ಆತ್ಮೀಯ ರೈತ ಬಾಂಧವರೇ, ಸರ್ಕಾರದ ವತಿಯಿಂದ ತೋಟಗಾರಿಕೆ ಇಲಾಖೆಯನ್ನು ಅಭಿವೃದ್ಧಿ ಮಾಡಲು ಹಲವಾರು ಯೋಜನೆಗಳನ್ನು ತಂದಿದೆ. ಅದೇ ರೀತಿಯಲ್ಲಿ ಹಲವಾರು ಗಿಡದ ಸಸಿಗಳನ್ನು ನೀಡಿ ಸರಕಾರವು ರೈತರಿಗೆ ಅವುಗಳನ್ನು ಬೆಳೆಸಿ ಲಾಭ ಮಾಡಿಕೊಳ್ಳುವುದು ಅನುವು ಮಾಡಿಕೊಟ್ಟಿದೆ.
ಅದೇ ರೀತಿಯಾಗಿ ಸರ್ಕಾರವು ಈಗ ರೈತರಿಗೆ ತೆಂಗು ಶಶಿಗಳನ್ನು ನೀಡಿ ರೈತರಿಗೆ ಉಪಯುಕ್ತ ವಾಗುವಂತಹ ಕೆಲಸವನ್ನು ಮಾಡುತ್ತಿದೆ. ರೈತರು ಈ ಲೇಖನವನ್ನು ಸಂಪೂರ್ಣವಾಗಿ ಓದಿ ಈ ಸಸಿಗಳು ಎಂದು ಸಿಗುತ್ತವೆ ಎಂದು ತಿಳಿಯೋಣ. ತೆಂಗು ಅಭಿವೃದ್ಧಿ ಮಂಡಳಿ ಇದು ಮಂಡ್ಯ ಫಾರ್ಮಿನಲ್ಲಿ ಕಂಡು ಬರುತ್ತದೆ. ನಮ್ಮ ಮಂಡ್ಯ ಜಿಲ್ಲೆಯಲ್ಲಿ ಬಹಳ ಹೆಚ್ಚಾಗಿ ಇಳುವರಿಯನ್ನು ಕೊಡುವಂತಹ ಅತಿ ಗುಣಮಟ್ಟ ಹೊಂದಿರುವ ತೆಂಗಿನ ಸಸಿಗಳನ್ನು ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.
ರೈತರು ತೆಂಗಿನ ಸಸಿಗಳನ್ನು ಎಲ್ಲಿ ಖರೀದಿ ಮಾಡಬೇಕು?
ಯಾವ ರೈತರಿಗೆ ಈ ತೆಂಗಿನ ಸಸಿಗಳನ್ನು ತೆಗೆದುಕೊಳ್ಳಬೇಕೆನಿಸುತ್ತದೆಯೋ ಅವರು ಲೋಕಸರದಲ್ಲಿ ಇರುವ ತೆಂಗು ಅಭಿವೃದ್ದಿ ಮಂಡಳಿಗೆ ಭೇಟಿ ನೀಡಬೇಕಾಗಿ ವಿನಂತಿ. ನಮ್ಮ ರೈತರು ಆ ಮಂಡಳಿಯು ಕೆಲಸ ಮಾಡುವ ದಿನಗಳಲ್ಲಿ ಆ ಕಚೇರಿಗೆ ಭೇಟಿ ನೀಡಿ ಈ ಸಸಿಗಳನ್ನು ತೆಗೆದುಕೊಳ್ಳಬೇಕಾಗಿ ವಿನಂತಿ. ಭೇಟಿ ನೀಡು ಸಮಯ ಬೆಳಗ್ಗೆ 8 ರಿಂದ ಸಂಜೆ 3 ರ ಒಳಗಾಗಿ ಅಲ್ಲಿಗೆ ಭೇಟಿ ನೀಡಬೇಕು.
ಒಂದು ತೆಂಗಿನ ಸಸಿಗೆ ಎಷ್ಟು ಬೆಲೆ?
ರೈತರಿಗೆ ಪ್ರತಿ ಕಡಿಮೆ ದರದಲ್ಲಿ ಸಿಗಬೇಕೆಂದು ಈ ಮಂಡಳಿಯು ಒಂದು ನಾಟಿ ತೆಂಗಿನ ಸಸಿಗೆ ಕೇವಲ 80 ರೂಪಾಯಿಗಳನ್ನು ನಿಗದಿಪಡಿಸಿದೆ. ಇದರಿಂದ ರೈತರಿಗೆ ಉಪಯುಕ್ತವಾಗಲೆಂದು ಮಂಡಳಿಯು ರೈತರಿಗೆ ಯಾರು ನಮ್ಮಲ್ಲಿ ತೆಂಗಿನ ಸಸಿಗಳನ್ನು ತೆಗೆದುಕೊಳ್ಳುತ್ತಾರೋ ಅವರಿಗೆ ಅರ್ಧದಷ್ಟು ಹಣವನ್ನು ಸಹಾಯಧನವಾಗಿ ನೀಡುತ್ತೇವೆ ಎಂದು ಮಂಡಳಿ. ಅದು ಯಾವ ರೈತರು ಸಸಿಗಳನ್ನು ತೆಗೆದುಕೊಳ್ಳುತ್ತಾರೆ ಅವರಿಗೆ ಈ ಸಹಾಯಧನಕ್ಕೆ ಅರ್ಜಿ ನೀಡಲು ಪ್ರಸೀದಿಯನ್ನು ಮಂಡಳಿಯು ಕಚೇರಿಯಲ್ಲಿ ನೀಡುತ್ತದೆ. ರೈತರು ಈ ಸಸಿಗಳನ್ನು ನಟ ಕೂಡಲೇ ಅರ್ಜಿಯ ರಸೀದಿಯನ್ನು ಸಲ್ಲಿಕೆ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ನಾವು ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ. 9438803651 , 08232-298015 , 9945740889
2023-24 ಮುಂಗಾರು ಯಾವ ಯಾವ ಬೆಳೆಗೆ ಏಷ್ಟು ಬೆಳೆ ವಿಮೆ ತುಂಬಬೇಕು?
ಸರ್ಕಾರದಿಂದ ಯಾವ ಗೊಬ್ಬರಕ್ಕೆ ಎಷ್ಟು ಸಬ್ಸಿಡಿ ಎಂದು ತಿಳಿಯಿರಿ?
ಮೊದಲ ದಿನವೇ ಬರೋಬ್ಬರಿ 55 ಸಾವಿರ ಅರ್ಜಿ ಸಲ್ಲಿಕೆ, ಫ್ರೀ ಕರೆಂಟ್ ಬೇಕಾದರೆ ಹೀಗೆ ಅರ್ಜಿ ಸಲ್ಲಿಸಿ*