Breaking
Tue. Dec 17th, 2024

ಉಪಕರಣ ಪಡೆಯಲು ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ, subsidy

Spread the love

ಜಿಲ್ಲಾ ಪಂಚಾಯತಿಯ ಗ್ರಾಮೀಣ ಮತ್ತು ಚಿಕ್ಕ ಉದ್ಯಮ ವಿಭಾಗದ ವತಿಯಿಂದ ಪ್ರಸಕ್ತ 2023 24ನೇ ಸಾಲಿಗೆ ಉಚಿತ ಉಪಕರಣಗಳನ್ನು ಪಡೆಯಲು ಅರ್ಹ ಗ್ರಾಮೀಣ ಪ್ರದೇಶದ ಬಡಗಿತನ, ಗೌಂಡಿ, ಕೌರಿಕ ಮತ್ತು ಧೋಬಿ ವೃತ್ತಿಯ ಕುಶಲಕರ್ಮಿಕಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ನಮೂನೆಯ ಮೂಲಕ ಡೌನ್‌ಲೋಡ್ ಮಾಡಿಕೊಂಡು ಅಥವಾ ಕಚೇರಿಗೆ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ದಿನಾಂಕ : 01-02-2024ರೊಳಗೆ ಉಪನಿರ್ದೇಶಕರ ಕಚೇರಿ, ಗ್ರಾಮೀಣ ಮತ್ತು ಚಿಕ್ಕ ಉದ್ಯಮ ವಿಭಾಗ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಸ್ಟೇಶನ್ ಬ್ಯಾಕ್ ರಸ್ತೆ, ಶಿಕಾರಖಾನೆ ವಿಜಯಪುರ ವಿಳಾಸಕ್ಕೆ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂ:08352- 254851, ಕೈಗಾರಿಕಾ ವಿಸ್ತರಣಾಧಿಕಾರಿಗಳು ವಿಜಯಪುರ, ಸಿಂದಗಿ, ಇಂಡಿ ಮೊ: 9972162222 ಮತ್ತು ಮುದ್ದೇಬಿಹಾಳ- 9945779798 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನಿಲ ಸಂಪರ್ಕಕ್ಕೆ ಇ-ಕೆವೈಸಿ ಮಾಡಿಸಲು ಗಡುವು ಇಲ್ಲ

ಬಾಗಲಕೋಟೆ : ಅಡಿಗೆ ಅನಿಲ ಸಂಪರ್ಕ ಹೊಂದಿರುವವರು ಡಿಸೆಂಬರ 31 ರೊಳಗಾಗಿ ಗ್ಯಾ ಏಜೆನ್ಸಿಗಳಿಗೆ ಹೋಗಿ ಇ-ಕೆವೈಸಿ ಮಾಡಿಸಿದವರಿಗೆ ಮಾತ್ರ ಸಬ್ಸಿಡಿ ಸಿಗುತ್ತದೆ ಮತ್ತು ಸಿಲಿಂಡ‌ರ್ ಸರಬರಾಜು ಮಾಡಲಾಗುತ್ತದೆ ಎನ್ನುವ ವದಂತಿ ಮತ್ತು ಇ-ಕೆವೈಸಿ ಕಾರ್ಯಕ್ಕೆ ಹಣ ನೀಡಬೇಕೆಂಬ ವದಂತಿ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿದೆ. ಇದು ವದಂತಿ ಆಗಿದ್ದು, ಅಡುಗೆ ಅನಿಲ ಗ್ರಾಹಕರು ತಮ್ಮ ಏಜೆನ್ಸಿಗೆ ತೆರಳಿ ಇ-ಕೆವೈಸಿ ನೀಡಬಹುದಾಗಿದೆ. ಅದು ಸಹ ಉಚಿತವಾಗಿರುತ್ತದೆ. ಡೆಪ್ಯೂಟಿ ಸೆಕ್ರೇಟರಿ ಭಾರತ ಸರಕಾರ ಪತ್ರದಡಿ ಇ-ಕೆವೈಸಿ ಕಾರ್ಯವನ್ನು ಕೂಡಲೇ ಮಾಡುವಂತೆ ನಿರ್ದೇಶಿಸಿದೆ. ಆದರೆ ಕೇಂದ್ರ ಸರಕಾರವು ಯಾವುದೇ ದಿನಾಂಕವನ್ನು ನಿಗಧಿಪಡಿಸಿರುವುದಿಲ್ಲ. ಮೊದಲ ಆದ್ಯತೆಯಾಗಿ ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದಿರುವವರು ಇ-ಕೆವೈಸಿ ನೀಡಬೇಕಿದೆ. ಉಳಿದಂತೆ ಗ್ಯಾಸ್‌ ಸಂಪರ್ಕ ಹೊಂದಿರುವವರು ಆಧಾರ ಸಂಖ್ಯೆಯ ದಾಖಲೆಯೊಂದಿಗೆ ತಮ್ಮ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಈ ಕಾರ್ಯದ ಸದುಪಯೋಗ ಪಡೆದುಕೊಳ್ಳುವಂತೆ ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೃಹಬಳಕೆ ಅನಿಲ ಸಿಲಿಂಡ‌ರ್: ಪಂಚವಾರ್ಷಿಕ ತಪಾಸಣೆ ಕಡ್ಡಾಯ

