Breaking
Tue. Dec 17th, 2024

ಕೃಷಿ ಯಂತ್ರೋಪಕರಣ ಖರೀದಿಗೆ ಕೃಷಿ ಇಲಾಖೆಯಿಂದ 50 ರಿಂದ 90% ಸಬ್ಸಿಡಿ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ

Spread the love

ಆತ್ಮೀಯ ರೈತ ಬಾಂಧವರೇ, ನಮ್ಮ ರಾಜ್ಯದಲ್ಲಿ ಜನರು ಕೃಷಿ ಮಾಡಲು ಹೆಚ್ಚಿನ ಆದ್ಯತೆಯನ್ನು ಕೊಡುತ್ತಾರೆ. ಆದಕಾರಣ ನಮ್ಮ ಕೃಷಿ ಇಲಾಖೆಯ ರೈತರಿಗೆ ನೆರವು ನೀಡಲು ಹೊಸ ಯೋಜನೆಯನ್ನು ತಂದಿದೆ. ಈ ಯೋಜನೆಯಡಿ ಇಲಾಖೆಯೂ ರೈತರಿಗೆ ಕೃಷಿಗೆ ಬಳಸುವ ಯಂತ್ರೋಪಕರಣಗಳಿಗೆ ಹೆಚ್ಚಿನ ಶೇಕಡ ಸಹಾಯಧನವನ್ನು ನೀಡಲು ಅರ್ಜಿ ಆಹ್ವಾನ ಮಾಡಿದೆ. ಅಡಿ ಉಳುಮೆಯಿಂದ ಕೊಯ್ಲು ವರೆಗೆ ಉಪಕರಗಳು, ವಿವಿಧ ಮಾದರಿಯ ಟ್ಯಾಕ್ಟರ್ ಗಳು, ಪವರ್ ಟಿಲ್ಲರ್ ಗಳು, ಭೂಮಿ ಸಿದ್ಧತೆ ಉಪಕರಣಗಳು, ನಾಟಿ/ಬಿತ್ತನೆ ಉಪಕರಣಗಳು, ಅಂತರ ಬೇಸಾಯ ಉಪಕರಣಗಳು, ಡೀಸಲ್ ಪಂಪ್ಸೆಟ್, ಟ್ಯಾಕ್ಟರ್/ ಟಿಲ್ಲರ್/ ಇಂಜಿನ್ ಚಾಲಿತ ಸಸ್ಯ ಸಂರಕ್ಷಣೆ ಬೆಳೆ ಕಟಾವು/ ಒಕ್ಕಣಿ ಯಂತ್ರಗಳು, ತ್ಯಾಜ್ಯ ವಸ್ತುಗಳ ನಿರ್ವಹಣೆ ಉಪಕರಣಗಳಿಗೆ 90 ಶೇಕಡ ಸಹಾಯಧನವನ್ನು ನೀಡುತ್ತಾರೆ.

ಯಾವ ಜಿಲ್ಲೆಗೆ ಈ ಯೋಜನೆ ಸೀಮಿತ ಮತ್ತು ಅರ್ಜಿ ಸಲ್ಲಿಸಲು ದಾಖಲೆಗಳು ಏನು ಬೇಕು?

ಹಾಸನ ಜಿಲ್ಲೆ, ಮೈಸೂರು ಜಿಲ್ಲೆ ಮತ್ತು ತುಮಕೂರು ಜಿಲ್ಲೆಯ ರೈತರಿಗೆ ಈ ಯೋಜನೆಯಲ್ಲಿ ಲಾಭ ದೊರೆಯಲಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕು. ದಾಖಲೆಗಳು – ರೈತ ಆಧಾರ್ ಕಾರ್ಡ್, ನಿಮ್ಮ ಹೊಲದ ಪಹಣಿ, ನಿಮ್ಮ ಆಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ, ನಿಮ್ಮ ಭಾವ ಚಿತ್ರ,ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ನಿಮ್ಮ ಜಾತಿ ಪ್ರಮಾಣ ಪತ್ರ ಹೊಂದಿರಬೇಕು, 20 ರೂಪಾಯಿಯ ಛಾಪಾ ಕಾಗದ ತಗೆದುಕೊಂಡು ಸರಿಯಾಗಿ ಅರ್ಜಿ ಸಲ್ಲಿಸಬೇಕು. ಮೇಲೆ ತಿಳಿಸಿದ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿಯನ್ನು ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಬೇಕು.

ಯಾವ ಯಂತ್ರಗಳು ಸಿಗುತ್ತವೆ ಎಂದು ತಿಳಿದುಕೊಳ್ಳಿ?

