ಆತ್ಮೀಯ ನಾಗರಿಕರೇ, ಈಗಾಗಲೇ ನಮ್ಮ ಕರ್ನಾಟಕ ಸರ್ಕಾರದಿಂದ 5 ವಿವಿಧ ಯೋಜನೆಗಳಿಂದ ನಾಗರಿಕರಿಗೆ ಹಲವಾರು ರೀತಿಯ ಸಹಾಯಧನ ಮತ್ತು ಉಪಯುಕ್ತವಾದ ಕೆಲಸಗಳನ್ನು ಕೈಗೊಳ್ಳಲಾಗಿದೆ. ಅದರಲ್ಲಿ ಗೃಹಜೋತಿ ಯೋಜನೆ ಅತಿ ಮುಖ್ಯವಾದದ್ದು. ಆದಕಾರಣ ನಮ್ಮ ರಾಜ್ಯದ ಎಲ್ಲ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಿ ನೊಂದಣಿ ಮಾಡಿಕೊಳ್ಳುವುದು ಅತಿ ಮುಖ್ಯವಾಗಿದೆ.
ಯೋಜನೆಗೆ ನೊಂದಣಿ ಮಾಡಿಕೊಳ್ಳುವುದು ಹೇಗೆ?
ಸರ್ಕಾರದಿಂದ ಉಚಿತವಾಗಿ 200 ಯೂನಿಟ್ ವಿದ್ಯುತ್ ಪಡೆಯುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ನಿಮಗೆ ತಿಳಿದಿರಬಹುದು ಈಗಾಗಲೇ ನೀವು ಹಲವಾರು ಬಾರಿ ಅರ್ಜಿ ಹಾಕಲು ನೋಡಿ ಸರ್ವರ್ ಡೌನ್ ಆದ ಕಾರಣ ನಿಮಗೆ ಸಲ್ಲಿಸಲು ಕಷ್ಟವಾಗುತ್ತಿದೆ ಎಂದು ನಮಗೆ ತಿಳಿದಿದೆ. ಆದ ಕಾರಣ ನಾವು ತಿಳಿಸಿದ ಹಾಗೆ ಹಂತಗಳನ್ನು ಪಾಲಿಸಿ ಅತಿ ಸುಲಭವಾಗಿ ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು.
ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ?
ಈಗಾಗಲೇ 51,17,692 ಜನರು ಈ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದಕಾರಣ ನೀವು ಅರ್ಜಿ ಸಲ್ಲಿಸಲು ನಾವು ಕೆಳಗೆ ನೀಡಿರುವ ಮೇಲೆ ಕ್ಲಿಕ್ ಮಾಡಿ. https://sevasindhugs.karnataka.gov.in/gsdn/
ನಿಮಗೆ ಅಲ್ಲಿ ಒಂದು ಮುಖಪುಟವು ತೆರೆದು ಬರುತ್ತದೆ. ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ ನೀವು ನಿಮಗೆ ಅಲ್ಲಿ ಕಾಣುವ ಕರೆಕ್ಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ನೀವು ಅಲ್ಲಿ ಕಾಣುವ ಕ್ಯಾಪ್ಚರ್ ಕೋಡ್ ಅನ್ನು ಅಲ್ಲಿ ನಮೂದಿಸಬೇಕು. ಆಮೇಲೆ ಅಲ್ಲಿ ಕಾಣುವ AGREE ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಸಾಕು. ನಿಮಗೆ ಇನ್ನೊಂದು ಮುಖಪುಟ ತೆರೆಯುತ್ತದೆ. ಅಲ್ಲಿ ನೀವು ಆಧಾರ್ ನಂಬರ್ ಅನ್ನು ಹಾಕುವುದು ಅವಶ್ಯವಾಗಿರುತ್ತದೆ.
ನಂತರ ನೀವು ನಿಮ್ಮ ಆಧಾರ್ ನಂಬರ್ ಅನ್ನು ಹಾಕಿ GET DETAILS ಎಂಬ ಹಾಕಿ ಮೇಲೆ ಕ್ಲಿಕ್ ಮಾಡುವುದು ಅನಿವಾರ್ಯವಾಗಿದೆ. ನಿಮಗೆ ಮುಂದೆ ಒಂದು ಮುಖಪುಟ ತೆರೆಯುತ್ತದೆ. ಅಲ್ಲಿ ಮೂರನೇ ಆಯ್ಕೆಯಲ್ಲಿ ನಿಮಗೆ BESCOM, CESC, GESCOM, HESCOM, MESCOM, HRECS ಇವುಗಳಲ್ಲಿ ಒಂದು ಆಯ್ಕೆಯನ್ನು ನೀವು ಆಯ್ದುಕೊಳ್ಳಬೇಕಾಗುತ್ತದೆ. ನೀವು ಮೊದಲು ನಿಮ್ಮ ಕರೆಂಟ್ ಬಿಲ್ ಪಾವತಿಯನ್ನು ಹಿಡಿದುಕೊಂಡು ಮುಂದೆ ಅಲ್ಲಿ ಕಾಣುವ ನಿಮಗೆ ನಿಮ್ಮ ವಿದ್ಯುತ್ ಯಾವ ಘಟಕಕ್ಕೆ ಸಂಬಂಧ ಇದೆ ಎಂದು ಆ ಪಾವತಿಯಲ್ಲಿ ನಮೂದಿಸಿರುತ್ತಾರೆ. ಅದನ್ನು ಮೇಲೆ ಕಾಣುವ ಆಯ್ಕೆಗಳಲ್ಲಿ ಒಂದನ್ನು ನೀವು ಆಯ್ದುಕೊಳ್ಳಬೇಕು.
ನಂತರ ನಾಲ್ಕನೇ ಆಯ್ಕೆಯಲ್ಲಿ ನೀವು ಅಲ್ಲಿ ಖಾತೆ ಸಂಖ್ಯೆ ಅಥವಾ ನಿಮ್ಮ ಸಂಪರ್ಕ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ನೀವು ನಿಮ್ಮ ಸಂಪರ್ಕ ಸಂಖ್ಯೆಯನ್ನು ಹಾಕಿದ ಕೂಡಲೇ ನಿಮ್ಮ ಹೆಸರು ಮತ್ತು ನಿಮ್ಮ ವಿಳಾಸ ತಾನಾಗೆ ಬರುತ್ತದೆ. ನಂತರ ನೀವು ಅಲ್ಲಿ ನಿಮಗೆ ನಿವಾಸಿ ವಿಧ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನಿಮಗೆ ಮೂರು ಆಯ್ಕೆಗಳು ಕಾಣುತ್ತೇವೆ ಮಾಲೀಕ, ಬಾಡಿಗೆದರ ಮತ್ತು ಕುಟುಂಬ ಸದಸ್ಯ ಎಂಬ ಮೂರು ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.
ಕೊನೆಗೆ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ಸೆಲೆಕ್ಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಕೊನೆಗೆ SUBMIT ಎಂದು ಕಾಣುವ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಅರ್ಜಿ ಸರ್ಕಾರಕ್ಕೆ ನೊಂದಣಿಯಾಗಿ ಬಿಡುತ್ತದೆ.
ರೈತರಿಗೆ ತೆಂಗಿನ ಸಸಿಗಳನ್ನು ಕಡಿಮೆ ಬೆಲೆಯಲ್ಲಿ ಸಹಾಯಧನವಾಗಿ ನೀಡುತ್ತಿದ್ದಾರೆ, ಕೂಡಲೇ ಖರೀದಿಸಿ
2023-24 ಮುಂಗಾರು ಯಾವ ಯಾವ ಬೆಳೆಗೆ ಏಷ್ಟು ಬೆಳೆ ವಿಮೆ ತುಂಬಬೇಕು?
ಸರ್ಕಾರದಿಂದ ಯಾವ ಗೊಬ್ಬರಕ್ಕೆ ಎಷ್ಟು ಸಬ್ಸಿಡಿ ಎಂದು ತಿಳಿಯಿರಿ?