ಜಿಲ್ಲಾ ವ್ಯಾಪ್ತಿಯ ಅರ್ಹ ವಿಕಲಚೇತನರಿಗೆ ಪ್ರಸಕ್ತ ಸಾಲಿನಲ್ಲಿ ಬ್ಯಾಟರಿ ಚಾಲಿತ ವೀಲ್ ಚೇರ್ ವಿತರಿಸುವುದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಫೆಬ್ರವರಿ 15 ಕೊನೆಯ ದಿನವಾಗಿದೆ.
ಕುಟುಂಬ ವಾರ್ಷಿಕ ಒಳಗಿರಬೇಕು. ವಿಕಲಚೇತನರ (ಯುಡಿಐಡಿ) ಪಡೆದಿರಬೇಕು. ಆದಾಯ 2.2 ಲಕ್ಷ ವಿಶಿಷ್ಟ ಗುರುತಿನ ಚೀಟಿ ದೈಹಿಕ ವಿಕಲಚೇತನರ ಶೇ.75ರಷ್ಟು ಇದಕ್ಕಿಂತ ಹೆಚ್ಚಿನ ವಿಕಲಚೇತನ ಹೊಂದಿದ ಯಂತ್ರ ಚಾಲಿತ ದ್ವಿಚಕ್ರ ವಾಹನ ಚಾಲನೆ ಮಾಡುವ ಸಾಮರ್ಥ್ಯ ಹೊಂದಿದ, ಬ್ಯಾಟರಿ ಚಾಲಿತ ವೀಲ್ ಚೇರ್ ಚಲಾಯಿಸಲು ಇತರೇ ಎಲ್ಲಾ ರೀತಿಯಲ್ಲಿ ಸದೃಢರಾಗಿರುವ ವಿಕಲಚೇತನರಾಗಿರಬೇಕು. ಸರ್ಕಾರದಿಂದ ಪಡೆದಿರಬಾರದು. ಯಂತ್ರಚಾಲಿತ ದ್ವಿಚಕ್ರ ವಾಹನ
ಹೆಚ್ಚಿನ ಮಾಹಿತಿಗಾಗಿ ವಿಜಯಪುರ ರವಿ ರಾಠೋಡ (90035553337), ಪರಶುರಾಮ ಭೋಸಲೆ (.9972441464), ಮುತ್ತುರಾಜ ಸಾತಿಹಾಳ (ಮೊ.9980019635), ಬಸವನ ಬಾಗೇವಾಡಿ ఎస్. డి ಬಿರಾದಾರ (ಮೊ.8722135660) ಹಾಗೂ ಮುದ್ದೇಬಿಹಾಳ 93.3. 3 (3.9740682979) ಕಚೇರಿ ದೂರವಾಣಿ ಸಂಖ್ಯೆ08352-796060ಗೆ ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳಾದ ರಾಜಶೇಖರ ದೈವಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫಲ ಪುಷ್ಪ, ತಾರಸಿ, ಕೈತೋಟ ಮಾದರಿಗಳ ಪ್ರದರ್ಶನ ಮೇಳಕ್ಕೆ ಚಾಲನೆ
ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಪ್ರಯುಕ್ತ ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಜನವರಿ 27 ರಿಂದ ಫೆಬ್ರವರಿ 06ರ ವರೆಗೆ 10 ದಿನಗಳ ಕಾಲ ಜಾತ್ರಾ ಆವರಣದಲ್ಲಿ ಹಮ್ಮಿಕೊಂಡ ಫಲ ಪುಷ್ಪ ಮತ್ತು ತಾರಸಿ ಮತ್ತು ಕೈತೋಟ ಮಾದರಿಗಳ ಪ್ರದರ್ಶನಕ್ಕೆ ಜನವರಿ 27ರಂದು ಚಾಲನೆ ದೊರೆಯಿತು. ಕೊಪ್ಪಳ ಸಂಸದರಾದ ಸಂಗಣ್ಣ ಕರಡಿ, ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಮುಖ್ಯ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಹಾಗೂ ಮತ್ತಿತರರು ಈ ಜನಾಕರ್ಷಣೀಯ ಕಾರ್ಯಕ್ರಮದ ಚಾಲನೆಗೆ ಸಾಕ್ಷಿಯಾದರು.
ಸದಂರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೆ.ರಾಜಶೇಖರ ಹಿಟ್ನಾಳ್, ಜಿ.ಪಂ ಉಪಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ತೊದಲಬಾಗಿ, ಜಂಟಿ ನಿರ್ದೇಶಕರಾದ ಟಿ.ಎಸ್. ರುದ್ರೇಶಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ್ ಸೇರಿದಂತೆ ಹಲವು ಗಣ್ಯರು, ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತಿತರರಿದ್ದರು. ಫಲ ಪುಷ್ಪ, ತಾರಸಿ, ಕೈತೋಟ ಮಾದರಿಗಳ ಪ್ರದರ್ಶನ ವಿಶೇಷತೆ: ಈ ಫಲ ಪುಷ್ಪ ಪ್ರಧರ್ಶನದಲ್ಲಿ ಈ ವರ್ಷ ಮುಖ್ಯವಾಗಿ “ಅಂಗೈ ಅಗಲ ಕೈತೋಟ, ಆಕಾಶದಗಲ ಆರೋಗ್ಯ” ಎನ್ನುವ ದ್ವೇಯೋದ್ದೇಶದೊಂದಿಗೆ ಪೌಷ್ಟಿಕ ತೋಟಗಳ 50 ಕ್ಕೂ ಹೆಚ್ಚು ವಿವಿಧ ತಾರಸಿ ತೋಟ ಮತ್ತು ಕೈತೋಟ ಮಾದರಿಗಳನ್ನು ತಯಾರಿಸಿದ್ದು, ತಮ್ಮ ಮನೆಯಲ್ಲಿ ಲಭ್ಯವಿರುವ ಜಾಗದಲ್ಲಿ ತಮ್ಮ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ತಮ್ಮ ಕುಟುಂಬಕ್ಕೆ ಉತ್ತಮ ಗುಣಮಟ್ಟದ ವಿವಿಧ ರೀತಿಯ ಸಾವಯವ ತರಕಾರಿಗಳನ್ನು ಬೆಳೆದು ತಮ್ಮ ಕುಟುಂಬದ ಆರೋಗ್ಯವನ್ನು ಹೆಚ್ಚಿಕೊಳ್ಳಿವಂತಹ ವಿವಿಧ ಮಾದರಿಗಳನ್ನು ನಿರ್ಮಿಸಲಾಗಿದೆ.
ಪೌಷ್ಟಿಕವಾದ ತಾರಸಿ ತೋಟ ಮತ್ತು ಕೈತೋಟ: ತಾರಸಿ ಮತ್ತು ಕೈತೋಟದಲ್ಲಿ ಮೂರು ರೀತಿಯ ತರಕಾರಿ ತೋಟಗಳನ್ನು ನಿರ್ಮಿಸಿದ್ದು, ಸಾರ್ವಜನಿಕರು ತಮ್ಮ ಮನೆಯ ಮುಂದಿನ ಜಾಗ, ತಮ್ಮ ಮನೆಯ ಛಾವಣಿಯ ಜಾಗ ಹಾಗೂ ತಮ್ಮ ಮನೆಯ ವರಾಂಡದಲ್ಲಿರುವ ಜಾಗ ಹಾಗೂ ತಮ್ಮ ಮನೆಯ ಹಿತ್ತಲಿನಲ್ಲಿ ಇರುವ ಜಾಗ ಹಾಗೂ ಅತೀ ಕಡಿಮೆ ಜಾಗ ಹೊಂದಿರುವ ಮನೆಗಳಲ್ಲಿ ಸಹ ತರಕಾರಿಗಳನ್ನು ತಮ್ಮ ಮನೆಯ ಕುಟುಂಬ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಪ್ರತಿ ದಿನ ತಾಜಾ ತರಕಾರಿಗಳನ್ನು ಬೆಳೆಯುವ ಬಗ್ಗೆ.
