ಆತ್ಮೀಯ ರೈತ ಬಾಂಧವರೇ, ನಮ್ಮ ಸರ್ಕಾರವು ರೈತರ ಉದ್ದಾರಕ್ಕಾಗಿ ಹಲವಾರು ಯೋಜನೆಗಳನ್ನು ತಂದಿದೆ. ಅದೇ ರೀತಿ ನಮ್ಮ ರೈತ ಸಂಪರ್ಕ ಕೇಂದ್ರಗಳಲ್ಲಿ ತಾಡಪಾಲ ವಿತರಣೆ ಮಾಡುತ್ತಿದ್ದಾರೆ. ಈ ತಾಡಪಾಲ ವಿತರಣೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ರೈತರಿಗೆ 2023-24 ನೇ ಸಾಲಿನಲ್ಲಿ ತಾಡಪಲ್ಗಳನ್ನು ವಿತರಿಸುವುದಕ್ಕಾಗಿ ಅರ್ಜಿಗಳನ್ನು ಕರೆಯಲಾಗಿದ್ದು ಆಸಕ್ತ ರೈತರು ಸೂಕ್ತವಾದ ದಾಖಲೆಗಳೊಂದಿಗೆ ಪಟ್ಟಣದ ರೈತ ಸಂಪರ್ಕ ಕೇಂದ್ರದ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.
ರೈತರು ಕೃಷಿಯಲ್ಲಿ ಯಾವುದೇ ತೊಂದರೆಗಳನ್ನು ಅನುಭವಿಸಬಾರದು, ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಸಬ್ಸಿಡಿ ರೂಪದಲ್ಲಿ ರೈತರಿಗೆ ನೀಡಲು ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು ಈಗ ರೈತರಿಗೆ ಕೃಷಿಯಲ್ಲಿ ಬಳಸುವ ತಾಡಪಲ್ ವಿತರಣೆ ಮಾಡಲು ಮುಂದಾಗಿದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು ಮತ್ತು ಎಲ್ಲಿ ಸಲ್ಲಿಸಬೇಕು?
ರೈತನು ತನ್ನ ಆಧಾರ್ ಕಾರ್ಡ್, ತನ್ನ ಪಾನ್ ಕಾರ್ಡ್, ತನ್ನ ಒಂದು ಪಾಸ್ಪೋರ್ಟ್ ಫೋಟೋ ಮತ್ತು ತನ್ನ ಮೊಬೈಲ್ ನಂಬರ್ ಅನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಬೇಟಿ ಕೊಡಿ. ಮೇ 30 ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ರಾಜ್ಯದಲ್ಲಿ ಕೃಷಿಯೇ ಮುಖ್ಯ ಉದ್ಯೋಗವಾಗಿದ್ದು, ಕೃಷಿಗೆ ಸಂಬಂಧಿಸಿದ ಜ್ಞಾನವನ್ನು ಪ್ರಸಾರ ಮಾಡುವ ಮೂಲಕ ಈ ವಲಯವನ್ನು ಸುಧಾರಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ ರೈತ ಸಂಪರ್ಕ ಕೇಂದ್ರಗಳು ಕೆಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ಇವು ಕೃಷಿ ಮತ್ತು ಮಾರುಕಟ್ಟೆ ಪದ್ಧತಿಗಳ ಬಗ್ಗೆ ಮಾಹಿತಿ ನೀಡುವ ರೈತರಿಗೆ ಜ್ಞಾನ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಆದಾಗ್ಯೂ, ರೈತ ಸಂಪರ್ಕ ಕೇಂದ್ರಗಳ ಕಾರ್ಯಾಚರಣೆ ಹಾಗೂ ಚುರುಕುತನವನ್ನು ಗಣನೀಯವಾಗಿ ಸುಧಾರಿಸಬೇಕಾಗಿದೆ.
ಕೃಷಿ ಮತ್ತು ಸಂಬಂಧಿತ ವಲಯದ ಮಾಹಿತಿಯನ್ನು ರೈತರಿಗೆ ನಿರಂತರವಾಗಿ ಒದಗಿಸಲು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೊಸ ಕೇಂದ್ರಗಳನ್ನು ಸ್ಥಾಪಿಸುವುದು ಬಹಳ ಅವಶ್ಯಕ. ಉತ್ತಮ ತರಬೇತಿ ಪಡೆದ ಕೃಷಿ ಪದವೀಧರರು ಪ್ರತಿ ರೈತ ಸಂಪರ್ಕ ಕೇಂದ್ರದ ಉಸ್ತುವಾರಿ ವಹಿಸಬೇಕು. ಈ ತರಬೇತಿಯು ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ವಿವಿಧ ಅಂತರ್ ಸಂಪರ್ಕಿತ ವಿಭಾಗಗಳ ಮೂಲಭೂತ ಜ್ಞಾನವನ್ನು ನೀಡುವುದರ ಮೇಲೆ ಕೇಂದ್ರೀಕರಿಸಬೇಕು.