಯ ಹೆಸರು ಖರೀದಿಸುವಂತೆ ತಹಸಿಲ್ದಾ‌ರ್ ಮೂಲಕ ರಾಜ್ಯ ಸರಕಾರಕ್ಕೆ ಕರವೇ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ವೇಳೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ್ ಹೊಗೆ ಸೊಪ್ಪಿನ ಮತ್ತು ಲಕ್ಷೇಶ್ವರ ತಾಲೂಕ ಕರವೇ ಅಧ್ಯಕ್ಷ ಲೋಕೇಶ್ ಸುತಾ‌ರ್ ಮಾತನಾಡಿ, ರೈತರು ಸಾಲ ಸೂಲ ಮಾಡಿ ತಮ್ಮ ಜಮೀನುಗಳಿಗೆ ಹೆಸರು ಬೀಜ, ಮೆಕ್ಕೆ ಜೋಳ ಬಿತ್ತನೇ ಮಾಡಿರುತ್ತಾರೆ.

ಪ್ರತಿ ಒಂದು ಎಕರೆಗೆ ಹೆಸರು ಬಿತ್ತನೆಯಿಂದ ಫಸಲು ಬರುವವರಿಗೂ 15 ರಿಂದ. 16 ಸಾವಿರ ಖರ್ಚು ಆಗಿರುತ್ತದೆ. ಬೆಳೆ ಮಾತ್ರ ಪ್ರತಿ ಎಕರೆಗೆ 2 ರಿಂದ 3. ಕ್ವಿಂಟಲ್‌ ರಷ್ಟು ಬೆಳೆ ರೈತರ ಕೈಗೆ ಸಿಗುತ್ತಿದೆ. ರೈತರು ಹೆಸರನ್ನು ತೆಗೆದುಕೊಂಡು ಮಾರುಕಟ್ಟೆಗೆ ಹೋದರೆ, ಹೆಸರು ಧಾರಣೆ ಪ್ರತಿ ಕ್ವಿಂಟಲ್ ಗೆ 5 ರಿಂದ 6 ಸಾವಿರ ರೂಪಾಯಿಗಳು ಮಾತ್ರ ಇರುತ್ತದೆ. ಮೂರು ಕ್ವಿಂಟಲ್ ಹೆಸರಿಗೆ ರೂ. 18000 ಬರುತ್ತದೆ. ಆದರೆ ರೈತ ಹಗಲು ರಾತ್ರಿ ಎನ್ನದೆ ಮೂರು ತಿಂಗಳ ಕಾಲ ಬೆಳೆ ಸಂರಕ್ಷಣೆ ಮಾಡಿಕೊಂಡು ಮಾರುಕಟ್ಟೆಗೆ ತಂದಿರುತ್ತಾನೆ. ಇದರಿಂದ ಬೆಳೆಗೆ ಪ್ರತಿ ಎಕರೆಗೆ ಮಾಡಿರುವ ಖರ್ಚು 16 ಸಾವಿರ. ಬೆಳೆಗೆ ಬಂದಿರುವ ಬೆಲೆ 18 ಸಾವಿರ. ರೈತ ಕಷ್ಟಪಟು ವ್ಯವಸಾಯ ಮಾಡಿದ್ದಕ್ಕೆ ಪ್ರತಿ ಎಕರೆಗೆ ಸಿಕ್ಕಿರೋ ಲಾಭ ಕೇವಲ 2 ರಿಂದ 3 ಸಾವಿರ ರೂಪಾಯಿಗಳು ಮಾತ್ರ. ಈ ಹಣದಲ್ಲಿ ರೈತನು ತನ್ನ ಕುಟುಂಬವನ್ನು ನಡೆಸಬೇಕು.

