Breaking
Thu. Dec 19th, 2024

ನೇರಳೆ ಹಣ್ಣಿನ ಕೃಷಿ ಮಾಡಿ ಲಕ್ಷಗಟ್ಟಲೆ ಸಂಪಾದನೆ ಮಾಡಿ ಈ ಹಣ್ಣಿನಲ್ಲಿರುವ ಔಷಧಿ ಗುಣಗಳ ಬಗ್ಗೆ ತಿಳಿಯಿರಿ

Spread the love

ಇತ್ತೀಚಿನ ದಿನಗಳಲ್ಲಿ ಮನುಷ್ಯ ಹಲವಾರು ರೋಗರುಜಿನಗಳಿಂದ ಬಳಲುತ್ತಿದ್ದಾನೆ. ಇದರಲ್ಲಿ ಪ್ರಮುಖವಾಗಿರುವುದೆಂದರೆ ಸಕ್ಕರೆ ಕಾಯಿಲೆ/ ಮದುಮೇಹ. ಶೇ. ಇಂಟರನ್ಯಾಷನಲ್ ಡೈಯಾಬಿಟಿಕ್ ಫೆಡರೆಷನ್ ಪ್ರಕಾರ ಶೇ ಜಗತ್ತಿನಲ್ಲಿ ಸುಮಾರು ೩೮೨ ಮಿಲಿಯನ್ ಜನ ಪ್ರ ಡೈಯಾಬಿಟಿಸ್‌ದಿಂದ ಬಳಲುತ್ತಿದ್ದಾರೆ. ನಮ್ಮ ಭಾರತದ ೪ ಜನಸಂಖ್ಯೆಗೆ ಹೋಲಿಸಿದರೆ ಶೇ. ೮ ರಷ್ಟು ಜನ ಸಕ್ಕರೆ ಪ ಕಾಯಿಲೆಯಿಂದ ಅಸುನೀಗುತ್ತಿದ್ದಾರೆ. ಇದನ್ನು ನಿಯಂತ್ರಿಸುವ ಅಥವಾ ಹತೋಟಿಗೆ ತರುವ ನಿಟ್ಟಿನಲ್ಲಿ ಯೋಚಿಸಿದಾಗ ಸಕ್ಕರೆ ಕಾಯಿಲೆಗೆ ರಾಮಬಾಣವಾಗಿ ಕಂಡು ಬರುವುದು ನೇರಳೆ ಹಣ್ಣು, ನೇರಳೆ, ಜಂಬುನೇರಳೆ, ಇಂಡಿಯನ್ ಬ್ಲ್ಯಾಕ್ ಬೆರಿ, ಬ್ಲಾಕ್ ಪ್ಲಮ್, ಜಾವಾ ಪ್ಲಮ್ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಇದರ ವೈಜ್ಞಾನಿಕ ಹೆಸರು ಸೈಜಿಜಿಯಮ್ ಕ್ಯುಮಿನಿ, ಇದು ಮೀರಿಟೇಸಿ ಕುಟುಂಬಕ್ಕೆ ಸೇರಿದ ಹಣ್ಣಿನ ಬೆಳೆ. ವಿಶ್ವದಲ್ಲಿ ಭಾರತ ದೇಶವು ನೇರಳೆ ಹಣ್ಣನ್ನು ಉತ್ಪಾದಿಸುವಲ್ಲಿ ೨ ನೇ ಸ್ಥಾನದಲ್ಲಿದೆ. ರಾಜ್ಯಗಳ ದೃಷ್ಟಿಯಲ್ಲಿ ನೋಡಿದಾಗ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದು ನಂತರದ ಸ್ಥಾನವನ್ನು ಉತ್ತರ ಪ್ರದೇಶ, ಗುಜರಾತ ಪಡೆದುಕೊಂಡಿದೆ.

