ಬೆಳೆ ಸಮೀಕ್ಷೆ ಮಾಡುವುದು ಹೇಗೆ ಎಂದು ತಿಳಿಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://bhoomisuddi.com/summer-farmers-crop-survey-app-has-been-released-download-now/
ವ
ಿಕಲಚೇತನ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿ ವೇತನ ನೀಡಲು ಅರ್ಹ ವಿಕಲಚೇತನದಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತರು ಕೇಂದ್ರ ಸರ್ಕಾರದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಆಗಸ್ಟ್ 31 ಹಾಗೂ ಮತ್ತು ನಂತರ ಮತ್ತು ಟಾಪ್ ಕ್ಲಾಸ್ ವಿದ್ಯಾರ್ಥಿ ವೇತನಕ್ಕಾಗಿ ಅಕ್ಟೋಬರ್ 31ರೊಳಗಾಗಿ : https://scholarships.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನಕ್ಕಾಗಿ ಮೆಟ್ರಿಕ್ ನಂತರ ಹಾಗೂ ಮೆಟ್ರಿಕ್ ನಂತರದ ಉನ್ನತ ವ್ಯಾಸಂಗ ಮಾಡುತ್ತಿರುವ ವಿಕಲಚೇತನ https://ssp.postmatric.karnataka.gov.in ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿರುತ್ತದೆ.
ವಿದ್ಯಾರ್ಥಿ ವೇತನ ಸೌಲಭ್ಯಕ್ಕಾಗಿ ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (ಯು.ಡಿ.ಐ.ಡಿ) ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹೊಸಪೇಟೆ ತಾಲ್ಲೂಕಿನ ಎಮ್‌ಆರ್‌ಡಬ್ಲೂ ಜೆ.ರವಿಕುಮಾರ ನಾಯಕ ಮೊ-994525991, ಹರಪನಹಳ್ಳಿ ತಾಲ್ಲೂಕಿನ ಎಮ್‌ಆರ್‌ಡಬ್ಲೂ ಆರ್. -8217626361, 2 ತಾಲ್ಲೂಕಿನ ಎಮ್‌ಆರ್‌ಡಬ್ಲೂ ಮಂಜುನಾಥ ಮೊ-9900890403, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಎಮ್‌ಆರ್‌ಡಬ್ಲೂ ಲಕ್ಷಣ -9741185924, ತಾಲ್ಲೂಕಿನ ಎಮ್‌ಆರ್‌ಡಬ್ಲೂ ಲಕ್ಷ್ಮೀ ಮೊ- 8296859012, ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಾರ್ಯಾಲಯ, ತಾಲ್ಲೂಕು ಪಂಚಾಯತಿ ಆವರಣ, ಸಂಡೂರು ರಸ್ತೆ, ಹೊಸಪೇಟೆ ಇವರನ್ನು ಕಚೇರಿಯ ಅವಧಿಯಲ್ಲಿ ಸಂಪರ್ಕಿಸಿ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 6ರ ಸಂಜೆ 5.30ರ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅರ್ಜಿ ಸಲ್ಲಿಸುವ ವೇಳೆ ಸ್ವಯಂ ದೃಢೀಕರಿಸಿದ ಎಲ್ಲಾ ದಾಖಲಾತಿಗಳ ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ವಿಜಯನಗರ ವೆಬ್‌ಲೈಟ್ https://vijayanagara.nic.in/ ಲಭ್ಯವಿರುತ್ತದೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ರಾಯಚೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹುದ್ದೆಗಳಿಗೆ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ರಾಯಚೂರು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.
