Breaking
Tue. Dec 17th, 2024

ಬೇಕರಿ ಟೆಕ್ನಾಲಜಿ ಸರ್ಟಿಫಿಕೇಟ್ ಕೋರ್ಸ್‌ಗೆ ಅರ್ಜಿ ಆಹ್ವಾನ, job

Spread the love

ಬೆಂಗಳೂರು : ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯವು ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆ ವತಿಯಿಂದ “ಹದಿನಾಲ್ಕು ವಾರದ ಬೇಕರಿ ಟೆಕ್ನಾಲಜಿ ಕುರಿತು ಸರ್ಟಿಫಿಕೇಟ್ ಕೋರ್ಸ್”ಗೆ ಅರ್ಜಿಯನ್ನು ಆಹ್ವಾನಿಸಿದೆ. ಎಸ್.ಎಸ್.ಎಲ್.ಸಿ. ಪಾಸ್ / ಫೇಲ್ ಆಗಿರುವವರು ರೂ. 10/- ಸಂದಾಯಿಸಿ ಅರ್ಜಿ ಫಾರಂಗಳನ್ನು ಸಂಯೋಜಕರು ಮತ್ತು ಮುಖ್ಯಸ್ಥರು, ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆ, ಕೃಷಿ ವಿಶ್ವ ವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು-560065 ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಡಿಸೆಂಬರ್ 20 ರೊಳಗೆ ಅಪರಾಹ್ನ 4 ಗಂಟೆಯೊಳಗೆ ತಲುಪಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-23513370 / 8971402077 ಗೆ ಸಂರ್ಪಕಿಸಬಹುದು ಎಂದು ಅಧಿಕೃತ ಪ್ರಕಟಣೆ

ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ

ಧಾರವಾಡ : ಧಾರವಾಡ ಕೃಷಿ ಮಹಾವಿದ್ಯಾಲಯ ಕೃಷಿ ಸಂಖ್ಯಾಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ತಾತ್ಕಾಲಿವಾಗಿ 179 ದಿನಗಳ ಅವಧಿಗೆ ಮೀರದಂತೆ ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೇಮಕಾತಿ ಪಡೆಯಲು ಬಯಸುವ ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಎರಡು ಪ್ರತಿಗಳೊಂದಿಗೆ ಡಿಸೆಂಬರ್ 15 ರಂದು ಬೆಳಿಗ್ಗೆ 11 ಘಂಟೆಗೆ ಡೀನ್ (ಕೃಷಿ) ರವರ ಕಛೇರಿ, ಕೃಷಿ ಮಹಾವಿದ್ಯಾಲಯ, ಧಾರವಾಡದಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳನ್ನು ಹಾಗೂ ಎರಡು ಜೆರಾಕ್ಸ್ ಪ್ರತಿಗಳನ್ನು ಸಂದರ್ಶನದ ಸಮಯದಲ್ಲಿ ತರಬೇಕು.

ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಹಾಜರಾಗಬೇಕು. ಸದರಿ ನೇಮಕಾತಿಯು ತಾತ್ಕಾಲಿಕವಾಗಿರುವುದರಿಂದ ಯಾವುದೇ ಸಮಯದಲ್ಲಿ ಕಾರಣ ತಿಳಿಸದೇ ಕೆಲಸದಿಂದ ತೆಗೆಯಬಹುದು. ಇದು ಕೃಷಿ ವಿಶ್ವವಿದ್ಯಾಲಯದ ಯಾವುದೇ ಖಾಯಂ ನೇಮಕಾತಿ ಹಕ್ಕಿಗೆ ಒಳಪಟ್ಟಿರುವುದಿಲ್ಲ ಎಂದು ಕೃಷಿ ಮಹಾವಿದ್ಯಾಲಯಲದ ಡೀನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತ ಬಾಂಧವರ ಗಮನಕ್ಕೆ

