Breaking
Wed. Dec 18th, 2024

20 ವರ್ಷದ ಹಳೆಯ ಪಹಣಿಯನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ, ಉತಾರ

Spread the love

ಈ ವರ್ಷದ ಪಹಣಿ download ಮಾಡಿಕೊಳ್ಳವುದು ಹೇಗೆ?

ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. https://landrecords.karnataka.gov.in/Service2/

Current Year ನಲ್ಲಿ ನಿಮ್ಮ District, Taluk, Hobli, Village, Survey Number ಹಾಕಿ Go ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಮೇಲೆ Surnoc, Hissa No ಹಾಕಿ Period, Year ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. Fetch details ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಆಮೇಲೆ view ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಆಗ ನಿಮ್ಮ ಮುಂದೆ ನಿಮ್ಮ ಈ ವರ್ಷದ ಪಹಣಿ ಬರುತ್ತದೆ. ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ.

ಹಳೆಯ ವರ್ಷದ ಪಹಣಿ download ಮಾಡಿಕೊಳ್ಳವುದು ಹೇಗೆ?

https://landrecords.karnataka.gov.in/Service2/


ಹಳೆಯ ವರ್ಷದ ಪಹಣಿ download ಮಾಡಿಕೊಳ್ಳ ಬೇಕಾದರೆ Old year ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಮೇಲೆ ನಿಮ್ಮ District, Taluk, Hobli, Village, Survey Number ಹಾಕಿ Go ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಆಮೇಲೆ Surnoc, Hissa No ಹಾಕಿ, ಆಮೇಲೆ ಕೆಳಗಿನ ಚಿತ್ರಗಳಲ್ಲಿ ಕಾಣುವ ಹಾಗೆ ನಿಮಗೆ ಬೇಕಾದ Period ಅಂದರೆ ಬೇಕಾದ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ.

ಆಮೇಲೆ ನೀವು ನಿಮಗೆ ಬೇಕಾದ ವರ್ಷವನ್ನು ಆಯ್ಕೆ ಮಾಡಿ Year ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಸೆಲೆಕ್ಟ್ ಮಾಡಿಕೊಳ್ಳಿ.

ಆಮೇಲೆ view ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ.

ಜಂಬಗಿ ಆಹೇರಿಕೆರೆ ನೀರು ತುಂಬಿಸಲು ರೈತ ಸಂಘದ ಆಗ್ರಹ

ಈ ವರ್ಷ ಸಂಪೂರ್ಣ ಮಳೆ ಕೈಕೊಟ್ಟಿರುವುದರಿಂದ ಜಮೀನಿನಲ್ಲಿರುವ ಎಲ್ಲಾ ಬಾವಿ, ಕೊಳವೆ ಭಾವಿ, ಹಳ್ಳ, ಕೆರೆಗಳು ಬತ್ತಿ ಹೋಗಿವೆ. ಸಾವಿರ ಅಡಿ ಬೊರವೆಲ್‌ರೆದರು ನೀರು ಸಿಗುತ್ತಿಲ್ಲ, ಇರುವ ಅಲ್ಪ ಸೊಲ್ಪ ಬೆಳೆಗಳಿಗೆ ನೀರು ಸಾಲುತ್ತಿಲ್ಲ, ಧನಕರುಗಳಿಗೆ ಕುಡಿಯಲು ನೀರು ಮೇವೂ ಇಲ್ಲದೇ ಹರ ಸಾಹಸ ಪಡುವಂತಾಗಿದೆ ಆದ್ದರಿಂದ ನಾವೂ ಜಂಬಗಿ ಹಾಗೂ ಆಹೇರಿ ಕೆರೆಗಳನ್ನು ವೀಕ್ಷಿಸಿದಾಗ ಸಮಸ್ಯೆ ಇರುವುದು ಕಂಡು ಬಂದಿದೆ. ಕೂಡಲೇ ಜಂಬಗಿ ಹಾಗೂ ಆಹೇರಿ ಕೆರೆಗೆ ನೀರು ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯಪುರ ತಾಲೂಕಾ ಉಪಾಧ್ಯಕ್ಷರಾದ ಮಹದೇವಪ್ಪ ತೇಲಿ ಜಿಲ್ಲಾಡಳಿತಕ್ಕೆ ಆಗ್ರಹ ಮಾಡಿ ಕೆರೆ ನೀರುತುಂಬಿಸುವ ಯೋಜನೆಯಡಿ ನೀರು ಹರಿಸುವಾಗ ಈ ಬಾರಿ ಈ ಎರಡು ಕೆರೆ ತುಂಬಿಸಬೇಕು ಇಲ್ಲದಿದ್ದಲ್ಲಿ ಕೆರೆಯಲ್ಲಿಯೇ ಕುಳಿತು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದರು.