ಭಾರತ್ ಗ್ಯಾಸ್ ಏಜೆನ್ಸಿ, ಧಾರವಾಡ ಇವರ ನಿಯಮಾವಳಿ ಪ್ರಕಾರ ಗೃಹ ಬಳಕೆ ಅನಿಲ ಸಿಲಿಂಡರ್‌ಗಳನ್ನು ಪ್ರತಿ ಐದು ವರ್ಷಗಳಿಗೊಮ್ಮೆ ತಪಾಸಣೆ ಮಾಡುವುದು ಕಡ್ಡಾಯವಾಗಿದೆ.

ಅದರಂತೆ ಕೆ.ಎಫ್.ಸಿ.ಎಸ್.ಸಿ ಭಾರತ್ ಗ್ಯಾಸ್ ಏಜೆನ್ಸಿ ಕೊಪ್ಪಳ ವ್ಯಾಪ್ತಿಯ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಎಲ್ಲ ಗೃಹ ಬಳಕೆ ಅನಿಲ ಸಿಲಿಂಡ‌ರ್ ಗ್ರಾಹಕರ ಮನೆಗಳಿಗೆ ರೂ.236/- ಗಳ ತಪಾಸಣಾ ಶುಲ್ಕದೊಂದಿಗೆ ಸಿಲಿಂಡ‌ರ್ ಸಂಪರ್ಕವನ್ನು ತಪಾಸಣೆ ಮಾಡಬೇಕಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ದೂ.ಸಂ:

08539-222770/222779/221340 ಸಂಪರ್ಕಿಸಬಹುದು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಬ್ಬು ಬೆಳೆಯುವ ರೈತರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿರುವ ವೇಬ್ರಿಡ್ಜ್ಗಳಲ್ಲಿ ಉಚಿತ ತೂಕ ವ್ಯವಸ್ಥೆ

ಕೃಷಿ ಉತ್ಪನ್ನ ಮಾರುಕಟ್ಟೆಗಳು ರೈತರು ಮಾರುಕಟ್ಟೆಗಳಿಗೆ ತರುವ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ಪಡೆಯುವಂತೆ ಕ್ರಮವಹಿಸುವುದು ಇಲಾಖೆಯ ಪ್ರಮುಖ ಧೈಯೋದೇಶಗಳಲ್ಲೊಂದಾಗಿದೆ. ರೈತರು ಮಾರುಕಟ್ಟೆಗಳಿಗೆ ತರುವ ಕೃಷಿ ಉತ್ಪನ್ನಗಳಿಗೆ ನಿಖರವಾದ ತೂಕ ಮತ್ತು ಮೌಲ್ಯ ನಿರ್ಧರಣೆಯಲ್ಲಿ ಮಾರುಕಟ್ಟೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು, ಸಮಿತಿಯಿಂದ ಹಾಗೂ ಖಾಸಗಿ ಏಜೆನ್ಸಿ / ವ್ಯಕ್ತಿಗಳಿಗೆ ಲೀವ್ & ಲೈಸೆನ್ಸ್ ಮೇಲೆ ವೇ ಬ್ರಿಡ್ಜ್ ಹಂಚಿಕೆ ಮಾಡಿ ಮಾರುಕಟ್ಟೆಗೆ ಬರುವ ರೈತರ ಉತ್ಪನ್ನಗಳಿಗೆ ನಿಖರವಾದ ತೂಕದ ಸೌಲಭ್ಯ ಒದಗಿಸುವಲ್ಲಿ ಕಾರ್ಯನಿರ್ವಹಿಸುತ್ತಿವೆ.