ಗದಗ : 2023-24 ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ, ಜಿಲ್ಲೆಗೆ ಮುಂಗಾರು ಹಂಗಾಮಿನಲ್ಲಿ ಹೆಸರು ಬೆಳೆಗೆ ಬಿತ್ತನೆ ವಿಫಲಗೊಂಡ ಸಂದರ್ಭದಲ್ಲಿ ನಷ್ಟ ಪರಿಹಾರದಡಿ ( prevented sowing) 34053 ರೈತರಿಗೆ 34.99 ಕೋಟಿ ಬೆಳೆ ವಿಮೆ ಪರಿಹಾರ ಮಂಜೂರಾಗಿದ್ದು, ಈವರೆಗೆ 33593 ರೈತರುಗಳಿಗೆ 34.59 ಕೋಟಿ ರೂ. ಪರಿಹಾರದ ಮೊತ್ತವು ರೈತರ ಖಾತೆಗೆ ಈಗಾಗಲೇ ಜಮೆ ಆಗಿರುತ್ತದೆ. ಬಾಕಿ ಇರುವ 457 ರೈತರುಗಳಿಗೆ ಅವರ ಆಧಾರ್/ ಎಪಿಸಿಐ ಸೀಡಿಂಗ್ ಕಾರಣಗಳಿಂದಾಗಿ ವಿಮಾ ಮೊತ್ತ ಪಾವತಿ ಆಗಿರುವುದಿಲ್ಲ. ಇತರೆ ಬೆಳೆಗಳಾದ ಮುಸುಕಿನ ಜೋಳ, ಶೇಂಗಾ, ಹತ್ತಿ, ಹಾಗೂ ಈರುಳ್ಳಿ (ಕೆಂಪು ಮೆನಸಿನಕಾಯಿ ಹೊರತುಪಡಿಸಿ) ಬೆಳೆಗಳಿಗೆ ಮಧ್ಯಂತರ ನಷ್ಟ ಪರಿಹಾರದಡಿ 46879 ರೈತರುಗಳಿಗೆ 49.09 ಕೋಟಿ ರೂ.

ಬೆಳೆ ವಿಮೆ ಪರಿಹಾರ ಮಂಜೂರಾಗಿದ್ದು, ಈವರೆಗೆ 46134 ರೈತರುಗಳಿಗೆ 48.30 ಕೋಟಿ ರೂ. ಪರಿಹಾರವನ್ನು ಈಗಾಗಲೇ ರೈತರ ಖಾತೆಗೆ ಜಮೆ ಮಾಡಲಾಗಿರುತ್ತದೆ. ಬಾಕಿ ಇರುವ 745 ರೈತರುಗಳಿಗೆ ಅವರ ಆಧಾರ್/ ಎಪಿಸಿಐ ಸೀಡಿಂಗ್ ಕಾರಣಗಳಿಂದಾಗಿ ವಿಮಾ ಮೊತ್ತ ಪಾವತಿ ಆಗುವುದು ಬಾಕಿ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಬಜಾಜ್ ಅಲಿಯಾಂಜ್ ಜನರಲ್ ಇನ್ನೂರನ್ಸ್ ವಿಮಾ ಸಂಸ್ಥೆಯ ಶಾಖೆಯನ್ನು ಸಂಪರ್ಕಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರಾದ ಶ್ರೀಮತಿ ತಾರಾಮಣಿ ಜಿ. ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದರಪಟ್ಟಿ ಆಹ್ವಾನ

