ಆತ್ಮೀಯ ರೈತರೇ, 2023-24ನೇ ಸಾಲಿನಲ್ಲಿ ನಮ್ಮ ರಾಜ್ಯದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಗಿರಿಜನ ಉಪಯೋಜನೆ ಎಂಬ ಯೋಜನೆಯಲ್ಲಿ 6+1 ಕುರಿ ಹಾಗೂ ಮೇಕೆ ಘಟಕ ಸ್ಥಾಪನೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ ಮಾಡಲಾಗಿದೆ. ನೀವು 3 ವರ್ಷಗಳಲ್ಲಿ ಈ ಯೋಜನೆ ಅಡಿಯಲ್ಲಿ ಸಹಾಯಧನ ಪಡೆದಿಲ್ಲ ಎಂದರೆ ಈಗ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಒಂದು ವೇಳೆ ಬೆಳಗಾವಿ ಜಿಲ್ಲೆಯ ಜನರು ನಿಮ್ಮ ಹತ್ತಿರ ಕುರಿ ಮತ್ತು ಮೇಕೆ ಇದ್ದರೆ. ಅವುಗಳ ಘಟಕ್ ಸ್ಥಾಪನೆ ಮಾಡಲು ಸರ್ಕಾರದಿಂದ ಸರ್ಕಾರದಿಂದ ಸಹಾಯಧನ ನೀಡುತ್ತಾರೆ. ಅದಕ್ಕಾಗಿ ನೀವು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಸಬ್ಸಿಡಿ ಪಡೆಯಬಹುದು.
ಒಟ್ಟು ಎಂಟು ಘಟಕ ಸ್ಥಾಪನೆ ಮಾಡುತ್ತಿದ್ದಾರೆ. 6 ಪರಿಶಿಷ್ಟ ಜಾತಿಯ ಮತ್ತು 2 ಪರಿಶಿಷ್ಟ ಪಂಗಡದ ಜನರಿಗೆ ಸಬ್ಸಿಡಿ ನೀಡುತ್ತಾರೆ.
ಅರ್ಜಿ ಯಾರು ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಕೆ ಯಾವಾಗ ಪ್ರಾರಂಭ?
* ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ನೋಂದಾವಣಿ ಮಾಡಿಸಿಕೊಂಡ ಜನರಿಗೆ ಈ ಲಾಭ ದೊರೆಯಲಿದೆ.
* ಪಶು ವೈದಾಧಿಕಾರಿಗಳು ಮತ್ತು ಪಶು ಆಸ್ಪತ್ರೆಗಳಲ್ಲಿ ನೋಂದಾವಣಿ ಮಾಡಿಸಿಕೊಂಡ ಜನರಿಗೆ ಈ ಲಾಭ ದೊರೆಯಲಿದೆ.
* ಅರ್ಜಿ ಸಲ್ಲಿಸಲು ಅಗಸ್ಟ್ 5 ರಿಂದ ಆಗಸ್ಟ್ 19 ರ ಒಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಾವು ಕೆಳಗೆ ನೀಡಿರುವ ಸಂಖ್ಯೆಗೆ ಕರೆ ಮಾಡಿ.
0831-2431294