ಆತ್ಮೀಯ ರೈತ ಬಾಂಧವರೇ, ಇವಾಗಲೇ ಕೆಲವು ರೈತರಿಗೆ ಎರಡನೇ ಕಂತಿನ ಬೆಳೆ ಪರಿಹಾರದ ಹಣ ಹಾಗೂ ಇನ್ನು ಕೆಲವು ರೈತರಿಗೆ ಮೂರನೇ ಕಂತಿನ ಬೆಳೆ ಪರಿಹಾರ ಹಣ ಜಮಾ ಆಗಿದ್ದು, ಈ ಮೂರು ಕಂತಿನ ಹಣ ಜಮಾದವರಿಗೆ ಏನು ತೊಂದರೆ ಇಲ್ಲ ಆದರೆ. ಒಂದನೇ ಮತ್ತು ಎರಡನೇ ಕಂತಿನ ಹಣ ಜಮಾ ಆಗದ ರೈತರಿಗೆ ಈಗ ಸಿಹಿ ಸುದ್ದಿ ಎಂದು ಕಿವಿ ಮುಟ್ಟಿದೆ. ಅದೇನೆಂದರೆ ಒಂದನೇ ಮತ್ತು ಎರಡನೇ ಕಂತಿನ ಹಣ ಜಮಾ ಆಗದ ರೈತರು ತಹಶೀಲ್ದಾರ್ ವೆರಿಫಿಕೇಶನ್ ಮಾಡಿಸಿ ತಮ್ಮ ದಾಖಲಾತಿಗಳನ್ನು ಸರಿ ಮಾಡಿಕೊಂಡಿರುವುದರಿಂದ ಮೂರನೇ ಕಂತಿನ ಹಣ ಅವರಿಗೆ ಜಮಾ ಆಗಿದೆ. ಇದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ಎಂದು ಇಲ್ಲಿ ಕೆಳಗೆ ತಿಳಿಯೋಣ .
ಹಂತ 01- ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ನಂತರ ಸರ್ಕಾರದ ಈ ಪುಟ ನಿಮಗೆ ದೊರೆಯಲಿದೆ.
https://parihara.karnataka.gov.in/service89/PaymentDetailsReport.aspx
ಹಂತ 02– ಇದನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಹಾಗೂ ಗ್ರಾಮವನ್ನು ಆಯ್ಕೆ ಮಾಡಿ, ಮತ್ತು 2023- 24 ವರ್ಷವನ್ನು ಆಯ್ಕೆ ಮಾಡಿಕೊಂಡು ಸೀಸನ್ ಇದ್ದಲ್ಲಿ ಮುಂಗಾರು ಎಂದು ಆಯ್ಕೆ ಮಾಡಿರಿ. ಈ ಆಯ್ಕೆ ಮಾಡಿದ ನಂತರ ಮುಂದುವರಿಸಿ ಎಂದು ಕೊಡಿ.
ಹಂತ 03 – ಇದಾದ ನಂತರ ಪೇಮೆಂಟ್ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿಕೊಂಡು ನಿಮ್ಮ ಹೆಸರು ಆ ಪೇಮೆಂಟ್ ಲಿಸ್ಟ್ ನಲ್ಲಿ ಇದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ. ಇಲ್ಲದಿದ್ದರೆ ಪೇಮೆಂಟ್ ಸಕ್ಸಸ್ ಎಂಬ ಆಯ್ಕೆಯಲ್ಲಿ ನಿಮ್ಮ ಹೆಸರು ಖಂಡಿತ ಬಂದೇ ಬರುತ್ತದೆ. ಬಾರದಿದ್ದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಹೋಗಿ ನೀವು ತಹಶೀಲ್ದಾರ್ ವೆರಿಫಿಕೇಶನ್ ಮಾಡಿಸಿರುವ ಪ್ರತಿಯನ್ನು ದಾಖಲಾತಿಯಾಗಿ ನೀಡಿರಿ. ಈಗ ನೀಡಿದ ನಂತರ ಅವರು ನಿಮ್ಮ ಆಧಾರ್ ಸೀಲಿಂಗ್ ಹಾಗೂ ಎಫ್ ಐ ಡಿ ನಂಬರ್ ಹಾಕಿ ಚೆಕ್ ಮಾಡಿ ಕೊಡುತ್ತಾರೆ. ಚೆಕ್ ಮಾಡಿ ಕೊಟ್ಟ ನಂತರ ನಿಮ್ಮ ಹಣ ಜಮಾ ಆಗುತ್ತದೆಯೋ ಇಲ್ಲವೋ ಎಂದು ನೀರು ನೇರವಾಗಿ ತಿಳಿದು ಬರುತ್ತದೆ.
