Breaking
Tue. Dec 17th, 2024
Spread the love

2023-24 ನೇ ಸಾಲಿಗೆ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ, ಉತ್ತಮ ಗುಣಮಟ್ಟದ ತರಕಾರಿ ಬೀಜಗಳನ್ನು ವಿತರಿಸಲು ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ,

ತರಕಾರಿಗಳು ಪೌಷ್ಠಿಕಾಂಶಗಳ ಆಗರಗಳು, ಕಡಿಮೆ ಅವಧಿಯಲ್ಲಿ, ಕಡಿಮೆ ವೆಚ್ಚದಲ್ಲಿ ಕಡಿಮೆ ಕ್ಷೇತ್ರದಲ್ಲಿ ಅಧಿಕ ಇಳುವರಿ, ಅಧಿಕ ಲಾಭ, ಪಡೆದುಕೊಳ್ಳಲು ವಿವಿಧ ತಳಿಯ ಸುಧಾರಿತ ತರಕಾರಿ ಬೀಜಗಳನ್ನು ತೋಟಗಾರಿಕೆ ಇಲಾಖೆಯಿಂದ ವಿತರಿಸಲು ನಿರ್ಧರಿಸಲಾಗಿದೆ. ಈ ವರ್ಷ ಬರಗಾಲ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರೈತರು ಕಡಿಮೆ ಅವಧಿಯಲ್ಲಿ, ಕಡಿಮೆ ನೀರಿನಲ್ಲಿ, ಅಧಿಕ ಇಳುವರಿ ಕೊಡುವ ತರಕಾರಿ ತಳಿಗಳನ್ನು ವಿತರಿಸಲಾಗುವುದು.

ಈ ತರಕಾರಿ ತೋಟಗಳಿಗೆ ಹನಿ ನೀರಾವರಿ ಸೌಲಭ್ಯವನ್ನು ಅಳವಡಿಸಿಕೊಂಡ ರೈತರಿಗೆ ಸಹಾಯಧನವನ್ನು ನೀಡಲಾಗುವುದು. ಅರ್ಹ ರೈತರು 2 ಫೋಟೋ, ಎಫ್.ಐ.ಡಿಸಂಖ್ಯೆ, ಉತಾರ, ಖಾತೆ ಉತಾರ, ನೀರಾವರಿ ಸರ್ಟಿಫಿಕೇಟ್, ಬ್ಯಾಂಕ್ ಪುಸ್ತಕ, ಆಧಾರ ಕಾರ್ಡ್‌ನೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಶಿರಹಟ್ಟಿ ಮತ್ತು ಲಕ್ಷೇಶ್ವರ ತಾಲೂಕುಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತೀ ಸಣ್ಣ ರೈತರು, ದೊಡ್ಡ ರೈತರು, ಮಹಿಳೆಯರು, ವಿಕಲಚೇತನರು ಹಾಗೂ ಅವರ ಅವಲಂಬಿತ ಕುಟುಂಬದವರು ಇದರ ಲಾಭ ಪಡೆದುಕೊಳ್ಳಲು ಜನವರಿ 10 ರೊಳಗಾಗಿ ಅರ್ಜಿ ಸಲ್ಲಿಸಬೇಕು.

ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಿರಹಟ್ಟಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸುರೇಶ ಕುಂಬಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೆಂಗಿನ ಮತ್ತು ಗೋಡಂಬಿ ಸಸಿಗಳನ್ನು ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ತೆಂಗು ಮತ್ತು ಗೋಡಂಬಿ ಪ್ರದೇಶ ವಿಸ್ತರಣೆಯಡಿ, ತೆಂಗಿನ ಮತ್ತು ಗೋಡಂಬಿ ಸಸಿಗಳನ್ನು ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. 2023-24 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತೆಂಗು ಪ್ರದೇಶ ವಿಸ್ತರಣೆಯಲ್ಲಿ ತೆಂಗು ತೋಟ ಮತ್ತು ಗೋಡಬಿ ತೋಟ ನಿರ್ಮಾಣ ಮಾಡಲು ಇಚ್ಚಿಸುವ ರೈತರಿಗೆ, ಉತ್ತಮ ಗುಣಮಟ್ಟದ ಸಸಿಗಳನ್ನು ವಿತರಿಸಲಾಗುವುದು.

