ಆತ್ಮೀಯ ರೈತ ಬಾಂಧವರೇ ವಿಜಯಪುರ ಜಿಲ್ಲೆಯ ರೈತರಿಗೆ ಸಿಹಿ ಸುದ್ದಿ. ಶಾಸಕ ಬಸನಗೌಡ ಪಾಟೀಲ್ ಅವರು ರೈತರ ಜೀರ್ಣೋದ್ಧಾರಕ್ಕಾಗಿ ಒಂದು ಅರ್ಬನ್ ಹೆಲ್ತ್
ಸೆಂಟರ್ ಮತ್ತು ದ್ರಾಕ್ಷಿ ಬೆಳೆಗಾರರಿಗೆ ಉಪಯುಕ್ತವಾದ ಘೋಷಣೆಯನ್ನು ಮಾಡಿದ್ದಾರೆ.
ನಗರದ ಎಪಿಎಂಸಿ ಆವರಣದಲ್ಲಿ ಪಶು ಆಸ್ಪತ್ರೆ ಹಾಗೂ ಅರ್ಬನ್ ಹೆಲ್ತ್ ಸೆಂಟರ್ ಸ್ಥಾಪಿಸಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ಇಲ್ಲಿನ ಎಪಿಎಂಸಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಎಪಿಎಂಸಿ ಸಂಪೂರ್ಣ ಸಹಕಾರ ನೀಡಬೇಕೆಂದು ನಿರ್ಧಾರ ಮಾಡಿದ್ದಾರೆ. ಈ ಕಾರಣದಿಂದ ಪಶು ಆಸ್ಪತ್ರೆ ಸ್ಥಾಪನೆಗೆ ಉಚಿತವಾಗಿ ಕಟ್ಟಡ, ಜಾಗ ನೀಡಬೇಕು ಎಂದು ಹೇಳಿದರು.
ಎಪಿಎಂಸಿ ಆವರಣದಲ್ಲಿ ಆಸ್ಪತ್ರೆ ಸ್ಥಾಪನೆಗೆ ಶಾಸಕರ ನಿಧಿಯಡಿ 25 ಲಕ್ಷ ರೂ. ಅನುದಾನ ನೀಡಿದರು. ಅತಿ ಶೀಘ್ರವಾಗಿ ರೈತರ ಸೇವೆಗೆ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ. ಅಲ್ಲದೆ, ದರ್ಗಾ ಮತ್ತು ಇಬ್ರಾಹಿಂಪುರ ಸುತ್ತಮುತ್ತಲಿನ ರೈತರ ಅನುಕೂಲಕ್ಕಾಗಿ ಅಲ್ಲಿಯೂ ಕೂಡ ಪಶು ಆಸ್ಪತ್ರೆ ಸ್ಥಾಪನೆಯ ಯೋಚನೆಯಿದ್ದು, ಈ ಕುರಿತಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ :- ಮೊಬೈಲ್ ನಂಬರ್ ಹಾಕಿ ಬೆಳೆಹಾನಿ ಚೆಕ್ ಮಾಡಿ
ಇದೇ ವೇಳೆ ಒಣದ್ರಾಕ್ಷಿ ಕೋಲ್ಡ್ ಸ್ಟೋರೇಜ್ ಗಳನ್ನು ಮರಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಗೆ ತೆಗೆದುಕೊಳ್ಳಬೇಕೆಂಬ ಎಪಿಎಂಸಿ ಅಧಿಕಾರಿಗಳ ಮನವಿಗೆ ಸ್ಪಂದಿಸಿದ ಶಾಸಕರು, ಈ ಕುರಿತಂತೆ ಈಗಾಗಲೇ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಮಾಡಿದ್ದಾರೆ. ಇದಕ್ಕೂ ಮುನ್ನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣದ ದಕ್ಷಿಣ ದ್ವಾರದಲ್ಲಿ ನೂತನವಾಗಿ ನಿರ್ಮಿಸಲಾದ 14 ಮಳಿಗೆಗಳು, ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ 9 ಮಳಿಗೆಗಳು ಮತ್ತು ಇಂಡಿ ರಸ್ತೆಗೆ ಹೊಂದಿಕೊಂಡು ನಿರ್ಮಿಸಿರುವ 8 ಮಳಿಗೆಗಳು ಸೇರಿ ಒಟ್ಟು 31 ಮಳಿಗೆಗಳನನ್ನು ಲೋಕಾರ್ಪಣೆಗೊಳಿಸಿದ್ದಾರೆ. ಆಮೇಲೆ ಪಶುಪಾಲನಾ ಇಲಾಖೆಯಿಂದ ಮೇವು ಕೊರೆಯುವ ಯಂತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿ, ನೂತನ ಪಶು ಸಂಜೀವಿನಿ ವಾಹನಗಳಿಗೆ ಚಾಲನೆ ನೀಡಿದರು.
ಇದನ್ನೂ ಓದಿ :- ರೇಷ್ಮೆ ಬೆಳೆಗಾರರಿಗೆ ಸಿಹಿ ಸುದ್ದಿ ಅಡಿಕೆಯ ರೋಗ ನಿರ್ವಹಣೆ ಮಾಡಲು 10 ಕೋಟಿ ರೂಪಾಯಿ ನೆರವು
ಇದನ್ನೂ ಓದಿ :- ಕುರಿ ಸಾಕಾಣಿಕೆ ಹಾಗೂ ಮೇಕೆ ಸಾಕಾಣಿಕೆ ಮಾಡಲು ತಯಾರಿ ಮಾಡುತ್ತಿರುವ ರೈತರಿಗೆ ಸಿಹಿ ಸುದ್ದಿ.
ಕುರಿ ಹಾಗೂ ಮೇಕೆ ಖರೀದಿಸಲು ಪ್ರೋತ್ಸಾಹಧನ ಈಗಲೇ ಅರ್ಜಿ ಸಲ್ಲಿಸಿ