ಬಿತ್ತನೆ ಬೀಜ, ರಸಗೊಬ್ಬರಗಳ ದಾಸ್ತಾನು ಮಾಹಿತಿ
2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಯಚೂರು ಜಿಲ್ಲೆಯ 37 ರೈತ ಸಂಪರ್ಕ ಕೇಂದ್ರಗಳಲ್ಲಿ (4 ಹೆಚ್ಚುವರಿ ಬೀಜ ಮಾರಾಟ ಕೇಂದ್ರಗಳು ) 0-1092.000, – 52.14 0 -606 ಕ್ವಿಂ, ಹೆಸರು-15.00 ಕ್ವಿಂ, ಮೆಕ್ಕೆಜೋಳ-21 ಕ್ವಿಂ ಹಾಗೂ ಸೂರ್ಯಕಾಂತಿ- 38.70 ಕ್ವಿಂಟಾಲ ಸೇರಿ ಒಟ್ಟು 1821.44 ಕ್ವಿಂಟಾಗಳಷ್ಟು ಬಿತ್ತನೆ ಬೀಜಗಳನ್ನು ಈಗಾಗಲೆ ದಾಸ್ತಾನು ಮಾಡಲಾಗಿರುತ್ತದೆ. ಮುಂದುವರೆದು ಇಂದಿನವರೆಗೆ ಜಿಲ್ಲೆಯಲ್ಲಿ ತೊಗರಿ ಬಿತ್ತನೆ ಬೀಜಗಳು 385.55 ಕ್ವಿಂಟಾಲ್ ನಷ್ಟು ವಿತರಣೆಯಾಗಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಸಿಂಧನೂರು ತಾಲೂಕಿನಲ್ಲಿ ತೊಗರಿ 93.60 ಕ್ವಿಂ, ಭತ್ತ-185 ಮಾಡಲಾಗಿರುತ್ತದೆ. ಭತ್ತ, ತೊಗರಿ, ಸಜ್ಜೆ, ಸೂರ್ಯಕಾಂತಿ ಮತ್ತು ಹೆಸರು ಸೇರಿ 48.40 ಕ್ವಿಂ ನಷ್ಟು ವಿತರಣೆಯಾಗಿರುತ್ತದೆ.
2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ, ರಾಯಚೂರು ಹಾಗೂ ಸಹಕಾರಿ ಸಂಘಗಳಲ್ಲಿ 10673 ಮೆಟ್ರಿಕ್ ಟನ್ ಹಾಗೂ ಖಾಸಗಿ ಮಾರಾಟಗಾರರಲ್ಲಿ 95215.69 ಮೆಟ್ರಿಕ್ ಟನ್ ಸೇರಿದಂತೆ ಒಟ್ಟು 105888.69 ಮೆಟ್ರಿಕ್ ಟನಷ್ಟು ಇಲ್ಲಿಯವರೆಗೆ ಜಿಲ್ಲೆಯಲ್ಲಿ ದಾಸ್ತಾನು ಲಭ್ಯವಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದ್ದು, ಈ ನಡುವಲ್ಲೇ ಹವಮಾನ ಇಲಾಖೆ ರಾಜ್ಯದ ಜನತೆಗೆ ಸಿಹಿಸುದ್ದಿಯೊಂದನ್ನು ನೀಡಿದೆ.
ಇದೇ ಮೇ 31 ರಂದು ನೈರುತ್ಯ ಮುಂಗಾರು ಮಳೆ ಕೇರಳ ಮೂಲಕ ರಾಜ್ಯ ಪ್ರವೇಶಿಲಿದೆ ಎಂದು ಮಾಹಿತಿ ನೀಡಿದೆ. ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಭೀಕರ ಬರಗಾಲ ಎದುರಿಸಿದ್ದವು.
ಆದರೆ, ಈ ಬಾರಿ ಉತ್ತಮವಾದ ಮುಂಗಾರು ಮಳೆಯಾಗುವ ನಿರೀಕ್ಷೆ ಇದ್ದು, ರಾಜ್ಯ ಜನತೆ ನಿಟ್ಟುಸಿರು ಬಿಟ್ಟಂತಾಗಿದೆ. ಕೃಷಿ ಆಧಾರಿತ ಭಾರತದ ಆರ್ಥಿಕತೆಗೆ ಜೂನ್, ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳುಗಳೇ ನಿರ್ಣಾಯಕ. ಈ ನಾಲ್ಕು ತಿಂಗಳು ಮಳೆಗಾಲಕ್ಕೆ ಉತ್ತಮ ವೇದಿಕೆಯಾಗಿದೆ. ಈ ಬಾರಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ.
