ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ 36,789 ಮನೆಗಳ ಫಲಾನುಭವಿಗಳಿಗೆ ವಿತರಣೆ. ಕೇಂದ್ರ ಸರ್ಕಾರದ ಪಾಲು 1.50 ಲಕ್ಷ, ರಾಜ ಸರ್ಕಾರದ ಪಾಲು 4 ಲಕ್ಷ. ಫಲಾನುಭವಿಯಿಂದ ರೂ.4.50 ಲಕ್ಷ ವಂತಿಗೆ ಬದಲಾಗಿ ಕೇವಲ ರೂ.1 ಲಕ್ಷ ವಂತಿಗೆ ಪಡೆದು ಉಳಿದ ಹಣವನ್ನು ರಾಜ್ಯ ಸರ್ಕಾರವೇ ಭರಿಸಿದೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಿರುವ 36,789 ಮನೆಗಳನ್ನು ಇಂದು ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ರೂ.1.50 ಲಕ್ಷ ಮತ್ತು ರಾಜ್ಯ ಸರ್ಕಾರದ ಪಾಲು 4.೦೦ ಲಕ್ಷ ರೂಪಾಯಿ. ಆರ್ಥಿಕ ಸಮಸ್ಯೆಯಿಂದಾಗಿ ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಭರಿಸಲು ಸಾಧ್ಯವಾಗದೆ ಇದ್ದುದ್ದರಿಂದ ಅವರ ಪಾಲಿನ ರೂ.4.50 ಲಕ್ಷ ವಂತಿಗೆ ಬದಲಾಗಿ ಕೇವಲ ರೂ.1 ಲಕ್ಷ ವಂತಿಗೆ ಪಡೆದು ಉಳಿದ 3.50 ಲಕ್ಷ ರೂಪಾಯಿ ಹಣವನ್ನು ರಾಜ್ಯ ಸರ್ಕಾರವೇ ಭರಿಸಿದೆ. ನಾಡಿನ ಸೂರು ರಹಿತ ಬಡಕುಟುಂಬಗಳಿಗೆ ನೆಮ್ಮದಿಯ ಸೂರು ಒದಗಿಸುವುದು ನಮ್ಮ ಆದ್ಯತೆಯಾಗಿದೆ.
ಮಾ.11 ರಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಾವೇಶ ಕಾರ್ಯಕ್ರಮ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ‘ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಾವೇಶ’ ಕಾರ್ಯಕ್ರಮವನ್ನು ಮಾ.11 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಮೋಕಾ ರಸ್ತೆಯ ಸುವರ್ಣ ಇಂಟರ್‌ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದೆ. ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಯುವ ಸಬಲೀಕರಣ, ಕ್ರೀಡಾ, ಪರಿಶಿಷ್ಟ ವರ್ಗಗಳ ಕಲ್ಯಾಣ. ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಘನಉಪಸ್ಥಿತಿ ಇರುವರು. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸುವರು.
ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರೂ ಆದ ‘ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಸಂಸದರಾದ ವೈ.ದೇವೆಂದ್ರಪ್ಪ, ಕರಡಿ ಸಂಗಣ್ಣ, ಡಾ.ಸೈಯದ್ ನಾಸೀರ್ ಹುಸೇನ್, ಶಾಸಕರಾದ ಈ.ತುಕರಾಂ, ಬಿ.ಎಂ.ನಾಗರಾಜ, ವಿಧಾನಪರಿಷತ್ ಶಾಸಕರಾದ ಡಾ.ಚಂದ್ರಶೇಖರ್ ಬಿ.ಪಾಟೀಲ್, ಶಶೀಲ್ ಜಿ.ನಮೋಶಿ, ವೈ. ಎಂ.ಸತೀಶ್, ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತ ಅಧ್ಯಕ್ಷರಾದ ಮುಂಡರಗಿ ನಾಗರಾಜ, ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಶ್ವೇತ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜೆ.ಎಸ್.ಆಂಜನೇಯಲು ಹಾಗೂ ಇನ್ನಿತರೆ ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಹಸೆಮಣೆ ಏರಬೇಕಿದ್ದ ಮಗನನ್ನೇ ಮಸಣಕ್ಕೆ ಕಳುಹಿಸಿದ ತಂದೆ
ಮದುವೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ ಜಿಮ್ ತರಬೇತುದಾರನನ್ನು ಆತನ ತಂದೆಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಗೌರವ್ ಸಿಂಘಾಲ್(29) ಮೃತ ಜಿಮ್ ಟೈನರ್ ದಕ್ಷಿಣ ದೆಹಲಿಯಲ್ಲಿರುವ ಮನೆಯಲ್ಲಿ ಮುಂಜಾನೆ, ಮದುವೆಗೂ ಕೆಲವೇ ಗಂಟೆಗಳ ಮೊದಲು ಅವರ ಎದೆಗೆ 15 ಬಾರಿ ಇರಿಯಲಾಗಿದೆ. ಕೊಲೆಯ ಪ್ರಮುಖ ಆರೋಪಿಯಾಗಿರುವ ತಂದೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕೊಲೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ, ಇಲ್ಲಿಯವರೆಗೆ, ತಂದೆ ಮತ್ತು ಮಗನ ನಡುವೆ ವೈಮನಸ್ಸು ಇತ್ತು ಎಂದಷ್ಟೇ ತಿಳಿದುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಏಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಮುಖ ಆರೋಪಿಯ ಬಂಧನದ ನಂತರ ಎಲ್ಲವೂ ಸ್ಪಷ್ಟವಾಗುತ್ತದೆ. ಮೃತ ಗೌರವ್ ಸಿಂಘಾಲ್‌ನ ಸಹೋದರ ಮತ್ತು ಸಂಬಂಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಉಪಪೊಲೀಸ್ ಆಯುಕ್ತ (ದಕ್ಷಿಣ) ಅಂಕಿತ್ ಚೌಹಾಣ್ ತಿಳಿಸಿದ್ದಾರೆ.