ಗದಗ : ಗದಗ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಮಟ್ಟದ ವಿಕೋಪ ನಿರ್ವಹಣಾ ಯೋಜನೆ ತರಬೇತಿ ವಿಷಯದ ಕುರಿತು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ಪರಿಚಯಾತ್ಮಕ ತರಬೇತಿಯನ್ನು ಡಿಸೆಂಬರ್ 29 ರಂದು ಗದಗ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ತರಬೇತಿಯಲ್ಲಿ ಹಾಜರಾಗುವ ಅಧಿಕಾರಿ/ ಸಿಬ್ಬಂದಿಗಳಿಗೆ ಊಟ, ಚಹಾ ಮತ್ತು ಅಲ್ಲೋಪಹಾರ ಪೂರೈಕೆಗಾಗಿ ಮೊಹರು ಮಾಡಿದ ಲಕೋಟೆಯಲ್ಲಿ ಸ್ಪರ್ಧಾತ್ಮಕ ದರಪಟ್ಟಿಗಳನ್ನು ಆಹ್ವಾನಿಸಲಾಗಿದೆ. ದರಪಟ್ಟಿಗಳನ್ನು ಸಲ್ಲಿಸಲು ಡಿಸೆಂಬರ್ 27 ರ ಅಪರಾಹ್ನ 3.30 ಗಂಟೆಯೊಳಗೆ ಕಚೇರಿ ಸಮಯದಲ್ಲಿ ಸಲ್ಲಿಸಬಹುದಾಗಿದೆ. ಆಸಕ್ತ ಪೂರೈಕೆದಾರರಿಂದ ಸ್ವೀಕೃತವಾದ ದರಪಟ್ಟಿಗಳನ್ನು ಡಿಸೆಂಬರ್ 27 ರಂದು ಅಪರಾಹ್ನ 3.35 ಗಂಟೆಗೆ ತೆರೆಯಲಾಗುವುದು. ಹೆಚ್ಚಿನ ಮಾಹಿತಿಗಾಗಿ ಗದಗ ಜಿಲ್ಲಾ ತರಬೇತಿ ಸಂಸ್ಥೆ, ಜಿಲ್ಲಾಡಳಿತ ಭವನ ಕೊಠಡಿ ಸಂಖ್ಯೆ 106, ಹುಬ್ಬಳ್ಳಿ ರಸ್ತೆ, ಗದಗ ದೂರವಾಣಿ ಸಂಖ್ಯೆ 08372-220721 ಸಂಪರ್ಕಿಸಬಹುದಾಗಿದೆ.

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ವಿಶ್ವ ಮಣ್ಣಿನ ದಿನಾಚರಣೆ

ಕೊಪ್ಪಳ : ವಿಶ್ವ ಮಣ್ಣಿನ ದಿನಾಚರಣೆ ನಿಮಿತ್ತ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಆತ್ಮ ಯೋಜನೆ, ಕೃಷಿ ಇಲಾಖೆ ಕೊಪ್ಪಳ ಮತ್ತು ಕೃಷಿಕ ಸಮಾಜ ಸಹಯೋಗದೊಂದಿಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದಲ್ಲಿ ಮಣ್ಣು ಮತ್ತು ನೀರು ನಿರ್ವಹಣೆ ಕುರಿತು ಡಿಸೆಂಬರ್ 05 ರಂದು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಂಗಳೂರಿನ ಅಯೋಧ್ಯೆ ಕ್ರಾಪ್ ಅಕಾಡೆಮಿಯ ಸಂಸ್ಥಾಪಕರಾದ ಡಾ. ಎಂ.ಬಿ.ಪಾಟೀಲ ರವರು ಮಾತನಾಡಿ, ಮಣ್ಣು ಕೃಷಿಯಲ್ಲಿ ಅತ್ಯಂತ ಪ್ರಮುಖ ಪರಿಕರವಾಗಿದೆ. ಉತ್ತಮ ಮಣ್ಣು ಯಾವುದೇ ರೈತ ಉತ್ತಮ ಕೃಷಿ ಮಾಡುತ್ತಾನೆಂದು ತಿಳಿಸುತ್ತದೆ. ಕೃಷಿಯಲ್ಲಿ ಲೆಕ್ಕ ಬರೆಯುವುದು ಅತ್ಯಂತ ಮುಖ್ಯವಾಗಿದ್ದು, ಸರಿಯಾಗಿ ಲೆಕ್ಕ ಇಡುವ ರೈತನು ಮಾತ್ರ ಉದ್ಯಮಿಯಾಗಲು ಸಾಧ್ಯ. ರೈತರು ಇಂದು ಕೃಷಿ ಉದ್ಯಮಿ ಆದಾಗ ಮಾತ್ರ ಕೃಷಿಯಲ್ಲಿ ಲಾಭ ಮಾಡಿಕೊಳ್ಳಬಹುದೆಂದು ಹೇಳಿದರು.

