Breaking
Sun. Dec 22nd, 2024

ಸಹಾಯಧನಕ್ಕಾಗಿ ರೈತ ಉತ್ಪಾದಕರ ಸಂಸ್ಥೆಗಳಿಂದ ಅರ್ಜಿ ಆಹ್ವಾನ, apply now

Spread the love

ಕೃಷಿ ಇಲಾಖೆ/ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ ಸಹಾಯ ಧನ ನೀಡಲು ರೈತ ಉತ್ಪಾದಕರ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯದ ಹಿಂದುಳಿದ ತಾಲ್ಲೂಕಿನಲ್ಲಿ ಕಂಪನಿ ಕಾಯ್ದೆ 2013 ಅಡಿಯಲ್ಲಿ ನೋಂದಾಯಿಸಿ.

ಕನಿಷ್ಠ 600 ರೈತ/ಷೇರುದಾರರನ್ನು ಹೊಂದಿ, 2022-23ನೇ ಸಾಲಿನಲ್ಲಿ ವಾರ್ಷಿಕ ಕನಿಷ್ಠ 20 ಲಕ್ಷ ರೂ.ಗಳವರೆಗೆ ವ್ಯಾಪಾರ ವಹಿವಾಟು ಮಾಡಿ, ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ಮೂಲಕ 2023 ಏಪ್ರಿಲ್ 1 ರಿಂದ ಗರಿಷ್ಠ 20 ಲಕ್ಷ ರೂ.ಗಳವರೆಗೆ ರೈತ ಉತ್ಪಾದಕರ ಸಂಸ್ಥೆ (FPO)ಗಳು ಪಡೆದ ಸಾಲಕ್ಕೆ ಶೇ.4% ರಷ್ಟು ಬಡ್ಡಿ ಸಹಾಯಧನ ನೀಡಲಾಗುವುದು.

ಅರ್ಜಿಯೊಂದಿಗೆ ರೈತ ಉತ್ಪಾದಕರ ಸಂಸ್ಥೆಯ ನೋಂದಣಿ ಪ್ರಮಾಣ ಪತ್ರದ ಪ್ರತಿ, ವ್ಯಾಪಾರ ವ್ಯವಹಾರ ಅಭಿವೃದ್ಧಿಗಾಗಿ ಬ್ಯಾಂಕ್ ಮೂಲಕ ಪಡೆದ ಸಾಲದ ಚಟುವಟಿಕೆಗಳ ವಿಸ್ತ್ರತ ಯೋಜನಾ ವರದಿಯ ಪ್ರತಿ, ಬ್ಯಾಂಕ್‌ನಿಂದ ನೀಡಲಾಗಿರುವ ಸಾಲ ಮಂಜೂರಾತಿ ಪ್ರಮಾಣ ಪತ್ರದ ದೃಡೀಕೃತ ಪ್ರತಿ, FPO, GST, PAN, TAN, ಕೃಷಿ ಪರಿಕರ ವ್ಯವಹಾರ ಮತ್ತು ಕೃಷಿ ಉತ್ಪನ್ನ ಮಾರಾಟ/ಸಂಸ್ಕರಣೆ ವ್ಯಾಪಾರ ವ್ಯವಹಾರದ ದಾಖಲಾತಿಗಳ ಸ್ವಯಂ ದೃಢೀಕೃತ ಪ್ರತಿಯನ್ನು ಲಗತ್ತಿಸಿ ಸಲ್ಲಿಸಬೇಕು.

ಹಿಂದುಳಿದ ತಾಲ್ಲೂಕುಗಳ ಆಸಕ್ತ ಅರ್ಹ ರೈತ ಉತ್ಪಾದಕರ ಸಂಸ್ಥೆಗಳು ಅರ್ಜಿಯನ್ನು ಜಲಾನಯನ ಅಭಿವೃದ್ಧಿ ಇಲಾಖೆಯ ಪೋರ್ಟಲ್‌ನಲ್ಲಿ ಅಥವಾ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ/ಉಪ ಕೃಷಿ ನಿರ್ದೇಶಕರ/ಸಹಾಯಕ ಕೃಷಿ ನಿರ್ದೇಶಕರ/ರೈತ ಸಂಪರ್ಕ ಕೇಂದ್ರಗಳ ಕಛೇರಿಗಳಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಜನವರಿ 31ರೊಳಗಾಗಿ ಆಯಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಸಲ್ಲಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಮಹಿಳಾ ಪದವೀಧರರಿಗೆ ಉದ್ಯಮಶೀಲತಾ ತರಬೇತಿ

