ಆತ್ಮೀಯ ರೈತ ಬಾಂಧವರೇ ನಮ್ಮ ಕೃಷಿ ಇಲಾಖೆಯಿಂದ ರೈತರಿಗೆ ಹಲವಾರು ವಿಧದ ಸೌಕರ್ಯಗಳನ್ನು ನೀಡಿದ್ದಾರೆ. ನಮ್ಮ ರೈತ ಸಂಪರ್ಕ ಕೇಂದ್ರಗಳಿಂದ ರೈತರಿಗೆ ವಿವಿಧ ರೀತಿಯ ಕೃಷಿ ಯಂತ್ರೋಪಕರಣಕ್ಕೆ ಸಬ್ಸಿಡಿ ಗಳನ್ನು ನೀಡುತ್ತಿದ್ದಾರೆ. ನೀವು ಕೃಷಿ ಇಲಾಖೆಯಿಂದ ಕೃಷಿ ಯಾಂತ್ರಿಕೀಕರಣದಲ್ಲಿ ಕೃಷಿಗೆ ಬಳಸುವ ಯಂತ್ರಗಳನ್ನು 50 ರಿಂದ 90 ಶೇಕಡಾ ಸಬ್ಸಿಡಿಯನ್ನು ಪಡೆದುಕೊಳ್ಳಬಹುದು. ಈ ಯೋಜನೆ ಅಡಿಯಲ್ಲಿ ಸಾಮಾನ್ಯವಾಗಿ ಜನರಿಗೆ 50 ಪ್ರತಿಶತ ಮತ್ತು ಪ್ರತಿಷ್ಠಿತ ಜಾತಿ ಮತ್ತು ಪ್ರತಿಶತ ಪಂಗಡದ ರೈತರಿಗೆ 90% ಸಹಾಯಧನವನ್ನು ನೀಡುತ್ತಾರೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಈ ಕೃಷಿ ಯಾಂತ್ರೀಕರಣ ಎಂದರೇನು?
ರೈತರಿಗೆ ತಮ್ಮ ಹೊಲದಲ್ಲಿ ಬಳಸುವ ಕೃಷಿ ಯಂತ್ರಗಳನ್ನು ಸಬ್ಸಿಡಿ ಮುಖಾಂತರ ಕೊಡಲು ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿದೆ. ರೈತರು ಅತಿ ಸುಲಭವಾಗಿ ತಮ್ಮ ಮೊಬೈಲ್ ನಿಂದ ಈ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರವು ಅನುವು ಮಾಡಿಕೊಟ್ಟಿದೆ. ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಲು ತಮ್ಮ ಹತ್ತಿರ ಒಂದು ಸ್ಮಾರ್ಟ್ ಫೋನ್ ಮೊಬೈಲ್ ಇರಬೇಕು ಮತ್ತು ಅವರ ಜಮೀನು ಇರಬೇಕಾಗುತ್ತದೆ.
ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ರೈತರಿಗೆ ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://kkisan.karnataka.gov.in/ReportFarmerDetailsStatuswise_Public.aspx?AID=FM
ಕ್ಲಿಕ್ ಮಾಡಿದ ಮೇಲೆ ಅದು ನಿಮ್ಮನ್ನು ಕೇಕಿಸಾನ ಎಂದು ವೆಬ್ ಸೈಟಿಗೆ ಕರೆದುಕೊಂಡು ಹೋಗುತ್ತದೆ. ಅಲ್ಲಿ ನಿಮ್ಮ ಮುಂದೆ ನಾಲ್ಕು ಆಯ್ಕೆಗಳು ಕಂಡುಬರುತ್ತವೆ. ಅದರಲ್ಲಿ ಮೊದಲು ಕೃಷಿಯಂತ್ರಿಕರಣ ಅರ್ಜಿ ನಮೂನೆ ಅಂದರೆ farm mechanization application entry ಎಂಬ ಆಯ್ಕೆಯನ್ನು ನೀವು ಆಯ್ದುಕೊಳ್ಳಬೇಕಾಗುತ್ತದೆ. ಇಷ್ಟದ ಮೇಲೆ ನಿಮ್ಮ ಮುಂದೆ ಅಲ್ಲಿ ಮೂರು ಆಯ್ಕೆಗಳು ಕಂಡುಬರುತ್ತವೆ, ಅದರಲ್ಲಿ ನೀವು ನಿಮ್ಮ ರೈತರ ಐಡಿ ಮತ್ತು ಆಧಾರ್ ಸಂಖ್ಯೆ ಯನ್ನು ಹಾಕಬೇಕಾಗುತ್ತದೆ. ಇಲ್ಲಿ ರೈತರ ಐಡಿ ಎಂದರೆ ರೈತರ FID ಎಂದರ್ಥ. ರೈತರ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಲ್ಲಿ ಪರಿಶೀಲನೆ ಮಾಡುತ್ತಾರೆ.
*ಕರ್ನಾಟಕ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿದ್ದು ಕೊಡುಗೆ, ರೈತರಿಗೆ ಸಿಹಿ ಸುದ್ದಿ ಕೊಟ್ಟ ಸಿದ್ದು*
*ಬಿಪಿಎಲ್ ಕಾರ್ಡ್ ಇರುವ ಜನರಿಗೆ 170 ರೂಪಾಯಿ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ*
*ಉದ್ಯೋಗ ಖಾತ್ರಿ ಯೋಜನೆ ಅಡಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಹಾಯಧನ*