Breaking
Tue. Dec 17th, 2024

ಹತ್ತಿ, ಭತ್ತ, ರಾಗಿ, ಜೋಳ ಬೆಂಬಲ ಬೆಲೆ ಘೋಷಣೆ, MSP rate

Spread the love

ಹತ್ತಿ ಬೆಂಬಲ ಬೆಲೆ ನಿಗದಿ

ಧಾರವಾಡ : ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಲ್ಲಿ ಭಾರತ ಸರ್ಕಾರವು ಹತ್ತಿಯ ಎರಡು ಮೂಲ ತಳಿಗಳ ಬೆಂಬಲ ಬೆಲೆಯನ್ನು ನಿಗದಿಪಡಿಸಿದೆ. ಅವುಗಳೆಂದರೆ ಮಧ್ಯಮ ಸ್ಟೇಪಲ್ ಹತ್ತಿ 24.5 ರಿಂದ 25.5 ಮಿಮೀ ಉದ್ದವನ್ನು ಹೊಂದಿರುವ ಮೈಕ್ರೋನೈರ್ ಮೌಲ್ಯವು 4.3 ರಿಂದ 5.1 ಮತ್ತು ಉದ್ದವಾದ ಹತ್ತಿಗೆ ಸ್ಟೇಪಲ್. ಹತ್ತಿ ಸೀಸನ್ 2023-24 (ಅಕ್ಟೋಬರ್- ಸೆಪ್ಟೆಂಬರ್) ಫೇರ್ ಎವರೇಜ್ ಕ್ವಾಲಿಟಿಯ (ಎಎಕ್ಯೂ) ನ್ಯೂ ಕ್ರಾಪ್ ಸೀಡ್ ಕಾಟನ್ (ಕಪಾಸ್) 3.5 ರಿಂದ 4.3 ಮೈಕ್ರೋನೈರ್ ಮೌಲ್ಯದೊಂದಿಗೆ 29.5 ರಿಂದ 30.5 ಮಿಮೀ ಉದ್ದ. ಮಧ್ಯಮ ಹತ್ತಿಯ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ ರೂ. 6,620/-ಕ್ಕೆ ನಿಗದಿಪಡಿಸಲಾಗಿದೆ ಮತ್ತು ಉದ್ದವಾದ ಸ್ಟೇಪಲ್ ಹತ್ತಿಗೆ ರೂ.7,020/- ಕ್ವಿಂಟಾಲ್ ಗೆ ನಿಗದಿಪಡಿಸಲಾಗಿದೆ.

ಹತ್ತಿ ಖರೀದಿ ಕೇಂದ್ರಗಳ ವಿಳಾಸ:

ಶ್ರೀ ಲಕ್ಷ್ಮೀ ಕಾಟನ್ಸ್, ಪ್ಲಾಟ್ ನಂ: 135, 3ನೇ ಬೇಲೂರು ಇಂಡಸ್ಟ್ರೀಯಲ್ ಏರಿಯಾ, ಧಾರವಾಡ 580011 ಮತ್ತು ಅನಿಲಕುಮಾರ ಆ್ಯಂಡ್ ಕಂಪನಿ ಅಮ್ಮಿನಭಾವಿ ಧಾರವಾಡ 580201 ಹತ್ತಿ ಖರೀದಿ ಕೇಂದ್ರಗಳಿಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಧಾರವಾಡ ಭಾರತೀಯ ಹತ್ತಿ ನಿಗಮ ಲಿ. ವ್ಯವಸ್ಥಾಪಕ ಪ್ರಮೋದ ಇವರ ಮೊ.ಸಂ. 9028155111 ಸಂಪರ್ಕಿಸಬಹುದು. ಹಾಗೂ ಹತ್ತಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಕಟಣೆ ತಿಳಿಸಿದೆ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ, ಜೋಳ ಖರೀದಿ ಪ್ರಕ್ರಿಯೆ ಆರಂಭ

ಕೊಪ್ಪಳ : 2023-24ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ, ರಾಗಿ ಮತ್ತು ಜೋಳ ಖರೀದಿಗೆ ಕೊಪ್ಪಳ, ಗಂಗಾವತಿ, ಕಾರಟಗಿ, ಕನಕಗಿರಿ, ಯಲಬುರ್ಗಾ, ಕುಕನೂರು ಮತ್ತು ಕುಷ್ಟಗಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ(ಸಾಮಾನ್ಯ)-ರೂ.2183, ಭತ್ತ(ಗ್ರೇಡ್-ಎ)-ರೂ.2203, ಬಿಳಿಜೋಳ (ಹೈಬ್ರಿಡ್)-ರೂ.3180, ಬಿಳಿಜೋಳ(ಮಾಲ್ದಂಡಿ)-ರೂ.3225, ರಾಗಿ- ರೂ.3846 ಗಳ ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸಿದೆ.

ಅದರಂತೆ ಕೊಪ್ಪಳ ಎಪಿಎಂಸಿಯಲ್ಲಿ ಭತ್ತ ಮತ್ತು ಜೋಳ ಖರೀದಿ ಅಧಿಕಾರಿಗಳನ್ನಾಗಿ ಸಗಟು ಮಳಿಗೆ ನಿರ್ವಾಹಕರಾದ ಎಂ.ವಿ.ಕೋನಾಪುರ ಮೊ.ಸಂ: 9739228720, ಗಂಗಾವತಿ ಎಪಿಎಂಸಿಯಲ್ಲಿ ಭತ್ತ ಖರೀದಿ ಅಧಿಕಾರಿಯನ್ನಾಗಿ ಆಹಾರ ನಿರೀಕ್ಷಕರಾದ ಶೇಖರಪ್ಪ ಮೊ.ಸಂ: 9980226881, ಕಾರಟಗಿ ಎಪಿಎಂಸಿಯಲ್ಲಿ ಭತ್ತ ಖರೀದಿಗಾಗಿ ಆಹಾರ ನಿರೀಕ್ಷಕರಾದ ನವೀನ್ ಮಠದ್ ಮೊ.ಸಂ: 8123453419, ಕುಕನೂರು ಎಪಿಎಂಸಿಯಲ್ಲಿ ಜೋಳ ಖರೀದಿ ಅಧಿಕಾರಿ ಯನ್ನಾಗಿ ಸಗಟು ಮಳಿಗೆ ನಿರ್ವಾಹಕರಾದ ಎಂ.ವಿ.ಕೋನಾಪುರ. 9739228720 ಹಾಗೂ ಕುಷ್ಟಗಿ ಎಪಿಎಂಸಿಯಲ್ಲಿ ಜೋಳ ಖರೀದಿಗಾಗಿ ಸಗಟು ಮಳಿಗೆ ನಿರ್ವಾಹಕರಾದ ಸೋಮಶೇಖರ ಮೊ.ಸಂ: 6361289585 ಅವರನ್ನು ನಿಯೋಜಿಸಲಾಗಿದೆ.

ಗ್ರಾಮಒನ್ ಪ್ರಾಂಚೈಸಿಗಳಿಗೆ ಅರ್ಜಿ ಆಹ್ವಾನ

ಧಾರವಾಡ : ಇಡಿಸಿಎಸ್ ನಿರ್ದೇಶನಾಲಯ, ಇ-ಆಡಳಿತ ಇಲಾಖೆಯಿಂದ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬೂ. ಅರಳಿಕಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ 02 ಗ್ರಾಮ್ ಒನ್ ಕೇಂದ್ರಗಳಿ ಗೆ ಪ್ರಾಂಚೈಸಿಗಳನ್ನು ಆಯ್ಕೆ ಮಾಡಲು https://www.karnatakaone.gov.in/Public/GramOneFranchisee

