Breaking
Tue. Dec 17th, 2024

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ವಿರುದ್ಧ ಪ್ರತಿಭಟನೆ ಮೂಲಕ ಕೇಂದ್ರಕ್ಕೆ ಬಿಸಿ

Spread the love

ಜಂತರ್ ಮಂತರ್‌ನಲ್ಲಿ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆ ಸಂದ ರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಕ್ಕೆ ತೆರಿಗೆ ಹ೦ಚಿ ಕೆಯಲ್ಲಿ ಮಾಡಿರುವ ಅನ್ಯಾಯ, ಅನುದಾನ ತಾರತಮ್ಯದ ವಿರುದ್ಧ ಜಂತರ್ ಮಂತರ್‌ನಲ್ಲಿ ಚಳವಳಿ ನಡೆಸಿದ್ದವೆ. ಇದು ರಾಜಕೀಯ ಚಳವಳಿ ಅಲ್ಲ, ಕನ್ನಡಿಗರ ಹಿತಕಾಯುವ ಚಳವಳಿ ಎಂದರು.

ಕಳೆದ ಐದಾರು ವರ್ಷಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ ನ್ಯಾಯಯುತ ವಾಗಿ ಬರಬೇಕಾಗಿದ್ದ | ಲಕ್ಷ 87 ಸಾವಿರ ಕೋಟಿ ರೂ.ಗಳ ಅನುದಾನ ಬಂದಿಲ್ಲ. ಈ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಿದ್ದೇವೆ ಎಂದರು. ಜಂತರ್ ಮಂತರ್ ಐತಿಹಾಸಿಕ ಸ್ಥಳವಾಗಿದ್ದು ಅನೇಕ ಚಳವಳಿಗಳಿಗೆ ‘ ಸಾಕ್ಷಿಯಾದ ಸ್ಥಳ. ಈ ಸ್ಥಳದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರು, ಶಾಸಕರು ಹೋರಾಟ ನಡೆಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧದ ಈ ಹೋರಾಟವನ್ನು ಪಕ್ಷಾತೀತ ಹೋರಾಟವಾಗಿದೆ ಎಂದು ಹೇಳಿದರು.

ಇದು ಐತಿಹಾಸಿಕ ಪ್ರತಿ ಆಯೋಗದಲ್ಲಿ ರಾಜ್ಯಕ್ಕೆ ತೆರಿಗೆ ಪಾಲು ಶೇ. 4.71 ರಷ್ಟು ಬಂದಿತ್ತು. 15ನೇ ಹಣಕಾಸು ಆಯೋಗದಲ್ಲಿ ಇದು ಶೇ. 3.64 ಕ್ಕೆ ಇಳಿಯಿತು. ಇದರಿಂದ ರಾಜ್ಯಕ್ಕೆ ಬರುವ ತೆರಿಗೆ ಪಾಲಿನಲ್ಲಿ ಶೇ. 40 ರಿಂದ 45 ರವರೆಗೆ ಕಡಿತ ವಾಗಿದೆ ಎಂದರು. 14ನೇ ಹಣಕಾಸು ಯೋಜ ನೆಯ ಶಿಫಾರಸ್ಸಿನಲ್ಲೇ 15ನೇ ಹಣಕಾಸು ಆಯೋಗದಲ್ಲಿ ಅನುಸರಿಸಿದ್ದರೆ ರಾಜ್ಯಕ್ಕೆ 6298 ಕೋಟಿ ರೂ. ಬರು ತ್ತಿತ್ತು ಎಂದರು.

