Breaking
Tue. Dec 17th, 2024

PM ಕಿಸಾನ್ 17 ನೇ ಕಂತಿನ beneficiary list ಬಿಡುಗಡೆ ಆಗಿದೆ. ಚೆಕ್ ಸ್ಟೇಟಸ್

Spread the love

ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://pmkisan.gov.in/Rpt_BeneficiaryStatus_pub.aspx

ಆಮೇಲೆ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಎಲ್ಲಾ ಆಯ್ಕೆ ಮಾಡಿ. ಆಮೇಲೆ get report ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಿ.

ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದಲ್ಲಿ ಸಮೃದ್ಧಿಯಯ ಬೆಳಕು ಹೆಚ್ಚಿಸಿ

ಪ್ರಜಾಪ್ರಭುತ್ವಕ್ಕೆ ಮತ್ತಷ್ಟು ಬೆಳಕು ನೀಡುವ, ಬಲ ತುಂಬುವ ಕಾರ್ಯ ಪ್ರತಿಯೊಬ್ಬರು ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸುವ ಮತ್ತು ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮೃದ್ಧಿಯ ಬೆಳಕು ಹೆಚ್ಚಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಅವರು ಇಂದು ರಾತ್ರಿ ಧಾರವಾಡ ನಗರದ ಕೆಸಿಸಿ ಬ್ಯಾಂಕ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ. ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಹಿಂದುಳಿ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಮತದಾರ ಜಾಗೃತಿಗಾಗಿ ಆಯೋಜಿಸಿದ್ದ ಪಂಜಿನೊಂದಿಕೆ ಯುವ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಆಗಿರುವ ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ.. ಅವರು ಮಾತನಾಡಿ, ಜಿಲ್ಲೆಯ ಮತದಾನ ಹೆಚ್ಚಳಕ್ಕೆ ಎಲ್ಲರೂ ಕೈ ಜೋಡಿಸಬೇಕು. ಸುಶಿಕ್ಷಿತರ ಜಿಲ್ಲೆಯಲ್ಲಿ ಮತದಾನ ಕಡಿಮೆ ಆಗಬಾರದು. ಮತದಾನ ಹೆಚ್ಚಳಕ್ಕೆ ಜಿಲ್ಲೆಯ ಎಲ್ಲರೂ ಶ್ರಮಿಸಬೇಕು ಎಂದರು.

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಹಾಗೂ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರು ಮಾತನಾಡಿ, ಅವಳಿನಗರದಲ್ಲಿ ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಶೇ.85 ರಷ್ಟು ಮತದಾನ ಮಾಡಿಸುವ ಗುರಿ ಹೊಂದಲಾಗಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಮರ್ಗದರ್ಶನದಲ್ಲಿ ಅವಳಿನಗರದ ಪ್ರತಿ ವಾರ್ಡ್ ಮತ್ತು ಜನಸಂದಣಿ ಸ್ಥಳಗಳಲ್ಲಿ ಪಾಲಿಕೆ ಸಿಬ್ಬಂದಿಗಳು ವಿಭಿನ್ನವಾದ ಕಾರ್ಯಕ್ರಮಗಳ ಮೂಲಕ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ಹೆಚ್ಚುಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭಾ ಪಿ., ಅವರು ವಂದಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ ಕಾರ್ಯಕ್ರಮ ನಿರೂಪಿಸಿದರು. ಪಂಜಿನ ಮೆರವಣಿಗೆ ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ ಐಕಾನ್ ಜ್ಯೋತಿ ಸಣಕ್ಕಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಅಧೀನದ ಮೆಟ್ರಿಕ ನಂತರದ ವಿವಿಧ ವೃತ್ತಿಪರ, ಪದವಿ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿ, ವಿದ್ಯಾರ್ಥಿನೀಯರು ಭಾಗವಹಿಸಿದ್ದರು. ಸಾರ್ವಜನಿಕರ ಗಮನ ಸೆಳೆದ ಪಂಜಿನ ಮೆರವಣಿಗೆ: ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಸಿಇಓ ಸ್ವರೂಪ ಟಿ.ಕೆ.ಅವರ ನೇತೃತ್ವದಲ್ಲಿ ಧಾರವಾಡ ನಗರ ಹೃದಯ ಭಾಗದಲ್ಲಿರುವ ಕೆಸಿಸಿ ಬ್ಯಾಂಕ್ ವೃತ್ತದಲ್ಲಿ ಮತದಾನ ಜಾಗೃತಿಯ ಘೋಷಣೆಗಳೊಂದಿಗೆ ಆರಂಭವಾದ ಯುವ ಸಮೂಹದ ಪಂಜಿನ ಮೆರವಣಿಗೆ ಜಾಥಾ ಕಾರ್ಯಕ್ರಮವು ಮಾರುಕಟ್ಟೆಯಲ್ಲಿ ನೆರೆದಿದ್ದ ಸಾರ್ವಜನಿಕರ ಗಮನ ಸೆಳೆಯಿತು.