ರೈತರ ಈ ಸಂಕಷ್ಟಗಳನ್ನು ಗಮನಿಸಿ ರೈತರ ಸಮಸ್ಯೆಗಳನ್ನು ಪರಿಗಣನೆಗೆ ತೆಗೆದುಕೊಂಡು ಕೂಡಲೇ ಹೆಸರು ಖರೀದಿ ಕೇಂದ್ರವನ್ನು ಪ್ರಾರಂಭಿಸಿ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಹೇಳಿದರು. ಜಿಲ್ಲಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ್, ಜಿಲ್ಲಾ ಕರವೇ ಸಂಘಟನಾ ಕಾರ್ಯದರ್ಶಿ ಬಸವರಾಜ್ ಹೊಗೆ, ಸೊಪ್ಪಿನ ತಾಲೂಕ ಅಧ್ಯಕ್ಷ ಲೋಕೇಶ್‌ ಸುತಾರ, ತಾಲೂಕ ರೈತ ಸಂಘದ ಅಧ್ಯಕ್ಷ ಸಿಎಫ್ ಗಡ್ಡದೇವರಮಠ, ಪ್ರವೀಣ್ ಗೌರಿ, ಪ್ರಕಾಶ್ ಕೊಂಚಗೇರಿ ಮಠ, ಗಣೇಶ್ ಮೆಹರವಾಡೆ, ಹನುಮಂತ ದತ್ತರಿಗೆ, ಆಶೀಫ್ ಗುತ್ತಲ, ಪ್ರವೀಣ ಗಾಣಿಗೇರ್ ಸೇರಿದಂತೆ ನೂರಾರು ಕರವೇ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಅನುಷ್ಠಾನ : ಪ್ರಗತಿ ಪರಿಶೀಲನಾ ಸಭೆ

ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಾರಿಯಲ್ಲಿರುವ ವಿವಿಧ ಇಲಾಖೆಯ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಜೊತೆಗೆ ಕಾಲಮಿತಿಯೊಳಗೆ ನಿಗದಿತ ಗುರಿ ಸಾಧನೆಗೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ (ಆ.31) ನಡೆದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನಮಂತ್ರಿಗಳ 15 ಅಂಶ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳ ಕುರಿತು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಜಾಗೃತಿ ಮೂಡಿಸಬೇಕು.ಈ ಕಾರ್ಯಕ್ರಮದಡಿ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಫಲಾನುಭವಿಗಳನ್ನು ಇಲಾಖೆಯವತಿಯಿಂದಲೇ ಗುರುತಿಸಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ತಿಳಿಸಿದರು. ಸದಲಗಾದಲ್ಲಿನ ಮೌಲಾನಾ ಆಝಾದ ಶಾಲೆಯಲ್ಲಿ ಶೌಚಾಲಯ ಇಲ್ಲದಿರುವ ಕುರಿತು ದೂರುಗಳು ಬಂದಿವೆ. ಶಿಕ್ಷಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳು ಸಮನ್ವಯದೊಂದಿಗೆ ಶಾಲೆಯಲ್ಲಿ ಶೌಚಾಲಯಕ್ಕೆ ನಿರ್ಮಾಣಕ್ಕೆ ಕೂಡಲೇ ಕ್ರಮವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಉರ್ದು ಮಾಧ್ಯಮ ಶಾಲೆ ಹಾಗೂ ವಿಧ್ಯಾರ್ಥಿಗಳ ಮಾಹಿತಿ ಪಡೆದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದಂತಹ ಶಾಲೆಗಳಲ್ಲಿ ಆಂಗ್ಲ ಮಾದ್ಯಮ ಪ್ರಾರಂಭಿಸಲು ಹಾಗೂ ಅಂತಹ ಶಾಲೆಗಳನ್ನು ತಿಳಿಸಿದರು. ವಿದ್ಯಾರ್ಥಿನಿಯರ ಸುರಕ್ಷತೆಗೆ ಆದ್ಯತೆ ನೀಡಬೇಕು: ಶಾಲೆಗಳಲ್ಲಿ ವಸತಿ ಶಾಲೆಗಳಿಗೂ ಅನ್ವಯವಾಗಲಿದ್ದು, ಈ ಕುರಿತು ಜಾಗೃತಿ ಮೂಡಿಸಬೇಕು. ಎಲ್ಲ ಶಾಲೆಗಳಲ್ಲಿ ಸಮಿತಿಗಳನ್ನು ರಚಿಸಿ ಮಾಹಿತಿ ನೀಡಬೇಕು. ಶೀಬಾಕ್ಸ್ ಪೋರ್ಟಲ್ ನಲ್ಲಿ ದಾಖಲಾಗುವ ದೂರುಗಳ ಕುರಿತು ನಿಯಮಿತವಾಗಿ ಟ್ರಕ್ ಮಾಡಲು ತಿಳಿಸಿದರು. ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಿಂದ ಸೌಲಭ್ಯಗಳನ್ನು ಪಡೆದಂತಹ ಹಾಗೂ ಪಡೆಯಬೇಕಾದಂತಹ ಅಲ್ಪಸಂಖ್ಯಾತ ಕುಟುಂಬಗಳ ವಿವರಗಳನ್ನು ಮುಂದಿನ ಸಭೆಯಲ್ಲಿ ಒದಗಿಸಲು ತಿಳಿಸಿದರು.

Related Post

Leave a Reply

Your email address will not be published. Required fields are marked *