Breaking
Tue. Dec 17th, 2024

ನಿಮ್ಮ ಮೊಬೈಲ್ ನಂಬರ್ ಹಾಕಿ ಬೆಳೆ ಪರಿಹಾರ ಪೇಮೆಂಟ್ ಸ್ಟೇಟಸ್ ಚೆಕ್ ಮಾಡಿ

Spread the love

ಸ್ಟೇಟಸ್ ಚೆಕ್ ಮಾಡಿಕೊಳ್ಳಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://parihara.karnataka.gov.in/service92/

ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ ನಂತರ ಅಲ್ಲಿ 2023-24 ವರ್ಷವನ್ನು ಆಯ್ದುಕೊಳ್ಳಬೇಕು. ನಂತರ ಅಲ್ಲಿ ಕಾಣುವ ಋತು ಅಂದರೆ ಮುಂಗಾರು ಅಥವಾ ಹಿಂಗಾರು ಎಂಬ ಆಯ್ಕೆಯನ್ನು ಆಯ್ದುಕೊಳ್ಳಬೇಕು. ಈಗ ಈ ಸಾಲಿನ ಮುಂಗಾರು ಎಂಬ ಆಯ್ಕೆಯನ್ನು ಆಯ್ದುಕೊಳ್ಳಿ. ನಂತರ ಬೆಳೆ ಹಾನಿ ಆದ ಕಾರಣವಾದ ಬರ ಎಂಬ ಆಯ್ಕೆಯನ್ನು ಆಯ್ದುಕೊಳ್ಳಿ. ನಾವು ಬಾಣಿನ ಗುರತಿನಿಂದ ತೋರಿಸಿದ ಹಾಗೆ ಎಲ್ಲವನ್ನು ಮಾಡಿ.

ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ get report ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರ ನೀವು ಆಧಾರ್ ಕಾರ್ಡ್ ಅಥವಾ ಮೊಬೈಲ್ ಸಂಖ್ಯೆಯನ್ನು ಹಾಕಿ ನಿಮ್ಮ ಬಳಿ ಪರಿಹಾರ ಮಾಹಿತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ನೀವು ಮೊದಲು ನಿಮ್ಮ ಹತ್ತಿರ ಮೊಬೈಲ್ ಸಂಖ್ಯೆ ಇದ್ದರೆ ಅದನ್ನು ಹಾಕಿ ಇಲ್ಲದಿದ್ದರೆ ಆಧಾರ್ ಕಾರ್ಡನ್ನು ಕೂಡ ಹಾಕಬಹುದು.

ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಪರಿಹಾರ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಮೇಲಿನ ಚಿತ್ರದಲ್ಲಿ ಕಾಣುವ ಹಾಗೆ ಮೊಬೈಲ್ ಸಂಖ್ಯೆಯನ್ನು ನೀವು ಆಯ್ದುಕೊಂಡು ಅಲ್ಲೇ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ fetch/ಪಡೆಯಿರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಮುಂದೆ ಒಂದು ಲಿಸ್ಟ್ ಬರುತ್ತದೆ ಅದರಲ್ಲಿ ನಿಮ್ಮ ಸಂಖ್ಯೆಯು ಮತ್ತು ನಿಮ್ಮ ಸ್ಟೇಟಸ್ ಅನ್ನು ನೀವು ನೋಡಿಕೊಳ್ಳಬಹುದು.

ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಪರಿಹಾರ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಒಂದು ವೇಳೆ ನೀವು ಆದ ಸಂಖ್ಯೆಯನ್ನು ಬಳಸಿಕೊಂಡು ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಇಷ್ಟವಿದ್ದರೆ ನೀವು ಮೇಲಿನ ಚಿತ್ರದಲ್ಲಿ ಕಾಣುವಹಾಗೆ ನಿಮ್ಮ ಆದ ಸಂಖ್ಯೆಯನ್ನು ಬಳಸಿಕೊಂಡು ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಅಲ್ಲಿ ತುಂಬಿ fetch/ಪಡೆಯಿರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಸ್ಟೇಟಸ್ ಮಾಹಿತಿ ನಿಮಗೆ ದೊರೆಯುತ್ತದೆ.

