ಆತ್ಮೀಯ ರೈತ ಬಾಂಧವರು, ನಿಮಗೆ ತಿಳಿದಿರಬಹುದು ಕೋಳಿ ಸಾಕಾಣಿಕೆಯಿಂದ ಅತಿ ಹೆಚ್ಚು ಲಾಭವನ್ನು ಗಳಿಸಿ ಮತ್ತು ಅವುಗಳ ಉತ್ಪಾದನೆಯಿಂದ ಹಲವಾರು ರೀತಿಯ ಲಾಭಗಳನ್ನು ನೀವು ಪಡೆಯಬಹುದು. ಅದಕ್ಕೆಂದು ಇಲ್ಲಿದೆ ಒಂದು ಸುವರ್ಣ ಅವಕಾಶ. ಅದೇನೆಂದರೆ ಕೋಳಿ ಸಾಕಾಣಿಕೆ ಮಾಡಲು ಉಚಿತ ತರಬೇತಿಯನ್ನು ನೀಡಲು ಇಲ್ಲಿದೆ ಒಂದು ಅವಕಾಶ. ಉಚಿತ ಊಟ ಮತ್ತು ಉಚಿತ ವಸತಿ ನೀಡಿ ಹತ್ತು ದಿನಗಳ ಕಾಲ ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿಯನ್ನು ಕರೆದಿದ್ದಾರೆ.
ಜನರೇ Poultry farming training ರುಡ್‍ಸೆಟ್ ಸಂಸ್ಥೆ ಜನರಿಗಾಗಿ ಕೋಳಿ ಸಾಕಾಣಿಕೆ ಮಾಡಲು ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ರಾಘವೇಂದ್ರ ಕಾಲೋನಿ, ವಿಜಯಪುರ ಊರಿನಲ್ಲಿ ತರಬೇತಿಯನ್ನು ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೆ ನಮ್ಮ ಕೆನರಾ ಬ್ಯಾಂಕ್ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯಲ್ಲಿ 26 ಜೂನ್ ನಿಂದ ಜುಲೈ 5ರ ವರೆಗೆ ಒಟ್ಟು 10 ದಿನಗಳ ಕಾಲ ಕೋಳಿ ಸಾಕಾಣಿಕೆ ಉದ್ಯೋಗ ಮಾಡುವವರಿಗೆ ಇಲ್ಲಿದೆ ತರಬೇತಿ ಕೇಂದ್ರ.
ತರಬೇತಿಯಲ್ಲಿ ಏನೇನು ಕಲಿಸುತ್ತಾರೆ?
ಈ ತರಬೇತಿಯಲ್ಲಿ ಕೋಳಿಗಳಿಗೆ ಹಿತ್ತಲು ಮತ್ತು ಅವುಗಳಲ್ಲಿ ಕಂಡುಬರುವ ರೋಗಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತಾರೆ. ಅಷ್ಟೇ ಅಲ್ಲದೆ ಕೋಳಿ ಮರಿಗಳ ಲಾಲನೆ ಪಾಲನೆ ಅವುಗಳ ಕೊಟ್ಟಿಗೆ ನಿರ್ಮಾಣ ಸಲಕರಣೆಗಳು ಅವುಗಳಿಗೆ ನೀಡುವಂತಹ ಆಹಾರ ಮತ್ತು ಹೇಗೆ ಮಾರಾಟ ಮಾಡಬೇಕು ಮತ್ತು ಅವುಗಳ ಉದ್ಯಮಶೀಲತೆ ಬಗ್ಗೆ ಎಲ್ಲವನ್ನು ತಿಳಿಸಿಕೊಡಲು ಈ ಸಂಸ್ಥೆಯು ಮುಂದಾಗಿದೆ.
ಈ ಯೋಜನೆಗೆ ಅರ್ಜಿ ಯಾರು ಸಲ್ಲಿಸಬಹುದು?
ಈ ತರಬೇತಿಗೆ ಅರ್ಜಿ ನೀಡಲು ಅರ್ಜಿದಾರರು 19 ವಯಸ್ಸಿನಿಂದ 45 ವಯಸ್ಸಿನವರೆಗೆ ಇರಬೇಕು ಮತ್ತು ಅವರ ಬಲಿ ಬಿಪಿಎಲ್ ಕಾರ್ಡ್ ಹೊಂದಿರಬೇಕು. ಈ ಜನರು ಸಂಪೂರ್ಣ ಊಟ ಮತ್ತು ವಸತಿಯೊಂದಿಗೆ ಈ ಸಂಸ್ಥೆಯಲ್ಲಿ ತರಬೇತಿಯನ್ನು ತೆಗೆದುಕೊಳ್ಳಬಹುದು. ನಾವು ಕೆಳಗೆ ತಿಳಿಸಿರುವ ವಿಳಾಸಕ್ಕೆ ಭೇಟಿಕೊಟ್ಟು ನಿಮ್ಮ ತರಬೇತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು. ಇದು ವಿಜಯಪುರ ಜಿಲ್ಲೆಯಲ್ಲಿ ಕಂಡುಬರುತ್ತಿದ್ದು ‘ರುಡ್‍ಸೆಟ್ ಸಂಸ್ಥೆ, ರಾಘವೇಂದ್ರ ಕಾಲೋನಿ, ಜಮಖಂಡಿ- ಬಾಗಲಕೋಟ ಬೈಪಾಸ್ ರಸ್ತೆ, ವಿಜಯಪುರ’. ಹೆಚ್ಚಿನ ಮಾಹಿತಿಗಾಗಿ ನಾವು ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ. ನೀವು ಬೆಳಗ್ಗೆ 10ರಿಂದ ಸಾಯಂಕಾಲರವರೆಗೆ ಈ ಸಂಖ್ಯೆಗೆ ಕರೆ ಮಾಡಿ ಮತ್ತು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಮೊಬೈಲ್ ಸಂಖ್ಯೆ :- 9480078829, 7483987824, 9739511914, 9731065632, 9845490323
ಗೃಹ ಲಕ್ಷ್ಮೀ ಯೋಜನೆ ಜಾರಿ, 2000 ರೂ. ಜಮಾ ಅರ್ಜಿ ಸಲ್ಲಿಕೆ ಹೇಗೆ?
ಮೋದಿ ಹಣ ಪಡೆಯಲು ಜೂನ್ 30 ರ ಒಳಗೆ E-KYC ಮಾಡಿಸಲೇಬೇಕು? E-KYC ಮಾಡಿಸಿ 14ನೆ ಕಂತಿನ ಹಣ ಪಡೆಯಿರಿ
ಕೇವಲ 5 ನಿಮಿಷದಲ್ಲಿ ನಿಮ್ಮ ಮೊಬೈಲ್ ನಿಂದ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿ, 200 ಯೂನಿಟ್ ಉಚಿತ ವಿದ್ಯುತ್ ಪಡೆಯಿರಿ
ರೈತರಿಗೆ ತೆಂಗಿನ ಸಸಿಗಳನ್ನು ಕಡಿಮೆ ಬೆಲೆಯಲ್ಲಿ ಸಹಾಯಧನವಾಗಿ ನೀಡುತ್ತಿದ್ದಾರೆ, ಕೂಡಲೇ ಖರೀದಿಸಿ