Breaking
Tue. Dec 17th, 2024

ಬೆಳೆ ವಿಮೆ ಹಣ ಜಮಾವಾಗಿಲ್ಲ ಅಂದರೆ ಏಪ್ರಿಲ್ 28 ರ ಒಳಗೆ ಆಕ್ಷೇಪಣೆ ಸಲ್ಲಿಸಿ ಹಣ ಪಡೆಯಿರಿ

Spread the love

ಆತ್ಮೀಯ ರೈತ ಭಾಂದವರೇ, ನಿಮಗೆ ಈಗಾಗಲೇ ತಿಳಿದಿರಬಹುದು ಸಮೀಕ್ಷೆ ಅಂದರೆ ನಿಮ್ಮ ಹೊಲದಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಸರ್ಕಾರಕ್ಕೆ ನೀಡುವುದು. ನೀವು ನೀಡಿದ ವಿವರದಂತೆ ಸರ್ಕಾರ ನಿಮಗೆ ನಿಮ್ಮ ಬೆಲೆ ನಷ್ಟ ಅಥವಾ ಸಬ್ಸಿಡಿಯನ್ನು ಕೊಡಲು ನಿರ್ಧರಿಸಲು ಮಾರ್ಗವನ್ನು ನೀಡಿದ್ದಾರೆ. ಆದಕಾರಣ ರೈತರು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಈ ಎಲ್ಲಾ ಬೆಳೆ ಸಮೀಕ್ಷೆ ಮಾಡಿದ ಮೇಲೆ ನೀವು ಯಾವುದಾದರೂ ಬಳೆ ವಿವರವನ್ನು ತಪ್ಪು ನೀಡಿದ್ದಾರೆ ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕೆಂಬುದನ್ನು ನಾವು ನಿಮಗೆ ತಿಳಿಸಿ ಕೊಡುತ್ತೇವೆ. ಆದಕಾರಣ ಈ ಲೇಖನವನ್ನು ಸರಿಯಾಗಿ ಓದಿ.

ಬೆಳೆ ಸಮೀಕ್ಷೆ ಮಾಡುವಾಗ ತಪ್ಪು ಬೆಳೆ ವಿವರ ಕೊಟ್ಟಿದ್ದರೆ ಏನು ಮಾಡಬೇಕು?


ರೈತರೇ ನೀವು ಸಮೀಕ್ಷೆ ಮಾಡುವಾಗ ನಿಮಗೆ ಅರ್ಥವಾಗದೆ ನೀವು ಬೇರೆ ಬೆಳೆಯ ವಿವರವನ್ನು ಕೊಟ್ಟಿದ್ದರೆ, ಒಂದು ಉದಾಹರಣೆಯನ್ನು ನೋಡೋಣ:- ನೀವು ಹೊಲದಲ್ಲಿ ಕಡಲೆಯನ್ನು ಬೆಳೆದಿದ್ದು, ಆದರೆ ನೀವು ತಪ್ಪಾಗಿ ಜೋಳ ಎಂದು ವಿವರವನ್ನು ನೀಡಿದ್ದರೆ ಅದನ್ನು ನೀವು ಮತ್ತೆ ಕಡಲೆಯಾಗಿ ಬದಲಾವಣೆ ಮಾಡುವುದು ಅವಶ್ಯವಾಗಿದೆ.ನಿಮಗೆ ಬೆಳೆ ಹಾನಿ ಮತ್ತು ಬೆಳೆಯುವ ಬರುವುದು ಕಷ್ಟವಾಗಿ ಬರುತ್ತದೆ. ಆದಕಾರಣ ನೀವು ಬೆಳೆದರ್ಶಕ ಎಂಬ ಆಪನ್ನು ಬಳಸಿಕೊಂಡು ಅದರ ತಿದ್ದುಪಡಿಯನ್ನು ಮಾಡುವುದು ತುಂಬಾ ಅವಶ್ಯಕವಾಗಿದೆ. ಕೆಳಗೆ ನಿಮಗೆ ಅದನ್ನು ಬಯಸುವ ಪರಿಯನ್ನು ತಿಳಿಸಿದ್ದೇವೆ. ಇದನ್ನು ಮಾಡಲು ನೀವು ಕೆಳಗೆ ನೀಡಿರುವ ಲಿಂಕನ್ನು ಬಳಸಿಕೊಂಡು ಬೆಳೆದರ್ಶಕ ಆ್ಯಪ್ ಅನ್ನು ಡೌನ್ಲೋಡ್ ಮಾಡಿ.
https://play.google.com/store/apps/details?id=com.crop.offcskharif_2021

