ಆತ್ಮೀಯ ರೈತ ಬಾಂಧವರೇ,
ಪಿಎಂ ಕಿಸಾನ್ ಯೋಜನೆ ಈಗಾಗಲೇ 18 ಕಂತಿನಲ್ಲಿ ನಿಮ್ಮೆಲ್ಲರಿಗೂ ಜಮಾ ಆಗಿದ್ದು. ಇನ್ನು ಕೆಲವು ದಿನಗಳಲ್ಲಿ 19 ನೆ ಕಂತು ಕೂಡ ಜಮಾ ಆಗಲಿದ್ದು ಅದರ ಫಲಾನುಭವಿಗಳ ಪಟ್ಟಿ ಇದೀಗ ಸರ್ಕಾರವು ಬಿಡುಗಡೆ ಮಾಡಿದೆ.
ನೀವು ಯಾವುದೇ ವೆಬ್ಸೈಟ್ ಗೆ ಭೇಟಿ ನೀಡದೆ ನಿಮ್ಮ ಹೆಸರನ್ನು ಇಲ್ಲಿ ಚೆಕ್ ಮಾಡಿಕೊಳ್ಳಬಹುದು.
ಅದು ಹೇಗೆಂದರೆ ಈ ಅಂಕಣ ಕೊನೆಯಲ್ಲಿ ನಿಮಗೆ ಒಂದು ಫೈಲನ್ನು ಹಾಕಿದ್ದು ಅದನ್ನು ಓಪನ್ ಮಾಡಿ ನಿಮ್ಮ ಹೆಸರನ್ನು ಪರಿಶೀಲಿಸಿ ನೋಡಬಹುದಾಗಿದೆ. ಒಂದು ವೇಳೆ ನಿಮ್ಮ ಹೆಸ್ರು ಆಯಾ ಫೈಲ್ ನಲ್ಲಿ ದೊರಕದಿದ್ದರೆ ನೀವು ಕೂಡಲೇ e kyc ಮಾಡಿಸಬೇಕು.
ಏಕೆ ಇ-ಕೆವೈಸಿ?
ಪಿ.ಎಂ.ಕಿಸಾನ್ ಯೋಜನೆಯ ಪ್ರಯೋಜನವು ಯಾವುದೇ ಮಧ್ಯವರ್ತಿಗಳಿಲ್ಲದೆ ಅವರ ಆಧಾರ್ ಜೋಡಿತ ಬ್ಯಾಂಕ್ ಖಾತೆಗಳಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು.
ಇದನ್ನೂ ಓದಿ :- ಬೆಳೆ ಪರಿಹಾರ ಲಿಸ್ಟ್ ನಲ್ಲಿರುವ ಅನರ್ಹ ಪಟ್ಟಿಯನ್ನು ಪ್ರಕಟಣೆ ಮಾಡಲಾಗಿದೆ.
ಹೀಗೆ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಿ
ಇ-ಕೆವೈಸಿ ಯ ವಿಧಾನಗಳು
ಪಿ.ಎಂ.ಕಿಸಾನ್ ಯೋಜನೆಯಡಿ ರೈತರಿಗೆ eKYC ಮಾಡಿಸಲು ಕೆಳಗಿನ ಮೂರು ವಿಧಾನಗಳು ಲಭ್ಯವಿರುತ್ತದೆ:
1. OTP ಆಧಾರಿತ e KYC (ಪಿ.ಎಂ.ಕಿಸಾನ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ).
2. ಬಯೋಮೆಟ್ರಿಕ್ ಆಧಾರಿತ e-KYC (ನಾಗರೀಕ ಸೇವಾ ಕೇಂದ್ರಗಳು) ಮತ್ತು ರಾಜ್ಯ ಸೇವಾ ಕೇಂದ್ರ (SSK ಗಳು) ನಲ್ಲಿ ಲಭ್ಯವಿದೆ).
3. ಮುಖ ಚರ್ಯೆ ಆಧಾರಿತ e-KYC (Face Recognition) (ಲಕ್ಷಾಂತರ ರೈತರು ಬಳಸುವ ಪಿ.ಎಂ. ಕಿಸಾನ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ)
OTP ಆಧಾರಿತ e-KYC
OTP ಆಧಾರಿತ eKYC ಅನ್ನು ಕಾರ್ಯಗತಗೊಳಿಸಲು, ರೈತರು ಆಧಾರ್ ಲಿಂಕ್ ಮಾಡಿದ ಸಕ್ರಿಯ ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಇದಕ್ಕಾಗಿ ಈ ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿ
ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಹೋದ ನಂತರ ನಿಮಗೆ ಈ ಕೆಳಗಿನಂತೆ ಚಿತ್ರ ಕಾಣಿಸುತ್ತದೆ.ಆ ಲಿಂಕ್ ಮೇಲೆ ಕ್ಲಿಕ್ ಮಾಡಿ,ಮಾಡಿದ ನಂತರ ಏನು ಮುಂದುವರೆಸುವುದು ಎಂದು ತಿಳಿಸಿಕೊಡುತ್ತೆವೆ ನೋಡಿ.
ಮುಂದೆ ಮುಖಪುಟದಲ್ಲಿ ‘ಫಾಮರ್ಸ್ ಕಾರ್ನರ್’ (farmer’s corner) ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ನಂತರ ‘ಫಲಾನುಭವಿ ಸ್ಥಿತಿ’ (beneficiary status) ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಈಗ ನೀವು ನಿಮ್ಮ ನೋಂದಣಿ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ನೀವು ಅದನ್ನು ಸರಿಯಾಗಿ ಭರ್ತಿ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.ನಿಮಗೆ ನೋಂದಣಿ ಸಂಖ್ಯೆ ಗೊತ್ತಿಲ್ಲವಾದಲ್ಲಿ ಅದನ್ನು ತಿಳಿದುಕೊಳ್ಳಲು ಮೊಬೈಲ್ ಸಂಖ್ಯೆ ಮೇಲೆ ಕ್ಲಿಕ್ ಮಾಡಿ ಹಾಗೂ OTP ಬರುತ್ತದೆ ಬಂದ ನಂತರ ಕಾಪ್ಕ್ಯ ಟೈಪ್ ಮಾಡಿ ಹಾಕಿದರೆ ನಿಮ್ಮ ನೋಂದಣಿ ಸಂಖ್ಯೆ ಗೊತ್ತಾಗುತ್ತದೆ. ನೀವು ಸರಿಯಾಗಿ ಎಲ್ಲಾ ಪ್ರಕ್ರಿಯೆಯನ್ನು ಭರ್ತಿ ಮಾಡಿದ್ದೀರಿ ಅಥವಾ ಇಲ್ಲ ಎಂದು ಖಚಿತಪಡಿಸಿಕೊಳ್ಳಿ. ಹೀಗೆ ನಿಮಗೆ ಪಿಎಂ ಕಿಸಾನ್ ಹಣ ದೊರಕುತ್ತದೆಯೊ ಇಲ್ಲೋ ಎಂದು ತಿಳಿಯಿರಿ.
https://chat.whatsapp.com/Gm6a0DqjrOGLAWzSIe62LU