ಆತ್ಮೀಯ ನಾಗರಿಕರೇ ಹೆಣ್ಣು ಮಕ್ಕಳ ಉದ್ಧಾರಕ್ಕಾಗಿ ಮತ್ತು ಅವರ ಸಬಲೀಕರಣಕ್ಕಾಗಿ ಸರ್ಕಾರವು ಭಾಗ್ಯಲಕ್ಷ್ಮಿ ಬಾಂಡ್ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಿಂದ ಹೆಣ್ಣುಮಕ್ಕಳಿಗೆ ಎರಡು ಲಕ್ಷ ರೂಪಾಯಿಗಳನ್ನು ಅವರ ಜೀವನ ಉದ್ಧಾರಕ್ಕಾಗಿ ಸರ್ಕಾರವು ನೀಡುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಯಾವಾಗ ಅರ್ಜಿ ಸಲ್ಲಿಸಬೇಕು ಮಗುವಿಗೆ ಎಷ್ಟು ವರ್ಷ ಆಗಿರಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಈ ಯೋಜನೆ ಉದ್ದೇಶವೇನು?
ನೀವು ತಿಳಿದಿರಬಹುದು ಒಂದು ಹೆಣ್ಣು ಮಗುವಿಗೆ ಮದುವೆಯ ಸಮಯದಲ್ಲಿ ಮದುವೆ ಖರ್ಚನ್ನು ನೀಗಿಸಲು ಈ ಯೋಜನೆ ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ಶಿಶು ಹತ್ತೆ ಮತ್ತು ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ.
ಯಾವಾಗ ಬಾಂಡ್ ಮಾಡಿಸಬೇಕು?
ಒಂದು ಹೆಣ್ಣು ಮಗು ನಿಮ್ಮ ಮನೆಯಲ್ಲಿ ಹುಟ್ಟಿದ ತಕ್ಷಣ 50,000ಗಳ ಬಾಂಡನ್ನು ನೀವು ಮಾಡಿಸಬೇಕಾಗುತ್ತದೆ. ಈ ಯೋಜನೆ ಅಡಿಯಲ್ಲಿ ಹೆಣ್ಣು ಮಗುವಿಗೆ ಜನ ನೀಡಿದ ತಾಯಿಗೆ 5100ಗಳನ್ನು ಸರ್ಕಾರವು ನೀಡುತ್ತದೆ. ಸರ್ಕಾರವು ಆಕೆ ಶಿಕ್ಷಣ ಮತ್ತು ಮದುವೆ ಖರ್ಚನ್ನು ನೀಗಿಸಲು ಈ ಯೋಜನೆಯಿಂದ ಆಯ್ಕೆಯು 21 ವರ್ಷ ಮುಟ್ಟಿದ ಕೂಡಲೇ ಆಕೆ ಖಾತೆಗೆ ಎರಡು ಲಕ್ಷ ರೂಪಾಯಿಗಳನ್ನು ಜಮಾ ಆಗುತ್ತದೆ.
ಈ ಯೋಜನೆಯಿಂದ ಶಿಕ್ಷಣಕ್ಕೆ ಎಷ್ಟು ಹಣ ನೀಡುತ್ತಾರೆ?
ಆ ಹೆಣ್ಣು ಮಗು 6ನೇ ತರಗತಿ ಮುಟ್ಟಿದಾಗ ಆಕೆಗೆ ರೂ.3,000ಗಳನ್ನು ನೀಡುತ್ತಾರೆ, ಆ ಹೆಣ್ಣು ಮಗು 8ನೇ ತರಗತಿ ಮುಟ್ಟಿದಾಗ ಆಕೆಗೆ 5000ಗಳನ್ನು ನೀಡುತ್ತಾರೆ. 10ನೇ ತರಗತಿ ಮುಟ್ಟಿದಾಗ 7,000ಗಳನ್ನು ನೀಡುತ್ತಾರೆ. ಹಾಯ್ ನಮಗೂ ಪಿಯುಸಿ ಕಲಿಯುವಾಗ 8,000 ನೀಡುತ್ತಾರೆ. ಒಟ್ಟಾರೆ ಹಾಗೆ ಶಿಕ್ಷಣವನ್ನು ಸರ್ಕಾರವು ನೋಡಿಕೊಂಡು ಅವಳಿಗೆ 23000 ರೂಪಾಯಿಗಳನ್ನು ನೀಡಿ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಸರ್ಕಾರವು ಮುಂದಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ
ಮೊದಲು ಹೆಣ್ಣು ಮಗುವಿಗೆ ಜನ ನೀಡುವ ತಾಯಿಯು ಮದುವೆ ಆಗಿರಬೇಕು ಮತ್ತು ಹೆಣ್ಣು ಮಗುವಿಗೆ ಜನ್ಮ ನೀಡಿದ ತಕ್ಷಣ ಜನನ ಪ್ರಮಾಣ ಪತ್ರವನ್ನು ತೆಗೆಯಿಸಿ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಆ ಹೆಣ್ಣು ಮಗು ಮಾರ್ಚ್ 31 2006 ಮೇಲ್ಪಟ್ಟು ಜನನ ಹೊಂದಿರಬೇಕಾಗುತ್ತದೆ. ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಈ ಯೋಜನೆಯಿಂದ ಲಾಭವನ್ನು ಪಡೆಯಲು ಸರ್ಕಾರ ತಿಳಿಸಿದೆ.