ನೇರಳೆಯಲ್ಲಿರುವ ಔಷಧಿಯ ಗುಣಗಳು

ಈ ಮರದ ಹಣ್ಣು ಬಹಳ ಉಪಯುಕ್ತ. ಇತ್ತೀಚಿನ ದಿನಗಳಲ್ಲಿ ಈ ಹಣ್ಣಿನ ಮಹತ್ವದ ಬಗ್ಗೆ ಜನರಲ್ಲಿ ತಿಳುವಳಿಕೆ ಬಂದಿದೆ. ಏಕೆಂದರೆ ಇದು ಸಕ್ಕರೆ ಕಾಯಿಲೆ ಅಥವಾ ಮದುಮೇಹವನ್ನು ತಡೆಗಟ್ಟುವಲ್ಲಿ ಹಾಗೂ ನಿಯಂತ್ರಣದಲ್ಲಿಡಲು ಅತ್ಯುಪಯುಕ್ತ. ಹಣ್ಣಿನಲ್ಲಿ ಕಬ್ಬಿಣಾಂಶ ಅಧಿಕವಾಗಿದ್ದು, ರಕ್ತ ಉತ್ಪಾದನೆ ಹಾಗೂ ರಕ್ತ ಪರಿಚಲನೆಯ ಕಾರ್ಯವನ್ನು ಸರಾಗಗೊಳಿಸುತ್ತದೆ.ಬೀಜದಲ್ಲಿ “ಜಾಂಬೂಲಿನ್’ ಎಂಬ ವಸ್ತು ಇರುವುದರಿಂದ ಬೀಜದ ಪುಡಿ ಅಥವಾ ಕಷಾಯವನ್ನು ದಿನಕ್ಕೆ ೨-೩ ಬಾರಿ ಮದುಮೇಹಿಗಳಿಗೆ ನೀಡುವುದರಿಂದ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಬಹುದು. ಇದು ದೇಹದಲ್ಲಿರುವ ರಕ್ತವನ್ನು ಶುದ್ದೀಕರಿಸುವುದಲ್ಲದೆ, ಎಲೆಗಳು ಕಣ್ಣು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.

ಹೃದಯಕ್ಕೆ ಸ೦ಬಂಧಿಸಿದ ರೋಗಗಳನ್ನು ನಿಯಂತ್ರಿಸುವುದಲ್ಲದೆ, ಹೃದಯ ಬಡಿತವನ್ನು ಸ್ಥಿರವಾಗಿರುವಂತೆ ಕೆಲಸ ಮಾಡುತ್ತದೆ. ಹಣ್ಣು ಮತ್ತು ಗಿಡದ ಎಲೆಗಳು ರಕ್ತ ಅಭಿವರ್ಧಕ, ಹಲ್ಲು ಹಾಗೂ ವಸಡನ್ನು ಗಟ್ಟಿಗೊಳಿಸುವುದಲ್ಲದೆ, ಜೀರ್ಣಕ್ರಿಯೆಯನ್ನು ಸಾಕಾರಗೊಳಿಸುತ್ತದೆ. ನೇರಳೆ ಹಣ್ಣಿನ ಸೇವನೆಯಿಂದ ಅಪಾಯಕಾರಿ ಕ್ಯಾನ್ಸರ್- ನಂತಹ ರೋಗಗಳನ್ನು ಹಾಗೂ ಮೂತ್ರಪಿಂಡಗಳಲ್ಲಿ ಹರಳಾಗುವಿಕೆಯನ್ನು ತಡೆಗಟ್ಟಬಹುದು. 22 ನಾಟಿ ಔಷಧಿಯಾಗಿ ನೇರಳೆ ರಸವನ್ನು ನೀರಿನಲ್ಲಿ ಮಿಶ್ರಣಮಾಡಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ಹುಣ್ಣು ನಿವಾರಣೆಯಾಗುತ್ತದೆ. ಗಿಡದ ತೊಗಟೆ ಹಾಗೂ ಬೀಜದ ಕಷಾಯವನ್ನು ವಾಂತಿ ಹಾಗೂ ಬೇದಿಯ ಉಪಶಮನಕ್ಕಾಗಿ ಬಳಸಲಾಗುತ್ತದೆ. ಈ ಹಣ್ಣು ಒಗರು, ವಾತಹರ, ರಕ್ತ ಪಿತ್ತನಿವಾರಕ, ಮೂತ್ರಸ್ರಾವ ಉತ್ತೇಜಕವಾಗಿ ಕೆಲಸ ಮಾಡುತ್ತದೆ.

