ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ ಮತದಾನ ನಡೆಯುವ ದಿನದಂದು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ 1,652 ಮತದಾನ ಕೇಂದ್ರಗಳಿಗೆ 1,268 ವೈದ್ಯಕೀಯ ತಂಡಗಳನ್ನು ನಿಯೋಜಿಸಿ, 1,850 ಪ್ರಥಮ ಚಿಕಿತ್ಸಾ ಅವಶ್ಯಕ ಔಷಧಿಗಳೊಂದಿಗೆ ಸಿದ್ಧಗೊಳಿಸಿ, ಪೂರೈಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮೇ. 7 ರ ಮತದಾನ ದಿನದಂದು ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಹಾಗೂ ಮತದಾರರ ಆರೋಗ್ಯ ಕಾಳಜಿ, ಅಗತ್ಯವೆನಿಸಿದರೆ ಪ್ರಾಥಮಿಕ ಚಿಕಿತ್ಸೆ ನೀಡಲು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ ಅವರ ನೇತೃತ್ವದಲ್ಲಿ ಆಗತ್ಯ ಸಿದ್ಧತೆ, ಆರೋಗ್ಯ ಸಿಬ್ಬಂದಿಗಳ ನೇಮಕ ಮತ್ತು ಆಂಬ್ಯುಲೆನ್ಸಗಳನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ಮತಗಟ್ಟೆಗಳ ವೈದ್ಯಕೀಯ ಮೇಲ್ವಚಾರಣೆಗಾಗಿ 55 ಸೆಕ್ಟರಲ್ ಅಧಿಕಾರಿಗಳನ್ನು 10 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಮತದಾನ ಕೇಂದ್ರಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀಡಲಾಗಿದೆ.
ಉಷ್ಣತೆಯಿಂದ ಸಂಭವಿಸುವ ಕಾಯಿಲೆಗಳಿಗೆ ಅಗತ್ಯವಿರುವ ಔಷಧಿಗಳ ದಾಸ್ತಾನುಗಳನ್ನು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮತ್ತು ತಾಲೂಕಾ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಇಡಲಾಗಿದೆ. ವಿಶೇಷ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಧಾರವಾಡದಲ್ಲಿ ಐದು ಹಾಸಿಗೆಗಳನ್ನು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ತಲಾ ಎರಡು ಹಾಸಿಗೆಗಳನ್ನು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ ಒಂದು ಹಾಸಿಗೆಗಳನ್ನು, ಕಾಯ್ದಿರಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಿನಲ್ಲಿ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ, ಮತಗಟ್ಟೆ ಸಿಬ್ಬಂದಿಗಳಿಗೆ ಮತಗಟ್ಟೆಯಲ್ಲಿ ಯಾವುದೇ ಮೂಲಭೂತ ಜಿಲ್ಲೆಯಲ್ಲಿ ಉಷಾಂಶ ಹೆಚ್ಚಿರುವ ಕಾರಣ ಕರ್ತವ್ಯ ನಿರತ ಸಿಬ್ಬಂದಿಗಳ ದೇಹದಲ್ಲಿ ನಿರ್ಜಲೀಕರಣ ಉಂಟಾಗದಂತೆ ವಿತರಿಸಲಾಗುತ್ತಿದ್ದು, ಇದನ್ನು ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯುವುದರಿಂದ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಸಾಧ್ಯವಾಗಲಿದೆ. ಹಿಂದಿನ ಲೋಕಸಭೆ ಚುನಾವಣೆಗಳಿಗಿಂತ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತದಾನ ಮಾಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತದಾರ ಮತ್ತು ಆರೋಗ್ಯ ಕಿಟ್ ದಲ್ಲಿ ಇರುವ ಮೈಕೈನೋವಿಗೆ ಡಿಕ್ಲೋಫೆನಾಕ್ 5ಎಂಜಿ ಟ್ಯಾಬ್ಲೆಟ್, ವಾಂತಿಗೆ ಡೊಂಪೆರಿಡೋನ್ 10ಎಂಜಿ ಟ್ಯಾಬ್ಲೆಟ್ (ಊಟಕ್ಕೆ ಮೊದಲು), ಜ್ವರ, ಮೈಕೈನೋವಿಗೆ ಪ್ಯಾರಾಸಿಟಿಮಾಲ್ 650ಎಂಜಿ ಟ್ಯಾಬ್ಲೆಟ್, ದಮ್ಮು ಅಸ್ತಮಾ ರೋಗಕ್ಕೆ ಥಿಯೋಫಿಲಿನ್ ಮತ್ತು ಎಟೋಫಿಲಿನ್ 23ಎಂಜಿ ಮತ್ತು 77ಎಂಜಿ ಟ್ಯಾಬ್ಲೆಟ್, ಆಸಿಡಿಟಿಗೆ ಒಮೆಪ್ರಜೋಲ್ ಕ್ಯಾಪುಲಾ 20ಎಂಜಿ ಟ್ಯಾಬ್ಲೆಟ್ (ಊಟಕ್ಕೆ ಮೊದಲು), ಅತಿಸಾರಭೇದಿ ಮತ್ತು ವಾಂತಿಗೆ ಓರಲ್ ರೀಹೈಡೇಶನ್ ಸಾಲ್ಟ್ ಪೌಡರ್, ಹೀರಿಕೊಳ್ಳುವ ಹತ್ತಿ ಉಣ್ಣೆ, ಬ್ಯಾಂಡೇಜ್ ಬಟ್ಟೆ, 200 ಟ್ಯಾಬ್ಲೆಟ್, ಗಾಯಕ್ಕೆ ಆಯೋಡಿನ್ ಮುಲಾಮು ಮುಂತಾದವುಗಳನ್ನು ಆರೋಗ್ಯ ಇಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ ಅವರು ತಿಳಿಸಿದ್ದಾರೆ.
