ಆತ್ಮೀಯ ರಾಜ್ಯ ನಾಗರಿಕರೇ, ಈ ಸಾಲಿನ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯನ್ನು ನಡೆಸಲು ಘೋಷಣೆ ಮಾಡಿದ್ದಾರೆ. ಮುಂದಿನ ತಿಂಗಳು ಅಂದರೆ ಮೇ ಹತ್ತರಂದು ಮತದಾನ ನಡೆಯಲಿದೆ. ಅದು ಆಗಿ ಕೇವಲ ಮೂರು ದಿನಗಳಲ್ಲಿ ಅಂದರೆ ಮೇ 13 ರಂದು ಫಲಿತಾಂಶವನ್ನು ಪ್ರಕಟಣೆ ಮಾಡಲಿದ್ದಾರೆ. ಈ ಚುನಾವಣೆಯು 224 ಕ್ಷೇತ್ರಗಳಲ್ಲಿ ನಡೆಸಬೇಕೆಂದು ನಿರ್ಧಾರ ಮಾಡಿದ್ದಾರೆ. ಆದಕಾರಣ ಈ ಚುನಾವಣೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವುದು ಅವಶ್ಯವಾಗಿದೆ.
ಎಷ್ಟು ಜನ ಮತದಾನ ಮಾಡಲು ಅರ್ಹರಿದ್ದಾರೆ ಎಂದು ತಿಳಿಯೋಣ?
ನಮ್ಮ ಕರ್ನಾಟಕ ರಾಜ್ಯದಲ್ಲಿ ಈಗ 5 ಕೋಟಿ ಅರ್ಹ ಮತದಾರರಿದ್ದು ಅದರಲ್ಲಿ ಅರ್ಧ ಪುರುಷ ಮತ್ತು ಮಹಿಳೆ ಮತದಾರರು ಇದ್ದಾರೆ. ನಮ್ಮ ಸರ್ಕಾರವು ಪ್ರತಿಯೊಬ್ಬರೂ ತಮಗೆ ಬೇಕಾದ ಅಭ್ಯರ್ಥಿಗೆ ಮತದಾನ ಮಾಡಲು ಅವಕಾಶ ನೀಡಿದೆ. ಈ 5.21 ಕೋಟಿ ಮತದಾರರಲ್ಲಿ 2.62 ಕೋಟಿ ಪುರುಷ ಮತದಾರರು ಇದ್ದಾರೆ ಮತ್ತು 2.59 ಕೋಟಿ ಮಹಿಳಾ ಮತದಾರರಿದ್ದಾರೆ. ಈಗ ನಮ್ಮ ಸರಕಾರವು ಮತದಾನ ಮಾಡುವವರ ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ತಮ್ಮ ಜಿಲ್ಲೆಯ ಸಂಪೂರ್ಣ ಮತದಾನ ಮಾಡುವವರ ಹೆಸರು ಇಲ್ಲಿವೆ.
ಈ ಪಟ್ಟಿಯನ್ನು ಆನ್ಲೈನ್ ನಲ್ಲಿ ನೋಡುವುದು ಹೇಗೆ?
ಜನರು ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅದು ನಿಮ್ಮನ್ನು ಒಂದು ವೆಬ್ ಸೈಟ್ ಗೆ ಕರೆದುಕೊಂಡು ಹೋಗುತ್ತದೆ. ಅಲ್ಲಿ ಕರ್ನಾಟಕದ ಒಟ್ಟು 36 ಜಿಲ್ಲೆಗಳ ಹೆಸರು ಇರುತ್ತವೆ.
https://ceo.karnataka.gov.in/draftroll_2023/
ಅಲ್ಲಿ ನೀವು ನಿಮ್ಮ ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಬೇಕು. ನಂತರ ಅದು ಇನ್ನೊಂದು ಮುಖ ಪಟವನ್ನು ತೆರೆಯುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯಲ್ಲ ತಾಲೂಕು ನಿಮಗೆ ಕಾಣುತ್ತವೆ. ಅಲ್ಲಿ ನೀವು ನಿಮ್ಮ ತಾಲೂಕನ್ನು ಆಯ್ಕೆ ಮಾಡಿದರೆ ಸಾಕು ಅಲ್ಲಿ ಬರುವ ಎಲ್ಲ ಮತಕ್ಷೇತ್ರಗಳ ಭೂತನ್ನು ನಿಮಗೆ ಕಾಣಿಸುತ್ತದೆ. ನೀವು ಮತದಾನ ಮಾಡುವ ಬೂತ್ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ಕಾಣುತ್ತಿರುವ ಕ್ಯಾಪ್ಚಾ ಕೊಡನ್ನು ನಮಗಿಸಿ ಆಮೇಲೆ ನಿಮಗೆ ಒಂದು ಪಟ್ಟಿ ಡೌನ್ಲೋಡ್ ಆಗುತ್ತದೆ, ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೇ ಇಲ್ಲವೇ ಎಂದು ಚೆಕ್ ಮಾಡುವುದು ಅವಶ್ಯವಾಗಿದೆ.
ವೋಟರ್ ಐಡಿ ಪಡೆಯಲು ಯಾವ ದಾಖಲಾತಿಗಳು ಬೇಕು?
ಭಾರತದ ಚುನಾವಣಾ ಆಯೋಗವು ಮತದಾರರ ಗುರುತಿನ ಚೀಟಿಯನ್ನು ನೀಡುತ್ತದೆ, ಇದು ಮತದಾನಕ್ಕೆ ಅಗತ್ಯವಿರುವ ಏಕೈಕ ಪ್ರಮುಖ ದಾಖಲೆಯಾಗಿದೆ. ಇದನ್ನು ಮತದಾರರ ಫೋಟೋ ಗುರುತಿನ ಚೀಟಿ, ಮತದಾರರ ಗುರುತಿನ ಚೀಟಿ, ಮತದಾರರ ಕಾರ್ಡ್, ಚುನಾವಣೆಯ ಕಾರ್ಡ್, ಇತ್ಯಾದಿ ಎಂದೂ ಕರೆಯಲಾಗುತ್ತದೆ. ಮತದಾರರ ಗುರುತಿನ ಚೀಟಿ, ಮತದಾನಕ್ಕೆ ಅಗತ್ಯವಾದ ದಾಖಲೆಯ ಜೊತೆಗೆ, ಗುರುತಿನ ಪುರಾವೆಯಾಗಿಯೂ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ :- ನಿಮ್ಮ ಬಳಿ ಮೊಬೈಲ್ ಫೋನ್ ಇದ್ದರೆ ಸಾಕು ನಿಮ್ಮ ಹೊಲದ ನಕ್ಷೆಯನ್ನು ನೋಡಬಹುದು