ರೈತರು ಬೆಳೆ ದರ್ಶಕ ಆ್ಯಪ್ ಬಗ್ಗೆ ತಿಳಿಯಿರಿ


ಬೆಳೆ ದರ್ಶಕ ಈ ಆ್ಯಪ್ ನಲ್ಲಿ ರೈತರು ತಾವು ಬೆಳೆದ ಬಗ್ಗೆ ಸಮೀಕ್ಷೆ ಮಾಡಿರುವ ಎಲ್ಲ ಮಾಹಿತಿಯನ್ನು ಹೊಂದಿರುತ್ತದೆ. ಈ ಸರಳವಾದ ಯಾಪಿನಲ್ಲಿ ರೈತರು ಹೌದಾ ಕಲಿಸಿರುವ ಬಗ್ಗೆ ತಿಳಿದುಕೊಂಡು ಮಾರ್ಗವಾಗಿದೆ. ಈಗ ನೀವು ಈ ಆಪ್ ಅನ್ನು ಉಚಿತವಾಗಿ ರೆಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ತುಂಬಾ ಸರಳವಾಗಿ ಬಯಸಬಹುದು. ಈ ಅಪ್ಪನ್ನು ನೀವು ತೆರೆದ ಕೂಡಲೇ ಅಲ್ಲಿ ನಿಮಗೆ ಪರದೆಯಲ್ಲಿ ಬೆಳೆ ಸಮೀಕ್ಷೆ ವರ್ಷ, ಋತುಮಾನ, ನಿಮ್ಮ ಜಿಲ್ಲೆ, ನಿಮ್ಮ ತಾಲ್ಲೂಕು, ನಿಮ್ಮ ಹೋಬಳಿ, ನಿಮ್ಮ ಗ್ರಾಮ ಮತ್ತು ನಿಮ್ಮ ಸರ್ವೇ ನಂಬರ್ ಹಾಕಿದ ಕೂಡಲೇ ನಿಮ್ಮ ಬೆಳೆ ದಾಖಲೆ ನಿಮ್ಮ ಮುಂದೆ ಬರುತ್ತದೆ. ಆ ಪುಟದಲ್ಲಿ ಬೆಳೆ ಹೆಸರು, ವಿಸ್ತೀರ್ಣ, ವರ್ಗ, ಷರಾ ಸಮೇತ ಛಾಯಾಚಿತ್ರಗಳೊಂದಿಗೆ ಮಾಹಿತಿ ಗೋಚರವಾಗುತ್ತದೆ. ಅದೇ ಪುಟದಲ್ಲಿ ಕೆಳಗೆ ಆಕ್ಷೇಪಣೆ ಸಲ್ಲಿಸುವ ಆಯ್ಕೆಗಳಿವೆ.

ಈಗ ಆಕ್ಷೇಪಣೆ ಸಲ್ಲಿಸುವುದು ಹೇಗೆ ಎಂದು ತಿಳಿಯಿರಿ?


