ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಯಾವ ಯಾವ ಕೃಷಿ ಯಂತ್ರೋಪಕರಣಗಳನ್ನು ಪಡೆಯಲಾಗಿದೆ ಎಂಬುದನ್ನು ಚೆಕ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
https://mahitikanaja.karnataka.gov.in/Agricult ServiceId=2053&Type=TABLE&DepartmentId=
ಆಗ ಕೆ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ನನ್ನ ವರದಿ ಆಯ್ಕೆ ಮಾಡಿಕೊಳ್ಳಬೇಕು. ಅದರ ಕೆಳಗಡೆ ರೈತ ಸಂಖ್ಯೆ ನಮೂದಿಸಬೇಕು. ನಂತರ ಯಾವ ಯೋಜನೆಗಳಿಂದ ಯಾವ ವರ್ಷದಲ್ಲಿ ಏನೇನು ಪಡೆಯಲಾಗಿದೆ ಎಂಬುದನ್ನು ಚೆಕ್ ಮಾಡಲು ಯೋಜನೆ ಆಯ್ಕೆ ಮಾಡಿಕೊಂಡು ವರ್ಷ ಆಯ್ಕೆ ಮಾಡಿಕೊಳ್ಳಬೇಕು.
ರೈತ ಸಂಖ್ಯೆ ಅಂದರೆ (ಎಫ್‌ಐಡಿ ಸಂಖ್ಯೆ) ಗೊತ್ತಿಲ್ಲದವರು ಹೇಗೆ ಪಡೆದುಕೊಳ್ಳಬೇಕು?
ಎಫ್‌ಐಡಿಸಂಖ್ಯೆ ಗೊತ್ತಿಲ್ಲದವರು ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
https://fruitspmk.karnataka.gov.in/MISReport
ಫ್ರಟ್ಸ್ ಪಿಎಂ ಕಿಸಾನ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಆಧಾರ್ ಕಾರ್ಡ್ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ರೈತರ ಫ್ರಟ್ಸ್ ಐಡಿ ಕಾಣಿಸುತ್ತದೆ.ಅಲ್ಲಿ ಕಾಣುವ ಫ್ರಟ್ಸ್ ಐಡಿಯನ್ನು ಕಾಪಿ ಮಾಡಿಕೊಂಡು ರೈತ ಸಂಖ್ಯೆಯಲ್ಲಿ ಪೇಸ್ಟ್ ಮಾಡಬೇಕು. ನಂತರ ಯೋಜನೆ ಹಾಗೂ ವರ್ಷ ಆಯ್ಕೆ ಮಾಡಿಕೊಳ್ಳಬೇಕು.
ಉದಾಹರಣೆಗೆ ಸೂಕ್ಷ್ಮ ನೀರಾವರಿ ಯೋಜನೆಯಿಂದ ಸ್ಪಿಂಕ್ಲರ್ ನಿಮ್ಮ ಹೆಸರಿನ ಮೇಲೆ ಪಡೆಯಲಾಗಿದೆಯೇ ಎಂಬುದನ್ನುಚೆಕ್ ಮಾಡಲು ಸೂಕ್ಷ್ಮ ನೀರಾವರಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ವರ್ಷ ಅಂದರೆ 2021 ಅಥವಾ 2022ಹೀಗೆ ಆಯ್ಕೆ ಮಾಡಿಕೊಂಡು Submit ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಹೆಸರಿನ ಮೇಲೆ ಸೂಕ್ಷ್ಮ ನೀರಾವರಿ ಯೋಜನೆಯಿಂದ ಸ್ಪಿಂಕ್ಲರ್ ಪಡೆಯಲಾಗಿದೆ ಎಂಬ ಪಟ್ಟಿ ಕಾಣಿಸುತ್ತದೆ.
ಅಲ್ಲಿ ನಿಮ್ಮ ಜಿಲ್ಲೆ ತಾಲೂಕು, ಹೋಬಳಿ ಗ್ರಾಮ ಕಾಣಿಸುತ್ತದೆ. ನಂತರ ನಿಮ್ಮ ಹೆಸರು, ತಂದೆಯ ಹೆಸರು, ವರ್ಗ, ಯಾವ ಪ್ರಕಾರದ ರೈತ, ಯೋಜನೆ ಕಾಣಿಸುತ್ತದೆ. ಯಾವ ವರ್ಷ ಹಾಗೂ ಯಾವ ಯಂತ್ರೋಪಕರಣ ಪಡೆಯಲಾಗಿದೆ ಯಾವ ಕಂಪನಿಯಿಂದ ಪಡೆಯಲಾಗಿದೆ ಅರ್ಜಿ ಸಲ್ಲಿಸಿದ್ದು ಯಾವಾಗ ಸಲ್ಲಿಸಲಾಗಿದೆ.
ಅರ್ಜಿಯ ಸ್ಟೇಟಸ್ ಕಾಣಿಸುತ್ತದೆ. ಇದರೊಂದಿಗೆ ಎಷ್ಟು ಸಬ್ಸಿಡಿ ಹಣ ನಿಮ್ಮ ಹೆಸರಿನ ಮೇಲೆ ಮಂಜೂರಾಗಿದೆ, ರೈತರು ಪಾವತಿಸಿದ ಮೊತ್ತವೆಷ್ಟು? ಯಾವ ಬ್ಯಾಂಕಿಗೆ ಸಬ್ಸಿಡಿ ಹಣ ಜಮೆ ಮಾಡಲಾಗಿದೆ ಎಂಬಿತ್ಯಾದಿ ಮಾಹಿತಿ ಅಲ್ಲಿ ಕಾಣಿಸುತ್ತದೆ.
ಸೂಕ್ಷ್ಮ ನೀರಾವರಿಯಂತೆ ಇತರ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ನಂತರ ವರ್ಷ ಆಯ್ಕೆ ಮಾಡಿಕೊಂಡು ಸಮ್ಮಿಟ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರಿನ ಮೇಲೆ ಯಾವ ಯಾವ ಕೃಷಿ ಯಂತ್ರೋಪಕರಣಗಳನ್ನು ಪಡೆಯಲಾಗಿದೆ ಎಂಬುದನ್ನು ರೈತರು ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.
ರೈತರಿಗೆ ಗೊತ್ತಿಲ್ಲದೆ ರೈತರ ದಾಖಲೆ ಪಡೆದುಕೊಂಡು ಏನಾದರೂ ಕೃಷಿ ಯಂತ್ರೋಪಕರಣಗಳನ್ನು ಪಡೆದುಕೊಂಡರೆ ಸುಲಭವಾಗಿ ಚೆಕ್ ಮಾಡಬಹುದು.
ಇದನ್ನೂ ಓದಿ :- ಗಂಗಾ ಕಲ್ಯಾಣ ಯೋಜನೆಯಿಂದ ರೈತರಿಗೆ ಉಚಿತ ಬೋರ್ವೆಲ್ ಈ ಯೋಜನೆಗೆ ಯಾವ ರೈತರು ಅರ್ಜಿ ಸಲ್ಲಿಸಬಹುದು
ಇದನ್ನೂ ಓದಿ :- ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆ ಹಾಕಿ ಮತ್ತು ಬೆಳೆಹಾನಿ ಪರಿಹಾರದ ಸ್ಟೇಟಸ್ ಚೆಕ್ ಮಾಡಿ