ಕೃಷಿ ಇಲಾಖೆ ಉಪನಿರ್ದೇಶಕರಾದ ಸಹದೇವ ಅವರು ಮತನಾಡಿ, ಭೂಮಿತಾಯಿ ಅಂದರೆ ನಮ್ಮ (ರೈತರ) ತಾಯಿ, ಅವಳು ಇಂದು ತೀವ್ರತರದ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ಅನೇಕ ವರ್ಷಗಳ ಅತಿಯಾದ, ಆವೈಜ್ಞಾನಿಕ ರಾಸಾಯನಿಕ ಬಳಕೆಯಿಂದಾಗಿ ನಮ್ಮ ಜಲ, ನೆಲ ಸಂಪೂರ್ಣ ಕಲುಷಿತಗೊಂಡಿದೆ. ಮತ್ತೊಮ್ಮೆ ಉತ್ತಮ ಆರೋಗ್ಯವಂತ ಮಣ್ಣು, ನೀರು ಪಡೆಯಲು ನಾವು ಅನಿವಾರ್ಯವಾಗಿ ಸಾವಯವ ಪದ್ಧತಿ ಅಳವಡಿಸಿಕೊಳ್ಳಲೇಬೇಕಾಗಿದೆ. ಮೊದಲೆಲ್ಲ ಗೊಬ್ಬರವನ್ನು ಹಾಕಿ ಎನ್ನುತ್ತಿದ್ದ ನಾವೇ ಇಂದು ಉತ್ತಮ ಪರಿಸರ ನಿರ್ಮಾಣಕ್ಕಾಗಿ ಸಾವಯವ ಪದ್ಧತಿ ಅಳವಡಿಸಿಕೊಳ್ಳಲು ರೈತರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಅರಣ್ಯಾಧಿಕಾರಿ ಡಾ. ಚಂದ್ರಣ್ಣ ಮಾತನಾಡಿ ಹೆಚ್ಚು, ಹೆಚ್ಚು ಅರಣ್ಯ ಗಿಡಗಳನ್ನು ನೆಡುವುದರ ಮೂಲಕ, ಸಾಮಾಜಿಕ ಅರಣೀಕರಣ ಅಳವಡಿಸಿಕೊಳ್ಳುವುದರ ಮೂಲಕ ಮತ್ತು ಬದುವಿನಲ್ಲಿ ಗಿಡಗಳನ್ನು ನೆಡುವುದರ ಮೂಲಕ ಮಣ್ಣು ಕೊಚ್ಚಿ ಹೋಗುವುದನ್ನು ತಡೆಗಟ್ಟಬಹುದಲ್ಲದೇ, ಉದುರಿದ ಎಲೆಗಳಿಂದಾಗಿ ಸಾವಯವ ಗೊಬ್ಬರ ಉಂಟಾಗಿ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದೆಂದು ಮಾಹಿತಿ ನೀಡಿದರು.

ವಿದ್ಯಾರ್ಥಿ ವೇತನ : ಅವಧಿ ವಿಸ್ತರಣೆ

ವಿಜಯಪುರ : 2023-24ನೇ ಸಾಲಿನಲ್ಲಿ 1ರಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ ಮೂಲಕ ಆನೈನನಲ್ಲಿ ಅರ್ಜಿ ಸಲ್ಲಿಸುವ ಕಡೆಯ ದಿನಾಂಕ 20-12-2023ರವರೆಗೆ ವಿಸ್ತರಿಸಲಾಗಿದೆ ಎಂದು ವಿಜಯಪುರದ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

https//dom.Karnataka.gov.in ವೀಕ್ಷಿಸಬಹುದಾಗಿದ್ದು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸುವಂತೆ ಅವರು ಪ್ರಕಟಣೆ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *