ಆತ್ಮೀಯ ರೈತರೇ,
ಆರ್ಥಿಕ ನೆರವು ಅಗತ್ಯವಿರುವ ರೈತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು 2018 ರ ಡಿಸೆಂಬರ್‌ನಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯು ಕೇಂದ್ರ ವಲಯದ ಯೋಜನೆಯಾಗಿದ್ದು, ಭಾರತೀಯ ಪ್ರಜೆಗಳಾಗಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿದ್ದಾರೆ. ತಮ್ಮ ಹೆಸರಿನಲ್ಲಿ ಸಾಗುವಳಿ ಭೂಮಿ ಹೊಂದಿರುವ ರೈತರು ಸಹ ಯೋಜನೆಯಡಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ. pmkisan.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಾನುಭವಿ ಸ್ಥಿತಿ ಪರಿಶೀಲನೆ ಮಾಡಬಹುದು.
ನಿಮ್ಮ ಪ್ರಸ್ತುತ ಸ್ಥಿತಿಯನ್ನು ತಿಳಿಯಲು ಕೆಳಗಿನ ಹಂತಗಳನ್ನು ಅನುಸರಿಸಿ:
ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಹೋದ ನಂತರ ನಿಮಗೆ ಈ ಕೆಳಗಿನಂತೆ ಚಿತ್ರ ಕಾಣಿಸುತ್ತದೆ.ಆ ಲಿಂಕ್ ಮೇಲೆ ಕ್ಲಿಕ್ ಮಾಡಿ,ಮಾಡಿದ ನಂತರ ಏನು ಮುಂದುವರೆಸುವುದು ಎಂದು ತಿಳಿಸಿಕೊಡುತ್ತೆವೆ ನೋಡಿ.
ಮುಖಪುಟದಲ್ಲಿ ‘ಫಾಮರ್ಸ್ ಕಾರ್ನರ್’ (farmer’s corner) ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ನಂತರ ‘ಫಲಾನುಭವಿ ಸ್ಥಿತಿ’ (beneficiary status) ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಈಗ ನೀವು ನಿಮ್ಮ ನೋಂದಣಿ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ನೀವು ಅದನ್ನು ಸರಿಯಾಗಿ ಭರ್ತಿ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.ನಿಮಗೆ ನೋಂದಣಿ ಸಂಖ್ಯೆ ಗೊತ್ತಿಲ್ಲವಾದಲ್ಲಿ ಅದನ್ನು ತಿಳಿದುಕೊಳ್ಳಲು ಮೊಬೈಲ್ ಸಂಖ್ಯೆ ಮೇಲೆ ಕ್ಲಿಕ್ ಮಾಡಿ ಹಾಗೂ OTP ಬರುತ್ತದೆ ಬಂದ ನಂತರ ಕಾಪ್ಕ್ಯ ಟೈಪ್ ಮಾಡಿ ಹಾಕಿದರೆ ನಿಮ್ಮ ನೋಂದಣಿ ಸಂಖ್ಯೆ ಗೊತ್ತಾಗುತ್ತದೆ. ನೀವು ಸರಿಯಾಗಿ ಎಲ್ಲಾ ಪ್ರಕ್ರಿಯೆಯನ್ನು ಭರ್ತಿ ಮಾಡಿದ್ದೀರಿ ಅಥವಾ ಇಲ್ಲ ಎಂದು ಖಚಿತಪಡಿಸಿಕೊಳ್ಳಿ. ಹೀಗೆ ನಿಮಗೆ ಪಿಎಂ ಕಿಸಾನ್ ಹಣ ದೊರಕುತ್ತದೆಯೊ ಇಲ್ಲೋ ಎಂದು ತಿಳಿಯಿರಿ.
ಇದನ್ನೂ ಓದಿ :- ರೇಷ್ಮೆ ಬೆಳೆಗಾರರಿಗೆ ಸಿಹಿ ಸುದ್ದಿ
ಅಡಿಕೆಯ ರೋಗ ನಿರ್ವಹಣೆ ಮಾಡಲು 10 ಕೋಟಿ ರೂಪಾಯಿ ನೆರವು
ಇದನ್ನೂ ಓದಿ :- ಮೊಬೈಲ್ ನಲ್ಲಿ ಭೂ ಸಂಭಂದಿತ ದಾಖಲಾತಿಗಳನ್ನು ಪರಿಶೀಲಿಸುವುದು ಹೇಗೆ?
ಒಂದೇ ನಿಮಿಷದಲ್ಲಿ ನಿಮ್ಮ ದಾಖಲಾತಿಗಳನ್ನು ಕುಳಿತ ಜಾಗದಲ್ಲೇ ಪರಿಶೀಲಿಸಿ
ಇದನ್ನೂಓದಿ :ನೇಗಿಲು,ಎಡಗುಂಟೆ,ರೋಟೋವಟರ್ ,ಕೂರಿಗೆ ಖರೀದಿಸಲು ಸಬ್ಸಿಡಿ ಲಭ್ಯ