Breaking
Tue. Dec 17th, 2024

ಉಪಕರಣ ಪಡೆಯಲು ಕುಶಲಕರ್ಮಿಗಳಿಂದ ಅರ್ಜಿ ಅಹ್ವಾನ, subsidy available

Spread the love

2023-24 ಸಾಲಿನಲ್ಲಿ ಬಡಗಿತನ, ಗೌಂಡಿ, ಕ್ಷೌರಿಕ ಮತ್ತು ಧೋಬಿ ವೃತ್ತಿಯ ಉಪಕರಣಗಳನ್ನು ಪಡೆಯಯಲು ಅರ್ಹ ಕುಶಲಕರ್ಮಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಜಿಲ್ಲಾ ವಲಯ ಯೋಜನೆಯ 18 ರಿಂದ 55 ವರ್ಷ ಒಳಗಿನ ಅರ್ಹ ಗ್ರಾಮೀಣ ಪ್ರದೇಶದ ಬಡಗಿತನ, ಗೌಂಡಿ, ಮತ್ತು ಧೋಬಿ ವೃತ್ತಿಯ ಕುಶಲಕರ್ಮಿಗಳು ಉಚಿತವಾಗಿ ಉಪಕರಣಗಳನ್ನು ಪಡೆಯಬಹುದಾಗಿದೆ. ಅರ್ಜಿ ನಮೂನೆಯ ಇಲಾಖೆಯ ವೆಬ್‌ಸೈಟ್‌ನಿಂದ ಅಥವಾ ಕಚೇರಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದಾಖಲಾತಿಗಳನ್ನು ಲಗತ್ತಿಸಿ ಫೆ.1ರಂದು ಸಾಯಂಕಾಲ 5 ಗಂಟೆಯೊಳಗೆ ಕಚೇರಿಗೆ ಪೋಸ್ಟ್ ಅಥವಾ ಖುದ್ದಾಗಿ ಸಲ್ಲಿಸಬಹುದಾಗಿದೆ.

ಅರ್ಜಿಯನ್ನು ಸಲ್ಲಿಸಬೇಕಾದ ವಿಳಾಸ: ಉಪನಿರ್ದೇಶಕರ ಕಚೇರಿ ಗ್ರಾಮೀಣ ಮತ್ತು ಚಿಕ್ಕ ಉದ್ಯಮ ವಿಭಾಗ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಸ್ಟೇಶನ್ ಬ್ಯಾಕ್ ರೋಡ, ಶಿಕಾರಖಾನೆ ವಿಜಯಪುರ-586104 ಇಲ್ಲಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08352-254851, ಕೈಗಾರಿಕಾ ವಿಸ್ತರಣಾಧಿಕಾರಿಗಳು ವಿಜಯಪುರ,ಸಿಂದಗಿ,ಇಂಡಿ 9972162222 ಹಾಗೂ ಮುದ್ದೇಬಿಹಾಳ,ಬಾಗೇವಾಡಿ: 9945779798 ಸಂಪರ್ಕಿಸಬಹುದಾಗಿದೆ ಪ್ರಕಟಣೆ ತಿಳಿಸಿದೆ.

ಹರಪ್ಪಹಳ್ಳಿ: ಕಚೇರಿಗೆ ಬಾಡಿಗೆ ಕಟ್ಟಡ ಒದಗಿಸಲು ಅರ್ಜಿ ಆಹ್ವಾನ

ಹೊಸಪೇಟೆ(ವಿಜಯನಗರ) : ಜಿಲ್ಲೆಯ ಹರಪ್ಪಹಳ್ಳಿ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಉತ್ತಮವಾದ ಬಾಡಿಗೆ ಕಟ್ಟಡ ಒದಗಿಸಲು ಆಸಕ್ತ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹರಪ್ಪನಳ್ಳಿ ಪಟ್ಟಣದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಬಾಡಿಗೆ ಕಟ್ಟಡ ಬೇಕಾಗಿದ್ದು, ಕಟ್ಟಡವು ಶೌಚಾಲಯಯುಕ್ತ, ಕಚೇರಿ ಅಧೀಕ್ಷಕರಿಗೆ, ಗಣಕಯಂತ್ರ ವಿಭಾಗಕ್ಕೆ, ದಾಖಲೆಗಳ ನಿರ್ವಹಣೆಗೆ ಹಾಗೂ ಸಾರ್ವಜನಿಕರು ಕೂಡಲು ಪ್ರತ್ಯೇಕ ಕೊಠಡಿ ಸೌಲಭ್ಯ ಹೊಂದಿರಬೇಕು.