ತಳಿಗಳು

ನೇರಳೆಯಲ್ಲಿ ೩ ಬಗೆಗಳಿವೆ. ನಾಯಿ ನೇರಳೆ, ಮಧ್ಯಮ ನೇರಳೆ ಹಾಗೂ ಜಂಬು ನೇರಳೆ, ಇದರಲ್ಲಿ ಜಂಬು ನೇರಳೆ ಹೆಚ್ಚು ರುಚಿಕರ ಹಾಗೂ ಸ್ವಾದ ಹಣ್ಣಿನ ಜಾತಿ, ರಸಭರಿತ ಹಾಗೂ ದೊಡ್ಡಗಾತ್ರದ ಹಣ್ಣಿನ ಬಗೆ ಹೆಚ್ಚು ಜನಪ್ರಿಯ. ಎಜೆಜಿ-೮೫: ಇದು ದೊಡ್ಡ ಗಾತ್ರದ ಹಣ್ಣು ಕೊಡುವ ತಳಿಯಾಗಿದ್ದು, ಶೇ. ೮೮ ರಷ್ಟು ರುಚಿಯಾದ ತಿರಳನ್ನು ಹೊಂದಿರುತ್ತದೆ. ಅತ್ಯಧಿಕ ಆರ್ಥಿಕ ಇಳುವರಿಯನ್ನು ಕೊಡುವುದಲ್ಲದೆ ಶೇ. ೧೭ ರಷ್ಟು ಸಕ್ಕರೆ ಅಂಶವನ್ನು ಹೊಂದಿದೆ.

ಇದನ್ನೂ ಓದಿ :- ನಿಮಗೆ ಬೆಳೆ ವಿಮೆ ಹಣ ಜಮಾ ಆಗಿಲ್ಲವೇ? ಈಗ ಏನು ಮಾಡಬೇಕು? ರೈತರು ಏಪ್ರಿಲ್ 28 ರ ಒಳಗೆ ಆಕ್ಷೇಪಣೆ ಸಲ್ಲಿಸಿ ಹಣ ಪಡೆಯಿರಿ

ಇದನ್ನೂ ಓದಿ :- ಒಂದೇ ನಿಮಿಷದಲ್ಲಿ ಪಿಎಂ ಕಿಸಾನ್,ಬೆಳೆವಿಮೆ,ಬೆಳೆಹಾನಿ ಪರಿಹಾರದ ಸ್ಟೇಟಸ್ ಚೆಕ್ ಮಾಡಿ

ಇದನ್ನೂ ಓದಿ :- ಹೊಸ ಮತದಾರರು ವೋಟರ್ ಐಡಿ ಪಡೆಯಲು ಏಪ್ರಿಲ್ 11 ರವರೆಗೆ ಅರ್ಜಿ ಸಲ್ಲಿಸಬಹುದು
ಜನರು ಕೂಡಲೇ ವೋಟರ್ ಹೆಲ್ಪ್ ಲೈನ್ ಆ್ಯಪ್ ನಲ್ಲಿ ನೋಂದಣಿ ಮಾಡಿಕೊಳ್ಳಿ

ಇದನ್ನೂ ಓದಿ :- ದನಗಳ ಶೆಡ್ ನಿರ್ಮಾಣ ಮಾಡಲು 57,000 ರೂಪಾಯಿಗಳ ಸಹಾಯಧನ ನೀಡುತ್ತಿದ್ದಾರೆ ಕೂಡಲೇ ಅರ್ಜಿ ಸಲ್ಲಿಸಿ

Related Post

Leave a Reply

Your email address will not be published. Required fields are marked *