ಕರ್ನಾಟಕ ರಾಜ್ಯದ ಕರಾವಳಿ ಭಾಗಕ್ಕೆ ಮುಂಗಾರು ಮಾರುತಗಳು ಜೂನ್ 2 ಅಥವಾ 3ಕ್ಕೆ ಪ್ರವೇಶ ಮಾಡುವ ನೀರಿಕ್ಷೆ ಇದೆ. ಹೀಗಾಗಿ ಹವಾಮಾನ ಇಲಾಖೆ ಅಧಿಕಾರಿಗಳು ಕೂಡ ಮುಂಗಾರು ಮಾರುತಗಳ ಚಲನವಲನ ಪರಿಶೀಲನೆ ಮಾಡಿ, ರೈತರಿಗೆ ಮಾಹಿತಿ ನೀಡುತ್ತಿದ್ದಾರೆ. ಬೆಂಗಳೂರಿನ ಹವಮಾನ ಇಲಾಖೆಯ ನಿರ್ದೇಶಕ ಎನ್ ಪುವಿಯರಸನ್ ಮಾತನಾಡಿ, ವಿವಿಧ ವ್ಯವಸ್ಥೆಗಳ ಪ್ರಗತಿ ಮತ್ತು ಹೊಸ ವ್ಯವಸ್ಥೆಗಳ ರಚನೆಯೊಂದಿಗೆ, ಮುಂಗಾರು ಪ್ರಾರಂಭವಾಗುವ ಸಾಧ್ಯತೆಯಿದೆ. ಮೇ 30 ರೊಳಗೆ ಕೇರಳ ಮತ್ತು ಮೇ 31 ರ ವೇಳೆಗೆ ಕರ್ನಾಟಕವನ್ನು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
2023 ರಲ್ಲಿ, ಜೂನ್‌ನಿಂದ 831.8 2 ಸಾಮಾನ್ಯ ಮಳೆಗೆ ವಿರುದ್ಧವಾಗಿ ರಾಜ್ಯದಲ್ಲಿ 678.4 ಮಿಮೀ ಮಳೆಯಾಗಿದೆ. ಇದರಿಂದ ಶೇ.18 ರಷ್ಟು ಮಳೆ ಕೊರತೆಯಾಗಿದೆ ಎಂದು ತಿಳಿದುಬಂದಿದೆ. ಈ ನಡುವೆ ಮೇ 31ರವರೆಗೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ. ಗಾಳಿ ವೇಗ 65 ಕಿಮೀ ಇರಲಿದೆ ಎಂದು IMD ಮುನ್ಸೂಚನೆ ನೀಡಿದೆ. ಈ ನಡುವೆ ಮೇ 26ರಂದು ಸಂಜೆ ರೆಮಲ್ ಚಂಡಮಾರುತ ಬಾಂಗ್ಲಾದೇಶ ಕರಾವಳಿ ಮೂಲಕ ಭಾರತದ ಈಶಾನ್ಯ ರಾಜ್ಯಗಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದೂ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಾಯುಭಾರ ಕುಸಿತದಿಂದ ಬಂಗಾಳ ಕೊಲ್ಲಿಯಲ್ಲಿ 34-47 ನಾಟ್ (1 KT, ಅಥವಾ ಗಂಟು 1.852 kmph ಗೆ ಸಮನಾಗಿರುತ್ತದೆ) ಜೊತೆಗೆ ಸೈಕ್ಲೋನಿಕ್ ಚಂಡಮಾರುತ ‘Remal’ ಆಗಿ ಮತ್ತಷ್ಟು ತೀವ್ರಗೊಳ್ಳುತ್ತದೆ. ನಂತರ ಉತ್ತರ ಭಾಗಕ್ಕೆ ಚಲಿಸುತ್ತದೆ, ಇಂದು ರಾತ್ರಿ ವೇಳೆಗೆ ಚಂಡಮಾರುತ ತೀವ್ರಗೊಳ್ಳಲಿದೆ ಎಂದು ತಿಳಿಸಿದ್ದಾರೆ.
29.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕಾಸರಗೋಡು ಮೋಡದ ವಾತಾವರಣದೊಂದಿಗೆ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಹ ಮೋಡದ ವಾತಾವರಣ ಇರಲಿದ್ದು, ಘಟ್ಟದ ಕೆಳಗಿನ ತಪ್ಪಲು ಪ್ರದೇಶಗಳ ಅಲ್ಲಲ್ಲಿ ಒಂದೆರಡು ಸಾಧಾರಣ ಮಳೆಯ ಮುನ್ಸೂಚೆನೆ ಇದೆ. ಉತ್ತರ ಕನ್ನಡ ಮೋಡದ ವಾತಾವರಣದ ಮುನ್ಸೂಚೆನೆ ಇದೆ. ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮೋಡ ಹಾಗೂ ಬಿಸಿಲಿನ ವಾತಾವರಣದ ಮುನ್ಸೂಚೆನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಈಗಿನಂತೆ ಜೂನ್ 1ರಿಂದ ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯ ಮುನ್ಸೂಚೆನೆ ಇದೆ. ಜೂನ್ 2 ಅಥವಾ 3 ರಿಂದ ಉತ್ತರ ಒಳನಾಡು ಭಾಗಗಳಲ್ಲಿಯೂ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಮುಂಗಾರು ಆರಂಭ ದುರ್ಬಲತೆ ಮುಂದುವರಿಯಲಿದೆ.