ಆತ್ಮೀಯ ರಾಜ್ಯ ರೈತರೇ, ನಮ್ಮ ಈ ಸಾಲಿನ ಮುಂಗಾರಿನಲ್ಲಿ ತುಂಬಾ ಮರೆಯಾದ ಕಾರಣ ನಮ್ಮ ಬೆಳೆಯೂ ಹಾಳಾಗಿ ಹೋಗಿದೆ. ಈ ಕಾರಣದಿಂದಾಗಿ ನಮ್ಮ ರಾಜ್ಯ ಸರ್ಕಾರವು ರೈತರ ನೆರವಿಗಾಗಿ ಸಜ್ಜಾಗಿ ನಿಂತಿದೆ. ಬಹುತೇಕ ರೈತರಿಗೆ ತಿಳಿದಿರಬಹುದು ತಾವು ಬೆಳೆದ ಫಸಲಿಗೆ ಕ್ರಾಪ್ ಇನ್ಸೂರೆನ್ಸ್ ಅಂದರೆ ಬೆಳೆ ವಿಮೆ ಮಾಡಿಸುವ ಪದ್ಧತಿಯನ್ನು ಹಲವಾರು ವರ್ಷದಿಂದ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಇಂದು 12 ಏಪ್ರಿಲ್ ಮಧ್ಯಾಹ್ನ ರಂದು ನನ್ನ ಖಾತೆಗೆ ಈ ಬೆಳೆ ವಿಮೆ ಹಣ ಬಂದಿದೆ.ನಮ್ಮ ಈ ಮುಂಗಾರು ಸಾಲಿನಲ್ಲಿ ರೈತರಿಗೆ ತುಂಬಾ ನಷ್ಟವಾದ ಕಾರಣ ಸರ್ಕಾರವು ಬೆಳೆ ವಿಮೆ ಮುಖಾಂತರ ರೈತರಿಗೆ ಡಿವಿಟಿ ಮೂಲಕ ಹಣವನ್ನು ನೀಡಲು ಸರ್ಕಾರ ಯೋಚಿಸಿದೆ. ನಿಮಗೆಲ್ಲ ತಿಳಿದ ಹಾಗೆ ನಮ್ಮ ಉತ್ತರ ಕರ್ನಾಟಕದ ಮುಖ್ಯ ಬೆಳೆಯಾದ ಮೆಣಸಿನಕಾಯಿ ಬೆಳೆಯು ತುಂಬಾ ಮಳೆಗೆ ಸಿಕ್ಕು ಫಸಲು ನೀರು ವಶವಾಗಿದೆ. ಆದಕಾರಣ ಈ ಬೆಳೆಗೆ ಹೆಚ್ಚಾಗಿ ಬೆಳೆಯುಮೆ ಹಣವನ್ನು ಬಹಳ ಶೇಕಡಾ ಮುಖಾಂತರ ರೈತರಿಗೆ ನೀಡುವ ಯೋಚನೆ ಬಂದಿದೆ.
ನೀವು ಕೇವಲ ಒಂದು ಎಕರೆ ಮೆಣಸಿನಕಾಯಿ ವಿಮೆ ತುಂಬಿದ್ದರೆ ಎಷ್ಟು ಹಣ ಬರುತ್ತದೆ?
ಈ ವರ್ಷ ಮೆಣಸಿನಕಾಯಿ ಬೆಳೆಯು ಬಹಳ ನಷ್ಟವಾದ ಕಾರಣ ಅತಿದವರಿಗೆ ಕಡಿಮೆ ಬಂದು ರೈತರಿಗೆ ತುಂಬಾ ಕಷ್ಟಕರವಾದ ಸಂಗತಿಯಾಗಿದೆ. ಇದೆಲ್ಲ ನೋಡಿದ ಇನ್ಸೂರೆನ್ಸ್ ಕಂಪನಿಯು ರೈತರಿಗೆ ಈ ಬಹಳ ಹಣವನ್ನು ನೀಡಲು ನಿರ್ಧರಿಸಿದೆ. 2022-23 ಸಾಲಿನ ಮುಂಗಾರು ಬೆಳೆಯಾದ ಈ ಮೆಣಸಿನಕಾಯಿಗೆ ಶೇಕಡಾ 46 ಬೆಳೆ ವಿಮೆ ಹಣವನ್ನು ಕ್ಲೇಮ್ ಮಾಡಲು ನಮ್ಮ ಇನ್ಸೂರೆನ್ಸ್ ಕಂಪನಿಗಳು ವಿಚಾರ ಮಾಡಿವೆ. ಅಂದರೆ ನೀವು ಒಂದು ಎಕರೆ ಮೆಣಸಿನಕಾಯಿ ಬೆಳೆಗೆ ಹಣ ತುಂಬಿದ್ದರೆ, ಇನ್ಸೂರೆನ್ಸ್ ಕಂಪನಿಯು ನಿಮಗೆ 13,500 ಗಳನ್ನು ನೀಡುತ್ತದೆ.