ಈ ವೇಳೆ ವಿಜಯಪುರ ಅಧ್ಯಕ್ಷರಾದ ಅರಣು ಗೌಡತ ರೇಲಿ ಅವರು ಈ ಭಾಗದ ರೈತರಿಗೆ ಸಮಸ್ಯೆ ಆಗುವುತ್ತಿರುವುದು ನಮ್ಮ ಗಮನಕ್ಕೆ ಬಂದ ತಕ್ಷಣ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಜಂಬಗಿ ಹಾಗೂ ಆಹೇರಿ ಕೆರೆಗಳನ್ನು ವೀಕ್ಷಣೆ ಮಾಡಲು ನಮ್ಮ ಸಂಘದ ಸದಸ್ಯರೊಡನೇ ಸ್ವತಃಕೆರೆಗೆ ಬಂದು ವೀಕ್ಷಣೆ ಮಾಡಲಾಗಿಕೆರೆಯಲ್ಲಿ ಅಲ್ಪ ಸ್ವಲ್ಪ ಅಲ್ಲಲ್ಲಿ ತೆಗ್ಗುಗಳಲ್ಲಿ ನೀರು ಇರುವು ದುಖಂಡುಬಂದಿರುವುದನ್ನು ಗಮನಿಸಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಈ 2 ಕೆರೆಗಳನ್ನು ತುಂಬಿಸುವಂತೆ ಆಗ್ರಹಿಸಬೇಕೆಂದು ಈ ಮೂಲಕ ತಿಳಿಸುತ್ತೇವೆ ಇಲ್ಲವಾದಲ್ಲಿ ಧರಣಿ ಸತ್ಯಾಗ್ರಹ ಅನಿವಾರ್ಯವಾಗಲಿದೆ ಎಂದರು.

2024 : ಲೋಕಸಭಾ ಚುನಾವಣೆಯ ಮತದಾನದ ದಿನದಂದು ವೇತನ ಸಹಿತ ಸಾವ್ರರ್ತಿಕ ರಜೆ ಘೋಷಣೆ

ಭಾರತ ಚುನಾವಣಾ ಆಯೋಗವು ಲೋಕಸಭೆಗೆ ಸಾರ್ವತ್ರಿಕ ಚುನಾವಣೆ 2024ನ್ನು ಘೋಷಿಸಿದ್ದು, ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26, 2024ರ ಶುಕ್ರವಾರದಂದು ಹಾಗೂ ಎರಡನೇ ಹಂತದಲ್ಲಿ ಇನ್ನುಳಿದ 14 ಲೋಕಸಭಾ ಕ್ಷೇತ್ರಗಳಿಗೆ ಹಾಗೂ ಶೋರಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಮೇ 07, 2024ರ ಮಂಗಳವಾರ ನಡೆಸಲಾತ್ತಿದ್ದು, ಮತದಾನ ನಡೆಯುವ ದಿನದಂದು ವೇತನ ಸಹಿತ ಸಾವ್ರರ್ತಿಕ ರಜೆ ಘೋಷಿಸಲಾಗಿದೆ.

ಮೊದಲ ಹಂತದಲ್ಲಿ ಲೋಕಸಭಾ ಚುನಾವಣಾ ಕ್ಷೇತ್ರಗಳಾದ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಎರಡನೇ ಹಂತದಲ್ಲಿ ಲೋಕಸಭಾ ಕ್ಷೇತ್ರಗಳಾದ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರುಗಿ, ರಾಯಚೂರು, ಬೀದ‌ರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಹಾಗೂ ವಿಧಾನಸಭಾ ಉಪಚುನಾವಣೆಯು ಯಾದಗಿರಿ ಜಿಲ್ಲೆಯ ಶೋರಾಪುರ ಕ್ಷೇತ್ರಗಳಿಗೆ ನಡೆಯಲಿದೆ ಸದರಿ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವಂತಹ ಮತದಾರರು ಮತ ಚಲಾಯಿಸಲು ಅನುಕೂಲವಾಗುಂತೆ ಆಯಾ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳಿಗೆ ಶಾಲಾ ಕಾಲೇಜುಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಒಳಗೊಂಡಂತೆ ಏಪ್ರಿಲ್ 26 ಮತ್ತು ಮೇ 07, 2024 ರಂದು ನಡೆಯುವ ಚುನಾವಣೆಗೆ ಆಯಾ ಚುನಾವಣಾ ಕ್ಷೇತ್ರಗಳಿಗೆ ಸೀಮಿತಗೊಳಿಸಿ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.