ಶೀಘ್ರವೇ ಕ್ರೀಡಾ ಶಾಲೆಗಳ 180 ದೈಹಿಕ ಶಿಕ್ಷಕರ ನೇಮಕಾತಿ

ರಾಜ್ಯದಲ್ಲಿ ಕ್ರೀಡಾ ಶಾಲೆ ಹಾಗೂ ವಸತಿ ನಿಯಲಗಳ 180 ದೈಹಿಕ ಶಿಕ್ಷಕರ ತರಬೇತಿ ಪೂರ್ಣಗೊಂಡಿದ್ದು, ಶೀಘ್ರವೇ ಸ್ಥಳ ನಿಯೋಜಿಸಿ ನೇಮಕಾತಿ ಮಾಡುವುದಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡ ಸಚಿವ ಬಿ.ನಾಗೇಂದ್ರ ಹೇಳಿದರು. ಬುಧವಾರ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ದರ್ಶನ್ ಪುಟ್ಟಣ್ಣ ಯ್ಯ ಹಾಗೂ ಸಿ.ಎನ್‌.ಬಾಲಕೃಷ್ಣ ಅವರ ಚುಕ್ಕೇ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಿದೆ. ಅಮೃತ ದತ್ತು ಕ್ರೀಡಾ ಯೋಜನೆಯಡಿ ವಿವಿಧ ಕ್ರೀಡೆಗಳಲ್ಲಿ ಪದಕ ವಿಜೇರಾತ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಅಗತ್ಯವಾದ ತರಬೇತಿ ಹಾಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಇದರೊಂದಿಗೆ ಕ್ರೀಡಾಪುಟುಗಳಿಗೆ 2024ರ ಒಲಂಪಿಕ್ ಕ್ರೀಡಗಳಿಲ್ಲಿ ಪಾಲ್ಗೊಳ್ಳಲು ರೂ.10 ಲಕ್ಷ ವೆಚ್ಚದಲ್ಲಿ ತರಬೇತಿ ನೀಡಲಾಗುತ್ತಿದೆ. ಕ್ರೀಡಾ ಇಲಾಖೆಯಿಂದ ರಾಷ್ಟ್ರೀಯ ಮತ್ತು

ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ವಿಜೇತರಾದ ಕ್ರೀಡಾಪುಟುಗಳಿಗೆ ನಗದು ಪುರಸ್ಕಾರ, ಶೈಕ್ಷಣಿಕ ಶುಲ್ಕ ಮರುಪಾವತಿ, ಅಮೃತ ಕ್ರೀಡಾದತ್ತು ಯೋಜನೆ, ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ 2 ಕ್ರೀಡಾ ಶಾಲೆ ಹಾಗೂ 32 ಕ್ರೀಡ ವಸತಿ ನಿಲಯಗಳು ಇದ್ದು ಒಟ್ಟು 2482 ಕ್ರೀಡಾಪಟುಗಳು ಪ್ರವೇಶ ಪಡೆದಿದ್ದಾರೆ. ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಪ್ರತಿ ಜಿಲ್ಲೆಗಳಲ್ಲಿ ಕ್ರೀಡಾ ತರಬೇತುದಾರರನ್ನು ನೇಮಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಸಿ.ಎನ್. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 125 ತಾಲ್ಲೂಕು ಕ್ರೀಡಾಂಗಣಗಳು ಇವೆ. ಕ್ರೀಡಾ ಇಲಾಖೆ ಕಳೆದ ಎರೆಡು ವರ್ಷದಲ್ಲಿ ಒಟ್ಟು ರೂ.56 ಕೋಟಿಗಳನ್ನು ಕ್ರೀಡಾಂಗಣಗಳ ಅಭಿವೃದ್ಧಿಗಾಗಿ ಬಿಡುಗಡೆ ಮಾಡದೆ. ಶ್ರವಣಬೆಳಗೊಳ ವಿಧಾನ ಸಭಾ ಕ್ಷೇತ್ರದ ಚನ್ನರಾಯಪಟ್ಟಣದ ತಾಲ್ಲೂಕು ಕ್ರೀಡಾಂಗಣವನ್ನು ಒಟ್ಟು 7 ಎಕರೆಯಲ್ಲಿ ನಿರ್ಮಿಸಲಾಗಿದೆ. 400 ಮೀಟರ್ ಮಣ್ಣಿನ ಓಟದ ಅಂಕಣ, ಜಿಮ್ ಕೊಠಡಿ, ಹೈಮಾಸ್ಟ್ ದೀಪ್ ಪೆವಿಲಿಯನ್ನ ಹಾಗೂ ಶೌಚಾಲಯ ಕಟ್ಟಗಳನ್ನು ನಿರ್ಮಿಸಲಾಗಿದ್ದು, ವಿದ್ಯುತ್ ಸರಬರಾಜು ಸೌಲಭ್ಯ ಕಲ್ಪಿಸಲಾಗಿದೆ ಎಂದರು. ಶಾಸಕ ಬಾಲಕೃಷ್ಣ.ಸಿ.ಎನ್. ಮಾತನಾಡಿ, ಚನ್ನರಾಯಪಟ್ಟಣದಲಿ 1 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯಿದೆ. ಹೆಚ್ಚಿನ ಶಾಲಾ ಕಾಲೇಜುಗಳು ಇದ್ದು, ಸುಸಜ್ಜಿತ ಕ್ರೀಡಾಂಗಣ, ಸಿಂಥಟಿಕ್ ಟ್ರಾಕ್ ಅವಶ್ಯಕತೆ ಇದೆ. ಸರ್ಕಾರ ಈ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಕೋರಿದರು.

Related Post

Leave a Reply

Your email address will not be published. Required fields are marked *