ಇಂದು ನನ್ನ ಖಾತೆಗೆ ಬೆಳೆ ವಿಮೆ ಹಣ ಬಂದಿದೆ, ಇನ್ನು ಕೆಲವೇ ದಿನಗಳಲ್ಲಿ ನಿಮಗೂ ಈ ಹಣ ಬಂದು ತಲುಪುತ್ತದೆ. ಈ ಹಣವು ನಮ್ಮ ಗದಗ್ ಜಿಲ್ಲೆಯ ರೈತರಿಗೆ ಬಂದು ತಲುಪುತ್ತದೆ. ನೀವು ಬೇರೆ ಜಿಲ್ಲೆಯ ರೈತರು ಆಗಿದ್ದರೆ ನಿಮ್ಮ ಬೆಳೆಗೆ ಎಷ್ಟು ಹಣ ಬರುತ್ತದೆ ಎಂದು ನೀವು ಈಗ ನಿಮ್ಮ ಫೋನಿನಲ್ಲಿ ನೋಡಬಹುದು. ನೀವು ಆನ್ಲೈನ್ ಮೂಲಕವೇ ನಿಮ್ಮ ಬೆಳೆ ವಿಮೆಯ ಸ್ಟೇಟಸ್ ಅನ್ನು ಚೆಕ್ ಮಾಡಬಹುದು. ಅದು ಹೇಗೆ ಮಾಡಬಹುದೆಂದು ನಾವು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ.
ನೀವು ಬೆಳೆದ ಬೆಳೆಗೆ ಎಷ್ಟು ಹಣ ಬರುತ್ತದೆ ಎಂದು ತಿಳಿಯುವುದು ಹೇಗೆ?
ರೈತರು ಕೆಳಗೆ ಇರುವ ಲಿಂಕ್ ಮೇಲೆ ಮೊದಲು ಕ್ಲಿಕ್ ಮಾಡಿ.
https://www.samrakshane.karnataka.gov.in/
ಆಮೇಲೆ ಅಲ್ಲಿ ನಿಮಗೆ ಕಾಣುವ ವರ್ಷ ಮತ್ತು ಮೃತುವಿನ ಆಯ್ಕೆ ಮಾಡಬೇಕಾಗುತ್ತದೆ. ರೈತರೇ ನಿಮಗೆ ಅಲ್ಲಿ ವರ್ಷವನ್ನು 2022-2023 ಮತ್ತು ಋತು ಮುಂಗಾರು ಎಂಬ ಆಯ್ಕೆಗಳನ್ನು ಆಯ್ದುಕೊಳ್ಳಬೇಕು. ಇಷ್ಟಾದ ಮೇಲೆ ಮುಂದೆ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮನ್ನು ಮುಂದಿನ ಪುಟಕ್ಕೆ ಕರೆದುಕೊಂಡು ಹೋಗುತ್ತದೆ. ನಂತರ ನೀವು ಚೆಕ್ ಸ್ಟೇಟಸ್ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ ನಂತರ ನಿಮ್ಮ ಪ್ರಪೋಸಲ್ ನಂಬರ್ ಮತ್ತು ಅಲ್ಲಿರುವ ಕ್ಯಾಪ್ಚಾ ಕೊಡನ್ನು ಬರೆದರೆ ಸಾಕು ನಿಮಗೆ ಎಷ್ಟು ಹಣ ಬರುತ್ತದೆ ಎಂದು ನಿಮಿಷದಲ್ಲಿ ತಿಳಿದುಬಿಡುತ್ತದೆ.
ಇದನ್ನೂ ಓದಿ :- ನಿಮ್ಮ ಬಳಿ ಮೊಬೈಲ್ ಫೋನ್ ಇದ್ದರೆ ಸಾಕು ನಿಮ್ಮ ಹೊಲದ ನಕ್ಷೆಯನ್ನು ನೋಡಬಹುದು