ರಾಜ್ಯದಿಂದ ಒಟ್ಟು 4 ಕೋಟಿ 30 ಲಕ್ಷ ರೂ. ತೆರಿಗೆ ಮೊತ್ತ ವನ್ನು ಕೇಂದ್ರಕ್ಕೆ ನೀಡಲಾಗುತ್ತಿದೆ. ಆದರೆ, 100 ರೂ. ತೆರಿಗೆಯಲ್ಲಿ ರಾಜ್ಯಕ್ಕೆ ಕೇವಲ 12 ರಿಂದ 14 ರೂ.ದೊರೆಯುತ್ತಿದೆ. ಇದು ರಾಜ್ಯಕ್ಕೆ ಆದ ಅನ್ಯಾಯ ಎಂದರು ರಾಜ್ಯದಿಂದ ಬಿಜೆಪಿಯ 25 ಸಂಸಿ ದರು ಆಯ್ಕೆಯಾಗಿದ್ದರೂ ಒಬ್ಬರೂ ಕೇಂದ್ರದ ಮುಂದೆ ಮಾತನಾಡಿಲ್ಲ. ರಾಜ್ಯದ ಮಾಜಿ ಮುಖ್ಯಮಂತ್ರಿ ಗಳಾದ ಯಡಿಯೂರಪ್ಪರಾಗಲೀ, ಬಸವರಾಜಬೊಮ್ಮಾಯಿ ಯಾಗಲಿ ಅನ್ಯಾಯವನ್ನು ಸರಿಪಡಿಸುವ ಕೆಲಸ ಮಾಡಿಲ್ಲ. ಈ ಎಲ್ಲ ಕಾರಣಗಳಿಂ ದಾಗಿ ಇಂದು ದೆಹಲಿಯಲ್ಲಿ ಹೋರಾಟ ನಡೆದಿದೆ ಎಂದರು.

ರಾಜ್ಯದ ಬಿಜೆಪಿ ಸಂಸದರು ಕೋಲೆ ಆಡಿಸುತ್ತಾರೆ ಎಂದು ಟೀಕಿಸಿದರು. ಉತ್ತರ ಪ್ರದೇಶ ರಾಜ್ಯಕ್ಕೆ 2 ಲಕ್ಷ 80 ಸಾವಿರ ಕೋಟಿ ರೂ. ಕೇಂದ್ರ ನೀಡುತ್ತಿದೆ. ಅಂತೆಯೇ ಬಿಹಾರ, ಮಧ್ಯಪ್ರದೇಶ ರಾಜಸ್ಥಾನಗಳಿಗೂ ಹೆಚ್ಚಿನ ಹಣ ನೀಡಲಾಗುತ್ತಿದೆ. ಜನಸಂಖ್ಯೆ ತಲಾ ಆದಾಯ ಸಮುದಾಯ ಅಭಿವೃದ್ಧಿ ಸೇರಿದಂತೆ ಹಲವು ವರಾನದಂಡಗಳಿಂದ ಅನುದಾನ ಹಂಚಿಕೆಯನ್ನು ನಿರ್ಧರಿಸಲಾಗುತ್ತಿದೆ. ಈ ರಾಜ್ಯಗಳು ಜನಂಸಖ್ಯಾ ನಿಯಂತ್ರಣದ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ ಅವರು, 15ನೇ ಹಣಕಾಸು ಯೋಜ ನೆಯಲ್ಲಿ 2011ರ ಜನಗಣತಿಯನ್ನು ಪರಿಗಣಿಸುತ್ತಿದ್ದಾರೆ ಎಂದರು.

GST ಅಂದ್ರೆ : (SGST, CGST, IGST)

SGST: state goods and service tax
• 100% ರಾಜ್ಯಸರ್ಕಾರಕ್ಕೆ ನೇರವಾಗಿ ಬರುತ್ತೆ. IGST:inter state goods&service tax
50%ರಾಜ್ಯ ಸರ್ಕಾರಕ್ಕೆ ನೇರವಾಗಿ ಬರುತ್ತೆ,
50% ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ (ಅದರಲ್ಲಿ ಮತ್ತೆ 41% ಮರಳಿ ರಾಜ್ಯಗಳಿಗೆ)