ಆಹ್ವಾನಿಸಲಾಗಿದೆ. ಪಿ.ಯು.ಸಿ., ಐ.ಟಿ.ಐ, ಡಿಪೊಮಾ, ಪದವಿ, ಸ್ನಾತಕೋತ್ತರ ಪದವಿ ಯೊಂದಿಗೆ ಕಂಪ್ಯೂಟರ್ ಜ್ಞಾನವುಳ್ಳ ಆಸಕ್ತರು, ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ಕನಿಷ್ಠ 100 ಚದರ ಅಡಿ ವಿಸ್ತೀರ್ಣವುಳ್ಳ ಸುಸಜ್ಜಿತ ಕಟ್ಟದೊಂದಿಗೆ ಕಂಪ್ಯೂಟರ್, ಪ್ರಿಂಟರ್, ಸ್ಪ್ಯಾನ್ಸರ್, ಬಯೋಮೆಟ್ರಿಕ್ ಡಿವೈಸ್, ಮತ್ತು 8 ಗಂಟೆಗಳ ವಿದ್ಯುತ್ ಪರ್ಯಾಯ ವ್ಯವಸ್ಥೆಯೊಂದಿಗೆ ಇಲಾಖೆ ಕಾಲಕಾಲಕ್ಕೆ ಸೂಚಿಸುವ ಮಾನದಂಡಗಳಿಗೆ ಬದ್ಧರಾಗಿರುವವರು ಅರ್ಜಿಯನ್ನು ಡಿಸೆಂಬರ್ 15 ರೊಳಗೆ ಸಲ್ಲಿಸಬಹುದಾಗಿದೆ. ಮಾನದಂಡಳಿಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ 9019026687, 9019026697, 9019026690, 9019027696 ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಲುವೆಗಳ ಮೂಲಕ ನೀರು ಬಿಡುಗಡೆ : ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ

ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಕೆಬಿಜೆಎನ್‌ಎಲ್ ವತಿಯಿಂದ ಕಾಲುವೆಗಳ ಮೂಲಕ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿ ಜನವಸತಿಗಳಿಗೆ ಕಾಲುವೆಗಳ ಮೂಲಕ ನೀರು ಪೂರೈಸಲಾಗುತ್ತಿದ್ದು, ಜಲಸಂಗ್ರಹಾರ-ಕೆರೆಗಳಲ್ಲಿರುವ ನೀರನ್ನು ಕುಡಿಯುವ ನೀರಿಗಾಗಿ ಮಾತ್ರ ಉಪಯೋಗಿಸುವಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಜಲಸಂಗ್ರಹಗಾರ-ಕೆರೆಗಳ ವ್ಯಾಪ್ತಿಯ 100 ಅಡಿ ಪ್ರದೇಶದಲ್ಲಿ 2023ರ ಡಿ.7ರಿಂದ 2024ರ ಜನವರಿ 01ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.

ಈ ಸಂದರ್ಭದಲ್ಲಿ ಜಲಸಂಗ್ರಹಗಾರ- ಕೆರೆಗಳ ವ್ಯಾಪ್ತಿಯ 100 ಅಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರು ಗುಂಪು- ಗುಂಪಾಗಿ ಓಡಾಡುವುದು, ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿದಲಾಗಿದೆ. ಜಲಸಂಗ್ರಹಗಾರ-ಕೆರೆಗಳಿಂದ ಅಕ್ರಮ ಪಂಪಸೆಟ್, ಸೈಫನ್, ಜಲಚರದಿಂದ ಸೈಫನ್ ಮೂಲಕ ನೀರನ್ನು ಉಪಯೋಗಿಸಕೂಡದು. ಅಕ್ರಮ ಪಂಪಸೆಟ್ ಮೂಲಕ ನೀರನ್ನು ಬಳಸುತ್ತಿದ್ದಲ್ಲಿ ಅಂತಹ ಪಂಪಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಕಡಿಗೊಳಿಸಲಾಗುವುದು. ಈ ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Related Post

Leave a Reply

Your email address will not be published. Required fields are marked *