ಕೃಷಿ ಉತ್ಪನ್ನಗಳಲ್ಲಿ ಕಬ್ಬು ಬೆಳೆ ಕೂಡ ಪ್ರಮುಖ ಉತ್ಪನ್ನವಾಗಿದ್ದು, ಇತ್ತೀಚಿನ ದಿನಗಳಲ್ಲಿ ಕಬ್ಬು ಬೆಳೆಯುವ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದರಲ್ಲಿ ತೂಕದ ವ್ಯತ್ಯಾಸದಿಂದ ಉತ್ತಮ ಬೆಲೆ ದೊರೆಯದೆ ಇರುವುದೂ ಕೂಡ ಒಂದು ಕಾರಣವಾಗಿರುತ್ತದೆ. ಡಿಸೆಂಬರ್ 21 ರಂದು ಇಲಾಖೆಯ ಕೇಂದ್ರ ಕಚೇರಿಯಲ್ಲಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸಚಿವರು ಕಬ್ಬು ಬೆಳೆಯುವ ರೈತರಿಗೆ ಕೃಷಿ ಉತ್ಪನ್ನ ಮಾರುಕಟ್ಟೆಗಳು ಉಚಿತವಾಗಿ ನಿಖರವಾದ ತೂಕದ ಸೌಲಭ್ಯ ಒದಗಿಸಲು ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶಿಸಿದ್ದಾರೆ.

ಈ ಹಿನ್ನೆಲೆ ಕಬ್ಬು ಹಂಗಾಮಿ ಬೆಳೆಯಾಗಿರುವುದರಿಂದ ಹೆಚ್ಚು ಆವಕವಿರುವ ಸಮಯದಲ್ಲಿ ವೇಬ್ರಿಡ್ಜ್ ಗಳನ್ನು ಹೊಂದಿರುವ ಕೃಷಿ ಉತ್ಪನ್ನ ಮಾರುಕಟ್ಟೆಗಳು ಮಾರುಕಟ್ಟೆಗೆ ಬರುವ ಕಬ್ಬು ಬೆಳೆಯುವ ರೈತರಿಗೆ ಉಚಿತವಾಗಿ ತೂಕದ ವ್ಯವಸ್ಥೆ ಒದಗಿಸಲು ಕ್ರಮ ತೆಗೆದುಕೊಳ್ಳುವುದು. ಮಾರುಕಟ್ಟೆಗೆ ಬರುವ ರೈತರ ಹೆಸರು, ಆಧಾ‌ರ್ ಸಂಖ್ಯೆ, ವಾಹನ ಸಂಖ್ಯೆ ಮಾರುಕಟ್ಟೆಗೆ ಬರುವ ಉತ್ಪನ್ನದ ಪ್ರಮಾಣ(ಕಬ್ಬು) ತೂಕದ ಮಾಹಿತಿ ಮತ್ತು ಪಹಣಿಯ

ವಿವರಗಳನ್ನು ಕಡತದಲ್ಲಿ ನಿರ್ವಹಿಸುವುದು. ಸಮಿತಿಗಳ ವೇ ಬ್ರಿಡ್ಜ್‌ಗಳನ್ನು ಖಾಸಗಿ ಏಜೆನ್ಸಿ/ವ್ಯಕ್ತಿಗಳು ನಿರ್ವಹಿಸುತ್ತಿದ್ದಲ್ಲಿ ಸದರಿಯವರಿಂದಲೂ ಕೂಡ ಉಚಿತವಾಗಿ ತೂಕದ ವ್ಯವಸ್ಥೆ ಒದಗಿಸಲು ಕ್ರಮವಹಿಸುವುದು. ಸದರಿಯವರು ನೀಡಿದ ಸೇವೆ ಶುಲ್ಕವನ್ನು ಮಾಸಿಕವಾಗಿ ಸಮಿತಿಗೆ ಭರಿಸುವ ಮೊತ್ತದಲ್ಲಿ ಕಡಿತಗೊಳಿಸುವುದು ಹಾಗೂ ಈ ಸಂಬಂಧ ರೈತರ ಎಲ್ಲಾ ದಾಖಲಾತಿಗಳನ್ನು ಕಡತದಲ್ಲಿ ನಿರ್ವಹಿಸಲು ತಿಳಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Related Post

Leave a Reply

Your email address will not be published. Required fields are marked *