CGST: central goods & service tax
41%ಟ್ಯಾಕ್ಸ್ 15ನೇಹಣಕಾಸು ಆಯೋಗದ ಸೂಚನೆ ಮೇರೆಗೆ ಹಂಚಿಕೆ ಆಗುತ್ತೆ
ಮಿಕ್ಕ 59% ಕೇಂದ್ರದ ಯೋಜನೆಗಳಿಗೆ ಬಳಕೆಯಾಗುತ್ತದೆ. Direct tax ; Income tax filing, corporate tax.
59%ಕೇಂದ್ರ ಸರ್ಕಾರದ ಯೋಜನೆಗಳಿಗೆ
41%‌ರಾಜ್ಯಸರ್ಕಾರಗಳಿಗೆ 15ನೇಹಣಕಾಸು ಆಯೋಗದ ಶಿಫಾರಸ್ಸಿನ ಮೇಲೆ ಹಂಚಿಕೆ.

• ಪೆಟ್ರೋಲ್ ಡಿಸೆಲ್ ತೆರಿಗೆ (ಕರ್ನಾಟಕ)- 100ರೂಪಾಯಿ ಪೆಟ್ರೋಲ್ ನಲ್ಲಿ, ರಾಜ್ಯ ತೆರಿಗೆ 21 ರೂಪಾಯಿ, ಕೇಂದ್ರ ತೆರಿಗೆ 19.9 ರೂಪಾಯಿ.
• 100 ರೂಪಾಯಿ ಡಿಸೆಲ್ನಲ್ಲಿ- ರಾಜ್ಯದ ತೆರಿಗೆ 21 ರೂಪಾಯಿ. ಕೇಂದ್ರದ ತೆರಿಗೆ 15.8 ರೂಪಾಯಿ.
• ಅಬಕಾರಿ ಸುಂಕ [ಮದ್ಯ ಸಾರಾಯಿ}- 18% ಕೇಂದ್ರ ಸರ್ಕಾರ. 83% ಕರ್ನಾಟಕ ರಾಜ್ಯ ಸರ್ಕಾರ.

ನಿಮಗಿದು ತಿಳಿದಿರಲಿ; ಕೆಂದ್ರದ ಒಟ್ಟು ತೆರಿಗೆಯಲ್ಲಿ, ರಾಜ್ಯಗಳಿಗೆ 41% ನೇರವಾಗಿ ಬರುತ್ತೆದೆ. ಇನ್ನು ಉಳಿದ 59% ಹಣದಲ್ಲಿ 1)ಸಾಲದ ಬಡ್ಡಿ 2)ಸಬ್ಸಿಡಿಗಳು, 3)ವಿಶೇಷ ಯೋಜನೆಗಳು, 4)ಸೈನ್ಯ, 5)ತಂತ್ರಜ್ಞಾನ, 6)ಅಭಿವೃದ್ಧಿ ಕಾರ್ಯಗಳನ್ನು 7)ಆಹಾರ ಭದ್ರತೆ (5ಕೆಜಿ ಅಕ್ಕಿ) 8)ಆರೋಗ್ಯ ಯೋಜನೆಗಳಿಗೆ 9)ಸರ್ಕಾರಿ ಸಂಬಳಗಳಿಗೆ, 10)ರಾಜ್ಯಗಳಿಗೆ ವಿಶೇಷ ಅನುದಾನ, 11)ರಾಜ್ಯಗಳಿಗೆ ಸಾಲ, 12)ರಾಜ್ಯಗಳ ಜೊತೆ ಸಹಭಾಗಿತ್ವದ ಯೋಜನೆಗಳಿಗೆ ವ್ಯಯ ಮಾಡುತ್ತಿದ್ದಾರೆ. ನನ್ನಂತೆಯೇ ತಾವೂ ಸಹ ನಮ್ಮ ತೆರಿಗೆ ಅರ್ಥ ಮಾಡಿಕೊಳ್ತಿರಿ/ ತಿಳಿದುಕೊಳ್ತಿರಿ ಅನ್ಕೊಂಡಿದ್ದೀನಿ.

Related Post

Leave a Reply

Your email address will not be published. Required fields are marked *