ಅರ್ಜಿ ಹೇಗೆ ಸಲ್ಲಿಸಬೇಕು?
ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಗ ನೀವು ಒಂದು ವೆಬ್ಸೈಟ್ ಗೆ ಭೇಟಿ ನೀಡುತ್ತಿರಿ.
wcd.nic.in ಅಲ್ಲಿರುವಂತಹ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ನಾವು ಕೆಳಗೆ ತಿಳಿಸುವ ಎಲ್ಲ ದಾಖಲಾತಿಗಳನ್ನು ವಿವರವಾಗಿ ಅಲ್ಲಿ ತುಂಬಿ ಅಂಗನವಾಡಿ ಕೇಂದ್ರದಲ್ಲಿ ಗೆಲ್ಲ ದಾಖಲಾತಿಗಳನ್ನು ಕೊಡುವುದು ಅತಿ ಮುಖ್ಯವಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು?
ಆ ಹೆಣ್ಣು ಮಗುವಿನ ಪೋಷಕರ ಆಧಾರ್ ಕಾರ್ಡ್, ಅವರ ವಿಳಾಸ, ಆ ಪೋಷಕರು ಮದುವೆಯಾಗಿರುವ ಪ್ರಮಾಣ ಪತ್ರ, ಅರ್ಜಿ ಸಲ್ಲಿಸುವ ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ. ಜಾತಿ ಪ್ರಮಾಣ ಪತ್ರವಿದ್ದರೆ ಅದನ್ನು ಸಲ್ಲಿಸಿ. ಪೋಷಕರ ಮತ್ತು ಆ ಹೆಣ್ಣು ಮಗುವಿನ ಫೋಟೋ ಮತ್ತು ಬ್ಯಾಂಕ್ ಪಾಸ್ ಬುಕ್ ಎಲ್ಲವನ್ನು ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸಬೇಕು.
🌱ಕೃಷಿಗೆ ಜೈವಿಕ ಪರಿಹಾರ ದೊರೆಯಿತು, ಬೆಳೆಯ ಗುಣಮಟ್ಟ ಮತ್ತು ಇಳುವರಿಯನ್ನು ಹೆಚ್ಚಿಸಿ, ಏಕದಳ, ಬೇಳೆಕಾಳು, ಎಣ್ಣೆಕಾಳು, ತರಕಾರಿ ಮತ್ತು ತೋಟಗಾರಿಕಾ
ಬೆಳೆಗಳಲ್ಲಿ ಬಳಸಬಹುದು*
✅ಕೈಮಗ್ಗ ಮತ್ತು ಜವಳಿ ನೇಕಾರರಿಗೆ ಸಾಲ ಸೌಲಭ್ಯ*💸💸
🐓ಕೋಳಿ ಫಾರ್ಮ್ ಪ್ರಾರಂಭಕ್ಕೆ 50% ಸಾಲ ಸೌಲಭ್ಯ, ✅ಕೂಡಲೇ ಅರ್ಜಿ ಸಲ್ಲಿಸಿ ಸರ್ಕಾರದಿಂದ ಹಣ ಪಡೆಯಿರಿ*
ಇನ್ನು ಯಾರು ಯಾರಿಗೆ ಬಂದಿಲ್ಲ ನೀವು ಈ ಕೆಲಸ ಮಾಡಿ ಹಾಗೂ ಹಣ ಪಡೆಯಿರಿ, ಸ್ಟೇಟಸ್ ಚೆಕ್ ಮಾಡಿ*