ಸಿಂಘಾಲ್ ಮುಖಕ್ಕೆ ಮತ್ತು ಎದೆಗೆ 15ಕ್ಕೂ ಹೆಚ್ಚು ಬಾರಿ ಇರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಾವು ಪ್ರತಿ ಕೋನದಿಂದ ವಿಷಯವನ್ನು ತನಿಖೆ ಮಾಡುತ್ತಿದ್ದೇವೆ ಮತ್ತು ಮುಖ್ಯ ಉದ್ದೇಶದ ಹಿಂದೆ ಕೆಲವು ಪ್ರಮುಖ ಸುಳಿವುಗಳನ್ನು ಹೊಂದಿದ್ದೇವೆ. ಐದಕ್ಕೂ ಹೆಚ್ಚು ವಿಭಿನ್ನ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ. ಪೊಲೀಸರು ಕೊಠಡಿಯಲ್ಲಿ ಮತ್ತು ಸುತ್ತಮುತ್ತಲಿನ ವಿವಿಧ ಗಾತ್ರದ ಹಲವಾರು ಶೂ ಗುರುತುಗಳನ್ನು ಪತ್ತೆಹಚ್ಚಿದ್ದಾರೆ. ಇದು ಕೊಲೆಯಲ್ಲಿ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಗೌರವ್‌ಗೆ ವಿವಾಹವಾಗಲು ಇಷ್ಟವಿರಲಿಲ್ಲ. ಆದರೆ ಆತನ ತಂದೆ ಒತ್ತಡ ಹೇರುತ್ತಿದ್ದರು ಎಂಬುದು ಪ್ರಕರಣದ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸಿಂಘಾಲ್ ಬೇರೊಬ್ಬ ಮಹಿಳೆಯನ್ನು ಪ್ರೀತಿಸುತ್ತಿದ್ದರು ಮತ್ತು ಅವಳನ್ನು ಮದುವೆಯಾಗಲು ಬಯಸಿದ್ದರು. ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಧಾನಿ ಮೋದಿ ಆನೆ ಸಫಾರಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಶನಿವಾರ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಇಂದು ಬೆಳ್ಳಂಬೆಳಗ್ಗೆಯೇ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವ ಮೂಲಕ ಅವರ ಪ್ರವಾಸವು ಪ್ರಾರಂಭವಾಗಿದೆ. ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ ಮತ್ತು ಜೀಪು ಸಫಾರಿಯಲ್ಲಿ ಮೋದಿಯವರು ಸಾಗಿದರು.
ಯುನೆಸ್ಕೋ ವಿಶ್ವ ಪರಂಪರೆಯ ತಾಣಕ್ಕೆ ಇಂದು ಮೊದಲ ಬಾರಿ ಭೇಟಿ ನೀಡಿದ ಮೋದಿ, ಆರಂಭದಲ್ಲಿ ಉದ್ಯಾನವನದ ಸೆಂಟ್ರಲ್ ಕೊಹೊರಾ ಶ್ರೇಣಿಯ ಮಿಹಿಮುಖ್ ಪ್ರದೇಶದಲ್ಲಿ ಆನೆ ಸಫಾರಿಯನ್ನು ಕೈಗೊಂಡರು, ನಂತರ ಅದೇ ವ್ಯಾಪ್ತಿಯಲ್ಲಿ ಜೀಪ್ ಸಫಾರಿ ನಡೆಸಿದರು. ಉದ್ಯಾನದ ನಿರ್ದೇಶಕಿ ಸೋನಾಲಿ ಘೋಷ್ ಮತ್ತು ಇತರ ಹಿರಿಯ ಅರಣ್ಯ ಅಧಿಕಾರಿಗಳು ಪ್ರಧಾನಿ ಜೊತೆಗಿದ್ದರು. ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಿ ಭೇಟಿ ನೀಡುತ್ತಿದ್ದಂತೆ, ಉದ್ಯಾನವನದ ಬಗ್ಗೆ ಕೆಲವು ಪ್ರಮುಖ ಸಂಗತಿಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಇದು “ಒಂದು ಕೊಂಬಿನ ಫೌಂಡಾಮೃಗಗಳ ಜನಸಂಖ್ಯೆ’ಗೆ ಹೆಸರುವಾಸಿಯಾಗಿದೆ. ಉದ್ಯಾನವನವು ಆನೆಗಳು, ಕಾಡು ನೀರಿನ ಎಮ್ಮೆ, ಚೌಗು ಜಿಂಕೆ ಮತ್ತು ಹುಲಿಗಳಿಗೆ ನೆಲೆಯಾಗಿದೆ. ಕಾಜಿರಂಗವು ಆನೆಗಳು, ಕಾಡು ನೀರಿನ ಎಮ್ಮೆಗಳು ಮತ್ತು ಚೌಗು ಜಿಂಕೆಗಳಿಗೆ ಪ್ರಮುಖ ಸಂತಾನೋತ್ಪತ್ತಿ ಸ್ಥಳವಾಗಿದೆ. ಕಾಲಾನಂತರದಲ್ಲಿ, ಕಾಜಿರಂಗದಲ್ಲಿ ಹುಲಿಗಳ ಸಂಖ್ಯೆಯು ಹೆಚ್ಚಾಯಿತು.