ಲೋಕೋಪಯೋಗಿ ಇಲಾಖೆ ನಿಗದಿಪಡಿಸುವ ಬಾಡಿಗೆ ನೀಡಲಾಗುತ್ತದೆ. ಕಟ್ಟಡ ಮಾಲೀಕರು ಪ್ರತಿ ವರ್ಷ ಕಟ್ಟಡ ತೆರಿಗೆ ಪಾವತಿಸಿರಬೇಕು. ಕಟ್ಟಡಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಹೊಂದಿರಬೇಕು. ಬಾಡಿಗೆ ನೀಡಲು ಇಚ್ಚಿಸುವ ಆಸಕ್ತ ಕಟ್ಟಡ ಮಾಲೀಕರು ಮೊಬೈಲ್ ಸಂಖ್ಯೆ 9972451535, 7899465098 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಾಷು ಅವರು ತಿಳಿಸಿದ್ದಾರೆ.

ಅರ್ಜಿ ಆಹ್ವಾನ

ಗದಗ : ಜಿಟಿಟಿಸಿ ನರಗುಂದ ಕೇಂದ್ರದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಉಚಿತ ಕೌಶಲ್ಯ ತರಬೇತಿಗಳನ್ನು ಕೂಡ ಬರುವ ಮಾರ್ಚ್ ತಿಂಗಳಿನಿಂದ ಪ್ರಾರಂಭಿಸಲಾಗುವುದು. 2024- 25 ನೇ ಸಾಲಿನಲ್ಲಿ ಗದಗ ಜಿಲ್ಲೆಯ ಸುಮಾರು 400 ಯುವಕ- ಯುವತಿಯರಿಗೆ ಉಚಿತ ಕೌಶಲ್ಯ ತರಬೇತಿ ನೀಡಿ ಕೈಗಾರಿಕೆಗಳಲ್ಲಿ ಉದ್ಯೋಗ ಕಲ್ಪಿಸಲು ಯೋಜನೆ ರೂಪಿಸಲಾಗಿರುತ್ತದೆ.

ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ’ ಅಡಿ ನರಗುಂದದಲ್ಲಿ ಸಿ.ಎನ್.ಸಿ. ಪೊಗ್ರಾಮಿಂಗ್, ಸಿ.ಎನ್.ಸಿ. ಆಪರೇಟಿಂಗ್, ಕ್ಯಾಡ್-ಕ್ಯಾಮ್, ಎಲೆಕ್ನಿಶಿಯನ್, ಮಶಿನಿಸ್ಟ್ ಮತ್ತು ಡಾಟಾ ಎಂಟ್ರಿ ಆಪರೇಟರ್ ವೃತ್ತಿಗಳಲ್ಲಿ ಉಚಿತ ಕೌಶಲ್ಯ ತರಬೇತಿ ನೀಡಲಾಗುವುದು., ಐಟಿಐ, ಡಿಪ್ಲೊಮಾ, ಬಿ.ಇ ಪಾಸಾದ 16 ರಿಂದ 35 ವಯೋಮಿತಿಯೊಳಗಿನ ಎಲ್ಲ ವರ್ಗದ ಅಭ್ಯರ್ಥಿಗಳು ಈ ತರಬೇತಿಗಳನ್ನು ಪಡೆಯಲು ಅರ್ಹರಿರುತ್ತಾರೆ.

ಜಿಟಿಟಿಸಿ ಈ ಕೌಶಲ್ಯ ತರಬೇತಿಗಳನ್ನು ಪ್ರತಿ ತಿಂಗಳು ಆಯೋಜಿಸಲಿದೆ. ತರಬೇತಿ ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಒದಗಿಸಲಿದೆ. ಆಸಕ್ತರು ಜಿಟಿಟಿಸಿಯ ನರಗುಂದ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನ ಜನೆವರಿ 19 ಆಗಿದ್ದು ಹೆಚ್ಚಿನ ಮಾಹಿತಿಗಾಗಿ ಮೊಬೈಲ್: 7975762499, 9902101010 OFF ಎಂದು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಮಾರುತಿ ಭಜಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಆಹ್ವಾನ

ಗದಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನ ಆರೋಗ್ಯ ಕೇಂದ್ರ ಎಪಿಡಿಮಿಯಾಲಜಿ ವಿಭಾಗ ರಾಷ್ಟ್ರೀಯ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ, ಬೆಂಗಳೂರು (ನಿಮ್ಹಾನ್ಸ್) ಇವರ ಸಹಯೋಗದೊಂದಿಗೆ ಆರಂಭಿಸಲಾಗಿರುವ ಯುವ ಸ್ಪಂದನ ಕೇಂದ್ರದಲ್ಲಿ ಗದಗ ಜಿಲ್ಲೆಗೆ 1 ಯುವ ಸಮಾಲೋಚಕರು, 7 ತಾಲೂಕುಗಳಲ್ಲಿ ಯುವ ಪರಿವರ್ತಕರಾಗಿ ಕಾರ್ಯನಿರ್ವಹಿಸಲಿಚ್ಛಿಸುವ 21 ರಿಂದ 35 ವಯೋಮಿತಿಯೊಳಗಿನ ಯುವಕ/ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ವಯೋಮಿತಿ 21 ರಿಂದ 35 ವರ್ಷದೊಳಗಿದ್ದು ಸಮುದಾಯದಲ್ಲಿ ಕೆಲಸ ಮಾಡಿರುವವರನ್ನು ಆಪೇಕ್ಷಿಸಲಾಗಿದೆ.

ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದು ಅವಶ್ಯವಾಗಿದೆ. ಪರಸ್ಪರ ಬಾಂಧವ್ಯಾಭಿವೃದ್ಧಿಯ ಕೌಶಲ್ಯ, ತರಬೇತಿ ನೀಡುವ ಕೌಶಲ್ಯ, ಸಂವಹನ ಮತ್ತು ಉಲ್ಲೇಖ ಸೇವೆಗಳಿಗೆ ಸಂಸ್ಥೆಗಳ ಜೊತೆ ಸಹಯೋಗ ಏರ್ಪಡಿಸುವ ಕೌಶಲ್ಯ ಇರಬೇಕು. ಸಾರ್ವಜನಿಕ ಮಾನಸಿಕ ಆರೋಗ್ಯ, ಸಂವರ್ಧನ ಸೇವೆಗಳ ಬಗ್ಗೆ ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಹುಮ್ಮಸ್ಸು ಹೊಂದಿರಬೇಕು.

ಗೌರವಧನ ಮತ್ತು ಅವಧಿ ಪ್ರಮಾಣೀಕೃತ ಅಭ್ಯರ್ಥಿಗಳಿಗೆ ತಿಂಗಳಿಗೆ ಗೌರವಧನ ರೂ.6,000/- ಹಾಗೂ ಪ್ರವಾಸ ಭತ್ಯೆ ತಿಂಗಳಿಗೆ (ಗರಿಷ್ಟ ರೂ.1,000/-ಗಳವರೆಗೆ) 6 ತಿಂಗಳ ಕಾಲ ನೀಡಲಾಗುವುದು. ಆಸಕ್ತ ಯುವಕ/ಯುವತಿಯರು ತಮ್ಮ ಸ್ವ ವಿವರಗಳೊಂದಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ ಇಲ್ಲಿ ಜನೆವರಿ 11 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ, ಬೆಂಗಳೂರು ( ನಿಮ್ಹಾನ್ಸ್ ) ಇಲ್ಲಿ ತರಬೇತಿ ನೀಡಲಾಗುವುದು. ಆಯ್ಕೆಯಾದ ಯುವ ಪರಿವರ್ತಕರಿಗೆ ಗೌರವ ಸಂಭಾವನೆ ಹಾಗೂ ಪ್ರವಾಸ ಭತ್ಯೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 08372-238345 ಸಂಪರ್ಕಿಸಬಹುದಾಗಿದೆ.

ಆನ್‌ಲೈನ್ ಮೂಲಕ ದ್ವಿತೀಯ ಮೇಲ್ಮನವಿ ಮತ್ತು ದೂರು ಅರ್ಜಿಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ

ಮಾನ್ಯ ಸರ್ವೋಚ್ಚ ನ್ಯಾಯಲಯವು Kishan Chand Jain V/s Union of India & Ors (W.P.No:360/2021) ರಲ್ಲಿ ದಿನಾಂಕ: 09-10- 2023ರ ರಂದು ನೀಡಿರುವ ನಿರ್ದೇಶನದನ್ವಯ ಕರ್ನಾಟಕ ಮಾಹಿತಿ ಆಯೋಗವು 0304:28-12-2023 ರಿಂದ ಆನ್‌ಲೈನ್ ಮೂಲಕ ದ್ವಿತೀಯ ಮೇಲ್ಮನವಿ ಮತ್ತು ದೂರು ಅರ್ಜಿಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿರುತ್ತದೆ.

ಕರ್ನಾಟಕ ಮಾಹಿತಿ ಆಯೋಗಕ್ಕೆ ಮಾಹಿತಿ ಹಕ್ಕು ಅಧಿನಿಯಮ, 2005 50 19(3)ಸಲ್ಲಿಸುವ ದ್ವಿತೀಯ ಮೇಲ್ಮನವಿ ಅರ್ಜಿಗಳನ್ನು ಮತ್ತು ಕಲಂ 18(1) ರಡಿ ಸಲ್ಲಿಸುವ ದೂರು ಅರ್ಜಿಗಳನ್ನು ಜಿ-ಜುಟುಟಿರ & URL https://rtisecondappeal.karnataka.gov.in ಮೂಲಕ ಅಥವಾ ಕರ್ನಾಟಕ ಮಾಹಿತಿ ಆಯೋಗದ ಅಧಿಕೃತ ಜಾಲತಾಣ www.kic.gov.in. ರಲ್ಲಿನ ಜಿ-ಜಿಪಿಟುಟಿರ ಲಿಂಕ್ ಮೂಲಕ ಸಾರ್ವಜನಿಕರು ದ್ವಿತೀಯ ಮೇಲ್ಮನವಿ ಮತ್ತು ದೂರು ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದ್ದು, ಈ ಸೇವೆಯ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿರುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Related Post

Leave a Reply

Your email address will not be published. Required fields are marked *