ನಿಮಗೆ ಆಕ್ಷೇಪನೆ ಎಂಬ ಪದದ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಒಂದು ಪುಟ ತೆರೆಯುತ್ತದೆ ಅಲ್ಲಿ ನೀವು ಆಕ್ಷೇಪಣೆ ಮಾಡುವವರ ಹೆಸರು, ಮೊಬೈಲ್ ಸಂಖ್ಯೆ, ಆಕ್ಷೇಪಣೆ ಮಾಡುವವರು ಆ ಜಮೀನಿನ ಮಾಲೀಕರೊಂದಿಗೆ ಹೊಂದಿದ ಸಂಬಂಧವನ್ನು ಅಲ್ಲಿ ಆಯ್ಕೆ ಮಾಡಬೇಕು. ನಂತರ ಆಕ್ಷೇಪಣೆ ವಿವರದಲ್ಲಿ ನಾವು ಬೆಳೆಯ ಮಾಹಿತಿಯನ್ನು ತಪ್ಪಾಗಿ ನಮೂದಿಸಲಾಗಿದೆ, ಬೆಳೆಯನ್ನು ನಮೂದಿಸಿಲ್ಲ, ನಮ್ಮ ಹೊಲದ ವಿಸ್ತೀರ್ಣವನ್ನು ಸರಿಯಾಗಿ ನಮೂದಿಸಿಲ್ಲ, ನಾವು ತಪ್ಪಾಗಿ ಪಕ್ಕದ ಜಮೀನಿನ ವಿವರವನ್ನು ನಮೂದಿಸುತ್ತೇವೆ, ಎಂಬ ಹಲವಾರು ವಾಕ್ಯಗಳಲ್ಲಿ ನೀವು ನಿಮಗೆ ಸಂಬಂಧಪಟ್ಟ ಆಕೆಯನ್ನು ಮಾಡಿಕೊಳ್ಳಿ. ನಂತರ ನಿಮಗೆ ಒಂದು ಓಟಿಪಿ(OTP) ಬರುತ್ತದೆ. ಆ ಓಟಿಪಿ(OTP) ಅನ್ನು ತೆಗೆದುಕೊಂಡು ಆ್ಯಪ್‌ನಲ್ಲಿ ನಮೂದಿಸಬೇಕು. ಐ ಆಮೇಲೆ ತೆರೆಯುವ ಪುಟದಲ್ಲಿ ರೈತರು ಧ್ವನಿ ಮುದ್ರಣ ಆಯ್ಕೆ ಮಾಡಬೇಕು. ರೈತರು ಕೊನೆಗೆ ನಿಮ್ಮ ಹತ್ತಿರ ಬೆಳಿಯ ಚಿತ್ರಗಳು ಇದ್ದರೆ ಅಲ್ಲಿ ಕ್ಯಾಮೆರಾ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಚಿತ್ರಗಳನ್ನು ಅಪ್ಲೋಡ್ ಮಾಡಬೇಕು. ಆಮೇಲೆ ನಿಮಗೆ ಆಕ್ಷೇಪನೆಯ ಸಂಖ್ಯೆ ನಿಮ್ಮ ಮೊಬೈಲಿಗೆ ಬರುತ್ತದೆ. ಈ ಆಕ್ಷೇಪಣೆ ಸಂಖ್ಯೆ ಮತ್ತು ವಿವರಗಳನ್ನು ನೀವು ಭದ್ರವಾಗಿ ಇಟ್ಟುಕೊಂಡು ಮುಂದೆ ಯಾವುದಾದರೂ ಸಮಸ್ಯೆ ಬರದಂತೆ ಕಾಯ್ದುಕೊಳ್ಳಬೇಕು.

ಇದನ್ನೂ ಓದಿ :- ಒಂದೇ ನಿಮಿಷದಲ್ಲಿ ಪಿಎಂ ಕಿಸಾನ್,ಬೆಳೆವಿಮೆ,ಬೆಳೆಹಾನಿ ಪರಿಹಾರದ ಸ್ಟೇಟಸ್ ಚೆಕ್ ಮಾಡಿ

ಇದನ್ನೂ ಓದಿ :- ದನಗಳ ಶೆಡ್ ನಿರ್ಮಾಣ ಮಾಡಲು 57,000 ರೂಪಾಯಿಗಳ ಸಹಾಯಧನ ನೀಡುತ್ತಿದ್ದಾರೆ ಕೂಡಲೇ ಅರ್ಜಿ ಸಲ್ಲಿಸಿ

ಇದನ್ನೂ ಓದಿ :- ನಿಮ್ಮ ಮನೆಯಲ್ಲಿ ಗರ್ಭಿಣಿ ಹೆಂಗಸರು ಇದ್ದರೆ ನಿಮಗೆ ಸಿಗುತ್ತೆ 6000 ರೂಪಾಯಿ

ಇದನ್ನೂ ಓದಿ :- ರೈತರು ನಿಮ್ಮ ಹೆಸರಿನಲ್ಲಿ ಎಷ್ಟು ಎಕರೆ ಜಮೀನು ಇದೆ ಎಂದು ತಿಳಿಯುವುದು ಹೇಗೆ?

ಇದನ್ನೂ ಓದಿ :- ರೈತರು ಕೇವಲ 5 ನಿಮಿಷದಲ್ಲಿ ಮೊಬೈಲ್ ನಲ್ಲಿ ನಿಮ್ಮ ಊರಿನ ನಕ್ಷೆಯನ್ನು ಡೌನ್ಲೋಡ್ ಮಾಡಿಕೊಳ್ಳಿ

Related Post

Leave a Reply

Your email address will not be published. Required fields are marked *