ಪಂಜಿನ ಜಾಥಾವು ಸುಭಾಸ ರಸ್ತೆ. ವಿವೇಕಾನಂದ ವೃತ್ತ, ಹಳೆ ಬಸ್ ನಿಲ್ದಾಣ, ರಾಣಾ ಪ್ರತಾಪ ಸಿಂಹ ಸರ್ಕಲ್, ಅಂಬೇಡ್ಕರ ಪ್ರತಿಮೆ ಬಳಿಯಿಂದ ಆಲೂರು ವೆಂಕಟರಾವ ವೃತ್ತದಲ್ಲಿ ಮಾನವ ಸರಪಳಿ ಸೃಷ್ಟಿಸಿ, ಜನರ ಗಮನ ಸೆಳೆಯಿತು. ಜಾಥಾದಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ನೆರೆದ ಸಾರ್ವಜನಿಕರಿಗೆ ಮತದಾನ ದಿನದಂದು ತಪ್ಪದೇ ಮತದಾನ ಮಾಡವಂತೆ ಪ್ರತಿಜ್ಞಾ ಬೋಧಿಸಲಾಯಿತು. ಜಾಥಾವು ಮಹಾನಗರ ಪಾಲಿಕೆ ಆವರಣದಲ್ಲಿ ಮುಕ್ತಾಯಗೊಂಡಿತು.

ಉಚಿತ ಯೋಗ ಶಿಬಿರ

ಆರೋಗ್ಯ ಬೆಳವಣಿಗೆಗೆ ಮತ್ತು ಸಾವಯವ ಆಹಾರ ಪದ್ಧತಿಯ ತರಬೇತಿಯಿಂದ ಆರೋಗ್ಯ ವೃದ್ದಿ ಮಾಡಲು ಸಹಕಾರಿಯಾಗುತ್ತದೆ. ಆದ್ದರಿಂದ ಶ್ರೀ ಶಿವಶರಣಮ್ಮನವರ ಧ್ಯಾನಯೋಗಾಶ್ರಮ ಜಲ್ಲಿಗೇರಿ, ನವರಸ ಕಲಾ ಸಂಘ, ಬೆಟಗೇರಿ, ನಿರ್ಮಲ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಮುಂಡರಗಿ ಚೇತಕ ವಿವಿಧೋದ್ದೇಶಗಳ ಸೇವಾ ಸಂಸ್ಥೆ, ನಯನತಾರ ಕಲಾ ಸಂಘ, ಶ್ರೀ ಗಣೇಶ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಬೆಟಗೇರಿ ಇವುಗಳ ಸಹಯೋಗದಲ್ಲಿ ಉಚಿತ ಯೋಗ ಶಿಬಿರವನ್ನು ಮೇ 1 ರಿಂದ 15 ರವರೆಗೆ ಬೆಳಿಗ್ಗೆ 6 ಗಂಟೆಯಿಂದ 7-30 ರವರೆಗೆ ಸಂಜೆ 5 ರಿಂದ 7-00ರವರೆಗೆ ಕಿತ್ತೂರ ಚನ್ನಮ್ಮ ಗಾರ್ಡನ್ ಹೆಲ್ಲೆ ಕ್ಯಾಂಪ್ ಬೆಟಗೇರಿಯಲ್ಲಿ ಆಯೋಜಿಸಲಾಗಿದೆ.

ಶಿಬಿರದಲ್ಲಿ ಧ್ಯಾನ, ಪ್ರಾಣಾಯಾಮ, ಯೋಗ ಆಹಾರ ಆರೋಗ್ಯ, ಮತ್ತು ಆಹಾರ ತಯಾರಿಕೆ ವಿಧಾನತಿಳಿಸಿಕೊಡಲಾಗುವದು. ತೂಕ ಇಳಿಸುವ ವಿಧಾನ ತಿಳಿಸಲಾಗುವದು. ಬೆಡ್ ಸೀಟ್, ವಾಟರ್ ಇತ್ಯಾದಿಗಳನ್ನು ತಾವೇ ತರಬೇಕು. ಮಕ್ಕಳು, ಯುವಕರು, ವಯಸ್ಕರರು ಎಲ್ಲರೂ ಶಿಬಿರದಲ್ಲಿ ಭಾಗವಹಿಸಬಹುದು ಎಂದು ಸಂಯೋಜಕ ಚನ್ನಬಸವ ಪ್ರಧಾನ ಸೇವಕರು ಜಲ್ಲಿಗೇರಿ, ಸಂಘಟಕ ನಿರ್ಮಲಾ ತರವಾಡೆ, ಬಸವರಾಜ ನೆಲಜೇರಿ, ಸುನಿತಾ ದೊಡ್ಡಮನಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಹೆಚ್ಚಿನ 9740484942, 9513142928, 9739692799, 9845327604, 8310074950.

