ಆತ್ಮೀಯ ನಾಗರಿಕರೇ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಇಂದು ಬಜೆಟ್ ಮಂಡನೆ ಮಾಡಿದೆ. ನಮ್ಮ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಕ್ಷೇತ್ರಗಳಿಗೆ ಸಾಕಾಗುವಷ್ಟು ಬಜೆಟ್ಟನ್ನು ಮಂಡನೆಯನ್ನು ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಮುಖ್ಯವಾದ ಕೃಷಿ ಕ್ಷೇತ್ರಕ್ಕೆ ಹಲವಾರು ರೀತಿಯ ಸೌಲಭ್ಯ ಮತ್ತು ಯೋಜನೆಗಳನ್ನು ತಂದಿದ್ದಾರೆ. ಈ ಬಜೆಟ್ ನಿಂದ ರೈತರಿಗೆ ಎಷ್ಟು ಲಾಭ ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಕುರಿಗಾಯಿಗಳಿಗೆ ಸಿಹಿ ಸುದ್ದಿ
ನಮ್ಮ ಮಾನ್ಯ ಮುಖ್ಯಮಂತ್ರಿ ಅವರು ಕುರಿಗಾಯಿಗಳಿಗೆ ಒಂದು ಹೊಸ ಸುದ್ದಿಯನ್ನು ತಂದಿದ್ದಾರೆ. ಈ ಬಜೆಟ್ ನಲ್ಲಿ ಅನುಗ್ರಹ ಯೋಜನೆಯನ್ನು ಮರಜಾರಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅವರು ಭರವಸೆಯನ್ನು ಕೊಟ್ಟಿದ್ದಾರೆ. ಈ ಯೋಜನೆಯಿಂದ ಅಕಸ್ಮಾತಾಗಿ ಒಂದು ಕುರಿಯು ಮೃತಪಟ್ಟರೆ ಕುರಿಯ ಮಾಲೀಕನಿಗೆ 5000 ರೂಪಾಯಿ ಪರಿಹಾರವನ್ನು ನೀಡುತ್ತಾರೆ. ಒಂದು ವೇಳೆ ಕುರಿಮರಿಯೂ ಅಕಸ್ಮಾತಾಗಿ ಮೃತಪಟ್ಟರೆ ಮಾಲೀಕನಿಗೆ 2500 ರೂಪಾಯಿಗಳನ್ನು ಪರಿಹಾರ ಹಣವಾಗಿ ಕೊಡುತ್ತಾರೆ.
ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ?
ನಮ್ಮ ಹಿಂದಿನ ರಾಜ್ಯ ಸರ್ಕಾರವು ರೈತರಿಗೆ ನಾಲ್ಕು ಪ್ರತಿಶತ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಕೊಡುತ್ತಿತ್ತು. ಆದರೆ ಈ ಸಾಲು ಸೌಲಭ್ಯದ ಮಿತಿ ಮೂರು ಲಕ್ಷದಿಂದ 5 ಲಕ್ಷದವರೆಗೆ ಮಾತ್ರವಿತ್ತು. ಈಗಿನ ಸರ್ಕಾರವು ಇದನ್ನು 10 ರಿಂದ 20 ಲಕ್ಷದವರೆಗೆ ಏರಿಕೆಯನ್ನು ಮಾಡಿದೆ. ರೈತರು ನಾಲ್ಕು ಪ್ರತಿಶತ ಬಡ್ಡಿ ದರದಲ್ಲಿ 20 ಲಕ್ಷದವರೆಗೆ ಸಾಲವನ್ನು ಪಡೆದು ಸೌಲಭ್ಯವನ್ನು ಪಡೆದುಕೊಳ್ಳಬೇಕು.
ಕೃಷಿ ಭಾಗ್ಯ ಯೋಜನೆ ಮರುಜಾರಿ
ರೈತರಿಗೆ ಸರಕಾರವು ನೀರಾವರಿ ಮಾಡಿಕೊಳ್ಳಲು ಕೃಷಿಗೊಂಡ ನಿರ್ಮಾಣಕ್ಕೆ ಸಹಾಯಧನವನ್ನು ನೀಡುತ್ತಿತ್ತು. ನರೇಗಾ ಯೋಜನೆ ಅಡಿಯಲ್ಲಿ ರೈತರು ಈ ಯೋಜನೆಯನ್ನು ಬಳಸಿಕೊಂಡು ಹಲವಾರು ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಅದನ್ನು ಬಳಸುತ್ತಿದ್ದರು. ಈ ಬಜೆಟ್ ನಲ್ಲಿ ನರೇಗಾ ಯೋಜನೆ ಅಡಿಯಲ್ಲಿ 100 ಕೋಟಿ ರೂಪಾಯಿಗಳನ್ನು ಕೃಷಿಗೊಂಡ ನಿರ್ಮಾಣಕ್ಕೆ ಮೀಸಲಿಟ್ಟಿದ್ದಾರೆ.
*ಬಿಪಿಎಲ್ ಕಾರ್ಡ್ ಇರುವ ಜನರಿಗೆ 170 ರೂಪಾಯಿ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ*
*ಉದ್ಯೋಗ ಖಾತ್ರಿ ಯೋಜನೆ ಅಡಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಹಾಯಧನ*
*ನಿಮ್ಮ ಹೊಲದ ಸರ್ವೆ ನಂಬರ್ ಇಂದ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂದು ತಿಳಿಯಿರಿ*