ಖಾಲಿ ಹುದ್ದೆಗಳ ವಿವರ: ಯರಗುಂಟಾ ಕೇಂದ್ರ ಸಂಖ್ಯೆ-2, ಸಾಮಾನ್ಯ. ಮಾಮಡದೊಡ್ಡಿ ಕೇಂದ್ರ ಸಂಖ್ಯೆ-2 ಸಾಮಾನ್ಯ, ಕಲವಲದೊಡ್ಡಿ ಕೇಂದ್ರ ಸಂಖ್ಯೆ-2 ಪ.ಪಂಗಡ, ಕೊರ್ವಿಹಾಳ ಕೇಂದ್ರ ಸಂಖ್ಯೆ-2 ಸಾಮಾನ್ಯ, ರಾಳದೊಡ್ಡಿ ಕೇಂದ್ರ ಸಂಖ್ಯೆ-2 ಸಾಮಾನ್ಯ, ದಿನ್ನಿ ಕೇಂದ್ರ ಸಂಖ್ಯೆ-1 ಪ.ಪಂಗಡ, ರಾಮನಗರ ಕೇಂದ್ರ ಸಂಖ್ಯೆ-2 ಪ.ಜಾತಿ, ಮಮದಾಪೂರು ಶಾಂಭವಿ ನಗರ ಸಾಮಾನ್ಯ, ಉಮರನಗರ ಕೇಂದ್ರ ಸಂಖ್ಯೆ-3 ಸಾಮಾನ್ಯ, ಅಂದೂಕಿಲ್ಲಾ ಕೇಂದ್ರ ಸಂಖ್ಯೆ- 3 ಸಾಮಾನ್ಯ, ನೀರಭಾವಿಕುಂಟಾ ಕೇಂದ್ರ ಸಂಖ್ಯೆ- 5 ಪ.ಜಾತಿ, ಮಂಗಳವಾರಪೇಟೆ ಕೇಂದ್ರ ಸಂಖ್ಯೆ-2 ಪ.ಜಾತಿ, ಎಲ್.ಬಿ.ಎಸ್.ನಗರ ಕೇಂದ್ರ ಸಂಖ್ಯೆ-12 ಸಾಮಾನ್ಯ, ಆಶೋಕ ಡಿಪೊ ಕೇಂದ್ರ ಸಂಖ್ಯೆ-4 ಸಾಮಾನ್ಯ, ಹೊಸ ಆಶ್ರಯ ಕಾಲೊನಿ ಕೇಂದ್ರ ಸಂಖ್ಯೆ-2 ಸಾಮಾನ್ಯ, ಮಂಜರ್ಲಾ ಕೇಂದ್ರ ಸಂಖ್ಯೆ-2 ಪ.ಜಾತಿ, ಕೇಂದ್ರ ಸಂಖ್ಯೆ-2 ಸಾಮಾನ್ಯ, ಜನತಾ ಕಾಲೋನಿ ಕೇಂದ್ರ ಸಂಖ್ಯೆ-1 ಸಾಮಾನ್ಯ ಅಭ್ಯರ್ಥಿಗಳಿಗೆ ಮೀಸಲು ನಿಗದಿಪಡಿಸಲಾಗಿದೆ.
ಸೆಪ್ಟೆಂಬರ್ 5ಕ್ಕೆ ಉದ್ಯಮಶೀಲತಾ ಪ್ರೇರಣಾ ಕಾರ್ಯಕ್ರಮ
ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಇವರು ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಇಚ್ಚಿಸುವ ಎಲ್ಲಾ ವರ್ಗದ ಯುವಕ ಯುವತಿಯರಿಗಾಗಿ ಒಂದು ದಿನದ ಉದ್ಯಮಶೀಲತಾ ಪ್ರೇರಣಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 5 ರಂದು ಹೊಸಪೇಟೆಯ ತಾಲೂಕು ಪಂಚಾಯಿತಿಯಲ್ಲಿ ಆಯೋಜಿಸಿದ್ದು ಆಸಕ್ತರು ಭಾಗವಹಿಸಬಹುದು. ಈ ಕಾರ್ಯಕ್ರಮದಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸಲು ಬಯಸುವ ಆಸಕ್ತರಿಗೆ ಪ್ರೇರೇಪಣೆ, ಸ್ವಂತ ಉದ್ಯಮ ಸ್ಥಾಪನೆಗಾಗಿ ಸರ್ಕಾರ ಹಾಗೂ ಹಣಕಾಸು ಸಂಸ್ಥೆಗಳಿಂದ ದೊರೆಯುವ ನೆರವು, ಪ್ರೋತ್ಸಾಹ ಮತ್ತು ಮುಂದೆ ಕೈಗೊಳ್ಳಲಾಗುವ ಉದ್ಯಮಶೀಲತಾಭಿವೃದ್ಧಿ ತರಬೇತಿ ಇತ್ಯಾದಿ ವಿಷಯಗಳ ಕುರಿತು ಮಾಹಿತಿಯನ್ನು ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ಹೆಸರು ನೋಂದಾಯಿಸಬಹುದು ಅಥವಾ ನೇರವಾಗಿ ಸೆಪ್ಟೆಂಬರ್ 5ರಂದು ತಾಲೂಕ ಪಂಚಾಯತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಭಾಗವಹಿಸುವವರು ಕನಿಷ್ಟ 18 ವರ್ಷಗಳ ವಯಸ್ಸಿನವರಾಗಿರಬೇಕು ಹಾಗೂ ಓದಲು, ಬರುತ್ತಿರಬೇಕು. ಬರೆಯಲು ಹೆಚ್ಚಿನ : ಮಾಹಿತಿಗಾಗಿ 6362681190, 9986332736 ដ ಕಚೇರಿಯ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ವಿಜಯನಗರ ಜಿಲ್ಲೆಯ ಸಿಡಾಕ್‌ನ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತಿಥಿ ಉಪನ್ಯಾಸಕರ ಮುಂದುವರಿಕೆ ಸ್ವಾಗತಾರ್ಹ
2024-25 ಸಾಲಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವ ಸಲುವಾಗಿ ಆನ್‌ಲೈನ್ ಅರ್ಜಿಗೆ ಉನ್ನತ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯಲ್ಲಿ 2023-24ನೇ ಸಾಲಿನಲ್ಲಿ ಕಾರ್ಯ ನಿರ್ವಹಿಸಿದ ಕಾಲೇಜುಗಳಲ್ಲಿಯೇ ಕಾರ್ಯ ಭಾರವಿದ್ದು ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ ಅತಿಥಿ ಉಪನ್ಯಾಸಕರನ್ನು ಮುಂದುವರಿಸಿ, ಉಳಿದ ಕಾರ್ಯಭಾರಕ್ಕೆ ರಾಜ್ಯವ್ಯಾಪಿ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಿ ಕೌನ್ಸಲಿಂಗ್ ಮೂಲಕ ವಿಷಯವಾರು ನೇಮಕ ಮಾಡಿಕೊಳ್ಳುವ ಉದ್ದೇಶ ಇಲಾಖೆಯ ಮುಂದಿದೆ. ನೇಮಕಗೊಂಡ ಅತಿಥಿ ಉಪನ್ಯಾಸಕರಿಗೆ 31 ಸಾವಿರದಿಂದ 40 ಸಾವಿರದವರೆಗೆ ಸಂಬಳ ನೀಡುತ್ತಿದೆ.
ಇದರೊಟ್ಟಿಗೆ ವರ್ಗಾವಣೆ ಹಾಗೂ ಹೊಸ ನೇಮಕಾತಿ ಸಂದರ್ಭದಲ್ಲಿ ಕಾರ್ಯಬಾರದ ಕೊರತೆ ಉಂಟಾದರೆ ಅತಿಥಿ ಉಪನ್ಯಾಸಕರು ಮನೆಗೆ ಹೋಗುವ ಸೂಚನೆಯನ್ನು ನೀಡಲಾಗಿದೆ. ಇದಲ್ಲದೆ ಇಲಾಖೆ ಅತಿಥಿ ಉಪನ್ಯಾಸಕರನ್ನು 10 ತಿಂಗಳಿಗೆ ಮಾತ್ರ ನೇಮಕ ಮಾಡಿಕೊಳ್ಳುತ್ತೇವೆ ಎಂಬ ಆದೇಶ ನೀಡಿದೆ. ಯಾರೆಲ್ಲಾ ಯುಜಿಸಿ ಅರ್ಹತೆ ಹೊಂದಿಲ್ಲವೋ ಅಂತವರಿಗೆ ಜನವರಿ 2025ರವರೆಗೆ ಅರ್ಹತೆ ಪಡೆದುಕೊಳ್ಳಲು ಗಡುವು ನೀಡಿರುವುದು ಅತಿಥಿ ಉಪನ್ಯಾಸಕರಲ್ಲಿ ಆತಂಕ ಮನೆ ಮಾಡಿದೆ. ಅತಿಥಿ ಉಪನ್ಯಾಸಕರನ್ನು ಮುಂದುವರಿಸುತ್ತಿರುವುದು ಸಂತಸದ ವಿಷಯ ನಮಗೆ ಸೇವಾ ಭದ್ರತೆ ನೀಡುವ ನಿಟ್ಟಿನಲ್ಲಿ ಸರ್ಕಾರ ಇಟ್ಟ ಮೊದಲ ಹೆಜ್ಜೆಯಾಗಿದೆ.
