ಲೋಕಸಭಾ ಚುನಾವಣೆ 2024 ಚುನಾವಣೆ ನೀತಿ ಸಂಹಿತೆ ಜಾರಿ. ಸಿ- ವಿಜಿಲ್ ಆ್ಯಪ್ ಮೂಲಕ ಚುನಾವಣಾ ಸಂಬಂಧಿ ದೂರು ನೀಡಿ, ನ್ಯಾಯಸಮ್ಮತ ಚುನಾವಣೆಗೆ ನಮ್ಮೊಂದಿಗೆ ಕೈಜೋಡಿಸಿ. ಸಕ್ಷಮ್ ದಿವ್ಯಾಂಗರ ಅನುಕೂಲಕ್ಕಾಗಿ ರೂಪಿಸಿದ ಆ್ಯಪ್. ಮತದಾರರು ತಮ್ಮ ದೂರು- ಸಮಸ್ಯೆಗಳು ಏನೇ ಇದ್ದರೂ ಸಹಾಯವಾಣಿ 1950ಕ್ಕೆ ಕರೆ ಮಾಡಿ. ಜಾಗೃತ ಮತದಾರ, ಸದೃಢ ಪ್ರಜಾಪ್ರಭುತ್ವ.
ಸಿ- ವಿಜಿಲ್ ಆ್ಯಪ್ ಡೌನ್‌ಲೋಡ್ ಮಾಡಲು ಸ್ಕ್ಯಾನ್ ಮಾಡಿ
ಮತದಾರರು ತಮ್ಮ ದೂರು- ಸಮಸ್ಯೆಯನ್ನು ನೊಂದಣಿ ಮಾಡುವುದು ಹೇಗೆ?
ಸಿ- ವಿಜಿಲ್ ಆ್ಯಪ್ ಡೌನ್‌ಲೋಡ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ. Download ಮಾಡಿ open ಮಾಡಿ. https://play.google.com/store/apps/details?id=in.nic.eci.cvigil
ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ ನಿಮ್ಮ ಭಾಷೆ select ಮಾಡಿ. Get started ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಆಮೇಲೆ ನಿಮ್ಮ ಮೊಬೈಲ್ ಸಂಖ್ಯೆ ಹಾಕಿ, ನಂತರ OTP ಹಾಕಿ.
ನಿಮ್ಮ ಹೆಸರು, ರಾಜ್ಯ, DISTRICT, ASSEMBLY , PINCODE ಹಾಕಿ login ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
PHOTO, VIDEO, AUDIO ಮೂಲಕ ನಿಮ್ಮ ಕಂಪ್ಲೈಂಟ್ ಅಥವಾ ದೂರನ್ನು ನೊಂದಾಯಿಸಿ.
ಸಕ್ಷಮ್: ದಿವ್ಯಾಂಗರ ಅನುಕೂಲಕ್ಕಾಗಿ ರೂಪಿಸಿದ ಆ್ಯಪ್ download ಮಾಡಿ.