ಕೃಷಿ ಇಲಾಖೆಯು ರೈತರಿಗೆ ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳಾದ ದಾಲ್ ಪ್ರೊಸೆಸರ್, 5 ಹಲ್ಲಿನ ನೇಗಿಲು, ಪ್ಲೋರ್ ಮಿಲ್, ಪ್ಲೋರ್ ಮಿಲ್, ಭತ್ತಕಟಾವು ಯಂತ್ರ, ರಾಗಿ ಕ್ಲೀನಿಂಗ್ ಮಿಷಿನ್, ಮೇವು ಕಟಾವು ಯಂತ್ರ, ಮಿನಿ ರೈಸ್ ಮಿಲ್, ಮಿನಿ ಆಯಿಲ್ ಎಕ್ಸಪೆಲ್ಲರ್, ರಾಗಿ ಕ್ಲೀನಿಂಗ್ ಮಿಷನ್, ಚಿಲ್ಲಿ ಪೌಡಿಂಗ್ ಮಷಿನ್, ಶಾವಿಗೆ ಮಷಿನ್, ರೋಟಾವೇಟರ್, ಕಲ್ಟಿವೇಟರ್, ಪವರ್ ವೀಡರ್, ಬ್ರಷ್ ಕಟರ್, ಹಲ್ಲರ್, ಶುಗನ್ ಕೇನ್ ಜ್ಯೂಸ್ ಮೇಕರ್, 9 ಹಲ್ಲಿನ ನೇಗಿಲು, ಕಲ್ಟಿವೇಟರ್, ಲೆವೆಲ್ಲರ್, ಡಿಸೆಲ್ ಮೋಟರ್ ಇನ್ನೂ ಹತ್ತು ಹಲವಾರು ಮಷೀನ್ ಗಳನ್ನೂ ಬಹಳ ಶೇಕಡ ಸಹಾಯಧನ ನೀಡಲು ನಿರ್ಧರಿಸಿದ್ದಾರೆ.

ಯೋಜನೆ ಅಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ನೀಡುತ್ತಾರೆ. ಕೃಷಿ ಸಂಸ್ಕರಣ ಘಟಕ ಮತ್ತು ಸೂಕ್ಷ್ಮ ನೀರಾವರಿ ಯೋಜನೆ ಅಲ್ಲಿ 50 ಶೇಕಡ ಸಹಾಯಧನ ಸಾಮಾನ್ಯ ವರ್ಗದವರಿಗೆ ಮತ್ತು 90 ಶೇಕಡ ಸಹಾಯಧನ ಪರಿಶಿಷ್ಟ ಜಾತಿ ಮಾತ್ತು ಪರಿಶಿಷ್ಟ ಪಂಗಡದವರಿಗೆ ಕೊಡುತ್ತಾರೆ.ಯಾಂತ್ರೀಕರಣವನ್ನು ಅಳವಡಿಸಿಕೊಳ್ಳುವ ಮೂಲಕ ರೈತರು ತಮ್ಮ ಆದಾಯವನ್ನು ಹೆಚ್ಚಿಸಬಹುದು. ಈಗಾಗಲೇ ಈ ಯೋಜನೆ ಅಡಿಯಲ್ಲಿ ಉಪಯೋಗ ಪಡೆದುಕೊಂಡ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ರೈತರು ಶೇ 90 ರಿಯಾಯಿತಿ ದರದಲ್ಲಿ ಪಡೆಯಲು ಪಹಣಿ ಸಹಿತ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು.

ಇದನ್ನೂ ಓದಿ :- ಬಡ್ಡಿ ರಹಿತ ಸಾಲ ಪಡೆಯುವ ಮೊದಲು ಈ ಕೆಲವು ಮುಖ್ಯ ಮಾಹಿತಿಗಳನ್ನು ತಿಳಿದುಕೊಳ್ಳಿ

ಇದನ್ನೂ ಓದಿ :- ಮಹಿಳೆಯರಿಗೆ ಫ್ರೀ ಹೊಲಿಗೆ ಯಂತ್ರಗಳನ್ನು ನೀಡುತ್ತಿದ್ದಾರೆ

ಇದನ್ನೂ ಓದಿ :- ರೇಷನ್ ಕಾರ್ಡ್ ಹೊಂದಿದ ಜನರಿಗೆ ಕೇಂದ್ರ ಸರ್ಕಾರದಿಂದ ಬರ್ಜರಿ ಗಿಫ್ಟ್

Related Post

Leave a Reply

Your email address will not be published. Required fields are marked *