Breaking
Fri. Dec 20th, 2024

ಬ್ಯಾಟರಿ ಚಾಲಿತ ವೀಲ್ ಚೇರ್ ಯೋಜನೆಯಡಿ ಅರ್ಜಿ ಆಹ್ವಾನ, wheel chair

Spread the love

2023-24 ನೇ ಸಾಲಿನ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಫಲಾನುಭವಿ ಆಧಾರಿತ ಯೋಜನೆಯಾದ ಬ್ಯಾಟರಿ ಚಾಲಿತ ವೀಲ್ ಚೇರ್ ಯೋಜನೆಗೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಲಕರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ. ನಿಗಧಿತ ಅರ್ಜಿ ನಮೂನೆಯೊಂದಿಗೆ ಜಿಲ್ಲೆಯ ಆಯಾ ತಾಲ್ಲೂಕಿನ ಗ್ರಾಮೀಣ ಮಟ್ಟದಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಹಾಗೂ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮಟ್ಟದಲ್ಲಿ ನಗರ ಪುನರ್ವಸತಿ ಕಾರ್ಯಕರ್ತರನ್ನು ಸಲ್ಲಿಸಬೇಕು. ಇಲ್ಲವಾದಲ್ಲಿ ತಮ್ಮ ಅರ್ಜಿಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ತಿರಸ್ಕರಿಸಲಾಗುವುದು.

ಅರ್ಜಿಗೆ ಲಗತ್ತಿಸಬೇಕಾದ ದಾಖಲಾತಿಗಳು:

ನಿಗಧಿತ ಅರ್ಜಿ ನಮೂನೆ. & ಭಾವಚಿತ್ರ-1, ಕರ್ನಾಟಕದಲ್ಲಿ ಕನಿಷ್ಠ 10 ವರ್ಷಗಳು ವಾಸವಿರುವ ಬಗ್ಗೆ ತಹಶೀಲ್ದಾರರಿಂದ ವಾಸಸ್ಥಳ ಪ್ರಮಾಣ ಪತ್ರ ಲಗತ್ತಿಸಬೇಕು. ಕುಟುಂಬದ ವಾರ್ಷಿಕ ವರಮಾನ 2 ಲಕ್ಕಕ್ಕಿಂತ ಕಡಿಮೆ ಇರುವ ಕುಟುಂಬಗಳಲ್ಲಿರುವ ವಿಕಲಚೇತನರು ಅರ್ಜಿ ಸಲ್ಲಿಸಬಹುದು. (ತಹಶೀಲ್ದಾರರಿಂದ ಪಡೆದ ಚಾಲ್ತಿ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ), ವಿಕಲಚೇತನರ ಅಧಿನಿಯಮದಡಿಯಲ್ಲಿ ಸೂಚಿಸಿರುವ ಹಾಗೂ ವೈದ್ಯಕೀಯ ಪ್ರಾಧಿಕಾರದಿಂದ ನೀಡಿರುವ ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿಯೊಂದಿಗೆ ದೃಢೀಕೃತ ವೈದ್ಯಕೀಯ ಪ್ರಮಾಣ ಪತ್ರ (ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ) ಸಲ್ಲಿಸಬೇಕು.