ಋತುಮಾನಗಳಿಗೆ ತಕ್ಕಂತೆ ಮಳೆಗಾಲ, ಬೇಸಿಗೆಕಾಲ ಮತ್ತು ಚಳಿಗಾಲಕ್ಕೆ ತಕ್ಕಂತೆ ವಿವಿಧ ತರಕಾರಿಗಳನ್ನು ಬೆಳೆಯುವ ಬಗ್ಗೆ ಹಾಗೂ ತಾವೇ ತಮ್ಮ ಮನೆಯಲ್ಲಿ ಕಾಂಪೋಸ್ಟ ಗೊಬ್ಬರ, ಕೀಟ ಮತ್ತು ರೋಗಗಳಿಗೆ ಔಷಧೀಗಳನ್ನು ತಯಾರಿಸುವ ಬಗ್ಗೆ ಹಾಗೂ ಪಾತ್ರೆ ತೊಳೆದ ಮತ್ತು ಸ್ನಾನ ಮಾಡಿದ ಹಾಗೂ ವಿವಿಧ ಚಟುವಟಿಕೆಗಳಿಗೆ ಉಪಯೋಗಿಸಿದ ಅನುಪಯುಕ್ತ ನೀರನ್ನು ಶುದ್ಧಿಕರಿಸಿ ಅದೇ ನೀರನ್ನು ತಾರಸಿ ಮತ್ತು ಕೈತೋಟ- ಕ್ಕೆ ಉಪಯೋಗಿಸುವ ಬಗ್ಗೆ ವಿವಿಧ ಮಾದರಿಗಳನ್ನು ಇಲ್ಲಿ ನೋಡಿ ತಿಳಿದುಕೊಳ್ಳಬಹುದು.
ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಗಮನ ಸೆಳೆಯುವ ಕೃಷಿ ವಸ್ತು ಪ್ರದರ್ಶನ
ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಕೊಪ್ಪಳ ಕೃಷಿ ಇಲಾಖೆಯಿಂದ ಆಯೋಜಿಸಿರುವ ಕೃಷಿ ವಸ್ತು ಪ್ರದರ್ಶನವು ತುಂಬಾ ಆಕರ್ಷಿಣಿಯವಾಗಿದ್ದು, ರೈತರ ಹಾಗೂ ಸಾರ್ವಜನಿಕರ ಗಮನ ಸೆಳೆಯುವಂತಿದೆ.ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಕೃಷಿ ಇಲಾಖೆಯಿಂದ ಜನವರಿ 27 ರಿಂದ 29ರವರೆಗೆ ಮೂರು ದಿನಗಳ ಕಾಲ ಜಾತ್ರಾ ಆವರಣದಲ್ಲಿ ಹಮ್ಮಿಕೊಳ್ಳಲಾದ ಕೃಷಿ ವಸ್ತು ಪ್ರದರ್ಶನ-2024ಕ್ಕೆ ಕೊಪ್ಪಳ ಸಂಸದರಾದ ಕರಡಿ ಕೃಷಿ ವಸ್ತು ಪ್ರದರ್ಶನದಲ್ಲಿ ವಿವಿಧ ಅಲಂಕಾರಿಕ ಸಂಪ್ರದಾಯಿಕ ಕೃಷಿಯ ಸಲಕರಣೆಗಳ ಪ್ರದರ್ಶಿಕೆ, ಸಾವಯವ ಕೃಷಿ.
ಸಮಗ್ರ ಕೃಷಿ ಪದ್ಧತಿ, ಆರೋಗ್ಯದಲ್ಲಿ ಸಿರಿಧಾನ್ಯಳ ಮಹತ್ವ ಮತ್ತು ಇಲಾಖೆಯ ಯೋಜನೆಗಳ ಮಾಹಿತಿಗಳ ಬಗ್ಗೆ ವಿವರಣೆ ಅನಾವರಣಗೊಳಿಸಲಾಗಿದೆ. ಎಲ್ಲಾ ಸಾರ್ವಜನಿಕರು ಮತ್ತು ರೈತರು ಕೃಷಿ ವಸ್ತು ಪ್ರದರ್ಶನದ ಸದುಪಯೋಗ ಪಡೆದುಕೊಳ್ಳಲು ಕೊಪ್ಪಳ ಕೃಷಿ ಇಲಾಖೆಯು ಮನವಿ ಮಾಡಿಕೊಂಡಿದೆ.