Breaking
Tue. Dec 17th, 2024

ದಾಳಿಂಬೆ ಕೃಷಿ ಮಾಡಿ, ಒಂದು ಎಕರೆಗೆ 3 ರಿಂದ 4 ಲಕ್ಷ ರೂಪಾಯಿ ಲಾಭವನ್ನು ಪಡೆಯಿರಿ

By mveeresh277 Apr10,2023 ##pomegranate
Spread the love

ಆತ್ಮೀಯ ರೈತ ಬಾಂಧವರೇ ದಾಳಿಂಬೆ ಕೃಷಿಯಲ್ಲಿ ಭೂಮಿ ಸಿದ್ಧತೆ ಮತ್ತು ನೀರು ನಿರ್ವಹಣೆ ಮಾಡುವುದು ಹೇಗೆ ಎಂದು ತಿಳಿಯೋಣ. ಬೆಳೆಯ ಪ್ರದೇಶವನ್ನು 2 – 3 ಬಾರಿ ಚೆನ್ನಾಗಿ ಆಳಕ್ಕೆ ಉಳುಮೆ ಮಾಡಿ ತದ ನಂತರ ಹೆಗುಂಟೆಯನ್ನು ಹಾಯಿಸಬೇಕು, ದಾಳಿಂಬೆಯನ್ನು ಹಲಾವಾರು ವಿಧದ ಮಣ್ಣುಗಳಲ್ಲಿ ಬೆಳೆಯಬಹುದು, ಮರಳು ಮಿಶ್ರಿತ ಗೋಡುಮಣ್ಣಿನಿಂದ ಆಳವಾದ ಕಪ್ಪು ಭೂಮಿಯಲ್ಲಿ ದಾಳಿಂಬೆ ಬೆಳೆಯಬಹುದು,ನೀರಿನ ನಿರ್ವಹಣೆ ಸಕಾಲದಲ್ಲಿ ಮಳೆ ಆಗದಿದ್ದಾಗ ಹೊಸದಾಗಿ ನಾಟಿ ಮಾಡಿದ ಸಸಿಗಳಿಗೆ ನಿಯಮಿತವಾಗಿ ನೀರನ್ನು ಒದಗಿಸಬೇಕು. 6 – 7 ತಿಂಗಳುಗಳಲ್ಲಿ ಸಸಿಗಳು ಚೆನ್ನಾಗಿ ಬೆಳೆಯುತ್ತವೆ ಹಾಗೂ ನಂತರ ನೀರಿನ ಕೊರತೆಯನ್ನು ಸಹಿಸಿಕೊಂಡು ಬೆಳೆಯಬಲ್ಲವು. ಮಣ್ಣು ಮತ್ತು ಹವಾಗುಣ ಹಾಗೂ ಅಂತರ ಬೆಳೆಗಳನ್ನನುಸರಿಸಿ ಪ್ರತಿ ನಾಲ್ಕು ದಿನಗಳಿಗೊಮ್ಮೆ ನೀರು ಕೊಡಬೇಕು.

ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿ ನೀರಿನ ಉಳಿತಾಯ ಮಾಡಿ ಹದವರಿತು ನೀರು ಕೊಡುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಬಹಳ ದಿವಸಗಳವರೆಗೆ ಮಳೆ ಆಗದಿದ್ದಾಗ ನೀರನ್ನು ಒದಗಿಸಿ ಇದನ್ನು ಕಡಿಮೆಗೊಳಿಸಬಹುದು. ಗಾಳಿ ತಡೆಯನ್ನು ನಿರ್ಮಿಸಿ ಕೂಡಾ ಈ ಹಾನಿಯನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು, ಬೋರಾನ್ನ ಕೊರತೆಯಿಂದಲೂ ಸಹ ಹಣ್ಣು ಸೀಳುತ್ತವೆ, ಇದಕ್ಕೆ ಬೋರಾಕ್ಸ್ ಶೇ. 0.1 (1 ಗ್ರಾಂ ಒಂದು ಲೀ. ನೀರಿನಲ್ಲಿ ಬೆರೆಸಿ) ಸಿಂಪಡಿಸಬೇಕು. ಕಪ್ಪು ಮಣ್ಣಿನಲ್ಲಿ ನೀರಿನ ಅಭಾವ ಇರುವ ಪ್ರದೇಶದಲ್ಲಿ ಹನಿ ನೀರಾವರಿಯಲ್ಲಿ ಮುಂಗಾರು, ಹಿಂಗಾರು ಹಾಗೂ ಬೇಸಿಗೆಗಳಲ್ಲಿ ಕ್ರಮವಾಗಿ 11, 12 ಮತ್ತು 22 ಲೀ. ಗಳಂತೆ ಪ್ರತಿ ಗಿಡಕ್ಕೆ ಪ್ರತಿ ದಿನ ನೀರು ಒದಗಿಸುವದರಿಂದ ಶೇ. 31 ರಷ್ಟು ಹೆಚ್ಚಿನ ಇಳುವರಿಯೊಂದಿಗೆ ಶೇ. 40 ರಷ್ಟು ನೀರನ್ನು ಉಳಿತಾಯ ಮಾಡಬಹುದು.

ಚಾಟನಿ ಮಾಡುವುದು ಮತ್ತು ನಾಟಿ ಮಾಡುವುದು ಹೇಗೆ?

ಸಾಮಾನ್ಯವಾಗಿ ದಾಳಿಂಬೆ ಗಿಡಗಳನ್ನು ಬುಡದಲ್ಲಿ ಬರುವ ಮುಖ್ಯ ರೆಂಬೆಗಳೊಂದಿಗೆ. ಒಂದೇ ಮುಖ್ಯ ರೆಂಬೆಯ ಮೇಲೆ ಎಲ್ಲಾ ದಿಕ್ಕುಗಳಲ್ಲಿ ಪಸರಿಸಿದ ಉಪರೆಂಬೆಗಳಿರುವಂತೆ ಆಕಾರ ಕೊಟ್ಟು ಬೆಳೆಸುವುದು ಒಳ್ಳೆಯದೆಂದು ತಿಳಿದು ಬಂದಿದೆ. ರೆಂಬೆಗಳಿರುವಂತೆ, ಪೊದೆಯಾಕಾರದಲ್ಲಿ ಬೆಳೆಸಿದ ಸಸಿಗಳಲ್ಲಿ ನೆಲದಿಂದ ಕೇವಲ 3 – 4 ಮುಖ್ಯ ನೋಡಿಕೊಳ್ಳಬೇಕು.ಬೆಳೆ ಇಡುವ ಪ್ರದೇಶವನ್ನು 2 – 3 ಬಾರಿ ಚೆನ್ನಾಗಿ ಉಳುಮೆ ಮಾಡಿ ಸಿದ್ಧಪಡಿಸಿಕೊಳ್ಳಬೇಕು, ಶಿಫಾರಸು ಮಾಡಿದ ಅಂತರದಲ್ಲಿ 2 ಘನ ಅಡಿ ಗಾತ್ರದ ಗುಣಿಗಳನ್ನು ತೆಗೆದು ಅವುಗಳಲ್ಲಿ ಸಮಪ್ರಮಾಣದಲ್ಲಿ ಬೆರೆಸಿದ ಮೇಲ್ಮಣ್ಣು, ಕೊಟ್ಟಿಗೆ ಗೊಬ್ಬರ ಮತ್ತು ಕೆಂಪು ಮಣ್ಣಿನ ಮಿಶ್ರಣವನ್ನು ಹರಡಿ ತುಂಬಿಸಬೇಕು. • ಜೂನ್-ಜುಲೈ ತಿಂಗಳಲ್ಲಿ ಗೂಟಿ ಗಿಡಗಳನ್ನು ಅಥವಾ ಬೇರು ಸಹಿತ ಕಡ್ಡಿಗಳನ್ನು ನಾಟಿ ಮಾಡಿ ಕೋಲಿನ ಆಸರೆ ಕೊಟ್ಟು ಸಸಿಗಳನ್ನು ರಕ್ಷಿಸಬೇಕು.