ಸಮಾಜ ಕಲ್ಯಾಣ ಇಲಾಖೆಯು 50 ಪರಿಶಿಷ್ಟ ಜಾತಿಯ ಮಹಿಳಾ ಪದವೀಧರರಿಗೆ ಉದ್ಯಮಗಳನ್ನು ಸ್ಥಾಪಿಸಲು ಪೂರಕವಾಗುವಂತೆ ಬೆಂಗಳೂರಿನ ಐ.ಐ.ಎಂ. ಸಂಸ್ಥೆ ಮೂಲಕ ಉದ್ಯಮಶೀಲತಾ ತರಬೇತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಇಲಾಖೆಯ ಅಧಿಕೃತ ಜಾಲತಾಣ: www.sw.kar.nic.in ಆನ್‌ಲೈನ್ ಮೂಲಕ ಜನವರಿ 31ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದ್ದು, 21 ರಿಂದ 45 ವರ್ಷ ವಯೋಮಿತಿಯೊಳಗಿನವರ ರಾಗಿರಬೇಕು ಹಾಗೂ ರಾಜ್ಯದ ನಿವಾಸಿಯಾಗಿರಬೇಕು. ಉದ್ಯಮಗಳನ್ನು ಸ್ಥಾಪಿಸುವ ಉದ್ದೇಶವಿರುವವರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು, ತರಬೇತಿಯು 5 ರಿಂದ 8 ತಿಂಗಳ ಅವಧಿಯದ್ದಾಗಿದ್ದು, 8 ದಿನದ ತರಬೇತಿಯನ್ನು ಐ.ಐ.ಎಂ. ಸಂಸ್ಥೆ ಕ್ಯಾಂಪಸ್‌ನಲ್ಲಿ ನೀಡಲಾಗುವುದು. ಐ.ಐ.ಎಂ. ಸಂಸ್ಥೆಯು ಫೆಬ್ರವರಿ 11ರಂದು ನಡೆಸುವ ಸ್ತ್ರೀನಿಂಗ್ ಟೆಸ್ಟ್ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತುಮಕೂರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಕಿಸಾನ್ ಸನ್ಮಾನ್ ಯೋಜನೆಯ ರೈತರಿಗೆ ಕ್ರೆಡಿಟ್ ಕಾರ್ಡ್

ಈಗಾಗಲೇ ಪ್ರಧಾನಮಂ ತ್ರಿಯವರ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ವರ್ಷಕ್ಕೆ 6 ಸಾವಿರ ರುಪಾಯಿಗಳನ್ನು ಪಡೆಯುತ್ತಿದ್ದವರು ಕಡಿಮೆ ಬಡ್ಡಿ ದರದಲ್ಲಿ ದೊರೆಯುವ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲವನ್ನು ಎಲ್ಲಾರೈತರುಬ್ಯಾಂಕಿನ ಮುಖಾಂತರ ಪಡೆಯಬೇಕೆಂದು ಹುಳಿಯಾರು ಕೆನರಾ ಬ್ಯಾಂಕಿನ ವ್ಯವಸ್ಥಾಪಕರಾದ ಟಿ.ಸಿ.ವಿನಯ್ ತಿಳಿಸಿದರು. ಹುಳಿಯಾರು ಪಟ್ಟಣದಲ್ಲಿ ಕೆನರಾ ಬ್ಯಾಂಕ್ ಹಾಗೂ ಆರ್ಥಿಕ ಸಾಕ್ಷರತಾ ಕೇಂದ್ರ ಜಂಟಿಯಾಗಿ ಏರ್ಪಡಿಸಿದ್ದ ಭಾರತ ಸಂಕಲ್ಪ ಯಾತ್ರೆಯಲ್ಲಿ ಅವರು ಮಾತನಾಡಿದರು.

ಆರ್ಥಿಕ ಸಾಕ್ಷರ ಸಲಹೆಗಾರರಾದ ಆರ್. ಎಂ.ಕುಮಾರಸ್ವಾಮಿ ಮಾತನಾಡಿ ದೇಶಾದ್ಯಂತ ನಡೆಯುತ್ತಿರುವ ಈ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ಪ್ರತಿ ಹಳ್ಳಿಯ ನಾಗರಿಕರಿಗೂ ತಲುಪಿಸಬೇಕೆಂಬುದೆ ಇದರ ಉದ್ದೇಶವಾಗಿದೆ ಎಂದು ತಿಳಿಸಿದರು. ಹುಳಿಯಾರು ಪಪಂ ಅಧ್ಯಕ್ಷರಾದ ಕೆಎಂಎಲ್ ಕಿರಣ್ ಮಾತನಾಡಿ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಈಗಾಗಲೇ 27 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಯಾತ್ರೆ ಪೂರೈಸಿದೆ. ಈ ಯಾತ್ರೆಯಿಂದ ಮಾಹಿತಿ ಪಡೆದ ಜನರು ಕೇಂದ್ರ ಸರ್ಕಾರದ ಸಾಲಸೌಲಭ್ಯಗಳನ್ನು ಬಳಸಿಕೊಂಡು ಸ್ವಉದ್ಯೋಗ ಮಾಡಲು ಮುಂದಾಗಬೇಕು ಎಂದರು.

ಪ.ಪಂ ಉಪಾಧ್ಯಕ್ಷರಾದ ಶೃತಿಸನತ್‌, ಡಾ.ಚಂದನ, ಸಮುದಾಯದ ಅಧಿಕಾರಿ ಅಶ್ವಿನಿ, ಕೆನರಾ ಬ್ಯಾಂಕಿನ ಅಧಿಕಾರಿ ಶರತ್, ಶಿವಣ್ಣ, ರಾಮಾಚಾರಿ ಮುಂತಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಆರೋಗ್ಯದ ಬಗ್ಗೆ ಹಾಗೂ ಆಯುಷ್ಮಾನ್ ಕಾರ್ಡ್ ಬಗ್ಗೆ ವಿವರಣೆ ನೀಡಲಾಯಿತು. ಉಜ್ವಲ ಗ್ಯಾಸ್ ಯೋಜನೆಯಡಿ ಗ್ಯಾಸ್ ಸಿಲಿಂಡ‌ರ್ ವಿತರಿಸಲಾಯಿತು.

Related Post

Leave a Reply

Your email address will not be published. Required fields are marked *