https://play.google.com/store/apps/details?id=pwd.eci.com.pwdapp
ಸೈನಿಕ ಕಲ್ಯಾಣ ಇಲಾಖೆಯಿಂದ 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಬಾಗಲಕೋಟೆಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಇಂದ ಜನವರಿ 2025ನೇ ಅಧಿವೇಶನಕ್ಕಾಗಿ ಉತ್ತರಾಖಂಡ ರಾಜ್ಯದ ಡೆಹರಾಡೂನ ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ನಲ್ಲಿ 8ನೇ ತರಗತಿ ಪ್ರವೇಶ ಬಯಸುವ ರಾಜ್ಯದ ಬಾಲಕ ಹಾಗೂ ಬಾಲಕಿಯರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತಾ ಪ್ರವೇಶ ಪರೀಕ್ಷೆಯು ಬೆಂಗಳೂರಿನ ಕೇಂದ್ರದಲ್ಲಿ ಜೂನ್ 01 ರಂದು ನಡೆಯಲಿದೆ. ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಹಾಗೂ ದಿನಾಂಕ: 01-01-2025 ರಂತೆ 11.5 ವರ್ಷದಿಂದ 13 ವರ್ಷದೊಳಗಿನ (ದಿನಾಂಕ: 02-01-2012 ರಿಂದ 01-07-2013 ರೊಳಗೆ ಜನಿಸಿರುವ ) ಬಾಲಕರು ಮತ್ತು ಬಾಲಕಿಯರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರಿರುತ್ತಾರೆ. ಪುನರ್ವಸತಿ ಇಲಾಖೆ, ಬಾಗಲಕೋಟೆ ಇವರ ಕಾರ್ಯಾಲಯಕ್ಕೆ ಅಥವಾ ದೂ.ಸಂ: 08354-235434 ಗೆ ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ಚಸತಿ ಇಲಾಖೆಯ ಉಪನಿರ್ದೇಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರ ಜೊತೆ ಒಂದು ಸಂವಾದ ಕಾರ್ಯಕ್ರಮವನ್ನು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ
ಕೃಷಿಯಲ್ಲೂ ಸಂಸ್ಕಾರ ಇರುವ ದೇಶ ಭಾರತದಲ್ಲಿ ಕೃಷಿಕರು ಕೃಷಿ ಸಂಸ್ಕಾರ ಮರೆತು ಭೂತಾಯಿಗೆ, ಜೀವಜಲ ಗಂಗೆಗೆ ವಿಷವುಣಿಸುತ್ತಿದ್ದಾರೆ. ರೈತ ಸಾಯಲೂ ಸಹಿತ ಪರಾವಲಂಬಿಯಾಗುವಂಥ ದುಸ್ಥಿತಿಗಿಳಿದಿದ್ದಾನೆ. ಇತ್ತೀಚಿನ ಸರ್ಕಾರಗಳು ರೈತರನ್ನು ಭಿಕ್ಷುಕರನ್ನಾಗಿ ಮಾಡುತ್ತಿವೆಯೇನೋ ಅನ್ನಿಸುತ್ತಿದೆ. ರೈತನಲ್ಲಿ ಕೊಡುವ ಸಂಸ್ಕೃತಿ ಹಾಳಾಗಿ ಬೇಡುವ ಸಂಸ್ಕೃತಿ ಬಂದಿದೆ. ರೈತರು ಬೀಜ, ಕೀಟನಾಶಕ ಸ್ವಂತವಾಗಿ ತಯಾರಿಸುವುದನ್ನು ಮರೆತು ಬಜಾರ್‌ನಿಂದ ಖರೀದಿಸುತ್ತಿರುವುದರಿಂದಾಗಿ ಇಂದಿನ ಕೃಷಿ ಬಜಾರ್ ಕೇಂದ್ರಿತವಾಗುತ್ತಿದೆ ಎಂದು ಮಹಾರಾಷ್ಟ್ರದ ಕಣ್ಣೀರಿಯ ಸಿದ್ದಗಿರಿ ಸಂಸ್ಥಾನಮಠದ ಸಾವಯವ ಕೃಷಿ ಪ್ರೇರಕ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಚಾಟಿ ಬೀಸಿದರು. ಕುಂಟೋಜಿಯ ಶ್ರೀ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಚನ್ನವೀರ ದೇವರ ಗುರುಪಟ್ಟಾಧಿಕಾರ ಮಹೋತ್ಸವದಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಸಾವಯವ ಕೃಷಿ ಚಿಂತನ-ರೈತರ ಜೊತೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೆಲದಾಳದ ಮನೆಗಳನ್ನು ಆಳವಾದ ನೇಗಿಲು ಹಚ್ಚಿ ನಾಶಮಾಡುವವರು ರೈತರೇ ಅಲ್ಲ, ಎರೆಹುಳು. ಭೂಮಿಯೊಳಗಿನ ಅವಾತಿಯಾ. ಸುವಾತಿಯಾ ಸೂಕ್ಷ್ಮ ಜೀವಾಣುಗಳು ರೈತನ ಆಸ್ತಿ. ಇವುಗಳನ್ನು ನಿರಂತರ ಕೊಲ್ಲುತ್ತಿರುವುದರಿಂದ ಹೊಸ ಜೀವಾಣು ಸೃಷ್ಟಿ ಕಡಿಮೆಯಾಗಿ ಕೃಷಿ ವಿನಾಶದತ್ತ ಸಾಗಿದೆ ಎಂದರು. ರೈತರ ಮಹಾತ್ವಾಕಾಂಕ್ಷೆಗೆ ಆರೋಗ್ಯವಂತ ಮಣ್ಣು ಸತ್ವ ಕಳೆದುಕೊಂಡಿದೆ. ಶ್ರೀಮಂತರಾಗಬೇಕೆನ್ನುವ ಭರದಲ್ಲಿ ರೈತರು ಭಿಕ್ಷುಕರಾಗ್ತಿದ್ದಾರೆ. ಯಾವ ರೈತನ ಜಮೀನಿನ ಮಣ್ಣಿನಲ್ಲಿ ಸೂಕ್ಷ್ಮ ಜೀವಾಣು, ಕೀಟ, ಜಾನುವಾರು ಹೆಚ್ಚಾಗಿರುತ್ತವೆಯೋ ಅವನೇ ಶ್ರೀಮಂತ, ಹೊಲದಲ್ಲಿ ಕಸಕಡ್ಡಿಗೆ ಬೆಂಕಿ ಹಚ್ಚುವನದ್ದು ರಾಕ್ಷಸ ರೈತ ಸಂತಾನ, ಕಸಕಡ್ಡಿ ಕೊಳೆಸುವವನು ನಿಜವಾದ ರೈತ, ನೀರು, ಮಣ್ಣು, ಗಾಳಿ ಸುರಕ್ಷಿತವಾಗಿಟ್ಟುಕೊಂಡು ಷಡ್ರಸವನ್ನೇ ಅಮೃತವಾಗಿಸಬೇಕು. ಕರ್ನಾಟಕದಲ್ಲಿ ನಾಲ್ಕು ಲಕ್ಷ ಜನ ಸಾವಯವ ಕೃಷಿಕರಿದ್ದಾರೆ.
ಸಾವಯವ ಕೃಷಿ ಪದ್ಧತಿ ಇಂದಿನ ಅವಶ್ಯಕತೆಯಾಗಿದೆ ಎಂದರು. ವಿಜಯಪುರದ ಅಮ್ಮನ ಮಡಿಲು ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ ಮಠಗಳ ನಿಜವಾದ ಕಾರ್ಯ ಇಂದು ನಡೆಯುತ್ತಿದೆ. ಸಾವಯವ ಕೃಷಿಯ ಜಾಗೃತಿ ಮನೆ ಮನಗಳಲ್ಲಿ ನಡೆಯಬೇಕು. ಸ್ವಾಮೀಜಿಗಳು ಮಠದಲ್ಲಿ ಕೂಡುವವರಲ್ಲ, ಸ್ವಾಮಿತ್ವ ಕೇವಲ ಕಾವಿಯಿಂದ ಬರುವಂಥದ್ದಲ್ಲ. ರೈತರ ಆರೋಗ್ಯಪೂರ್ಣ ಜೀವನಕ್ಕೆ ಇದ್ದದ್ದನ್ನು ಇದ್ದಂತೆ ಹೇಳುವ ಎದೆಗಾರಿಕೆ ಇರುವಂಥ ಕಾಡಸಿದ್ದೇಶ್ವರ ಸ್ವಾಮೀಜಿ ನಮ್ಮೊಂದಿಗಿರುವ ಬೆಳಕು, ಸರ್ಕಾರ ರೈತನ ನಿರ್ಲಕ್ಷ್ಯ ಮಾಡಿದರೆ ಅದು ಆತ್ಮಹತ್ಯೆಗೆ ಸಮ. ರೈತನ ಬಗ್ಗೆ ಉದ್ದುದ್ದ ಭಾಷಣ ಮಾಡದೆ ನಿಜವಾದ ಕಾಳಜಿ ತೋರಿಸಬೇಕು.