ಠೇವಣಿ ಹಣ ಹಿಂದಿರುಗಿಸದ ಧಾರವಾಡ ವಿಕಾಸ ಅರ್ಬನ್ ಕ್ರೆಡಿಟ್ ಸೊಸೈಟಿಗೆ ದಂಡ ವಿಧಿಸಿ ಮತ್ತು ಪರಿಹಾರ ನೀಡಲು ಆದೇಶ

ಧಾರವಾಡ ಜಿಲ್ಲೆಯ ಕಮಾಲಾಪುರದ ನಿವಾಸಿಗಳಾದ ರೇಣುಕಾ ಬಸರಗಿ ಮತ್ತು ಗೀತಾ ಕಂಬಳಿ ಎಂಬುವವರು ಎದುರುದಾರ ಧಾರವಾಡ ವಿಕಾಸ ಅರ್ಬನ್ ಕ್ರೆಡಿಟ್ ಸೊಸೈಟಿಯಲ್ಲಿ ವಿವಿಧ ದಿನಾಂಕಗಳಂದು ರೂ.4,93,244/-ಗಳನ್ನು ಒಂದು ವರ್ಷ ಮತ್ತು 6 ತಿಂಗಳ ಅವಧಿಗಳಿಗೆ ಮುದ್ದತ್ತುಠೇವಣಿ ಇಟ್ಟಿದ್ದರು. ಠೇವಣಿ ಅವಧಿ ಮುಗಿದ ಮೇಲೆ ಹಣ ಕೊಡುವಂತೆ ದೂರುದಾರರು ಹಲವು ಬಾರಿ ಎದುರುದಾರ ಸೊಸೈಟಿಯವರಿಗೆ ವಿನಂತಿಸಿದರೂ ಅವರು ಠೇವಣಿ ಹಣ ಮತ್ತು ಬಡ್ಡಿಯನ್ನು ವಾಪಸ್ಸು ಕೊಟ್ಟಿರಲಿಲ್ಲ. ಸೊಸೈಟಿಯವರ ಈ ನಡಾವಳಿಕೆಯಿಂದ ತಮಗೆ ಮೋಸವಾಗಿದೆ ಮತ್ತು ಅವರು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಎದುರುದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರಿಬ್ಬರು ದಿ:02/11/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.

ಸದರಿದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಠೇವಣಿ ಅವಧಿ ಮುಗಿದ ಮೇಲೆ ಕರಾರಿನಂತೆ ಬಡ್ಡಿ ಸಮೇತ ಠೇವಣಿದಾರರಿಗೆ ಹಣ ಹಿಂದಿರುಗಿಸುವುದು ಸೊಸೈಟಿಯ ಕರ್ತವ್ಯವಾಗಿದೆ. ಆದರೆ ಠೇವಣಿ ಅವಧಿ ಮುಗಿದ ಸುಮಾರ 2 ರಿಂದ 3 ವರ್ಷ ಕಳೆದರೂ ದೂರುದಾರರಿಗೆ ಠೇವಣಿ ಹಣ ಅಥವಾ ಅದರ ಮೇಲಿನ ಬಡ್ಡಿ ಹಿಂದಿರುಗಿಸದೇ ಇರುವ ಎದುರುದಾರ ಸೊಸೈಟಿಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.

ದೂರುದಾರರಿಗೆ ಅವರ ಠೇವಣಿ ಹಣಒಟ್ಟು ರೂ.4,93,244/- ಮತ್ತು ಅದರ ಮೇಲೆ ಠೇವಣಿ ರಶೀದಿಯಲ್ಲಿ ನಮೂದಿಸಿದ ಬಡ್ಡಿಯಂತೆ ಠೇವಣಿ ಇಟ್ಟ ದಿನದಿಂದ ದೂರುದಾಖಲಿಸುವವರೆಗೂ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಕೊಡಬೇಕು ಮತ್ತು ತೀರ್ಪು ನೀಡಿದ ದಿನಾಂಕದಿಂದ ಹಣ ಸಂದಾಯ ವಾಗುವವರೆಗೂ ಠೇವಣಿ ಹಣದ ಮೇಲೆ ಶೇ8% ರಂತೆ ಬಡ್ಡಿ ಸೇರಿಸಿ ದೂರುದಾರರಿಗೆ ಹಿಂದಿರುಗಿಸುವಂತೆ ಆಯೋಗ ಎದುರುದಾರ ಸೊಸೈಟಿಗೆ ನಿರ್ದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ಹಿಂಸೆಗಾಗಿ ತಲಾ ರೂ.50,000/- ಪರಿಹಾರ ಮತ್ತು ಅವರ ಪ್ರಕರಣ ಖರ್ಚುವೆಚ್ಚ ಅಂತಾ ತಲಾ ರೂ.10,000/-ಗಳನ್ನು ಕೊಡುವಂತೆ ಎದುರುದಾರ ಸೊಸೈಟಿಯವರಿಗೆ ಆಯೋಗ ಆದೇಶಿಸಿದೆ.

Related Post

Leave a Reply

Your email address will not be published. Required fields are marked *