Pradhan Mantri Garib Kalyan Anna Yojana. ಭಾರತೀಯ ಆಹಾರ ನಿಗಮವು (ಎಫ್‌ಸಿಐ) ಎರಡು ಸಹಕಾರಿ ಸಂಸ್ಥೆಗಳಾದ ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED) ಮತ್ತು ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) 5 ಲಕ್ಷ ಟನ್ ಅಕ್ಕಿಯನ್ನು ನೀಡುತ್ತದೆ. ರಿಲಯನ್ಸ್ ಸ್ಟಾರ್ಟ್ ಬಜಾರ್ ನಲ್ಲೂ 29 ರೂ. ಬೆಲೆಗೆ ಅಕ್ಕಿ ಖರೀದಿ ಮಾಡಿ.
ಯಾವ ಯಾವ ಧಾನ್ಯಗಳಿಗೆ ಸಿಗುತ್ತವೆ?
• ಅಕ್ಕಿಗೆ 29 ರೂಗಳಿಗೆ ಅಕ್ಕಿ ಮಾರಾಟ ಮಾಡಲಾಗುತ್ತಿದೆ. • ಗೋಧಿಯನ್ನು ಕೆ.ಜಿ.ಗೆ 50 ರೂಗಳಿಗೆ ಅಕ್ಕಿ ಮಾರಾಟ ಮಾಡಲಾಗುತ್ತಿದೆ.
• ಹೆಸರು ಕಾಳು 90 ರೂಗಳಿಗೆ ಅಕ್ಕಿ ಮಾರಾಟ ಮಾಡಲಾಗುತ್ತಿದೆ.
• ತೊಗರಿ ಬೇಳೆ 60 ರೂಗಳಿಗೆ ಅಕ್ಕಿ ಮಾರಾಟ ಮಾಡಲಾಗುತ್ತಿದೆ.
ಪ್ರತಿ ಕೆಜಿಗೆ 29 ರೂ.ಗಳ ಸಬ್ಸಿಡಿ ದರದಲ್ಲಿ ಭಾರತ್ ಅಕ್ಕಿ’ಯನ್ನು ಮಂಗಳವಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿದೆ. ಸಬ್ಸಿಡಿ ಅಕ್ಕಿ 5 ಕೆಜಿ ಮತ್ತು 10 ಕೆಜಿ ಪ್ಯಾಕ್‌ಗಳಲ್ಲಿ ಲಭ್ಯವಿರುತ್ತದೆ. ಕಳೆದ ಒಂದು ವರ್ಷದಲ್ಲಿ ಧಾನ್ಯದ ಚಿಲ್ಲರೆ ಬೆಲೆಯಲ್ಲಿ ಶೇ.15ರಷ್ಟು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದರ ಏರಿಕೆಯಿಂದ ತುಸು ಪರಿಹಾರ ನೀಡಲು ಸರ್ಕಾರ ಇದನ್ನು ಒದಗಿಸುತ್ತಿದೆ. ಆಹಾರ ಸಚಿವ ಪಿಯೂಷ್ ಗೋಯಲ್ ಅವರು, ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿ ಭಾರತ್ ಅಕ್ಕಿ ವಿತರಣೆಯನ್ನು ಪ್ರಾರಂಭಿಸದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಇದರ ಮೊದಲ ಹಂತದಲ್ಲಿ ಭಾರತೀಯ ಆಹಾರ ನಿಗಮವು ಎರಡು ಸಹಕಾರಿ ಸಂಸ್ಥೆಗಳಾದ ನ್ಯಾಷನಲ್ ಅಗ್ರಿಕಲ್ಬರಲ್ ಕೋಆಪರೇಟಿವ್ ಮಾರ್ಕೆ ಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ನ್ಯಾಷನಲ್ ಕೋಆಪರೇಟಿವ್ ಕನ್ಸೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಚಿಲ್ಲರೆ ಸರಪಳಿ ಕೇಂದ್ರೀಯ ಭಂಡಾರ್‌ಗೆ 5 ಲಕ್ಷ ಟನ್ ಅಕ್ಕಿಯನ್ನು ನೀಡುತ್ತದೆ. ಈ ಏಜೆನ್ಸಿಗಳು ಅಕ್ಕಿಯನ್ನು 5 ಕೆಜಿ ಮತ್ತು 10 ಕೆಜಿಗಳಲ್ಲಿ ಪ್ಯಾಕ್ ಮಾಡುತ್ತವೆ ಮತ್ತು “ಭಾರತ್” ಬ್ರಾಂಡ್‌ನ ಅಡಿಯಲ್ಲಿ ತಮ್ಮ ಔಟ್‌ಲೆಟ್‌ಗಳ ಮೂಲಕ ಚಿಲ್ಲರೆ ಮಾರಾಟ ಮಾಡುತ್ತವೆ. ಅಕ್ಕಿಯನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ಗಳ ಮೂಲಕವೂ ಮಾರಾಟ ಮಾಡಲಾಗುತ್ತದೆ.
ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಮೂಲಕ ಅದೇ ದರದಲ್ಲಿ ಬೃಹತ್ ಬಳಕೆದಾರರಿಗೆ ಅಕ್ಕಿಯನ್ನು ಮಾರಾಟ ಮಾಡಲು ಮುಂದಾದಾಗ ದೊರೆತ ನೀರಸ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಸರ್ಕಾರ ಈಅಖ ಅಕ್ಕಿಯ ಚಿಲ್ಲರೆ ಮಾರಾಟವನ್ನು ಆಶ್ರಯಿಸಿದೆ. ಅದೇ ಏಜೆನ್ಸಿಗಳ ಮೂಲಕ ಭಾರತ್ ಚನ್ನಾ ಕೆ.ಜಿಗೆ 27.50 ರೂ.ಗೆ ಮತ್ತು ಭಾರತ್ ಅಟ್ಟ ಕೆಜಿಗೆ 60 ರೂ. ಗೆ ಮಾರಾಟವಾಗುತ್ತಿವೆ. ಅವುಗಳಿಗೆ ಸಿಗುತ್ತಿರು ವಂತೆಯೇ ಭಾರತ್ ಅಕ್ಕಿಗೂ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂದು ಸರ್ಕಾರ ಆಶಿಸಿದೆ.
ದೇಶದ ಅಭಿವೃದ್ಧಿಗೆ ಕೇಂದ್ರ ಬಜೆಟ್ ನೀಲ ನಕ್ಷೆ
ಜನರ ಆರ್ಥಿಕ ಅಭಿವೃದ್ಧಿಯ ಮೇಲೆ ದೇಶದ ದೇಶದ ಅಭಿವೃದ್ಧಿಯು ಅವಲಂಬಿಸಿದೆ. ಕೇಂದ್ರದ ಬಜೆಟ್ ದೇಶದ ಅಭಿವೃದ್ಧಿಗೆ ನೀಲನಕ್ಷೆಯಂತೆ ಪ್ರಮುಖ ಪಾತ್ರ ವಹಿಸಿಸುತ್ತದೆ ಎಂದು ಕರ್ನಾಟಕ ರಾಜ್ಯ ಚಾರ್ಟಡ್್ರ ಅಕೌಂಟೆಂಟ್ ಅಸೋಸಿಯೇಷನ್ ಮಾಜಿ ಅಧ್ಯಕ್ಷರಾದ ಚಾರ್ಟಡ್ ಅಕೌಂಟೆಂಟ್ ಕುಮಾರ್ ಜಿಗಜಿನ್ನಿ ಹೇಳಿದರು.