ವಿಶ್ವ ಗುರುವೇ ಬನ್ನಿ, ಚರ್ಚೆ ಮಾಡೋಣ ರಾಹುಲ್ ಗಾಂಧಿ ಜತೆ ಸಂವಾದಕ್ಕೆ ಪ್ರಧಾನಿಗೆ ಆಹ್ವಾನ ನೀಡಿದ ಸಚಿವ ಸಂತೋಷ್ ಲಾಡ್
ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು? ಕೊಟ್ಟ ಮಾತುಗಳನ್ನು ತಪ್ಪಿದೆಯೇ? ಹತ್ತು ವರ್ಷಗಳಲ್ಲಿ ನಿಮ್ಮ ಕೊಡುಗೆ ಏನು? ಎಷ್ಟು ವಚನ ಕೊಟ್ಟಿದ್ದೀರಿ? ಅವುಗಳಲ್ಲಿ ಎಷ್ಟನ್ನು ಈಡೇರಿಸಿದ್ದೀರಿ? ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆಗೆ ಬನ್ನಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ. ಜಮಖಂಡಿಯಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹತ್ತು ವರ್ಷಗಳಲ್ಲಿ ನೀವು ಅದಾನಿ, ಅಂಬಾನಿ ಅವರಿಗೆ ಮಾರಾಟ ಮಾಡಿರುವ ಸಾರ್ವಜನಿಕ ಆಸ್ತಿಗಳನ್ನು ಯಾರು ನಿರ್ಮಾಣ ಮಾಡಿದ್ದರು? ನಿಮ್ಮ ಅವಧಿಯಲ್ಲಿ ಶ್ರೀಮಂತರ ಆಸ್ತಿ ಎಷ್ಟು ಹೆಚ್ಚಾಗಿದೆ? ಜನಸಾಮಾನ್ಯರ ಬದುಕು ಹೇಗಿದೆ? ಎಂಬ ಬಗ್ಗೆ ಚರ್ಚೆ ನಡೆಯಲಿ, ವಸ್ತುಸ್ಥಿತಿ ದೇಶದ ಜನರಿಗೂ ಗೊತ್ತಾಗಲಿ ಎಂದು ಮೋದಿ ಅವರನ್ನು ಕುಟುಕಿದರು.
ಬ್ರಿಟಿಷರು ನಮಗೆ ಸ್ವಾತಂತ್ರ್ಯ ಕೊಟ್ಟು ಹೋದಾಗ ಭಾರತದ ಸ್ಥಿತಿ ಹೇಗಿತ್ತು. ಹತ್ತು ವರ್ಷಗಳ ಹಿಂದೆ ನೀವು ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಭಾರತದ ಸ್ಥಿತಿ ಯಾವ ರೀತಿ ಬದಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ನೀವು ಹತ್ತು ವರ್ಷಗಳಲ್ಲಿ ದೇಶವನ್ನು ಯಾವ ಸ್ಥಿತಿಗೆ ತಂದಿದ್ದೀರಿ ಎಂಬ ಬಗ್ಗೆ ಚರ್ಚೆ ನಡೆಯಬೇಕಾಗಿದೆ. ಮೋದಿ ಅವರೇ, ಸಂದರ್ಶನದ ನೆಪದಲ್ಲಿ ಆಯ್ದ ಪ್ರಶ್ನೆಗಳಿಗೆ, ಆಯ್ದ ಪತ್ರಕರ್ತರೊಂದಿಗೆ ಮಾತನಾಡುವ ಬದಲಿಗೆ ಬಹಿರಂಗ ಚರ್ಚೆಗೆ ಸಿದ್ದರಾದರೆ ಒಳ್ಳೆಯದು ಎಂದು ಹೇಳಿದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಆಹಾರದ ಕೊರತೆ ಇತ್ತು, ಆಸ್ಪತ್ರೆಗಳು ಇರಲಿಲ್ಲ. ರಸ್ತೆಗಳು ಇರಲಿಲ್ಲ. ಕೈಗಾರಿಕೆಗಳು ಎಂದರೆ ಏನು ಎಂಬುದು ಗೊತ್ತಿರಲಿಲ್ಲ. ರಸ್ತೆಗಳ ನಿರ್ಮಾಣವಾಗಿರಲಿಲ್ಲ.
