ಲದ್ದಿಹುಳು ಗೋವಿನಜೋಳ ಹಾಗೂ ಇತರ ಬೆಳೆಗಳಲ್ಲಿ ಬರುವ ಪ್ರಮುಖ ಕೀಟ. ಇದರ ನಿರ್ವಹಣೆಗೆ ವಿಷಪಾಷಣ ತಯಾರಿಸುವ ವಿಧಾನ ಮತ್ತು ಬಳಕೆ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ. ಕೀಟದ ಬಾಧೆ ಕಡಿಮೆ ಇರುವಾಗ ಕ್ಲೋರ್‌ಪೈರಿಪಾಸ್ 20 ಇಸಿ 2 ಮಿ.ಲೀ., ಅಥವಾ ಕ್ವಿನಾಲ್‌ಪಾಸ್ 25 ಇಸಿ 2 ಮಿ.ಲೀ.ಅಥವಾ ಸೈಪರಮೆಥೀನ್ 0.5 ಮಿ.ಲೀ. ಪ್ರತಿ ಲೀ.ನೀರಿಗೆ ಬೆರೆಸಿ ಸಿಂಪಡಿಸಬೇಕು.
ಕೀಟದ ಬಾಧೆ ಹೆಚ್ಚು ಇರುವಾಗ ಇಮಾಮೆಕ್ಟಿನ್ ಬೆಂಜೋಯೆಟ್ 5 ಎಸ್.ಜಿ. 0.4 ಗ್ರಾಂ ಅಥವಾ ಸೈನೊಸ್ಯಾಡ್ 45 ಎಸ್.ಸಿ 0.2 ಮಿ.ಲೀ. ಅಥವಾ ಕ್ಲೋರಾಂಟಿನಿಲಿಪ್ರೊಲ್ 18.05 ಎಸ್.ಸಿ 0.4 ಮಿ.ಲೀ.
ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಯಲ್ಲಿ ಬೀಳುವಂತೆ ವಿಷಪಾಷಣವನ್ನು ತಯಾರಿಸಲು 2 ಕಿ.ಗ್ರಾಂ. ಬೆಲ್ಲವನ್ನು 2-3 ಲೀಟರ್ ನೀರಿನಲ್ಲಿ ಬೆರೆಸಿ 20 ಕಿ.ಗ್ರಾಂ. ಅಕ್ಕಿ ಅಥವಾ ಗೋಧಿ ತೌಡಿನಲ್ಲಿ ಸರಿಯಾಗಿ ಕೂಡಿಸಿ ನಂತರ ಎರಡು ದಿನಗಳವರೆಗೆ ಪ್ಲಾಸ್ಟಿಕ್ ಚೀಲದಲ್ಲಿ ಕಳಿಯಲು ಬಿಡಬೇಕು.
ಬಳಕೆಯ ಅರ್ಧ ಗಂಟೆ ಮುಂಚಿತವಾಗಿ 100 ಗ್ರಾಂ ಥಯೋಡಿಕಾರ್ಬ್ 75 ಡಬ್ಲೂ.ಪಿ. ಕೀಟನಾಶಕ ಬೆರೆಸಬೇಕು. ಸಂಜೆ ಎಕರೆಗೆ 20 ಕೆಜಿ ವಿಷಪಾಷಣವನ್ನು ಮೆಕ್ಕೆಜೋಳದ ಸುಳಿ, ಎಲೆಗಳ ಮೇಲೆ ಬೀಳುವಂತೆ ಎರಚಬೇಕು.
ಮಾಹಿತಿಗೆ ಮೊ: 9448418389 ಸಂಪರ್ಕಿಸಿ.
ಅಗಸ್ಟ್ ತಿಂಗಳ ಕೊನೆಯ ಮಳೆ ಮುನ್ಸೂಚನೆ
ವೇಸ್ಟ್ ಡಿಕಂಪೋಜ ತ್ಯಾಜ್ಯ ವಿಘಟಕ ಬಳಕೆ
ಪಡಿತರ ಚೀಟಿ ಹೊಂದಿದ ಜನರಿಗೆ ಸಿಹಿ ಸುದ್ದಿ, ಆಪರೇಷನ್ ಪಡಿತರ, ವೈದ್ಯಕೀಯ ಚಿಕಿತ್ಸೆಗಾಗಿ ಆಂಧ್ರ ಮಾದರಿ ಕಾರ್ಡ್
ತೊಗರಿಯಲ್ಲಿ ಬಲೆ ಕಟ್ಟುವ ಕೀಟ ಹತೋಟಿ