ಗೊಬ್ಬರ ಹಾಕುವುದು ಹೇಗೆ?

ನಿಯಮಿತವಾಗಿ ಗೊಬ್ಬರ ಹಾಕುವುದರಿಂದ ಗಿಡಗಳು ಉತ್ತಮ ಇಳುವರಿ ಕೊಡುತ್ತವೆ. • ಶಿಫಾರಸು ಮಾಡಿದ ಪ್ರಮಾಣದ ಕೊಟ್ಟಿಗೆ ಗೊಬ್ಬರವನ್ನು ಮಳೆಗಾಲದ ಆರಂಭಕ್ಕೆ ಪಾತಿಗಳಲ್ಲಿ ಹಾಯಿಸಲೇಬೇಕು. ಗಿಡದಿಂದ 3 ಅಡಿ ದೂರದಲ್ಲಿ ಹಾಕಿ ಮಣ್ಣಿನಲ್ಲಿ ಮಿಶ್ರ ಮಾಡಬೇಕು. ಅನಂತರ ನೀರನ್ನು ಮಣ್ಣಿನ ತೇವಾಂಶವು ಕಡಿಮೆಯಿರುವಾಗ ಎಬ್ರೆಲ್ ಅನ್ನು ಶೇ. 39 ಎಸ್. ಎಲ್. (2.5 ಮಿ. ಲೀ, 1 ಲೀಟರ್) ದ್ರಾವಣವನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಸಿಂಪಡಿಸಿದಲ್ಲಿ ದಾಳಿಂಬೆಯ ಇಳುವರಿ ಹೆಚ್ಚುತ್ತದೆ.

ಹಣ್ಣನ್ನು ಯಾವಾಗ ಕೊಯ್ಲು ಮಾಡಬೇಕು?

ಗಿಡಗಳು ನಾಟಿ ಮಾಡಿದ 2 ನೇ ವರ್ಷದಿಂದ ಹಣ್ಣು ಬಿಡಲು ಪ್ರಾರಂಭಿಸುತ್ತವೆ. ಮೊದಲು ಪ್ರತಿ ಗಿಡಕ್ಕೆ 20 – 25 ಹಣ್ಣುಗಳು ದೊರೆಯುತ್ತವೆ. ದಿನಕಳೆದಂತೆಲ್ಲಾ ಇಳುವರಿ ಹೆಚ್ಚುತ್ತಾ ಹೋಗಿ 10 ವರ್ಷದ ಗಿಡವು 100 150 ಹಣ್ಣುಗಳನ್ನು ವರ್ಷ ಕೊಡುತ್ತದೆ. ಚೆನ್ನಾಗಿ ನಿರ್ವಹಣೆ ಮಾಡಿದ ದಾಳಿಂಬೆ ತೋಟದಲ್ಲಿ ಪ್ರತಿ ಗಿಡವು 200 – 250 ಹಣ್ಣುಗಳ ಸರಾಸರಿ ಇಳುವರಿಯನ್ನು ಕೊಡುತ್ತದೆ. (4 – 5.2 ಟನ್ ಪ್ರತಿ ಎಕರೆಗೆ),

ಇದನ್ನು ಓದಿ :- ಯುವ ರೈತರಿಗೆ ಈ ಸಂಸ್ಥೆಯಿಂದ 5 ಲಕ್ಷ ರೂಪಾಯಿಗಳು ಸಾಲವನ್ನು ನೀಡುತ್ತಾರೆ

ಇದನ್ನೂ ಓದಿ :- ನೇರಳೆ ಹಣ್ಣಿನ ಕೃಷಿ ಮಾಡಿ ಲಕ್ಷಗಟ್ಟಲೆ ಸಂಪಾದನೆ ಮಾಡಿ

ಇದನ್ನೂ ಓದಿ :- ನಿಮಗೆ ಬೆಳೆ ವಿಮೆ ಹಣ ಜಮಾ ಆಗಿಲ್ಲವೇ? ಈಗ ಏನು ಮಾಡಬೇಕು?

Related Post

Leave a Reply

Your email address will not be published. Required fields are marked *