ಲೋಕಸಭಾ ಕ್ಷೇತ್ರಗಳ ಅರ್ಹ ಮತದಾರರಾಗಿರುವ ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪ್ರಜಾಪ್ರತಿನಿಧಿ ಕಾಯ್ದೆ 1951 ಹಾಗೂ 1881 ರ ಪ್ರಕಾರ ವೇತನ ಸಹಿತ ರಜೆ ನೀಡಲು ಆದೇಶಿಸಿದೆ. ಈ ರಜೆಯು ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ, ಆದಾಗ್ಯೂ ಕೂಡ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡತಕ್ಕದ್ದು ಎಂದು ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ರಾಜ್ಯ ಶಿಷ್ಟಾಚಾರ) ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಆರೋಗ್ಯ ತಪಾಸಣಾ ಕಿಟ್ ವಿತರಣೆ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ ಹಾಗೂ ಎಮ್. ಆರ್.ಪಿ.ಸಿ.ಎಲ್. (ಮಂಗಳೂರು ರಿಫೈನರಿ ಆ್ಯಂಡ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ )ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಗದಗ ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಮಂಗಳವಾರ ಆರೋಗ್ಯ ತಪಾಸಣಾ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಥೋಡ್ ಅವರು ಮಾತನಾಡಿ,. ಜಿಲ್ಲೆಯಲ್ಲಿ ಎನ್.ಸಿ.ಡಿ. ಕಾರ್ಯಕ್ರಮದಡಿಯಲ್ಲಿ ಆರೋಗ್ಯ ಸಂಸ್ಥೆಗಳ ಮೂಲಕ ಸಾರ್ವಜನಿಕ ಉಪಯೋಗಕ್ಕಾಗಿ ಮಧುಮೇಹ, ರಕ್ತದೊತ್ತಡ, ಇತರೆ ಖಾಯಿಲೆಗಳ ತಪಾಸಣೆ ಮಾಡಲಾಗುತ್ತಿದ್ದು, ಇಂತಹ ತಪಾಸಣಾ ಕಾರ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಅತ್ಯಂತ ಅವಶ್ಯಕವಾಗಿ ಬೇಕಾದ ವೈದ್ಯಕೀಯ ಉಪಕರಣಗಳು, ಸಲಕರಣೆಗಳನ್ನು ಸಾರ್ವಜನಿಕ ಉಪಯೋಗಕ್ಕಾಗಿ ಮಂಗಳೂರು ಮೂಲದ ಮಂಗಳೂರು ರಿಫೈನರಿ ಆ್ಯಂಡ ಪೆಟ್ರೋ ಕೆಮಿಕಲ್ಪ ಲಿಮಿಟೆಡ್ ಕಂಪನಿಯು ತಮ್ಮ ಸಿ.ಎಸ್. ಆರ್. ನಿಧಿಯಲ್ಲಿ ಜಿಲ್ಲೆಯ 13 ಆರೋಗ್ಯ ಸಂಸ್ಥೆಯಲ್ಲಿನ ಎನ್.ಸಿ.ಡಿ ಕ್ಲೀನಿಕ್‌ ಗಳಿಗೆ ಸುಮಾರು 16.5 ಲಕ್ಷ ರೂಪಾಯಿ ಮೌಲ್ಯದ ಕಿಟ್ ವಿತರಣೆ ಮಾಡುವದರ ಮೂಲಕ ಜಿಲ್ಲೆಯ ಕಟ್ಟಕಡೆ ವ್ಯಕ್ತಿಯ ಆರೋಗ್ಯ ತಪಾಸಣೆ ಮಾಡಿ ರೋಗದ ತೀವ್ರತೆಯನ್ನು ಹಾಗೂ ರೋಗಬರದಂತೆ ಮುಂಜಾಗರೂಕತೆಯನ್ನು ಕೈಗೊಳ್ಳಲು ಅನುಕೂಲಕರವಾಗುವದು ಎಂದು ತಿಳಿಸಿದರು. ವಿತರಿಸಲಾದ ಕಿಟ್‌ಗಳನ್ನು ಉತ್ತಮವಾಗಿ ಸಾರ್ವಜನಿಕ ಉಪಯೋಗಕ್ಕಾಗಿ ಬಳಸಿಕೊಳ್ಳಲಾಗುವದು ಎಂದು

ಆಶ್ವಾಸನೆ ನೀಡಿದರು. ಮಾತನಾಡುತ್ತ ನಾವು ನಮ್ಮ ಕಂಪನಿಯ ಸಿ.ಎಸ್. ಆರ್. ನಿಧಿಯ ಮೂಲಕ ಕೇವಲ ಮಂಗಳೂರುಗೆ ಮಾತ್ರ ಸಿಮಿತವಾಗಿರದೆ ರಾಷ್ಟ್ರವ್ಯಾಪಿ ಸಮಾಜದ ಏಳಿಗೆಗಾಗಿ ಶಿಕ್ಷಣ, ಆರೋಗ್ಯ, ಸಂಸ್ಕೃತಿ, ಪ್ರಕೃತಿ ಹೀಗೆ ಹಲವಾರು ಕ್ಷೇತ್ರಗಳಿಗೆ ಸೇವೆ ನೀಡುತ್ತಿದ್ದು ಪ್ರಮುಖವಾಗಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಸಾರ್ವಜನಿಕ ಉಪಯೋಗಕ್ಕಾಗಿ ಆರೋಗ್ಯ ತಪಾಸಣಾ ಸಲಕರಣೆ, ಉಪಕರಣಗಳನ್ನು ವಿತರಿಸುವ ಮಾಡಲಾಗುತ್ತಿದೆ ಎಂದು ತಿಳಿಸಿದರು.

Related Post

Leave a Reply

Your email address will not be published. Required fields are marked *