ನಗರದ ಪ್ರತಿಷ್ಠಿತ ಬಿ.ವಿ.ವಿ ಸಂಘದ ಇನ್ ಸ್ಪೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಬಿಮ್ಸ್) ನಲ್ಲಿ ಅಂತರ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ “ಬಜೆಟ್ ಪೆ ಚರ್ಚಾ” ಸ್ಪರ್ದೇಗೆ ಚಾಲನೆ ನೀಡಿ ಮಾತನಾಡಿದರು. ದೇಶದ ಸುಸ್ಥಿರ ಅಭಿವೃದ್ಧಿಗೆ ಸರ್ಕಾರಗಳು ಮಂಡಿಸುವ ಬಜೆಟ್‌ಗಳು ಬಹು ಪ್ರಾಮುಖ್ಯತೆಯನ್ನು ಪಡೆದಿವೆ. ಬಜೆಟ್ ನ ಆರ್ಥಿಕ ಅಭಿವೃದ್ಧಿ ಕುರಿತು ಅಂಕಿ ಅಂಶಗಳ ವಿಶ್ಲೇಶಾತ್ಮಕವಾಗಿ ಮನದಟ್ಟಾಗಬೇಕಿದೆ, ಬಜೆಟ್ ನ 1 ಅಂಶದ ಟೀಕೆಯಿಂದ ಇಡಿ ಬಜೆಟ್‌ನ್ನು ಅಲ್ಲಗಳೆಯಬಾರದು, ಬಜೆಟ್‌ಮೆಲೆ ಆರೋಗ್ಯರಹಿತವಾದ ಪ್ರಾಮಾಣಿಕ ಗೌರವಯುತ ಚರ್ಚೆಗಳಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಮಾತನಾಡಿದ ಮಹಾವಿದ್ಯಾಲಯ ಪ್ರಾಚಾರ್ಯ ಡಾ॥ ಪ್ರಕಾಶ್ ಕೆ ವಡವಡಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರತಿವರ್ಷ ಬಜೆಟ್ ಮಂಡನೆ ಮಾಡುವುದು ಆರ್ಥಿಕ ಅಭಿವೃದ್ಧಿಯನ್ನು ಜೋತಗೆ ದೇಶದ ಪ್ರತಿ ನಾಗರಿಕನ ಅಭಿವೃದ್ಧಿ ಹೊಂದುವ ಯೋಜನೆ ಕೋಡುವುದು ಬಜೆಟ್ ನ ಆಶಯವಾಗಿದೆ.ಆರೋಗ್ಯ ಸಂಪತ್ತು,ಉತ್ತಮ ಶಿಕ್ಷಣ,ಉದ್ಯೋಗಾವಕಾಶಗಳು, ಇವುಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರ ಬಜೆಟ್ ಮಂಡಿಸುತ್ತವೆ, ವಿದ್ಯಾರ್ಥಿಳಿಗೆ ಬಜೆಟ್‌ನ ಅರಿವು ಮುಖ್ಯ ಎಂದರು.
ಬಜೆಟ್ ಪೆ ಚರ್ಚಾ ಕುರಿತು ಸ್ಪರ್ದೆಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದು, ಮುಂದ್ರಾ ಆರ್. ಎನ್ ಆಂಡ್ ಕಂಪನಿಯ ಸೀನಿಯರ್ ಪಾಕ್ಟರ್. ಸಿಎ ರಾಧೇಶಾಮ್ ಮುಂದ್ರಾ, ಸಿಎ ಗೋವಿಂದ್ ದರಾಕ್, ರಾಠಿ ಆಂಡ್ ಅಸೋಸಿಯೆಟ್ಸ್, ಚಾರ್ಟಸ್್ರ ಅಕೌಂಟೆಂಟ್ಸ್ ಫರ್ ಬಾಗಲಕೋಟಎಯ ಅನುಪ್ ರಾಠಿ ರವರು ತೀರ್ಪುಗಾರರಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಬಿ.ವಿ.ವಿ ಸಂಘದ ಸದಸ್ಯರಾದ ಬಿ.ಎಸ್. ಹಿರೆಗೌಡರ್ ವಕೀಲರು ಮತ್ತು ಎಸ್. ಎ ನಾವಲಗಿರವರು ಹಾಗೂ ಸಂಸ್ಥೆಯ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಶ್ರದ್ಧಾ ಸರ್‌ದೇಸಾಯಿ ಹಾಗೂ ರೋಹಿತ್ ಹಂಗರಗಿ ರವರು ನಿರ್ವಹಿಸಿದರು ಮತ್ತು ಕುಮಾರಿ ಐಶ್ವರ್ಯ ಪಾಟಿಲ್ ವಂದಿಸಿದರು.