ಮಾಡಿದ್ದಲ್ಲಿ ಕಂಡು ಬಂದಲ್ಲಿ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಈ ಸೌಲಭ್ಯ ಪಡೆಯುವ ದೈಹಿಕ ವಿಕಲಚೇತನರು ಶೇ.75%ರಷ್ಟು ಮತ್ತು ಅದಕ್ಕಿಂತ ಹೆಚ್ಚಿನ ದೈಹಿಕ ವಿಕಲಚೇತನರಾಗಿದ್ದು, ಯಂತ್ರಚಾಲಿತ ದ್ವಿಚಕ್ರವಾಹನವನ್ನು ಚಾಲನೆ ಮಾಡಲು ಸಾಮಥ್ಯ ಹೊಂದಿರದ ಹಾಗೂ ಕನಿಷ್ಠ ಒಂದು ಕೈ ಒಂದು ಕಣ್ಣು ಸ್ವಾಧೀನದಲ್ಲಿದ್ದು, ಹಾಗೂ ಬ್ಯಾಟರಿಚಾಲಿತ ಚೇರ್ ಚಲಾಯಿಸಲು ಇತರೇ ಎಲ್ಲಾ ರೀತಿಯಲ್ಲಿ ಸದೃಢವಾಗಿರುವ ವಿಕಲಚೇತನರಾಗಿರಬೇಕು. ವಿಶೇಷ ಸೂಚನೆ :- ಈ ಮೇಲಿನ ಷರತ್ತುಗಳನ್ವಯ ಅಥವಾ ದಾಖಲಾತಿಗಳು ಲಗತ್ತಿಸದೇ ಇರುವ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ಇಲ್ಲದೇ ತಿರಷ್ಕರಿಸಲಾಗುವದು ಎಂದು ಜಿಲ್ಲಾ ಅಂಗವಿಕರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 10 ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ದಿ ನಿಗಮ, ಬೆಂಗಳೂರು ಮತ್ತು ಕರ್ನಾಟಕ ಉದ್ಯಮಶಿಲತಾಭಿವೃದ್ಧಿ ಕೇಂದ್ರ (ಸಿಡಾಕ್), ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಸ್ವಯಂ ಉದ್ಯಮಗಳನ್ನು ಪ್ರಾರಂಭಿಸಲು ಆಸಕ್ತರಿರುವ ರಾಯಚೂರು ಜಿಲ್ಲೆಯ ಎಲ್ಲಾ ವರ್ಗದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ರಾಯಚೂರಿನಲ್ಲಿ 10 ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮವನ್ನು ಜನವರಿ ನಾಲ್ಕನೇ ವಾರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಿಡಾನ ಜಂಟಿ ನಿರ್ದೇಶಕ ಜಿ.ಯು ಹುಡೇದ್ ಅವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸ್ವಯಂ ಉದ್ಯಮಗಳ ಬಗ್ಗೆ ಮಾಹಿತಿ, ಉದ್ಯಮಶೀಲತೆ, ಯಶಸ್ವಿ ಉದ್ಯಮಶೀಲರ ಗುಣಲಕ್ಷಣಗಳು, ನಾಯಕತ್ವದ ಗುಣಲಕ್ಷಣಗಳು, ಉದ್ಯಮವನ್ನು ಆಯ್ಕೆ ಮಾಡುವ ವಿಧಾನ, ವ್ಯಾಪಾರೋದ್ಯಮಗಳ ಅವಕಾಶಗಳು, ಉದ್ಯಮಗಳನ್ನು ಪ್ರಾರಂಭಿಸುವ ಹಂತಗಳು, ಸ್ವಯಂ ಉದ್ಯೋಗಕ್ಕೆ ಇರುವ ಸರ್ಕಾರದ ಯೋಜನೆಗಳು, ಬ್ಯಾಂಕ್ ವ್ಯವಹಾರ ಮಾಡುವ ಬಗ್ಗೆ, ಸಾಲ ಮತ್ತು ಹಣಕಾಸು ಮತ್ತು ಹಣಕಾಸೇತರ ಸೌಲಭ್ಯಗಳ ಬಗ್ಗೆ, ಲೆಕ್ಕ ಪತ್ರ ನಿರ್ವಹಣೆ, ಯೋಜನಾ ವರದಿ ತಯಾರಿಕೆ, ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವಲ್ಲಿ ಸಹಾಯ ನೀಡುವದು ಹಾಗೂ ಈಗಾಗಲೇ ಸಿಡಾಕ್ ಮುಖಾಂತರ ತರಬೇತಿ ಪಡೆದು ಉದ್ಯಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವ ಉದ್ಯಮಶೀಲರ ಅನುಭವ ಹಂಚಿಕೆ ಮತ್ತು ಸಂಬಂಧಪಟ್ಟ ಇತ್ಯಾದಿ ವಿಷಯಗಳ ಬಗ್ಗೆ ಅನುಭವಿ ಅತಿಥಿ ಬೋಧಕರಿಂದ ಉಪನ್ಯಾಸ / ಮಾಹಿತಿ ನೀಡಲಾಗುವುದು.

ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರಿರುವ 20 ರಿಂದ 45 ವರ್ಷದೊಳಗಿನ, ಕನಿಷ್ಠ (SSLC) ಪಾಸ್/ಫೇಲ್ ಆದ ಎಲ್ಲಾ ವರ್ಗದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಜಂಟಿ ನಿರ್ದೇಶಕರು, ಸಿಡಾಕ್, ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ರಾಘವೇಂದ್ರ ಕಾಲೋನಿ, ನಂದೀಶ್ವರ ಗುಡಿ ಹತ್ತಿರ, ಐ. ಬಿ. ರೋಡ್, ರಾಯಚೂರು-584101 ಇಲ್ಲಿಗೆ ಜ.20ರೊಳಗಾಗಿ ಭೇಟಿ ನೀಡುವುದು ಅಥವಾ ಮೋಬೈಲ್ ಸಂಖ್ಯೆ 8073684608 / 9986332736 ಇಲ್ಲಿಗೆ ಕರೆ ಮಾಡಿ ತಮ್ಮ ಹೆಸರನ್ನುನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಸಿಡಾನ ಜಂಟಿ ನಿರ್ದೇಶಕ ಜಿ.ಯು. ಹಡೇದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೆಕ್ಕೆಜೋಳದಲ್ಲಿ ಅರಳಿದ ಶ್ರೀರಾಮ ಮಂದಿರ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾದಂತೆ, ಕರ್ನಾಟಕದಲ್ಲೂ ಕೂಡ ರಾಮ ಮಂದಿರ ನಿರ್ಮಾಣವಾಗಿದೆ. ಹೌದು, ಅದೆಲ್ಲಿ ಅಂತೀರಾ, ಕೊಪ್ಪಳದ ಓಜನಹಳ್ಳಿಯಲ್ಲಿ ರೈತ ತಾತನಗೌಡ ಎನ್ನುವವರು ತಮ್ಮ ಹೊಲದಲ್ಲೇ ಮೆಕ್ಕೆಜೋಳದಲ್ಲಿ ರಾಮಮಂದಿರ ಮಾದರಿ ನಿರ್ಮಾಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಈ ರಾಮಮಂದಿರ ಮಾದರಿ ನಿರ್ಮಾಣಕ್ಕೆ ಸರಿ ಸುಮಾರು 5 ಸಾವಿರ ಮೆಕ್ಕೆಜೋಳದ ತೆನೆ ಬಳಸಲಾಗಿದೆ. ಒಂದು ವಾರದಿಂದ 12 ಜನರು ಸೇರಿ ಮಂದಿರ ಮಾದರಿ ನಿರ್ಮಿಸಿದ್ದಾರೆ. ಈ ಮಂದಿರ ನಿರ್ಮಾಣ ಮಾಡಲು ಖಾಸಗಿ ಸೀಡ್ಸ್ ಕಂಪನಿ ರೈತರಿಗೆ ಸಹಕಾರ ನೀಡಿದ್ದು, ರಾಮಮಂದಿರ ಸಿದ್ಧವಾಗಿದೆ. ಇನ್ನು ಮೆಕ್ಕೆಜೋಳದಿಂದ ಕಟ್ಟಲಾದ ರಾಮ ಮಂದಿರವನ್ನು ನೋಡಲು ಸಾಕಷ್ಟು ಜನ ಬರುತ್ತಿದ್ದಾರೆ. ಈ ರಾಮ ಮಂದಿರದ ಮಾದರಿಯನ್ನ ಜನವರಿ 22ರ ವರೆಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ.

ಮಾರ್ಚ್ 19ರಿಂದ 27ರವರೆಗೆ ಶಿರಸಿ ಮಾರಿಕಾಂಬಾ ಜಾತ್ರೆ ಶಿರಸಿ(ಉತ್ತರ ಕನ್ನಡ) :

ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ ಖ್ಯಾತಿಯ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಮಾರ್ಚ್ 19ರಿಂದ 27 ರವರೆಗೆ ನಡೆಯಲಿದೆ. ಮಾರಿಕಾಂಬಾ ದೇವಾಲಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮುಹೂರ್ತ ನಿಗದಿಗೊಳಿಸಿ ಶರಣ್ ಆಚಾರ್ಯ ಅವರು ಈ ಮಾಹಿತಿ ನೀಡಿದರು. ವರ್ಷ ಬಿಟ್ಟು ವರ್ಷ ನಡೆಯುವ ಜಾತ್ರೆಯ ಪೂರ್ವ ಉತ್ತರಾಂಗದ ಮೊದಲನೆಯ ಕಾರ್ಯಕ್ರಮ ಜ.31 ರಿಂದ ಆರಂಭವಾಗಲಿದೆ. ರಥಕ್ಕೆ ಕಲಶ ಪ್ರತಿಷ್ಠೆ, ಕಲ್ಯಾಣ ಪ್ರತಿಷ್ಠೆ ಮಾ.19 ರಂದು, 20ರಂದು ಬೆಳಗ್ಗೆ ದೇವಿಯ ರಥೋತ್ಸವ, 21 ರಿಂದ ಜಾತ್ರಾ ಗದ್ದುಗೆಯಲ್ಲಿ ಸೇವಾ ಸ್ವೀಕಾರ 27 ರಂದು ಜಾತ್ರಾ ವಿಧಿ ವಿಧಾನಗಳು ಮುಗಿಯಲಿವೆ. ಯುಗಾದಿಯಂದು ದೇವಾಲಯದಲ್ಲಿ ಮಾರಿಕಾಂಬಾ ದೇವಿ ಪುನರ್ ಪ್ರತಿಷ್ಠಾಪನೆಯಾಗಲಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

Related Post

Leave a Reply

Your email address will not be published. Required fields are marked *