ಉನ್ನತ ಶಿಕ್ಷಣ ಸಚಿವರು ಅತಿಥಿ ಉಪನ್ಯಾಸಕರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಹತ್ತು ತಿಂಗಳ ಬದಲಿಗೆ ಹನ್ನೆರಡು ತಿಂಗಳು ಸಂಬಳ ನೀಡಿದರೆ ನಾವು ಎಲ್ಲರಂತೆ ಬದುಕುತ್ತೇವೆ. ಜೊತೆಗೆ ಜನವರಿ 2025 ರೊಳಗೆ UGC ಅರ್ಹತೆಯ ಮಾನದಂಡದ ತೂಕಗತ್ತಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದ್ದು ಇದರಿಂದ ವಿನಾಯಿತಿ ನೀಡಬೇಕು ಎನ್ನುತ್ತಾರೆ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಅರ್. ಕಲ್ಮನಿ. ಈ ವರ್ಷ SEP ಜಾರಿಯಿಂದಾಗಿ ಕಾರ್ಯಭಾರದ ಕೊರತೆ ಉಂಟಾಗಿದ್ದು ಬಹಳಷ್ಟು ಜನ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಒಂದು ತರಗತಿಗೆ ನೂರು ಜನ ವಿದ್ಯಾರ್ಥಿಗಳ ಬದಲಾಗಿ 50 ಜನ ವಿದ್ಯಾರ್ಥಿಗಳಿಗೆ ಒಂದು ತರಗತಿಯಂತೆ ಮಾಡಿದರೆ ಕಾರ್ಯಭಾರದ ಕೊರತೆಯಾಗದೆ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ ಜೊತೆಗೆ ಅತಿಥಿ ಉಪನ್ಯಾಸಕರು ಉಳಿದುಕೊಳ್ಳುತ್ತಾರೆ ಎನ್ನುತ್ತಾರೆ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪೀಟರ್ ವಿನೋದ್ ಚೆಂದ ಹೇಳಿದರು.
ಜಾನುವಾರು ಗಣತಿಗೆ ಸುಧಾರಿತ ತಂತ್ರಜ್ಞಾನ
ದೋಷರಹಿತ ಜಾನುವಾರು ಗಣತಿಗಾಗಿ ಕೇಂದ್ರ ಸರ್ಕಾರ ‘ಲೈವ್ ಸ್ಟಾಕ್ ಸೆನ್ಸಸ್’ ಎಂಬ ಸಿದ್ಧಪಡಿಸಿದೆ. ಅದರ ನೆರವಿನಿಂದ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ರಾಜ್ಯದಲ್ಲಿ ಮೂರು ಹಂತದ ಜಾನುವಾರು ಗಣತಿ ನಡೆಯಲಿದೆ. ದೇಶದ ಜಿಡಿಪಿಯಲ್ಲಿ ಶೇ 4.1ರಷ್ಟು ಜಾನುವಾರುಗಳ ಕೊಡುಗೆ ಇದೆ. ಹಾಲು ಉತ್ಪಾದನೆಯಲ್ಲಿ ದೇಶ ಮೊದಲ ಸ್ಥಾನದಲ್ಲಿದೆ. ಇದರ ಮಹತ್ವ ಅರಿತ ಕೇಂದ್ರ ಸರ್ಕಾರ ನಿಖರ ಗಣತಿಗೆ ಸುಧಾರಿತ ತಂತ್ರಜ್ಞಾನ ಬಳಸುತ್ತಿದೆ. 1919ರಿಂದ ಪ್ರತಿ ಐದು ವರ್ಷಕ್ಕೊಮ್ಮೆ ಜಾನುವಾರು ಗಣತಿಯಂತೆ ಈವರೆಗೆ 20 ಬಾರಿ ಗಣತಿ ನಡೆದಿದೆ. ಈ ಹಿಂದೆ ಪುಸ್ತಕದಲ್ಲಿ 200 ಕಾಲಂ ಭರ್ತಿ ಮಾಡಿದರೂ ನಿಖರ ದತ್ತಾಂಶಗಳು ಸಿಗುತ್ತಿರಲಿಲ್ಲ. ಜಾನುವಾರುಗಳ ಸಂಖ್ಯೆ ದಾಖಲೀಕರಣ ಕಷ್ಟವಾಗುತಿತ್ತು. ಈ ಎಲ್ಲಾ ಸವಾಲುಗಳನ್ನು ಹೊಸ ಸುಧಾರಿಸಿದೆ. ಜಾನುವಾರುಗಳ ಸಂಪೂರ್ಣ ವಿವರ 16 ಕಾಲಂಗಳಲ್ಲಿ ಭರ್ತಿ ಮಾಡಬಹುದು.