ರೈತರಿಗೆ ಗೌರವ ಕೊಡುವ ಅಧಿಕಾರಿ, ಸರ್ಕಾರ ಬರುವತನಕ ದೇಶ ಉದ್ಧಾರವಾಗೊಲ್ಲ. ಮಕ್ಕಳು ರೈತರನ್ನು ಹೀರೋ ಆಗಿಟ್ಟುಕೊಳ್ಳುವಂಥ ಸಂಸ್ಕಾರವನ್ನು ಪಾಲಕರು ಕೊಡಬೇಕು ಎಂದರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಮಾತನಾಡಿ ಮಾನ್ವಿಯ ಕೋರ್ಟನಿಂದ ತಮ್ಮನ್ನು ಅರೆಸ್ಟ್ ಮಾಡುವ ವಾರಂಟ್ ಇದ್ದರೂ ಹಿಂಜರಿಯದೆ ಕಾಡಸಿದ್ದೇಶ್ವರ ಸ್ವಾಮೀಜಿಯವರ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದಾಗಿ ತಿಳಿಸಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ರೈತ ವಿರೋಧಿಯಾಗಿರುವ ಮೂರು ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ನೀಡಿದ್ದ ಭರವಸೆ ಈಡೇರಿಸಬೇಕು ಎಂದರು.
ಮಾ.13 ರಂದು ಪಿಂಚಣಿ ಅದಾಲತ್
ಕಾರ್ಮಿಕರ ಭವಿಷ್ಯ ನಿಧಿ ಪ್ರಾದೇಶಿಕ ಕಚೇರಿ ಬಳ್ಳಾರಿ ಇವರ ವತಿಯಿಂದ ಪಿಂಚಣಿದಾರರ ಕುಂದುಕೊರತೆಗಳನ್ನು ನಿವಾರಿಸಲು ಮಾರ್ಚ್ 13 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಬಳ್ಳಾರಿ ಪ್ರಾದೇಶಿಕ ಕಚೇರಿಯಲ್ಲಿ ಪಿಂಚಣಿ ಅದಾಲತ್ ಏರ್ಪಡಿಸಲಾಗಿದೆ. ಬಳ್ಳಾರಿ, ಕೊಪ್ಪಳ, ವಿಜಯನಗರ ಮತ್ತು ಚಿತ್ರದುರ್ಗ ಜಿಲ್ಲೆಗಳ ಪಿಂಚಣಿದಾರರು ತಮ್ಮ ಕುಂದುಕೊರತೆಗಳಿದ್ದಲ್ಲಿ ಬಳ್ಳಾರಿಯ ಪ್ರಾದೇಶಿಕ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ಇವರಿಗೆ ಪತ್ರ ಅಥವಾ ಇ-ಮೇಲ್ ಮೂಲಕ ತಮ್ಮ ಪಿ.ಪಿ.ಒ ಸಂಖ್ಯೆ ವಿಳಾಸ, ದೂರವಾಣಿ, ಮೊಬೈಲ್ ಸಂಖ್ಯೆ, ಕುಂದು ಕೊರತೆಯ ಸ್ವರೂಪ ಇತ್ಯಾದಿಗಳನ್ನು ಬರೆದು ಪತ್ರ ಮೂಲಕ ಮಾರ್ಚ್ 10 ರೊಳಗೆ ಕಳುಹಿಸಬಹುದು. ಪತ್ರ, ಲಕೋಟೆಯ ಮೇಲೆ ಪಿಂಚಣಿ ಅದಾಲತ್ ಎಂದು ಬರೆಯಬೇಕು. 08392-268943 ಸಂಪರ್ಕಿಸಬಹುದು ಎಂದು ಕ್ಷೇತ್ರಿಯ ಭವಿಷ್ಯನಿಧಿ ಆಯುಕ್ತ ಕೆ.ವೆಂಕಟ ಸುಬ್ಬಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.