ಕೇವಲ ಹತ್ತು ವರ್ಷಗಳಲ್ಲಿ ನೀವು ಭಾರತ ದೇಶವನ್ನು ಕಟ್ಟಿದ್ದೀರಾ? ಕಾಂಗ್ರೆಸ್ ಏನೂ ಮಾಡಿರಲಿಲ್ಲವಾ? ಎಂದು ಸರಣಿ ಪ್ರಶ್ನೆಗಳನ್ನು ಕೇಳಿದರು. ಭಾರತ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರೆ ಅದಕ್ಕೆ ಮೋದಿ ಕಾರಣ. ಯಾವುದೇ ಲೋಪ ಕಂಡರೆ ಅದಕ್ಕೆ ಕಾಂಗ್ರೆಸ್ ಎಂದು ಹೇಳುವ ಸ್ಥಿತಿಗೆ ಮೋದಿ ತಲುಪಿದ್ದಾರೆ. ಹತ್ತು ವರ್ಷಗಳಲ್ಲಿ ಅವರು ದೇಶದ ಜನರಿಗೆ ಕೊಟ್ಟ ಯಾವುದೇ ಮಾತನ್ನು ಉಳಿಸಿಕೊಂಡಿಲ್ಲ. ಕರೋನಾ ಸಂದರ್ಭ, ನೋಟುಗಳ ಅಮಾನೀಕರಣ ಸಂದರ್ಭದಲ್ಲಿ ಜನಸಾಮಾನ್ಯರು ಪಟ್ಟ ಪಾಡು ಅಷ್ಟಿಷ್ಟಲ್ಲ. ಇವೆಲ್ಲ ಮೋದಿ ಅವರಿಗೆ ಎಲ್ಲಿ ಅರ್ಥವಾಗಬೇಕು ಎಂದು ಗೇಲಿ ಮಾಡಿದರು. ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳಿಂದ ಅನೇಕ ಬಡಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಈ ಯೋಜನೆಗಳ ಯಶಸ್ಸು ಸಹಿಸದ ಬಿಜೆಪಿ ನಾಯಕರು ಕೀಳುಮಟ್ಟದ ಟೀಕೆ ಮಾಡುತ್ತಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಚಿತ್ರನಟಿಯೊಬ್ಬರು ಹೇಳುವ ಮೂಲಕ ಮಹಿಳಾ ಸಮೂಹವನ್ನೆ ಅಪಮಾನಿಸಿದ್ದಾರೆ ಎಂದರು. ಶಿವಾಜಿ ಮುಸ್ಲಿಂ ವಿರೋಧಿಯಲ್ಲ ಛತ್ರಪತಿ ಶಿವಾಜಿ ಮುಸ್ಲಿಂ ವಿರೋಧಿಯಲ್ಲ. ಮಾರಾಠಾ ಸಮಾಜ ಈ ಸತ್ಯಸಂಗತಿಯನ್ನು ಅರಿಯಬೇಕು ಎಂದು ಸಚಿವ ಸಂತೋಷ ಲಾಡ್ ಹೇಳಿದರು. ಇತಿಹಾಸವನ್ನು ಓದಿ ಸತ್ಯ ತಿಳಿದುಕೊಳ್ಳಿ, ಮಹಾ ಸಮಾಜ ಮತ್ತು ಮುಸ್ಲಿಂ ಸಮಾಜಗಳ ನಡುವೆ ಸಂಘರ್ಷ ಸೃಷ್ಟಿಸುವ ಸಂಚುಗಳಿಗೆ ಬಲಿಯಾಗಬೇಡಿ ಎಂದು ಮನವಿ ಮಾಡಿದರು. ನಾವು ಭಾರತೀಯ ಹಿಂದುಗಳಾಗೋಣ, ಛತ್ರಪತಿ ಶಿವಾಜಿ ಹಿಂದುಗಳಾಗೋಣ, ಎಸ್ ಹಿಂದುಗಳಾಗುವುದು ಬೇಡ ಎಂದು ಮನವಿ ಮಾಡಿದರು.
ಸಂಯುಕ್ತ ಪಾಟೀಲ ಅವರು ಸಂಸತ್ತಿಗೆ ಆಯ್ಕೆಯಾಗುವ ಎಲ್ಲ ಅರ್ಹತೆ ಹೊಂದಿದ್ದಾರೆ. ವಿದ್ಯಾವಂತೆಯಾಗಿದ್ದು, ಸಂಸತ್ತಿನಲ್ಲಿ ಜಿಲ್ಲೆ ಮತ್ತು ರಾಜ್ಯದ ಬಗ್ಗೆ ಧ್ವನಿ ಎತ್ತಲಿದ್ದಾರೆ. ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿ, ಸಂತೋಷ ಲಾಡ್, ಕಾರ್ಮಿಕ ಸಚಿವರು.