ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಸಹಾಯಧನ ಕೊಪ್ಪಳ ಜಿಲ್ಲಾ
ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 2023-24ನೇ ಸಾಲಿಗಾಗಿ ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯ ಅರ್ಜಿ ಆಹ್ವಾನಿಸಲಾಗಿದೆ. ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯ ಸಾಮಾನ್ಯ, ಎಸ್ಸಿ-ಎಸ್ಪಿ ಯೋಜನೆಯಡಿ ವಿದ್ಯುತ್ ಮಗ್ಗ ಮತ್ತು ಸಲಕರಣೆ, 2 ವಿದ್ಯುತ್ ಮಗ್ಗ ಹಾಗೂ ಎಲೆಕ್ಟ್ರಾನಿಕ್ ಜಕಾರ್ಡ್ ಯೋಜನೆಗಳಡಿ ಗುರಿ ನಿಗದಿಪಡಿಸ ಲಾಗಿದ್ದು, ವಿದ್ಯುತ್ ಮಗ್ಗ ಚಟುವಟಿಕೆ ಕೈಗೊಳ್ಳುವ ಉದ್ದೇವಿರುವ ಅರ್ಹ ಫಲಾನುಭವಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಯೋಜನೆಯ ಘಟಕದ ವೆಚ್ಚ 3.50,000 ಆಗಿದ್ದು,ಈ ಮೊತ್ತವನ್ನು ಹಣಕಾಸು ಸಂಸ್ಥೆಗಳಿಂದ ಬ್ಯಾಂಕ್‌ನಿಂದ ಸಾಲ ಪಡೆದು ಯಂತ್ರೋಪಕರಣ ಅಳವಡಿಸಿ ಉತ್ಪಾದನೆ ಪ್ರಾರಂಭಿ ಸಿದ ನ೦ತರ ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ವರ್ಗದವರಿಗೆ ಶೇ.50% ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ.90% ರಷ್ಟು ಸಹಾಯಧನ ಸ೦ಬ೦ಧಪಟ್ಟ ಸಾಲ ನೀಡಿದ ಬ್ಯಾಂಕುಗಳಿಗೆ ಆ ಟಿಜಿಎಸ್ ಮೂಲಕ ಜಮಾ ಮಾಡಲಾಗುವುದು.
ವಿದ್ಯುತ್ ಮಗ್ಗ ಚಟುವಟಿಕೆ ನಡೆಸಲು ಆಸಕ್ತಿವುಳ್ಳ ಅರ್ಹ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಕೊಪ್ಪಳ ಜಿಲ್ಲೆಯ ಪರಿಶಿಷ್ಟ ಜಾತಿಯವರಿಗೆ ಒಂದು ಗುರಿ ನಿಗದಿಪಡಿಸಲಾಗಿದೆ. ಮಾಹಿತಿಗಾಗಿ ಕೊಪ್ಪಳ ಉಪ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆಯ ದೂ ಸಂ 08539-295469 ಗೆ ಸಂಪರ್ಕಿಸಬಹುದಾಗಿದೆ.
ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಸಹಾಯಧನ ಗದಗ ಜಿಲ್ಲಾ
ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳ ನೇಕಾರಿಕೆ, ನೇಕಾರಿಕೆ ಉದ್ದೇಶಕ್ಕಾಗಿ ರಾಜ್ಯದ ನೇಕಾರರ ಸಹಕಾರ ಸಂಘಗಳು, ಕೈಗಾರಿಕಾ ಸಹಕಾರ ಬ್ಯಾಂಕುಗಳು, ಕೃಷಿಯೇತರ, ಕೃಷಿ ಪತ್ತಿನ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ಹಾಗೂ ಇತರೆ ಸಹಕಾರ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಶೂನ್ಯ ಬಡ್ಡಿ ದರದಲ್ಲಿರು. 2 ಲಕ್ಷಗಳವರೆಗೆ ನೀಡುವ ಸಾಲಕ್ಕೆ ಗರಿಷ್ಠಶೇ.11ರಷ್ಟು ಬಡ್ಡಿ ಸಹಾಯಧನ ಮತ್ತು ಶೇ. 3ರ ಬಡ್ಡಿ ದರದಲ್ಲಿ 2 ಲಕ್ಷಗಳಿಂದ ರು. 5 ಲಕ್ಷಗಳವರೆಗೆ ನೀಡುವ ಸಾಲಕ್ಕೆ ಗರಿಷ್ಠ ಶೇ.8ರಷ್ಟು ಬಡ್ಡಿ ಸಹಾಯಧನ ಹಾಗೂ ರಾಜ್ಯದ ಸಹಕಾರಿ ವಾಣಿಜ್ಯ ಬ್ಯಾ೦ಕುಗಳ ಮೂಲಕ ಪಡೆಯುವ ಸಾಲದ ಮೇಲೆ ಶೇ. 8ರಷ್ಟು ಬಡ್ಡಿ ಸಹಾಯಧನ ಹಾಗೂ ರಾಜ್ಯದ ಸಹಕಾರಿ ವಾಣಿಜ್ಯ ಬ್ಯಾಂಕುಗಳ ಮೂಲಕ ಪಡೆಯುವ ಸಾಲದ ಮೇಲೆ ಶೇ. 8ರಷ್ಟು ಬಡ್ಡಿ ಸಹಾಯಧನ ಒದಗಿಸುವುದು.
ಯೋಜನೆಗೆ ಸ೦ಬ೦ಧಿಸಿದ೦ತೆ ಸಾಲದ ಅವಶ್ಯಕತೆ ಇರುವ ನೇಕಾರರು < https://dev.kardht.com > ವೆಬ್‌ಸೈಟ್ ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ ಕೈಮಗ್ಗ ಮತ್ತು ಜವಳಿ ಇಲಾಖೆ ಕೊಠಡಿ ಸಂಖ್ಯೆ 206 ಜಿಲ್ಲಾ ಆಡಳಿತ ಜಿಲ್ಲಾ ಭವನ ಗದಗ್ ಸಂಪರ್ಕಿಸಬಹುದಾಗಿದೆ.
ಕೋಳಿ ಸಾಕಾಣಿಕೆ ಮಾಡಲು ಉಚಿತ ತರಬೇತಿಗೆ ಅರ್ಜಿ ಆಹ್ವಾನ, ಊಟ ಮತ್ತು ವಸತಿ ಉಚಿತ ಕೂಡಲೇ ಅರ್ಜಿ ಸಲ್ಲಿಸಿ
ಗೃಹ ಲಕ್ಷ್ಮೀ ಯೋಜನೆ ಜಾರಿ, 2000 ರೂ. ಜಮಾ ಅರ್ಜಿ ಸಲ್ಲಿಕೆ ಹೇಗೆ?
ಮೋದಿ ಹಣ ಪಡೆಯಲು ಜೂನ್ 30 ರ ಒಳಗೆ E-KYC ಮಾಡಿಸಲೇಬೇಕು? E-KYC ಮಾಡಿಸಿ 14ನೆ ಕಂತಿನ ಹಣ ಪಡೆಯಿರಿ*
ಕೇವಲ 5 ನಿಮಿಷದಲ್ಲಿ ನಿಮ್ಮ ಮೊಬೈಲ್ ನಿಂದ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಿ, 200 ಯೂನಿಟ್ ಉಚಿತ ವಿದ್ಯುತ್ ಪಡೆಯಿರಿ