ಜಾನುವಾರು ತಳಿ, ಲಿಂಗ, ವಯಸ್ಸು, ಬಣ್ಣ, ಸದೃಢತೆ, ಸದೃಢತೆ, ಫಲವತ್ತತೆ ದರ, ರೋಗ, ಔಷಧೋಪಚಾರ, ಲಸಿಕಾಕರಣ, ಮಾಲೀಕರು. ಅವರ ಜಾತಿ, ಜಾನುವಾರು ಸಾಕಣೆ ಮಾಡುವ ಮಹಿಳೆಯರ ಸಂಖ್ಯೆ ಸೇರಿ ಸಂಪೂರ್ಣ ವಿವರ ಇದರಲ್ಲಿ ದಾಖಲಿಸಬಹುದು. ಜಾನುವಾರು ಚಿತ್ರವನ್ನೂ ಅಪ್ಲೋಡ್ ಮಾಡಬಹುದು. ಇದರಿಂದ ಪುನರಾವರ್ತನೆ ಆಗುವ ಅಥವಾ ಗಣತಿಯಿಂದ ಹೊರಗುಳಿಯುವ ಸಾಧ್ಯತೆ ಇರುವುದಿಲ್ಲ. ಸ್ಮಾರ್ಟ್ ಫೋನ್ ಮೂಲಕ ಸುಧಾರಿತ ತಂತ್ರಜ್ಞಾನ ಬಳಸಿ ಮೊದಲ ಬಾರಿಗೆ ಗಣತಿ ನಡೆಯುತ್ತಿದೆ. ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಸಾಮಾನ್ಯ. ಹೀಗಾಗಿ, ನೆಟ್‌ವರ್ಕ್ ಇಲ್ಲದಿದ್ದರೂ ಮಾಹಿತಿ ಸಂಗ್ರಹಿಸಿ ಇಡುವಂತೆ ವಿನ್ಯಾಸಗೊಳಿಸಲಾಗಿದೆ. ನೆಟ್ವರ್ಕ್ ಬಂದ ನಂತರ ಅದನ್ನು ಸರ್ವ‌್ರಗೆ ಅಪ್ಲೋಡ್ ಮಾಡಬಹುದು. ಸರ್ಕಾರ ಭವಿಷ್ಯದಲ್ಲಿ ಯೋಜನೆಗಳು, ನೀತಿ ರೂಪಿಸಲು ಈ ಗಣತಿ ಪ್ರಯೋಜನವಾಗಲಿದೆ. ರೈತರು, ಜಾನುವಾರು ಸಾಕಣೆದಾರರ ಸಮಸ್ಯೆ ನಿವಾರಣೆ, ಬೇರೆ ದೇಶಗಳ ಜೊತೆ ಹೋಲಿಕೆ, ರೋಗ ನಿಯಂತ್ರಣ, ಸಮುದಾಯದ ಅಭಿವೃದ್ಧಿ, ಆರ್ಥಿಕ ನೀತಿ ಸೇರಿ ಎಲ್ಲ ಹಂತಗಳಲ್ಲೂ ನೆರವಾಗಲಿದೆ. ದೇಶದ ಜಿಡಿಪಿಗೆ ಜಾನುವಾರುಗಳ ಕೊಡುಗೆ ಎಷ್ಟು ಎಂಬ ನಿಖರ ಮಾಹಿತಿ ಸಿಗಲಿದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ರಾಜೀವ ಕೊಲೇರ ತಿಳಿಸಿದರು.