ಕಲ್ಪವೃಕ್ಷ ಎಂದು ಕರೆಯಲ್ಪಡುವ ತೆಂಗು ಒಂದು ಪ್ರಮುಖವಾದ ವಾಣಿಜ್ಯ ಬೆಳೆಯಾಗಿದೆ. ಬಹು ಉಪಯೋಗಿ ಬೆಳೆಯಾದ ತೆಂಗು ಕೃಷಿಯಿಂದ ಉತ್ತಮ ಲಾಭಗಳಿಸಬಹುದು. ಆಹಾರ ಪಾನೀಯ, ಉರುವಲು, ಕೈಗಾರಿಕೆಗಳಿಗೆ ಕಚ್ಚಾ ಪದಾರ್ಥಗಳು ಇತ್ಯಾದಿ, ಹಲವಾರು ತೆಂಗು ಉತ್ಪನ್ಗಳನ್ನು ಉಪಯೋಗಿಸಲಾಗುವುದು. ತೆಂಗಿನ ಮರದ ಎಲ್ಲಾ ಭಾಗಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಸಲಾಗುವುದರಿಂದ ಇದರ ಮೌಲ್ಯ ದಿನೇ ದಿನೇ ಹೆಚ್ಚಾಗುತ್ತಿದೆ. ಗೋಡಂಬಿ ಒಂದು ಉತ್ತಮ ಭವಿಷ್ಯದ ಬೆಳೆಯಾಗಿದ್ದು, ರೈತರಿಗೆ ಒಂದು ಉತ್ತಮ ಆದಾಯ ನೀಡುವ ಬೆಳೆಯಾಗಿದ್ದು, ಇದರ ಲಾಭವನ್ನು ಪಡೆಯಬಹುದು.

ತೆಂಗು ಸಸಿಗಳಿಗೆ ಅರ್ಜಿ ಸಲ್ಲಿಸುವವರು ಸಾಲಿನಿಂದ ಸಾಲಿಗೆ 3 ಅಡಿ ಉದ್ದ, 3 ಅಡಿ ಅಗಲ ಮತ್ತು 3 ಅಡಿ ಆಳದಲ್ಲಿ ಗುಂಡಿ ತೊಡಿಕೊಂಡು ನಂತರ ಮೇಲ್ಮಣ್ಣು, ಕೊಟ್ಟಿಗೆ ಗೊಬ್ಬರ, ಉಸುಕು, ಬೇವಿನ ಹಿಂಡಿ ಗೊಬ್ಬರ ಮಿಶ್ರಣ ತುಂಬಿ ತೆಂಗು ಸಸಿಯನ್ನು ನಾಟಿ ಮಾಡಬೇಕು. ಗೋಡಂಬಿ ಬೆಳೆಯನ್ನು ಇಚ್ಚಿಸುವ ರೈತರು ಭೂಮಿಯನ್ನು ಆಳವಾಗಿ ಉಳಮೆ ಮಾಡಿ, ಶಿಫಾರಸ್ಸು ಮಾಡಿದ 7 ಮೀ ಘಿ 7 ಮೀ ಅಂತರದಲ್ಲಿ, ತಗ್ಗು ತೆಗೆದು, ಗೊಬ್ಬರ ಮಿಶ್ರಣ ತುಂಬಿ ಗೋಡಂಬಿ ಸಸಿಗಳನ್ನು ನಾಟಿ ಮಾಡಬೇಕು. ನಾಟಿ ಮಾಡಿದ ನಂತರ ಊರುಗೋಲು ಕೊಟ್ಟು ಪ್ರತಿ ನಿತ್ಯ ನೀರು ಕೊಡಬೇಕು.

ಸದರಿ ಯೋಜನೆಯಡಿ ಅರ್ಜಿ ಸಲ್ಲಿಸುವ ರೈತರು ಅಗತ್ಯ ದಾಖಲೆಗಳಾದ ಫೋಟೋ, ಉತಾರ, ನೀರಿನ ದೃಢೀಕರಣ ಪತ್ರ, ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಜಾತಿ ಪ್ರಮಾಣ ಪತ್ರದೊಂದಿಗೆ ಅರ್ಜಿಯನ್ನು ಜನವರಿ 6 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಶಿರಹಟ್ಟಿರವರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.

Related Post

Leave a Reply

Your email address will not be published. Required fields are marked *